ಲಲಿತ್ ಮೋದಿ ಸಾಮ್ರಾಜ್ಯಕ್ಕಿನ್ನು ಮಗನೇ ಅಧಿಪತಿ – ಐಪಿಎಲ್ ಸಂಸ್ಥಾಪಕನ ಸ್ಥಿತಿ ಹೇಗಿದೆ?

ಲಲಿತ್ ಮೋದಿ ಸಾಮ್ರಾಜ್ಯಕ್ಕಿನ್ನು ಮಗನೇ ಅಧಿಪತಿ – ಐಪಿಎಲ್ ಸಂಸ್ಥಾಪಕನ ಸ್ಥಿತಿ ಹೇಗಿದೆ?

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸಂಸ್ಥಾಪಕ ಹಾಗೂ ಮಾಜಿ ಅಧ್ಯಕ್ಷ ಲಲಿತ್ ಮೋದಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೊವಿಡ್​ನಿಂದ ಬಳಲುತ್ತಿರೋ ಲಲಿತ್​ ಕೃತಕ ಉಸಿರಾಟ ಪಡೆಯುತ್ತಿದ್ದು, ಈ ನಡುವೆ ತಮ್ಮ ಸಾಮ್ರಾಜ್ಯದ ಸಂಪೂರ್ಣ ಹೊಣೆಯನ್ನ ತಮ್ಮ ಪುತ್ರನಿಗೆ ಹಸ್ತಾಂತರ ಮಾಡಿದ್ದಾರೆ.

ಇದನ್ನೂ ಓದಿ: ಜೋಡೋ ಯಾತ್ರೆ ವೇಳೆ ಓಡಿ ಬಂದು ರಾಹುಲ್​ರನ್ನ ತಬ್ಬಿಕೊಂಡ ಯುವಕ – ಭದ್ರತಾ ವೈಫಲ್ಯ ಆಗಿದ್ದೇಗೆ..?

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಆರೋಗ್ಯ ತೀವ್ರ ಹದಗೆಟ್ಟಿದೆ. ಕಳೆದ 2 ವಾರಗಳಲ್ಲಿ 2 ಬಾರಿ ಕೊವಿಡ್​ಗೆ ತುತ್ತಾಗಿದ್ದು, ಸದ್ಯ ಆಕ್ಸಿಜನ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಲಲಿತ್ ಮೋದಿ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಕಲಹಗಳು ನಡೆಯುತ್ತಲೇ ಇದೆ. ಈ ಮಧ್ಯೆ ಲಲಿತ್ ಮೋದಿ ತಮ್ಮ ಸಂಪೂರ್ಣ ಆಸ್ತಿಗೆ ಮಗನನ್ನ ಉತ್ತರಾಧಿಕಾರಿಯನ್ನಾಗಿ ಮಾಡಿ ಘೋಷಣೆ ಮಾಡಿದ್ದಾರೆ. ಲಂಡನ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಲಲಿತ್ ಮೋದಿ ತಮ್ಮ ಕುಟುಂಬದ ಕೆಕೆ ಮೋದಿ ಟ್ರಸ್ಟ್​ಗೆ ಸಂಪೂರ್ಣವಾಗಿ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್​ನ ಅಧಿಕಾರವನ್ನ ತಮ್ಮ ಮಗ ರುಚಿರ್ ಮೋದಿಯವರಿಗೆ ಹಸ್ತಾಂತರ ಮಾಡಿರುವ ವಿಚಾರವನ್ನ ಟ್ವೀಟ್ ಮೂಲಕವೇ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನ ಪೋಸ್ಟ್ ಮಾಡಿದ್ದು, ನನ್ನ ಮಕ್ಕಳಿಬ್ಬರೂ ಈ ವಿಷಯದಲ್ಲಿ ಸಮಾನ ಫಲಾನುಭವಿಗಳು. ಆದರೆ ಲೀಡರ್ ಒಬ್ಬನೇ ಆಗಿರಬೇಕು. ಮಗಳ ಜೊತೆ ಚರ್ಚಿಸಿಯೇ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಉಲ್ಲೇಖ ಮಾಡಿದ್ದಾರೆ.

 

ಕಳೆದ ವರ್ಷ ಜುಲೈನಲ್ಲಿ ಲಲಿತ್ ಮೋದಿ ಹಾಗೂ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ನಡುವಿನ ಸಂಬಂಧದ ಗುಟ್ಟು ರಟ್ಟಾಗಿಟ್ಟು. ಸ್ವತಃ ಲಲಿತ್ ಮೋದಿಯವರೇ ಸುಶ್ಮಿತಾ ಜೊತೆಗಿನ ಫೋಟೋಗಳನ್ನ ಶೇರ್ ಮಾಡಿದ್ದರು. ಇನ್ಸ್​ಟಾಗ್ರಾಂನಲ್ಲಿ ತಮ್ಮ ಹೆಸರಿನ ಪಕ್ಕ ಸುಶ್ಮಿತಾ ಹೆಸರು ಸೇರಿಸಿದ್ದರು. ಈ ನಡುವೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಲಲಿತ್ ಮೋದಿ ಕೂಡ ತಮ್ಮ ಇನ್ಸ್​ಟಾಗ್ರಾಂನಲ್ಲಿ ಸುಶ್ಮಿತಾ ಹೆಸರನ್ನ ತೆಗೆದುಹಾಕಿದ್ದರು. ಲಲಿತ್ ಮೋದಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅನೇಕರು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಕೂಡ ಬೇಗ ಗುಣಮುಖರಾಗಿ ಎಂದು ಲಲಿತ್​ಗೆ ವಿಶ್ ಮಾಡಿದ್ದಾರೆ. ಆದ್ರೆ ಸುಶ್ಮಿತಾ ಮಾತ್ರ ಯಾವುದೇ ಫೋಸ್ಟ್ ಶೇರ್ ಮಾಡಿಲ್ಲ.

suddiyaana