ಅಂದವಾಗಿ ಕಾಣಲು ಲೇಸರ್‌ ಟ್ರೀಟ್‌ಮೆಂಟ್‌! – ಚಿಕಿತ್ಸೆಗೆ ಒಳಗಾದ ನಿರೂಪಕಿಯ ಮುಖವೇ ಸುಟ್ಟು ಹೋಯ್ತು!

ಅಂದವಾಗಿ ಕಾಣಲು ಲೇಸರ್‌ ಟ್ರೀಟ್‌ಮೆಂಟ್‌! – ಚಿಕಿತ್ಸೆಗೆ ಒಳಗಾದ ನಿರೂಪಕಿಯ ಮುಖವೇ ಸುಟ್ಟು ಹೋಯ್ತು!

ಮುಖ ಅಂದವಾಗಿ ಕಾಣಬೇಕು ಅಂತಾ ಅನೇಕರು ಬಯಸುತ್ತಾರೆ. ಇದಕ್ಕಾಗಿ ನಾನಾ ರೀತಿಯ ಸರ್ಕಸ್‌ ಮಾಡುತ್ತಾರೆ. ಕೆಲವರು ಇದ್ದ ಸೌಂದರ್ಯವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಬೇಕು ಅಂತಾ ಬಯಸುತ್ತಾರೆ. ಈ ವೇಳೆ ಏನೇನೋ ಕ್ರೀಮ್‌, ಟ್ರೀಟ್‌ಮೆಂಟ್‌ ಗಳನ್ನು ಮಾಡಿಸಿ ಇದ್ದ ಅಂದವನ್ನು ಹಾಳು ಮಾಡಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಇದ್ದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಹೋಗಿ ಮುಖವೇ ವಿರೂಪಗೊಂಡಿದೆ.

ಕೆಲವರಿಗೆ ಎಷ್ಟು ಚೆಂದ ಇದ್ದರೂ ತಾನು ಇನ್ನಷ್ಟು ಚಂದ ಕಾಣಬೇಕು. ಸೌಂದರ್ಯದಿಂದಲೇ ಜಗವ ಆಳಬೇಕು ಅಂತಾ ಬಯಸುತ್ತಾರೆ. ಇದಕ್ಕಾಗಿ ಇನ್ನಿಲ್ಲದ ಸಾಹಸ ಮಾಡುತ್ತಾರೆ. ಕೈಗೆ ಸಿಗಬಹುದಾದಂತಹ ಎಲ್ಲಾ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಆದರೆ ಮೂಲತ ಇರುವ ಬಣ್ಣವನ್ನು ಬದಲಿಸುತ್ತಾ ಗೊತ್ತಿಲ್ಲ? ಆದರೆ ಅದರಿಂದ ಅಡ್ಡ ಪರಿಣಾಮಗಳು ಮಾತ್ರ ಬೇಕಾದಷ್ಟು ಆಗುತ್ತವೆ. ಅದೇ ರೀತಿ ಚೆನ್ನಾಗಿಯೇ ಇದ್ದ ಹುಡುಗಿಯೊಬ್ಬಳು ಇನ್ನಷ್ಟು ಚೆಂದ ಕಾಣಲು ಹೋಗಿ ಮುಖಕ್ಕೆ ಲೇಸರ್‌ ಫೇಶಿಯಲ್‌ ಮಾಡಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾಳೆ. ಇದರಿಂದಾಗಿ ಆಕೆ ಮುಖ ವಿರೂಪವಾಗಿದೆ.

ಘಟನೆ ನಡೆದಿದ್ದು ಎಲ್ಲಿ?

ಬ್ಯಾಂಕಾಕ್‌ನಲ್ಲಿ ಈ ಘಟನೆ ನಡೆದಿದೆ. ಥೈಲ್ಯಾಂಡ್‌ನ ಟಿವಿಯೊಂದರ ನಿರೂಪಕಿ ಇಸ್ಸದಾ ಐಸಿರಿ ಎಂಬಾಕೆ ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ತಾನು ಸುಂದರವಾಗಿ ಕಾಣಬೇಕು ಅಂತಾ ಲೇಸರ್‌ ಚಿಕಿತ್ಸೆ ಪಡೆದಿದ್ದಾಳೆ. ಇದರಿಂದಾಗಿ ಸುಂದವಾಗಿದ್ದ ಆಕೆಯ ಮುಖ ಸುಟ್ಟು ಹೋದ ದೋಸೆಯಂತಾಗಿದೆ.

ಇದನ್ನೂ ಓದಿ: ನಿನ್ನ ಸಾವು ಹತ್ತಿರದಲ್ಲಿದೆ ಎಂದು ವೃದ್ಧೆ ನುಡಿದಳು ಭವಿಷ್ಯ – ಅರೆಗಳಿಗೆಯಲ್ಲೇ ಸತ್ತೇ ಹೋದಳು ಯುವತಿ..!

ಆಗಿದ್ದೇನು?

ಇಸ್ಸದಾ ಐಸಿರಿ ಬ್ಯಾಂಕಾಕ್‌ನ  ಕ್ಲಿನಿಕೊಂದರಲ್ಲಿ ತಿಂಗಳ ಹಿಂದೆ ಮೊಡವೆ ಬರದಂತೆ ಮಾಡಲು ಲೇಸರ್‌ ಚಿಕಿತ್ಸೆಗೆ ಒಳಗಾಗಿದ್ದಳು. ಚಿಕಿತ್ಸೆಗೆ ಒಳಗಾಗುವ ವೇಳೆಯೇ ಆಕೆಗೆ ಮುಖದಲ್ಲಿ ಸುಟ್ಟು ಹೋದಂತಹ ಅನುಭವ ಆಗಿತ್ತು. ಆದರೆ ಆಕೆ ಇದು ಚಿಕಿತ್ಸೆಯ ಭಾಗವೆಂದೇ ಭಾವಿಸಿದ್ದಳು. ಆದರೆ ಚಿಕಿತ್ಸೆಯ ನಂತರ ಸೌಂದರ್ಯ ಹೆಚ್ಚಾಗುವ ಬದಲು ಮುಖ ಅಲ್ಲಲ್ಲಿ ಸುಟ್ಟು ಹೋದಂತೆ ಕಪ್ಪು ಕಪ್ಪು ಆಗಲು ಶುರುವಾಗಿದೆ. ಹೀಗಾಗಿ ಇದರಲ್ಲೇನೋ ಎಡವಟ್ಟಾಗಿದೆ ಎಂಬುದು ಅವರ ಅನುಭವಕ್ಕೆ ಬಂದಿದೆ. ನಂತರ ಕ್ಲಿನಿಕ್‌ನಲ್ಲಿ ವಿಚಾರಿಸಿದಾಗ ಅವರು ಮೌಖಿಕವಾಗಿ ಸೇವಿಸುವ ಸ್ಟೀರಾಯ್ಡ್  ಕೊಡಲು ಮುಂದಾದರು. ಆದರೆ ವೈದ್ಯಕೀಯವಾಗಿ ಇದು ಆರೋಗ್ಯಕಾರಿ ಅಲ್ಲದ ಕಾರಣ ಆಕೆ ತಿರಸ್ಕರಿಸಿದ್ದಾಳೆ. ಇದಾದ ನಂತರ ಸಂಪೂರ್ಣ ಮುಖದಲ್ಲಿ ಅಲ್ಲಲ್ಲಿ ಸುಟ್ಟ ಗಾಯಗಳಂತೆ ಗಾಯಗಳು ಕಾಣಿಸಿಕೊಂಡಿವೆ.

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ನಿರೂಪಕಿ!

ಟಿವಿ ಪರದೆಯ ಮೇಲೆ ನಿರೂಪಕಿಯಾಗಿ ಕೆಲಸ ಮಾಡುತ್ತಿರುವವರಿಗೆ ಸೌಂದರ್ಯವೇ ಬಂಡವಾಳ. ಈ ಘಟನೆಯಿಂದ ಆಕೆ ಕೆಲಸದ ಮೇಲೆ ಭಾರಿ ಪರಿಣಾಮ ಬೀರಿದೆ. ಟಿವಿ ಹೋಸ್ಟ್ ಆಗಿರುವ ಕಾರಣ ನಾನು ದಿನವೂ ಕ್ಯಾಮರಾ ಮುಂದೆ ಹೋಗಬೇಕು. ಜನರ ಮುಂದೆ ಮಾತನಾಡಬೇಕು ಆದರೆ ಈ ಮುಖವಿಟ್ಟುಕೊಂಡು ಹೇಗೆ ಮಾತನಾಡಲಿ ಎಂದು ಆಕೆ ಅಳಲು ತೋಡಿಕೊಂಡಿದ್ದಾಳೆ.

ಮುಖ ಸರಿಪಡಿಸುವ ಭರವಸೆ!

ನಿರೂಪಕಿ ತನ್ನ ಸಮಸ್ಯೆಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾಳೆ. ಇದೀಗ ಚಿಕಿತ್ಸೆ ನೀಡಿದ ಕ್ಲಿನಿಕ್‌ನವರು ಇದನ್ನು ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ. ಅಲ್ಲದೇ ಅವರು ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಆದರೆ ನಿರೂಪಕಿ ಮತ್ತೆ ನನಗೆ ಅಲ್ಲಿಗೆ ಹೋಗುವ ಧೈರ್ಯ ಇಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.

Shwetha M