ಲ್ಯಾಂಡ್ಲಾರ್ಡ್ ಚಿತ್ರ ತಂಡಕ್ಕೆ ಸರ್ಕಾರದಿಂದ ಗುಡ್ನ್ಯೂಸ್! – ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲು ಸಿದ್ದರಾಮಯ್ಯ ಸೂಚನೆ

ನಟ ದುನಿಯಾ ವಿಜಯ್ ನಟಿಸಿರುವ ಲ್ಯಾಂಡ್ಲಾರ್ಡ್ ಸಿನಿಮಾ ಥಿಯೇಟರ್ಗಳಲ್ಲಿ ಅಬ್ಬರಿಸುತ್ತಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಇದೀಗ ಸಿನಿಮಾ ತಂಡಕ್ಕೆ ಸಿಎಂ ಸಿದ್ಧರಾಮಯ್ಯ ಗುಡ್ನ್ಯೂಸ್ ಕೊಟ್ಟಿದ್ದಾರೆ. ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಪಾಕ್ನಲ್ಲಿ ಧುರಂಧರ್ #1 ಟ್ರೆಂಡ್! – ಬ್ಯಾನ್ ಮಾಡಿದ್ರೂ ಇಷ್ಟವಾಗಿದ್ದು ಹೇಗೆ?
ದುನಿಯಾ ವಿಜಯ್ ನಟನೆಯ ಲ್ಯಾಂಡ್ಲಾರ್ಡ್ ಸಿನಿಮಾ ಜನವರಿ 23ರಂದು ರಿಲೀಸ್ ಆಗಿದೆ. ಸಾಮಾಜಿಕ ಅಸಮಾನತೆ ಹಾಗೂ ಜಾತಿ ಶೋಷಣೆ ವಿಷಯವಿರುವ ಈ ಸಿನಿಮಾಗೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಲ್ಯಾಂಡ್ಲಾರ್ಡ್ ಚಿತ್ರವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ. ಈ ಮೊದಲು ವಿಜಯ್ ಹಾಗೂ ಜಡೇಶ್ ಕುಮಾರ್ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತೆರಿಗೆ ವಿನಾಯಿತಿ ಕೊಡುವಂತೆ ಮನವಿ ಮಾಡಿದ್ದರು. ಈ ವೇಳೆ ಸಿನಿಮಾ ನೋಡದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗ ಸಂಬಂಧಪಟ್ಟ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ನೀಡಲು ಸೂಚನೆ ಸಿದ್ದರಾಮಯ್ಯ ನೀಡಿದ್ದಾರೆ. ತೆರಿಗೆ ವಿನಾಯಿತಿ ಸಿಗುವುದರಿಂದ ಟಿಕೆಟ್ ದರ ಕಡಿಮೆ ಆಗಲಿದೆ.
ಲ್ಯಾಂಡ್ಲಾರ್ಡ್ 70ರ ದಶಕದ ಕಥೆ ಹೊಂದಿದೆ. ರಾಚಯ್ಯ (ದುನಿಯಾ ವಿಜಯ್), ನಿಂಗವ್ವ (ರಚಿತಾ ರಾಮ್) ಮಗಳು ಭಾಗ್ಯಾ (ರಿತನ್ಯಾ ರಾಮ್) ಜೊತೆ ಹಾಯಾಗಿ ಜೀವನ ನಡೆಸುತ್ತಿರುತ್ತಾರೆ. ಆ ಊರಿನಲ್ಲಿ ಸಣ್ಣ ಧಣಿ (ರಾಜ ಬಿ. ಶೆಟ್ಟಿ) ಪಾರುಪತ್ಯ. ಆತ ಹೇಳಿದಂತೆ ನಡೆಯಬೇಕು. ಯಾರ ಬಳಿಯೂ ಜಮೀನು ಇರಬಾರದು ಎಂಬುದು ಆತನ ಆಜ್ಞೆ. ತಾವೇ ಬೆಳೆದ ಬೆಳೆಯಲ್ಲಿ ಸಿಗೋದು ಒಂದು ಹಿಡಿ ಮಾತ್ರ. ಇದನ್ನು ಪ್ರಶ್ನಿಸಿದ ಭಾಗ್ಯಾಳ ಪ್ರಿಯಕರನ ಸುಟ್ಟು ಕೊಲ್ಲಲಾಗುತ್ತದೆ. ಈ ಅಸಮಾನತೆ ವಿರುದ್ಧ ರಾಚಯ್ಯ ಸಿಡಿದೇಳುತ್ತಾರೆ. ಈ ರೀತಿಯಲ್ಲಿ ಸಿನಿಮಾ ಇದೆ.

ನೋಡಿರಿ

