ವಿಶ್ವದ ಅತ್ಯಂತ ದೊಡ್ಡ ಹಿಂದೂ ದೇವಾಲಯ ಅಮೆರಿಕದಲ್ಲಿ ನಿರ್ಮಾಣ – 183 ಎಕರೆಯಲ್ಲಿ ತಲೆ ಎತ್ತಿದೆ ಸ್ವಾಮಿ ನಾರಾಯಣ ದೇಗುಲ
ಹಿಂದೂ ಸಂಸ್ಕೃತಿ. ಕಲೆ, ವಾಸ್ತುಶಿಲ್ಪ, ಮತ್ತು ಮೂರ್ತಿಗಳ ಮೂಲಕ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸಂಸ್ಕೃತಿ. ಧರ್ಮ, ಇತಿಹಾಸ, ಸ್ಮಾರಕಗಳು, ದೇವಾಲಯಗಳು, ಸಂಸ್ಕೃತಿ, ವ್ಯಕ್ತಿತ್ವ, ಸಮುದಾಯಗಳ ವೈಶಿಷ್ಟ್ಯ ಹೊಂದಿದೆ. ಇದೇ ಕಾರಣಕ್ಕೆ ದೇಗುಲಗಳು ಭಾರತದ ಸಂತೇತವಾಗಿವೆ. ದೇವಸ್ಥಾನಗಳು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಹೆಚ್ಚು ಮನ್ನಣೆ ಪಡೆಯುತ್ತಿವೆ.
ಇದನ್ನೂ ಓದಿ : ವಜ್ರಕ್ಕಾಗಿ ರಸ್ತೆಯಲ್ಲೆಲ್ಲಾ ಹುಡುಕಾಡಿದ ಜನ ! – ಡೈಮಂಡ್ ಸಿಕ್ಕ ಖುಷಿಯಲ್ಲಿದ್ದವರಿಗೆ ಕಾದಿತ್ತು ಶಾಕ್!
ಅಮೆರಿಕ ವಿಶ್ವದ ದೊಡ್ಡಣ್ಣ. ಇಂತಹ ರಾಷ್ಟ್ರದಲ್ಲಿ ಅತಿ ದೊಡ್ಡ ಹಿಂದೂ ದೇವಾಲಯ ನಿರ್ಮಾಣವಾಗಿದೆ. ಅಮೆರಿಕದ ನ್ಯೂ ಜೆರ್ಸಿಯ ಸ್ವಾಮಿ ನಾರಾಯಣ ದೇಗುಲ ಬಹುತೇಕ ಪೂರ್ಣಗೊಂಡಿದ್ದು, ಅ.8 ರಂದು ಉದ್ಘಾಟನೆಗೆ ಸಿದ್ಧವಾಗಿದೆ. ಆಧುನಿಕ ಕಾಲದಲ್ಲಿ ಭಾರತದ ಹೊರಗೆ ನಿರ್ಮಿಸಲಾಗುತ್ತಿರುವ ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹಿರಿಮೆಗೆ ಪಾತ್ರವಾಗಿರುವ ಅಮೆರಿಕದ ನ್ಯೂ ಜೆರ್ಸಿಯ ಸ್ವಾಮಿ ನಾರಾಯಣ ದೇಗುಲ ಬಹುತೇಕ ಪೂರ್ಣಗೊಂಡಿದ್ದು, ಅ.8 ರಂದು ಉದ್ಘಾಟನೆಗೆ ಸಿದ್ಧವಾಗಿದೆ.
ನ್ಯೂ ಜೆರ್ಸಿಯ (New Jersey) ರಾಬಿನ್ಸ್‌ವಿಲ್ಲೆಯಲ್ಲಿ (Robbinsville) ಪ್ರಾಚೀನ ಹಿಂದೂ ಧರ್ಮಗ್ರಂಥ ಪ್ರಕಾರ ಸ್ಥಾಪಿಸಲಾಗಿದ್ದು, ದೇವಸ್ಥಾನದಲ್ಲಿ ಪ್ರತಿಮೆಗಳು, ಭಾರತೀಯ ಸಂಗೀತ ವಾದ್ಯಗಳು, ಭಾರತೀಯ ಸಂಸ್ಕ್ರತಿ ಮತ್ತು ನೃತ್ಯ ಪ್ರಕಾರದ ಕೆತ್ತನೆಗಳು ಸೇರಿದಂತೆ ಸುಮಾರು 10,000 ಕೆತ್ತನೆಗಳು ಅಥವಾ ಪ್ರತಿಮೆಗಳನ್ನು ಒಳಗೊಂಡಿದೆ. ಬರೋಬ್ಬರಿ 183 ಎಕರೆ ಜಾಗದಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು 2011ರಿಂದ 2023ರವರೆಗಿನ 12 ವರ್ಷಗಳ ಅವಧಿಯಲ್ಲಿ ಸುಮಾರು 12,500 ಸ್ವಯಂಸೇವಕರು ನಿರ್ಮಿಸಿದ್ದಾರೆ. ಇದನ್ನು ಈ ದೇವಾಲಯವು ಕಾಂಬೋಡಿಯಾದಲ್ಲಿರುವ (Cambodia) ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವಾದ ಪುರಾತನ ಅಂಕೋರ್ ವಾಟ್ ನಂತರದ 2ನೇ ದೊಡ್ಡ ದೇವಾಲಯವಾಗಿದೆ ಎನ್ನಲಾಗಿದೆ. ಅಂಕೋರ್‌ವಾಟ್ (Angkor Wat) ದೇಗುಲ 500 ಮೀ. ಪ್ರದೇಶದಲ್ಲಿದೆ. ಸ್ವಾಮಿನಾರಾಯಣ ದೇವಾಲಯವನ್ನು (Swaminarayan Temple) ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಅಮೃತ ಶಿಲೆ ಮತ್ತು ಗ್ರಾನೈಟ್‌ಗಳಿಂದ ನಿರ್ಮಿಸಲಾಗಿದ್ದು ಇದು ಮುಖ್ಯ ದೇವಾಲಯದ ಹೊರತು ಒಟ್ಟು 12 ಉಪ ದೇಗುಲಗಳನ್ನು ಹೊಂದಿದೆ. ಔಪಚಾರಿಕವಾಗಿ ದೇವಸ್ಥಾನ ಉದ್ಘಾಟನೆಯಾಗದಿದ್ದರೂ ಈಗಾಗಲೇ ಹಿಂದೂಗಳು ಸೇರಿದಂತೆ ಇತರ ಧರ್ಮೀಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.