ಉದ್ಯೋಗಕ್ಕಾಗಿ ಭೂಮಿ ಹಗರಣ ಕೇಸ್ – ಲಾಲು ಪ್ರಸಾದ್ ಯಾದವ್ ಪತ್ನಿ, ಇಬ್ಬರು ಪುತ್ರಿಯರಿಗೆ ಮಧ್ಯಂತರ ಜಾಮೀನು

ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಾದ ಮಿಸಾ ಭಾರತಿ ಮತ್ತು ಹೇಮಾ ಯಾದವ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ರೋಸ್ ಅವೆನ್ಯೂ ನ್ಯಾಯಾಲಯವು ಮೂವರಿಗೂ ಮಧ್ಯಂತರ ಜಾಮೀನು ಮಂಜೂರು ಮಾಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭಾರತ – ಮ್ಯಾನ್ಮಾರ್ ನಡುವೆ ಮುಕ್ತ ಸಂಚಾರ ಬಂದ್! – ಕಾರಣವೇನು ಗೊತ್ತಾ?
ಕಳೆದ ತಿಂಗಳು, ರೈಲ್ವೇ ಜಮೀನು-ಉದ್ಯೋಗಕ್ಕಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಜಾರಿ ನಿರ್ದೇಶನಾಲಯ ದೆಹಲಿ ಕೋರ್ಟ್ಗೆ ಚಾರ್ಜ್ ಶೀಟ್‌ನ ಸಲ್ಲಿಸಿತ್ತು. ನಂತರದಲ್ಲಿ ಮೂವರಿಗೂ ನ್ಯಾಯಾಲಯವು ಸಮನ್ಸ್ ನೀಡಿತ್ತು. ಪಿಎಂಎಲ್‌ಎ ನ್ಯಾಯಾಲಯವು ಈ ಹಿಂದೆ ಅಮಿತ್ ಕಟ್ಯಾಲ್, ರಾಬ್ರಿ ದೇವಿ, ಮಿಶಾ ಭಾರತಿ, ಹೇಮಾ ಯಾದವ್ ಮತ್ತು ಹೃದಯಾನಂದ್ ಚೌಧರಿ ವಿರುದ್ಧ ಫೆ. 9 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.
ರಾಬ್ರಿ ದೇವಿ, ಮಿಸಾ ಭಾರತಿ, ಹೇಮಾ ಯಾದವ್ ನ್ಯಾಯಾಲಯದ ಮುಂದೆ ಇಂದು ವಿಚಾರಣೆಗೆ ಹಾಜರಾದರೆ, ಅಮಿತ್ ಕತ್ಯಾಲ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು. ಇದೀಗ ಮೂವರಿಗೂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಮುಂದಿನ ವಿಚಾರಣೆಯನ್ನು ಫೆಬ್ರವರಿ 28ಕ್ಕೆ ಮುಂದೂಡಲಾಗಿದೆ.
ಜಾರಿ ನಿರ್ದೇಶನಾಲಯ ಕಳೆದ ಜನವರಿ 1ರಂದು ಅಮಿತ್ ಕತ್ಯಾಲ್, ರಾಬ್ರಿ ದೇವಿ, ಮಿಶಾ ಭಾರತಿ, ಹೇಮಾ ಯಾದವ್, ಹೃದಯಾನಂದ್ ಚೌಧರಿ ಮತ್ತು ಎರಡು ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002 ರ ನಿಬಂಧನೆಗಳ ಅಡಿಯಲ್ಲಿ ಪ್ರಾಸಿಕ್ಯೂಷನ್ ದೂರು (ಪಿಸಿ) ದಾಖಲಿಸಿತ್ತು. ಎ ಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎ ಬಿ ಎಕ್ಸ್‌ಪೋರ್ಟ್ಸ್ ಪ್ರೈ. ಲಿಮಿಟೆಡ್ ದೆಹಲಿಯ ವಿಶೇಷ ನ್ಯಾಯಾಲಯದ (PMLA) ಮುಂದೆ, ಆಪಾದಿತ ಹಗರಣದಲ್ಲಿ ವಿಚಾರಣೆಯನ್ನು ಎದುರಿಸಿದೆ.