ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲಬಾಂಬ್ ಸ್ಫೋಟ – ಮೂವರು ಯೋಧರಿಗೆ ಗಾಯ
ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನೆಲಬಾಂಬ್ ಸ್ಫೋಟ ಸಂಭವಿಸಿದೆ. ಈ ಅವಘಡದಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೆಂಧರ್ ಸೆಕ್ಟರ್‌ನ ಫಗ್ವಾರಿ ಗಲಿ ಪ್ರದೇಶದಲ್ಲಿ ಯೋಧರು ಗಸ್ತು ತಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಯೋಧರು ಗಸ್ತು ತಿರುಗುತ್ತಿದ್ದಾಗ ನೆಲಬಾಂಬ್ ಸಕ್ರಿಯಗೊಂಡಿದ್ದು, ದುರಂತದಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಜೌರಿಯ ಸೇನಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್ – ಹಮಾಸ್ ಕಮಾಂಡರ್ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ
ಬಾಂಬ್ ಇಟ್ಟಿದ್ಯಾರು?
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ವರದಿಯಾಗುತ್ತಲೇ ಇದೆ. ಒಳನುಸುಳುವಿಕೆ ನಿಗ್ರಹ ಕಾರ್ಯತಂತ್ರದ ಭಾಗವಾಗಿ, ಸೇನೆಯು ಈ ಭಾಗಕ್ಕೆ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಪ್ರವೇಶಿಸದಂತೆ ತಡೆಯಲು ಸಂಭವನೀಯ ಒಳನುಸುಳುವಿಕೆ ಮಾರ್ಗಗಳನ್ನು ಪ್ಲಗ್ ಮಾಡಲು ನೆಲಬಾಂಬ್‌ಗಳನ್ನು ಬಳಸುತ್ತಿದೆ. ಕೆಲವೊಮ್ಮೆ ಮಳೆ ಬಂದಾಗ ಸ್ಫೋಟಕ ಸಾಧನಗಳನ್ನು ಸ್ಥಳಾಂತರಿಸಲಾಗುತ್ತದೆ. ಈ ವೇಳೆ ಆಕಸ್ಮಿಕ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಇದೀಗ ಯೋಧರು ಗಸ್ತು ತಿರುಗುತ್ತಿರುವ ವೇಳೆ ಬಾಂಸ್ ಸಕ್ರೀಯಗೊಂಡು ಸ್ಫೋಟಗೊಂಡಿದೆ.