ವಿಸ್ತೀರ್ಣದಲ್ಲಿ ರಾಜಸ್ಥಾನ ನಂ.1 ಆದರೂ ಜನಸಂಖ್ಯೆಯಲ್ಲಿ 8ನೇ ಸ್ಥಾನ – ವಿವಿಧ ರಾಜ್ಯಗಳ ಬಗ್ಗೆ ಇಲ್ಲಿದೆ ಅದ್ಭುತ ಮಾಹಿತಿ

ವಿಸ್ತೀರ್ಣದಲ್ಲಿ ರಾಜಸ್ಥಾನ ನಂ.1 ಆದರೂ ಜನಸಂಖ್ಯೆಯಲ್ಲಿ 8ನೇ ಸ್ಥಾನ – ವಿವಿಧ ರಾಜ್ಯಗಳ ಬಗ್ಗೆ ಇಲ್ಲಿದೆ ಅದ್ಭುತ ಮಾಹಿತಿ

ಭಾರತ ವಿವಿಧತೆಯಲ್ಲಿ ಏಕತೆಯನ್ನ ಹೊಂದಿರುವ ದೇಶ. ಹತ್ತಾರು ಭಾಷೆ, ನೂರಾರು ಸಂಸ್ಕೃತಿಗಳನ್ನ ಹೊಂದಿರುವ ಈ ದೇಶದ ಒಂದೊಂದು ರಾಜ್ಯದಲ್ಲಿ ಒಂದೊಂದು ಭಿನ್ನ ಆಚರಣೆಗಳಿವೆ. ಭಾರತ ಚೀನಾ ನಂತರದಲ್ಲಿ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವಂತಹ ದೇಶವಾಗಿದೆ. ಜಗತ್ತಿನಲ್ಲಿ ಪ್ರತಿಯೊಂದು ರಾಷ್ಟ್ರವು (Nayioanl) ಹೊಂದಿರುವಂತೆ ಭಾರತ ತಾನು ಹೊಂದಿರುವ ಎಲ್ಲ ರಾಜ್ಯಗಳು ತಮ್ಮದೇ ಆದ ಭೌಗೋಳಿಕ ವಿಶೇಷತೆಗಳನ್ನು ಹೊಂದಿವೆ.

ಭಾರತ ದೇಶದಲ್ಲಿ ಯಾವ ರಾಜ್ಯ ದೊಡ್ಡದಾಗಿದೆ ಎಂಬ ಕುತೂಹಲ ಇದ್ದೇ ಇರುತ್ತದೆ. 4ನೇ ಆಗಸ್ಟ್ (August)  2023 ರಂತೆ ಭಾರತದ 28 ರಾಜ್ಯಗಳ ಪೈಕಿ ರಾಜಸ್ಥಾನವು ಒಟ್ಟು 342,239 ಚದರ ಕಿಲೋ ಮೀಟರ್ ವಿಸ್ತೀರ್ಣದೊಂದಿಗೆ ಭಾರತದ ಅತಿದೊಡ್ಡ ರಾಜ್ಯವಾಗಿದೆ. ಆದರೆ ಜನಸಂಖ್ಯೆಯ ಪ್ರಕಾರ ನೋಡಿದರೆ ರಾಜಸ್ಥಾನವು 8ನೇ ಸ್ಥಾನದಲ್ಲಿದೆ. ರಾಜಸ್ಥಾನದ ನಂತರದ ಸ್ಥಾನದಲ್ಲಿ ಅಂದರೆ ಎರಡನೇ ಸ್ಥಾನದಲ್ಲಿ ಮಧ್ಯಪ್ರದೇಶ (308,245 ಚದರ ಕಿಲೋ ಮೀಟರ್ ಭೂ ಪ್ರದೇಶ), ಮೂರನೆಯ ಸ್ಥಾನದಲ್ಲಿ ಮಹಾರಾಷ್ಟ್ರ (307,713 ಚದರ ಕಿಲೋ ಮೀಟರ್ ಭೂ ಪ್ರದೇಶ), ನಾಲ್ಕನೆಯ ಸ್ಥಾನದಲ್ಲಿ ಉತ್ತರ ಪ್ರದೇಶ (240,928 ಚದರ ಕಿಲೋ ಮೀಟರ್ ಭೂ ಪ್ರದೇಶ) ಮತ್ತು ಐದನೇ ಸ್ಥಾನದಲ್ಲಿ ಗುಜುರಾತ್ (196,024 ಚದರ ಕಿಲೋ ಮೀಟರ್ ಭೂ ಪ್ರದೇಶ) ಇದೆ.

ಇದನ್ನೂ ಓದಿ : ಕೋಡಿಬೆಂಗ್ರೆ ಬೀಚ್‌ನಲ್ಲಿ ಮೀನಿನ ಸುಗ್ಗಿ – ಸಮುದ್ರದ ದಡದಲ್ಲಿ ನಿಂತು ಹಾಕಿದ ಬಲೆಗೆ ಬಿತ್ತು ಟನ್‌ಗಟ್ಟಲೆ ಮೀನು

ಆರನೇ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿದ್ದು, 191,791 ಚದರ ಕಿಲೋ ಮೀಟರ್ ಭೂ ಪ್ರದೇಶವನ್ನು ಹೊಂದಿದೆ. ಇನ್ನೂ ಈ ಪಟ್ಟಿಯಲಿರುವ ಕೊನೆಯ ಎಂದರೆ ಅತಿ ಕಡಿಮೆ ವಿಸ್ತೀರ್ಣ ಹೊಂದಿರುವ ರಾಜ್ಯ ಗೋವಾ ಆಗಿದ್ದು 3,702 ಚದರ ಕಿಲೋ ಮೀಟರ್ ಭೂ ಪ್ರದೇಶವನ್ನು ಹೊಂದಿದೆ. ಇನ್ನು ಭಾರತದ ಅತಿ ದೊಡ್ಡ ರಾಜ್ಯವಾದ ರಾಜಸ್ಥಾನದ ಬಗ್ಗೆ ಕೆಲ ಇಂಟರೆಸ್ಟಿಂಗ್ ಮಾಹಿತಿಗಳಿವೆ.

ವಿಸ್ತೀರ್ಣದ ವಿಷಯದಲ್ಲಿ ಇಡೀ ಭಾರತದಲ್ಲಿಯೇ ದೊಡ್ಡದಾದ ರಾಜ್ಯವಾದ ರಾಜಸ್ಥಾನವು ಭಾರತದ ವಾಯುವ್ಯ ಭಾಗದಲ್ಲಿದೆ. ರಾಜಸ್ಥಾನವು ತನ್ನ ಗಡಿಯನ್ನು ಇತರ ಐದು ಭಾರತೀಯ ರಾಜ್ಯಗಳು ಮತ್ತು ನೆರೆಯ ರಾಷ್ಟ್ರವಾದ ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುತ್ತದೆ. ರಾಜ್ಯವು ಥಾರ್ ಮರುಭೂಮಿಯಿಂದ ಹಿಡಿದು ಫಲವತ್ತಾದ ಬಯಲು ಪ್ರದೇಶಗಳವರೆಗೆ ವೈವಿಧ್ಯಮಯ ಸ್ಥಳಾಕೃತಿಗೆ ಹೆಸರುವಾಸಿಯಾಗಿದೆ. ರಾಜಸ್ಥಾನವು ಪಿಚೋಲಾ ಸರೋವರ ಮತ್ತು ಸಂಭಾರ್ ಸಾಲ್ಟ್ ಲೇಕ್ ಸೇರಿದಂತೆ ಹಲವಾರು ಸುಂದರವಾದ ಸರೋವರಗಳಿಗೆ ನೆಲೆಯಾಗಿದೆ.

ರಾಜಸ್ಥಾನದ ರಾಜಧಾನಿ ಜೈಪುರ್ ಆಗಿದ್ದು, ಇದನ್ನು ‘ಪಿಂಕ್ ಸಿಟಿ’ ಎಂದೂ ಸಹ ಕರೆಯುತ್ತಾರೆ. ಐಕಾನಿಕ್ ಅಂಬರ್ ಫೋರ್ಟ್ ಮತ್ತು ಸಿಟಿ ಪ್ಯಾಲೇಸ್‌ನಂತಹ ಹಲವಾರು ಕೋಟೆಗಳು ಮತ್ತು ಅರಮನೆಗಳೊಂದಿಗೆ ರಾಜಸ್ಥಾನವು ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಪುಷ್ಕರ್ ಒಂಟೆ ಮೇಳವು ರಾಜಸ್ಥಾನದ ಜನಪ್ರಿಯ ವಾರ್ಷಿಕ ಕಾರ್ಯಕ್ರಮವಾಗಿದ್ದು, ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ರಾಜಸ್ಥಾನವು ಸಾಂಸ್ಕೃತಿಕ ಚೈತನ್ಯದ ಕೇಂದ್ರವಾಗಿದೆ, ಇದು ರೋಮಾಂಚಕ ಜಾನಪದ ಸಂಗೀತ ಮತ್ತು ನೃತ್ಯ ಪ್ರಕಾರಗಳಾದ ಘೂಮರ್ ಮತ್ತು ಕಲ್ಬೆಲಿಯಾಗೆ ಹೆಸರುವಾಸಿಯಾಗಿದೆ. ರಾಜ್ಯವು ಶ್ರೀಮಂತ ಕರಕುಶಲ ಸಂಪ್ರದಾಯವನ್ನು ಹೊಂದಿದೆ, ಸಂಕೀರ್ಣವಾದ ಜವಳಿ ಮತ್ತು ಆಭರಣಗಳನ್ನು ಸಹ ಇದು ಉತ್ಪಾದಿಸುತ್ತದೆ.

ಜನಸಂಖ್ಯೆಯ ದೃಷ್ಟಿಯಿಂದ ಭಾರತದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶ. ಇದು 199,812,341 ಜನಸಂಖ್ಯೆಯನ್ನು ಹೊಂದಿದೆ. ಇದರ ನಂತರದ ಸ್ಥಾನದಲ್ಲಿ ಎಂದರೆ ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ (112,372,333 ಜನಸಂಖ್ಯೆ), ಮೂರನೇ ಸ್ಥಾನದಲ್ಲಿ ಬಿಹಾರ್ (104,099,452 ಜನಸಂಖ್ಯೆ), ನಾಲ್ಕನೆಯ ಸ್ಥಾನದಲ್ಲಿ ಪಶ್ಚಿಮ ಬಂಗಾಳ (91,276,115 ಜನಸಂಖ್ಯೆ) ಮತ್ತು ಐದನೇ ಸ್ಥಾನದಲ್ಲಿ ಆಂಧ್ರಪ್ರದೇಶ (84,580,777 ಜನಸಂಖ್ಯೆ) ಇದೆಯಂತೆ. ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಎಂದರೆ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ಸಿಕ್ಕಿಂ ಆಗಿದ್ದು, ಇದು ಬರೀ 6,10,577 ಜನಸಂಖ್ಯೆಯನ್ನು ಮಾತ್ರವೇ ಹೊಂದಿದೆಯಂತೆ.

suddiyaana