ಸಸ್ಯಕಾಶಿಯಲ್ಲಿ ಹೂವಿನ ಹಬ್ಬ- 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ

ಸಸ್ಯಕಾಶಿಯಲ್ಲಿ ಹೂವಿನ ಹಬ್ಬ- 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯಲಿರುವ 213ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಲಾಲ್​ಬಾಗ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ. ಜನವರಿ 26ರಂದು ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಲಾಲ್​ಬಾಗ್​ನಲ್ಲಿ ತೋಟಗಾರಿಕೆ ಇಲಾಖೆ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ಇಂದಿನಿಂದ ಜನವರಿ 30ರ ವರೆಗೆ ಪುಷ್ಪ ಪ್ರದರ್ಶನ ನಡೆಯಲಿದೆ.

ಇದನ್ನೂ ಓದಿ: ‘ನ್ಯಾಯ ಬೇಕು ಮೋದಿ’ – ‘ನಮೋ’ ಕಹಳೆ ಬೆನ್ನಲ್ಲೇ ಸಿದ್ದರಾಮಯ್ಯ ಪೋಸ್ಟರ್ ಪಂಚ್..!

ಈ ಬಾರಿ ಹೂವಿನ ಹಬ್ಬದಲ್ಲಿ ಬೆಂಗಳೂರಿನ ಇತಿಹಾಸವನ್ನು ಹೇಳಲಾಗಿದೆ. ಬೆಂಗಳೂರಿನ 1,500 ವರ್ಷಗಳ ಹಿಂದಿನ ಇತಿಹಾಸದ ಬಗ್ಗೆ, ಬೆಂಗಳೂರಿನ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಇತಿಹಾಸದ ಮಾಹಿತಿಯನ್ನು ದೇಶದ ವಿವಿಧ ಬಗೆಯ ಪುಷ್ಪಗಳ ಮೂಲಕ ಪ್ರದರ್ಶಿಸಲಾಗುತ್ತೆ. ಫ್ಲವರ್​ ಶೋಗೆ ಬರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು ಈ ಬಾರಿ ಫ್ಲವರ್ ಶೋನಲ್ಲಿ 15-20 ಲಕ್ಷ ಜನ ಸೇರುವ ಸಾಧ್ಯತೆ ಇದೆ. ಈ ಬಾರಿ ಒಟ್ಟು112 ಪುಷ್ಪ ಡೋಮ್ ಪ್ರದರ್ಶನವಿದ್ದು, ಹಾಲೆಂಡ್, ಕೊಲಂಬಿಯಾ, ಇಸ್ರೇಲ್, ಚಿಲಿ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾ, ಯಥೋಪಿಯಾ ಸೇರಿದಂತೆ 11 ವಿದೇಶಗಳ 69 ಜಾತಿಯ ಹೂಗಳನ್ನು ಪ್ರದರ್ಶಿಸಲಾಗುತ್ತಿದೆ. ಡಾರ್ಜಿಲಿಂಗ್ ನ ಸಿಂಬಡಿಯ ಆರ್ಕಿಡ್ಸ್ ಹೂವು ಈ ಬಾರಿಯ ಫ್ಲವರ್ ಶೋನ ಹೈಲೆಟ್ಸ್ ಆಗಿದೆ. ಇನ್ನೂ ತೋಟಗಾರಿಕೆ ಇಲಾಖೆ ವತಿಯಿಂದಲೇ 6 ಲಕ್ಷ ಹೂವಿನ ಕುಂಡಗಳನ್ನು ಪ್ರದರ್ಶಿಸಲಾಗುತ್ತಿದೆ.

ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಜಾ ದಿನಗಳಲ್ಲಿ ‌75 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನೂ 12 ವರ್ಷ ಒಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂಪಾಯಿ ಫಿಕ್ಸ್ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಲ್ಕು ಗೇಟ್ ಗಳಲ್ಲಿಯೂ ಟಿಕೆಟ್ ಕೌಂಟರ್ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

suddiyaana