ಭಾರತ ಭಯೋತ್ಪಾದಕ ನೆಲೆ ಮೇಲೆ ದಾಳಿ ಮಾಡಿದ್ದು ನಿಜ – ಕಟ್ಟಡದ ಅವಶೇಷದ ಮಧ್ಯೆ ನಿಂತು ಸತ್ಯ ಒಪ್ಪಿಕೊಂಡ ಉ*ಗ್ರ

ಭಾರತ ಭಯೋತ್ಪಾದಕ ನೆಲೆ ಮೇಲೆ ದಾಳಿ ಮಾಡಿದ್ದು ನಿಜ – ಕಟ್ಟಡದ ಅವಶೇಷದ ಮಧ್ಯೆ ನಿಂತು ಸತ್ಯ ಒಪ್ಪಿಕೊಂಡ ಉ*ಗ್ರ

ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಉಗ್ರರ ಶಿಬಿರದ ಮೇಲೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ದಾಳಿ ಮಾಡಿ ಸಂಪೂರ್ಣ ನಾಶ ಪಡಿಸಿದ್ದು ಸತ್ಯ ಎಂದು ಲಷ್ಕರ್-ಎ-ತೊಯ್ಬಾದ ಕಮಾಂಡರ್​ ಒಪ್ಪಿಕೊಂಡಿದ್ದಾನೆ.  ಈ ಬಗ್ಗೆ ವಿಡಿಯೋ ಮಾಡಿರೋ ಭಯೋತ್ಪಾದಕ ಕಮಾಂಡರ್.. ಕಟ್ಟಡದ ಅವಶೇಷಗಳ ಮಧ್ಯೆ ನಿಂತು ಸತ್ಯ   ಒಪ್ಪಿಕೊಂಡಿದ್ದಾನೆ. ಕಟ್ಟಡ ಅವಶೇಷಗಳನ್ನ ಹಿಂದೆ ಲಾರಿ ಮತ್ತು ಜೆಸಿಬಿ ಬಳಸಿ ಸಾಗಾಟ ಮಾಡೋ ದೃಶ್ಯ ಕಂಡು ಬಂದಿದೆ. ಇದ್ರೊಂದಿಗೆ ಪಾಕಿಸ್ತಾನ ಹಸೀ ಹಸೀ ಸುಳ್ಳು ಹೇಳಿರೋದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ.

ಇದನ್ನೂ ಓದಿ: ಹೂವಿನ ಬಾಣದ ಹುಡ್ಗಿಗೆ ಸಿನಿಮಾ ಆಫರ್‌.. ವೈರಲ್‌ ಸಾಂಗ್‌ನಿಂದಲೇ ಸಿಕ್ತಾ ಚಾನ್ಸ್‌?  

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಜನರನ್ನು ಕೊಂದಿತ್ತು. ಭಾರತ ಪ್ರತೀಕಾರ ತೀರಿಸಿಕೊಂಡಿತು ಮಾತ್ರವಲ್ಲದೆ, ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿಯನ್ನು ಸಹ ಉಡೀಸ್ ಮಾಡಿತ್ತು. ಈ ಪ್ರತೀಕಾರದ ಕ್ರಮಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಸಲಾಯಿತು. ಮೇ 7 ರಂದು ನಡೆದ ಈ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯು ಮುರಿಡ್ಕೆ (ಪಂಜಾಬ್, ಪಾಕಿಸ್ತಾನ) ದಲ್ಲಿರುವ ಲಷ್ಕರ್-ಎ-ತೊಯ್ಬಾದ ಅತಿದೊಡ್ಡ ನೆಲೆಯಾದ ಮರ್ಕಜ್-ಎ-ತೊಯ್ಬಾವನ್ನು ನಾಶಪಡಿಸಿತ್ತು.

ಈ ಸ್ಥಳವು ಮದರಸಾ ಮತ್ತು ದತ್ತಿ ಕೇಂದ್ರ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಈಗ, ಲಷ್ಕರ್‌ನ ಉನ್ನತ ಕಮಾಂಡರ್ ಖಾಸಿಮ್, ನಾನು ಮರ್ಕಜ್-ಎ-ತೊಯ್ಬಾದ ಅವಶೇಷಗಳ ಮುಂದೆ ನಿಂತಿದ್ದೇನೆ. ಈ ದಾಳಿಯನ್ನು ಆಪರೇಷನ್ ಸಿಂಧೂರ್‌ನಲ್ಲಿ ನಾಶಪಡಿಸಲಾಯಿತು ಎಂದು ಹೇಳುವ ವಿಡಿಯೋ ವೈರಲ್ ಆಗಿದೆ. ಮೇ.7ರ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಾಶವಾದ ಮುರಿಡ್ಕೆ ಭಯೋತ್ಪಾದಕ ಶಿಬಿರವನ್ನು ಹಿಂದಿಗಿಂತ ದೊಡ್ಡದಾಗಿ ಪುನರ್ನಿರ್ಮಿಸಲಾಗುತ್ತಿದೆ ಎಂದು ಎಲ್‌ಇಟಿ ಕಮಾಂಡರ್ ಖಾಸಿಮ್ ಒಪ್ಪಿಕೊಂಡಿದ್ದಾರೆ. ಇದೀಗ ಈತನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

Kishor KV