ಕೊಲಂಬಿಯಾದಲ್ಲಿ ಭಾರಿ ಭೂಕುಸಿತ – 33 ಮಂದಿ ಸಾವು

ಕೊಲಂಬಿಯಾದಲ್ಲಿ ಭಾರಿ ಭೂಕುಸಿತ – 33 ಮಂದಿ ಸಾವು

ಬೊಗೋಟಾ: ಕೊಲಂಬಿಯಾದಲ್ಲಿ ಭಾರಿ ಭೂಕುಸಿತ  ಸಂಭವಿಸಿದ್ದು, ಇದುವರೆಗೆ 33 ಸಾವನ್ನಪ್ಪಿದ್ದಾರೆ.  ಪ್ರಯಾಣಿಕರಿದ್ದ ಬಸ್ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಭೂಕುಸಿತ ಸಂಭವಿಸಿದೆ. ಬಸ್ ಮಣ್ಣಿನಡಿಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಉತ್ತರ ಪ್ರಾಂತ್ಯದ ಚೋಕೊಗೆ ಹೋಗುವ ರಸ್ತೆಯಲ್ಲಿ ಭಾನುವಾರ ಭೂಕುಸಿತ ಸಂಭವಿಸಿದೆ. ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಘಟನೆ ಸಂಬಂಧ ಸೋಮವಾರ ಟ್ವೀಟ್‌ ಮಾಡಿದ್ದು, ಈಗಾಗಲೇ 27 ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸಂತ್ರಸ್ತರ ಕುಟುಂಬದೊಂದಿದೆ ಸರ್ಕಾರ ನಿಲ್ಲುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಕೊರೊನಾ ಬಳಿಕ ಕೆನಡಾದಲ್ಲಿ ಮತ್ತೊಂದು ವೈರಸ್ ಭೀತಿ?

ಭೂ ಕುಸಿತವಾದ ಪರಿಣಾಮ, ಬಸ್ ಸುಮಾರು 3 ಅಡಿ ಆಳಕ್ಕೆ ಹೂತು ಹೋಗಿದೆ. ಬಸ್‍ನಲ್ಲಿದ್ದ 33ಕ್ಕೂ ಹೆಚ್ಚು ಜನ ಮೃತಪಟ್ಟಿರುವುದಾಗಿ ರಕ್ಷಣಾ ಪಡೆ ಮಾಹಿತಿ ನೀಡಿದೆ. 70ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.

ಕೊಲಂಬಿಯಾದಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 2022 ರಲ್ಲಿ ಇಲ್ಲಿಯವರೆಗೆ ಭಾರೀ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ 216 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 48 ಮಂದಿ ನಾಪತ್ತೆಯಾಗಿದ್ದಾರೆ.

suddiyaana