ಹಿಮಾಚಲ ಪ್ರದೇಶದಲ್ಲಿ ಭೂಕುಸಿತ – ಶಿಮ್ಲಾದಿಂದ ಚಂಡೀಗಢಕ್ಕೆ ಸಂಪರ್ಕಿಸುವ ರಸ್ತೆ ಕುಸಿತ

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ – ಶಿಮ್ಲಾದಿಂದ ಚಂಡೀಗಢಕ್ಕೆ ಸಂಪರ್ಕಿಸುವ ರಸ್ತೆ ಕುಸಿತ

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಭಾರಿ ಮಳೆಯಾಗುತ್ತಿದೆ.  ಸೋಲನ್ ಜಿಲ್ಲೆಯಲ್ಲಿ ಶಿಮ್ಲಾದಿಂದ ಚಂಡೀಗಢಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ಹಲವು ವಾಹನಗಳು ಸಿಲುಕಿಕೊಂಡಿವೆ ಎಂದು ವರದಿಯಾಗಿದೆ.

ಸೋಲನ್‌ನ ಧರಮ್‌ಪುರ ಮತ್ತು ಪರ್ವಾನೂ ನಡುವಿನ ಕೋಟಿ ಬಳಿಯ ಚಾಕಿ ಮೋರ್‌ನಲ್ಲಿ ಭೂಕುಸಿತ ಸಂಭವಿಸಿದೆ. ಸುಮಾರು 50 ಮೀಟರ್ ದೂರದವರೆಗೆ ರಸ್ತೆ ಕುಸಿದು ಹೋಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: ಹರಿಯಾಣದಲ್ಲಿ ಕೋಮು ಗಲಭೆ – ನುಹ್‌, ಗುರುಗ್ರಾಮ್‌ನಲ್ಲಿ ಇಂಟರ್‌ನೆಟ್‌ ನಿಷೇಧ

ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ಸುಮಾರು ಒಂಬತ್ತು ಗಂಟೆಗಳ ನಂತರ ಲಘು ವಾಹನಗಳಿಗೆ ಏಕ-ಪಥದ ರಸ್ತೆಯನ್ನು ಪುನಃಸ್ಥಾಪಿಸಲಾಯಿತು. ಆದರೆ ಭಾರಿ ಮಳೆಯಿಂದಾಗಿ ಭೂಮಿ ಜಾರಲು ಪ್ರಾರಂಭಿಸಿದ ಪರಿಣಾಮ ಮತ್ತೆ ರಸ್ತೆಯನ್ನು ಮುಚ್ಚಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ತಡೆಯಿಂದಾಗಿ ಶಿಮ್ಲಾ ಮತ್ತು ಸೋಲನ್‌ಗೆ ಅಗತ್ಯ ವಸ್ತುಗಳ ಪೂರೈಕೆಯೂ ಸ್ಥಗಿತಗೊಂಡಂತಾಗಿದೆ. ಭೂ ಕುಸಿತದಿಂದಾಗಿ ಸೇಬು, ಪೇರಳೆ ಹಣ್ಣುಗಳನ್ನು ತುಂಬಿದ ಸುಮಾರು 100 ಟ್ರಕ್‌ಗಳು, ಬಸ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ವಾಹನಗಳು ರಸ್ತೆಯ ಎರಡೂ ಬದಿಗಳಲ್ಲಿ ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

suddiyaana