ಈ ಸಿದ್ದೇಗೌಡ ಯಾರು ಗೊತ್ತಾ? – ಹೆಣ್ಮಕ್ಕಳ ಹೃದಯ ಕದ್ದವನ‌ ರಿಯಲ್‌ ಸ್ಟೋರಿ

ಈ ಸಿದ್ದೇಗೌಡ ಯಾರು ಗೊತ್ತಾ? – ಹೆಣ್ಮಕ್ಕಳ ಹೃದಯ ಕದ್ದವನ‌ ರಿಯಲ್‌ ಸ್ಟೋರಿ

ಲಕ್ಷ್ಮೀ ನಿವಾಸ ಸೀರಿಯಲ್ ಸದ್ಯ ತುಂಬಾನೆ ಟ್ರೆಂಡಿಗ್ ನಲ್ಲಿದೆ. ದಿನದಿಂದ ದಿನಕ್ಕೆ ರೋಚಕ ತಿರುವು ಪಡ್ಕೊಳ್ತಾ ಇದೆ.. ಈ ಸೀರಿಯಲ್ ನಲ್ಲಿ ಬರೋ ಪ್ರತಿಯೊಂದು ಪಾತ್ರವನ್ನೂ ಜನ‌ ಎಂಜಾಯ್‌ ಮಾಡ್ತಿದ್ದಾರೆ. ಅದರಲ್ಲೂ ಸಿದ್ದೇಗೌಡರ ಪಾತ್ರ ಜಾಸ್ತಿ ಸೌಂಡ್ ಮಾಡ್ತಾ ಇದೆ.. ಅದರಲ್ಲೂ ಪಕ್ಕಾ ಮಂಡ್ಯ ಶೈಲಿಯಲ್ಲಿ ಮಾತನಾಡೋ ಸಿದ್ದೇಗೌಡರ ಡೈಲಾಗ್ಸ್ ಕೇಳೋದು ಅಂದ್ರೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ.. ಇನ್ನು ತುಂಬಾನೇ ಹ್ಯಾಂಡ್ಸಮ್ ಆಗಿ ಕಾಣೋ‌ ಸಿದ್ದೇಗೌಡರು ಹೆಣ್ಮಕ್ಕಳ  ಮನಸು ಗೆದ್ದಿದ್ದಾರೆ.

ಇದನ್ನೂ ಓದಿ: ಸಲಾರ್‌ 2 ಸೆಟ್ಟೇರುವುದು ಅನುಮಾನ! – ಚಿತ್ರ ನಿಲ್ಲಲು ಇದೇ ಕಾರಣ ಆಯ್ತಾ?

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹಳ್ಳಿ ಹೈದನಾಗಿ, ಊರಿನ ಗೌಡ್ರ ಮಗನಾಗಿರುವ ಸಿದ್ಧೇಗೌಡ್ರ ಹಾವ, ಭಾವ, ಮಾತು, ಫೈಟ್ ಸದ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.  ತಮ್ಮ ಆಟ ತುಂಟಾಟಗಳಿಂದಲೇ ಭಾವನಾ ಪ್ರೀತಿಯಲ್ಲಿ ಬಿದ್ದಿರುವ ಸಿದ್ದೇಗೌಡ್ರಿಗೆ ಸದ್ಯ ಭಾವನಾ ಹಿಂದೆ ಮುಂದೆ ಅಲೆಯೋದೆ ಮೇನ್  ಡ್ಯೂಟಿಯಾಗಿದೆ. ಈ‌ ಸೀಕ್ವೆನ್ಸ್  ವೀಕ್ಷಕರಿಗೆ ತುಂಬಾನೇ ಇಷ್ಟವಾಗುತ್ತಿದೆ.. ಸಿದ್ದೇಗೌಡ್ರ ಸ್ಮೈಲ್, ಸ್ಟೈಲ್ ಗೆ ಹೆಣ್ಮಕ್ಕಳು ಫಿದಾ ಆಗಿದ್ದಾರೆ.. ಸದ್ಯ ಲವರ್ ಬಾಯ್ ಆಗಿ ಜನಮನ ಗೆದ್ದಿರುವ ಸಿದ್ದೇ ಗೌಡ್ರ ರಿಯಲ್ ಹೆಸರೇನು? ಯಾರಿವರು ಅಂತಾ ವೀಕ್ಷಕರು ಕೇಳ್ತಿದ್ದಾರೆ..

ಲಕ್ಷ್ಮೀ ನಿವಾಸ’ ಸೀರಿಯಲ್ ನಲ್ಲಿ ಸಿದ್ದೇಗೌಡ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿರುವ ಈ ನಟನ ನಿಜವಾದ ಹೆಸರು ಧನಂಜಯ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಇವರು, ತಮ್ಮ ಧಾರಾವಾಹಿಯ ಶೂಟಿಂಗ್ ಗ್ಯಾಪ್ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡುತ್ತಿರುತ್ತಾರೆ.

ಧನಂಜಯ್  ಇದಕ್ಕೂ ಮೊದಲು ಯಾವ ಧಾರಾವಾಹಿಯಲ್ಲೂ ಅಭಿನಯಿಸಿರಲಿಲ್ಲ,. ಲಕ್ಷ್ಮೀ ನಿವಾಸ’ ವೇ ಧನಂಜಯ್ ಅವರ ಮೊದಲ ಸೀರಿಯಲ್. ಫಸ್ಟ್ ಟೈಮ್ ಕಿರುತೆರೆಗೆ ಬಂದಿರುವ ಇವರು ಆಗಲೇ ತಮ್ಮ ಅಭಿನಯದಿಂದ ಎಲ್ಲರ ಮನ ಗೆದ್ದಿದ್ದಾರೆ. ಹಾಗೆಂದ ಮಾತ್ರಕ್ಕೆ ಇವರು ನಟನಾ ಕ್ಷೇತ್ರಕ್ಕೆ ಹೊಸಬರೇನಲ್ಲ. ಹಲವು ಸಿನಿಮಾಗಳಲ್ಲಿ ಅವರು ಆಕ್ಟ್ ಮಾಡಿದ್ದಾರೆ. ಧನಂಜಯ್ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಅದ್ಭುತ ಡಬ್ಬಿಂಗ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ಅವರು ಡ್ಯಾನ್ಸರ್ ಕೂಡ ಹೌದು. ಇವರನ್ನು ಎಲ್ಲರೂ ಪ್ರೀತಿಯಿಂದ ‘ಡಿಜೆ’ ಅಂತ ಕರೆಯುತ್ತಾರೆ.

ಈ ಹಿಂದೆ ‘ಜಿಲ್ ಜಿಲ್’ ಎಂಬ ಚಿತ್ರದಲ್ಲಿ ನಾಯಕನಾಗಿ ಕೂಡ ನಟಿಸಿದ್ದರು. ನಂತರ ಥಗ್ಸ್ ಆಫ್ ರಾಮಗಡ, ವಾಸಂತಿ ನಲಿದಾಗ, ಖಾಸಗಿ ಪುಟಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ. ವಾಸಂತಿ ನಲಿದಾಗ ಚಿತ್ರದಲ್ಲಿ ವಿಲನ್ ರೋಲ್‌ನಲ್ಲಿ ಅಭಿನಯಿಸಿದ್ದರು. ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತಾದರೂ ಅಷ್ಟು ಸೌಂಡ್ ಮಾಡಿರಲಿಲ್ಲ.

ಧನಂಜಯ ಅವರು ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಪಕ್ಕಾ ಮಂಡ್ಯದ ಹುಡುಗನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಹಣೆಯಲ್ಲಿ ತಿಲಕವಿಟ್ಟು, ಕೆಟ್ಟವರಿಗೆ ಕೆಟ್ಟವನಾಗಿ, ಒಳ್ಳೆಯವರಿಗೆ ಒಳ್ಳೆಯವನಾಗಿ, ಮನುಷ್ಯತ್ವ ತುಂಬಿರುವ ಮನುಷ್ಯನಾಗಿ ಕಾಣಿಸುತ್ತಾನೆ. ಸೀರಿಯಲ್‌ನಲ್ಲಿ ಸಿದ್ದೇಗೌಡರ ನಟನೆ  ವೀಕ್ಷಕರ ಮೆಚ್ಚುಗೆ ಗಳಿಸಿದೆ. ಇವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್‌ಗಳು ಕ್ರಿಯೇಟ್ ಅಗಿವೆ. ಇನ್ನು ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸದ್ಯ ಸಿದ್ದೇಗೌಡ ಹಾಗೂ ಭಾವನಾ ಜೋಡಿ ವೀಕ್ಷಕರಿಗೆ ಮೋಡಿ ಮಾಡುತ್ತಿದೆ. ವಯಸ್ಸಿನಲ್ಲಿ ತನಗಿಂತ ಹಿರಿಯಳಾದ ಭಾವನಾಳ ಇಷ್ಟಪಡುವ ಸಿದ್ದೇಗೌಡರ ಲವ್‌ಸ್ಟೋರಿ ಸೀರಿಯಲ್‌ ಪ್ರಿಯರಿಗೆ ಸಖತ್ ಇಷ್ಟವಾಗಿದೆ. ಇವರಿಬ್ಬರು ಸದ್ಯ ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿ ಎನಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ಬರ ಲವ್‌ಸ್ಟೋರಿ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕು.

Shwetha M