ಒಂದೇ ಸೀರಿಯಲ್ ನಲಿ ಅಮ್ಮ-ಮಗ! – ಈ ಸಿದ್ದೇಗೌಡ್ರ ತಾಯಿ ಯಾರು?
ಜಬರ್ದಸ್ತ್ ಮನರಂಜನೆಯ ಸಂಪೂರ್ಣ ಪ್ಯಾಕೇಜ್ ಆಗಿದೆ ಲಕ್ಷ್ಮೀ ನಿವಾಸ. ರೇಟಿಂಗ್ ರೇಸ್ನಲ್ಲಿ ಲಕ್ಷ್ಮೀ ನಿವಾಸದ್ದೇ ಫುಲ್ ಹವಾ. ಲಕ್ಷ್ಮೀ ನಿವಾಸದ ದೊಡ್ಡ ತಾರಬಳಗಕ್ಕೆ ಹೊಸ ಕಲಾವಿದೆ ಸೇರ್ಪಡೆಯಾಗಿದ್ದಾರೆ. ಇ ಧಾರಾವಾಹಿಯಲ್ಲಿ ಸಿದ್ದೇಗೌಡ್ರ ಎಪಿಸೋಡ್ ಬಂದರಂತು ನೋಡುಗರಿಗೆ ಫುಲ್ ಖುಷಿ. ಪಕ್ಕ ಮಂಡ್ಯ ಭಾಷೆಯಲ್ಲಿಯೇ ಎಲ್ಲರನ್ನು ಕಾಡುವ ಸಿದ್ದೇಗೌಡ್ರ ಆಕ್ಟಿಂಗ್ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.. ಅಂದ್ಹಾಗೆ, ಈಗ ವಿಶೇಷ ಸಮಾಚಾರ ಏನಂದ್ರೇ ಒಂದೇ ಧಾರಾವಾಹಿಯಲ್ಲಿ ಅಮ್ಮ-ಮಗ ಅಭಿನಯಿಸ್ತಿರೋದು. ಅಭಿನಯದಲ್ಲಿ ಗತ್ತಿನ, ಡೈಲಾಗ್ಗಳ ಗಮ್ಮತ್ತಿನಿಂದ ವೀಕ್ಷಕರ ಮನಸ್ಸು ಗೆದ್ದಿರೋ ಸಿದ್ದೇಗೌಡರ ಜೊತೆ ಈಗ ಅವರ ತಾಯಿ ಕೂಡ ಲಕ್ಷ್ಮೀ ನಿವಾಸ ಕುಟುಂಬಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಈ ಸಿದ್ದೇಗೌಡ ಯಾರು ಗೊತ್ತಾ? – ಹೆಣ್ಮಕ್ಕಳ ಹೃದಯ ಕದ್ದವನ ರಿಯಲ್ ಸ್ಟೋರಿ
ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಸಿದ್ದೇಗೌಡ್ರಿಗೆ ಮಹಿಳಾ ಅಭಿಮಾನಿಗಳೇ ಜಾಸ್ತಿ. ಯಾಕಂದ್ರೆ ಭಾವನಾಳ ಹಿಂದೆ ಬಿದ್ದಿರುವ ಸಿದ್ದೇಗೌಡ್ರು ಅವಳನ್ನು ಇಂಪ್ರೆಸ್ ಮಾಡಲು ಆಡುವ ಆಟಗಳು ಎಲ್ಲರಿಗೂ ಇಷ್ಟವಾಗುತ್ತೆ. ಆದಷ್ಟು ಬೇಗ ಅವರಿಬ್ಬರು ಒಂದಾಗಲಿ ಎಂದೇ ಅಭಿಮಾನಿಗಳು ಬಯಸುತ್ತಿದ್ದಾರೆ. ಅದರಲ್ಲೂ ಸಿದ್ದೇಗೌಡರ ಸ್ಟೈಲ್, ಹಾಗೂ ಅವ್ರ ಡೈಲಾಗ್ ಗಳನ್ನಂತೂ ಎಲ್ಲರೂ ಇಷ್ಟಪಡುತ್ತಾರೆ. ಇದೀಗ ಈ ಸೀರಿಯಲ್ ಗೆ ಕೆಲ ಹಿಸ ಪಾತ್ರಗಳು ಎಂಟ್ರಿ ಆಗಿವೆ. ಮಾತು ಬಾರದ, ಕಿವಿ ಕೇಳದ ವೆಂಕಿ, ಚೆಲುವಿ, ಕಣ್ಣು ಕಾಣದ ಚೆಲುವಿಯ ತಾಯಿ ಈ ಮೂರು ಪಾತ್ರಗಳು ಧಾರಾವಾಹಿಗೆ ಸೇರ್ಪಡೆಯಾಗುತ್ತಲೇ ವೀಕ್ಷಕರ ಮನಗೆದ್ದಿವೆ..
ಮಾತು ಬಾರದ ವೆಂಕಿ ಲೈಫ್ನಲ್ಲಿ ಪ್ರೇಮದ ತಂಗಾಳಿ ಬೀಸಲಾರಂಭಿಸಿದೆ. ವೆಂಕಿ ಚೆಲುವಿ ಲವ್ ಸ್ಟೋರಿ ಶುರುವಾಗಿದೆ. ಕಣ್ಣು ಕಾಣದ ತಾಯಿಯನ್ನ ನೋಡಿಕೊಳ್ತಾ ಗಟ್ಟಿಯಾಗಿ ಜೀವನ ಸಾಗಿಸ್ತಿರೋ ಚೆಲುವೆ ಮೇಲೆ ವೆಂಕಿ ನೋಟ ಬಿದ್ದಿದೆ. ಆದ್ರೇ ಚೆಲುವಿ ಮಾತ್ರ ವೆಂಕಿಯನ್ನ ತಪ್ಪಾಗಿ ಭಾವಿಸಿದ್ದಾಳೆ. ಮುಂದೆ ಈ ಮುನಿಸು, ಜಗಳ ಪ್ರೀತಿ ಪ್ರೇಮದ ತಿರುವು ಪಡೆದುಕೊಳ್ಳಲಿದೆ. ಇನ್ನು, ಚೆಲುವಿಯ ಕಣ್ಣು ಕಾಣದ ತಾಯಿ ಪಾತ್ರ ಮಾಡ್ತಿರೋದು ಬೇರೆ ಯಾರು ಅಲ್ಲ ಸಿದ್ದೇಗೌಡ್ರು ಅಂದ್ರೇ ಧನಂಜಯ್ ಅವರ ಸ್ವಂತ ತಾಯಿ. ಹಿರಿಯ ನಟಿ ಅನ್ನಪೂರ್ಣ. ಹಲವು ವರ್ಷಗಳಿಂದ ಇಂಡಸ್ಟ್ರಿಯಲ್ಲಿರೋ ಹಿರಿಯ ಕಲಾವಿದೆ ಅನ್ನಪೂರ್ಣ ಅವರು ನೂರಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು. ಮಗಳು ಮಹಾಲಕ್ಷ್ಮೀ ಮಾಡಲ್, ನಟಿ ಕೂಡ ಹೌದು.
ಮಗ ಧನಂಜಯ್, ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಪಾತ್ರದ ಮೂಲಕ ಜನರಮೆಚ್ಚುಗೆ ಗಳಿಸಿದ್ದಾರೆ. ಈಗ ಅನ್ನಪೂರ್ಣ ಅವರು ಮಗನ ಜೊತೆ ಅಭಿನಯದ ಇನ್ನಿಂಗ್ಸ್ ಶುರುಮಾಡಿದ್ದಾರೆ. ವೆಂಕಿ-ಚೆಲುವಿ ಲವ್ ಸ್ಟೋರಿ ಜೊತೆಗೆ ಅಮ್ಮ-ಮಗ ಒಂದೇ ಸೀರಿಯಲ್ನಲ್ಲಿ ಅಭಿನಯಿಸೋ ಅವಕಾಶ ಸಿಕ್ಕಿದೆ. ಈ ಭಾಗ್ಯ ಯಾರಿಗುಂಟು ಯಾರಿಗಿಲ್ಲ ಅಲ್ವಾ. ಒಟ್ಟಿನಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯೂ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿರುವುದಂತೂ ಸುಳ್ಳಲ್ಲ.