ಮತ್ತೆ ಸೈಕೋ ಅವತಾರದಲ್ಲಿ ಜಯಂತ್ – ಜಾನು.. ದಿಲೀಪ.. ಯಾರಿಗೆ ಶಿಕ್ಷೆ?
ವೀಕ್ಷಕರು ಟೆನ್ಷನ್ ಮಾಡ್ಕೊಂಡಿದ್ಯಾಕೆ?

ಜೀ ಕನ್ನಡದಲ್ಲಿ ಸೀರಿಯಲ್ ಸದ್ಯ ಕುತೂಹಲ ಮೂಡಿಸಿದೆ.. ಒಂದ್ಕಡೆ ಸಿದ್ದೇ ಗೌಡರು ಸತ್ಯ ಹೇಳಲು ರೆಡಿ ಆಗಿದ್ದಾರೆ. ಮತ್ತೊಂದ್ಕಡೆ ಸೈಕೋ ಜಯಂತ್ ಮತ್ತೆ ತನ್ನ ವರಸೆ ಶುರು ಮಾಡ್ಕೊಂಡಿದ್ದಾರೆ.. ಜಾಹ್ನವಿಗೆ ಮುಂದೆ ಮಾರಿ ಹಬ್ಬ ಕಾದಿದ್ಯಾ ಅಂತಾ ವೀಕ್ಷಕರು ಕೂಡ ಫುಲ್ ತಲೆ ಕೆಡಿಸಿಕೊಂಡಿದ್ದಾರೆ.. ಅಷ್ಟಕ್ಕೂ ಜಯಂತ್ ಮತ್ತೆ ಸೈಕೋ ಅವತಾರ ಎತ್ತಿದ್ದು ಯಾಕೆ? ಫ್ರೆಂಡ್ ವಿಚಾರದಿಂದ ಜಾನುಗೆ ಪನಿಶ್ ಮೆಂಟ್ ಕಾದಿದ್ಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪಾರ್ವತಿ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್.. – ಹೊಸ ಬಾಂಬ್ ಸಿಡಿಸಿದ ಹೆಚ್‌ಡಿಕೆ!
ಲಕ್ಷ್ಮೀ ನಿವಾಸ ಸೀರಿಯಲ್ ಈಗ ಫುಲ್ ಟ್ರೆಂಡಿಂಗ್ ನಲ್ಲಿರೋ ಸೀರಿಯಲ್ ಅಂತಾ ಹೇಳಿದ್ರೆ ತಪ್ಪಾಗಲ್ಲ.. ಸೀರಿಯಲ್ ವೀಕ್ಷಕರ ಬಳಗದಲ್ಲಿ ಸೈಕೋ ಜಯಂತ್ ಭಲೇ ಫೇಮಸ್. ಸೋಶಿಯಲ್ ಮೀಡಿಯಾದಲ್ಲೂ ಈ ಪಾತ್ರದ ಹವಾ ಜೋರಾಗಿದೆ.. ಈಗ ಸೈಕೋಪತಿ ಅಂತಾನೇ ಫೇಮಸ್ ಆಗಿದ್ದಾನೆ.. ಈ ಪಾತ್ರಕ್ಕೆ ವೀಕ್ಷಕರು ಹಿಡಿ ಹಿಡಿ ಶಾಪ ಹಾಕೋದು ಕಾಮನ್ ಆಗಿದೆ.. ಅಷ್ಟರ ಮಟ್ಟಿಗೆ ಈ ಪಾತ್ರದ ಮನಸ್ಥಿತಿ ವೀಕ್ಷಕರಲ್ಲಿ ಮನದಲ್ಲಿ ನೆಲೆಯೂರಿದೆ. ಈ ಜಯಂತನ ಹಿಸ್ಟರಿ ನೋಡಿದವ್ರು, ಅಯ್ಯೋ ಪಾಪದ ಹುಡುಗ, ಎಲ್ಲೋ ಪರಿಸ್ಥಿತಿಯ ಹೊಡೆತಕ್ಕೆ ಸಿಕ್ಕಿ ಸೈಕೋ ಆಗಿ ಬದಲಾಗಿದ್ದಾನೆ. ಇದೀಗ ಜಾಹ್ನವಿ ಅವನ ಲೈಫನಲ್ಲಿ ಬಂದಿದ್ದಾಳಲ್ಲಾ, ಇನ್ನು ಮೇಲಿಂದ ಎಲ್ಲವೂ ನಿಧಾನಕ್ಕಾದರೂ ಬದಲಾಗಬಹುದು ಅಂತ ವೀಕ್ಷಕರು ಅಂದುಕೊಂಡರು. ಆದರೆ ವೀವರ್ಸ್ ಎಕ್ಸ್‌ಪೆಕ್ಟೇಶನ್ ಫುಲ್ ಉಲ್ಟಾ ಹೊಡೆದೆ..
ಸೈಕೋಪತಿ ಚೇಂಜ್ ಆಗ್ತಾನೆ ಅಂದ್ಕೊಂಡ್ರೆ ಜಾಹ್ನವಿಯೇ ಬದಲಾಗಿದ್ದಾಳೆ.. ಆಕೆಯೆ ಪರಿಸ್ಥಿತಿಗೆ ಹೊಂದಿಕೊಂಡು, ಆತನ ಸ್ವಭಾವಕ್ಕೂ ಅಡ್ಜೆಸ್ಟ್ ಆಗ್ತಾ ಹೋಗಿದ್ದಾಳೆ. ಅವನ ಭಯಾನಕ ಬಿಹೇವಿಯರ್ ಅನ್ನೂ ಪ್ರೀತಿಯ ಅಂತಾ ಆಕೆ ಅದನ್ನೂ ಒಂದು ರೀತಿಯಲ್ಲಿ ಪಾಸಿಟಿವ್ ಆಗಿಯೇ ತಗೊಂಡಿದ್ದಾಳೆ.. ಆದರೆ ಈ ಥರದ ಅಡ್ಜೆಸ್ಟ್‌ಮೆಂಟಿನಲ್ಲಿ ಕಳೆದುಹೋದ ಆಕೆಗೆ ತನ್ನ ಸ್ವಾತಂತ್ರ್ಯ ಎಲ್ಲ ಹೊರಟು ಹೋಗಿರುವುದರ ಬಗ್ಗೆ ಆಗಲೀ, ತಾನು ಪಂಜರದ ಹಕ್ಕಿಯ ಹಾಗೆ ಬದುಕುತ್ತಿರುವುದರ ಕುರಿತಾಗಲೀ ಯೋಚನೆ ಇಲ್ಲಿವರೆಗೂ ಬಂದಿಲ್ಲ.. ಆದ್ರೀಗ ಜಾಹ್ನವಿ ಕ್ಲಾಸ್ ಮೇಟ್ ಮನೆಗೆ ಬಂದು ಜಯಂತ್ ಕೈಗೆ ಸಿಕ್ಕಾಕೊಂಡಿದ್ದಾನೆ..
ಹೌದು, ಜಾಹ್ನವಿ ಫ್ರೆಂಡ್ ದಿಲೀಪ ಪೊಲೀಸರಿಂದ ತಪ್ಪಿಸಿಕೊಂಡು ಬಂದು ಈಗ ಅವರ ಮನೆಗೆ ಸೇರಿಕೊಂಡಿದ್ದಾನೆ.. ಇದನ್ನ ಜಯಂತ್ ಗೆ ಹೇಳೋ ಧೈರ್ಯ ಆಕೆಗೆ ಇರ್ಲಿಲ್ಲ.. ಈ ಘಟನೆಯಿಂದ ಜಯಂತ್ ಕಂಡಾಗಲೆಲ್ಲಾ ಜಾನು ಭಯ ಬಿದ್ದು ಹೋಗಿದ್ದಾಳೆ. ಜಯಂತ್‌ಗೆ ಇದು ಪ್ರಶ್ನೆಯಾಗೇ ಉಳಿದಿದೆ. ಪೊಲೀಸರು ಬಂದಿದ್ದ ಕಾರಣಕ್ಕೆ ಚಿನ್ನುಮರಿ ಭಯ ಬಿದ್ದಿರಬೇಕು ಎಂದುಕೊಂಡಿದ್ದಾನೆ. ಆದ್ರೆ ಮತ್ತೆ ಆತನಿಗೆ ಡೌಟ್ ಬಂದು ಆಫೀಸ್ ಗೆ ಹೋಗದೇ ಮನೆಯಲ್ಲೇ ಕುಳಿತಿದ್ದಾನೆ.. ಆದರೆ ದಿಲೀಪನಿಗೆ ಈ ಜಯಂತ ಎಂಥಾ ಸೈಕೋ ಅನ್ನೋದು ಗೊತ್ತಾಗಿದೆ. ಅಷ್ಟೊತ್ತಿಗಾಗಲೇ ದಿಲೀಪ ಜಯಂತ್ ಕಣ್ಣಿಗೆ ಬಿದ್ದಿದ್ದಾನೆ.. ಜಾಹ್ನವಿಯನ್ನ ಡ್ಯಾನ್ಸ್ ಮಾಡಲು ಒತ್ತಾಯಿಸುತ್ತಲೇ ಅಡಗಿಕೊಂಡಿದ್ದ ಈ ಸ್ನೇಹಿತನ ಕಾಲರ್ ಪಟ್ಟಿ ಹಿಡಿದು ಮೇಲಕ್ಕೆಳೆದಿದ್ದಾನೆ. ದಿಲೀಪನ ಬಗ್ಗೆ ಜಾಹ್ನವಿ ಬಳಿ ಕೇಳಿದ್ದಾನೆ. ಜಾಹ್ನವಿ ನಡೆದಿರೋ ಸತ್ಯ ಹೇಳಿದ್ದಾಳೆ.. ಇದೀಗ ಸೈಕೋ ಜಯಂತನ ಮತ್ತೊಂದು ನಾಗವಲ್ಲಿ ಅವತಾರಕ್ಕೆ ಮಹಾಜನತೆ ಎದುರು ನೋಡುತ್ತಿದ್ದಾರೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ಸ್ ಹಾಕುತ್ತಿದ್ದಾರೆ..
ಮನೆಯ ಮೂಲೆ ಮೂಲೆಯಲ್ಲಿ ಜಯಂತ್ ಸಿಸಿಟಿವಿ ಹಾಕಿಸಿದ್ದಾನೆ.. ಆದ್ರೆ ಅವ್ನು ಯಾಕೆ ಸಿಸಿಟಿವಿ ಚೆಕ್ ಮಾಡಿಲ್ಲ.. ಜಯಂತ್ ಪಾತ್ರವನ್ನ ಚಿತ್ರ ವಿಚಿತ್ರವಾಗಿ ತೋರಿಸೋ ಸೀರಿಯಲ್ ಡೈರೆಕ್ಟರ್ ಈ ಸಲ ಯಾಕೆ ತಲೆ ಓಡಿಸಿಲ್ಲ.. ಸಿಸಿಟಿವಿ ಮ್ಯಾಟರ್ ಮರೆತು ಹೋಯ್ತಾ? ಅಂತಾ ಕೇಳ್ತಿದ್ದಾರೆ.. ಮತ್ತೆ ಕೆಲವರು ಹೆಂಡತಿಯನ್ನ ಅನುಮಾನದಿಂದ ನೋಡುವವರು..ನಿಜ ಜೀವನದಲ್ಲೂ ಇರುತ್ತಾರೆ.. ಯಾವಾಗಲೂ ಹಿಂಸೆ ಕೊಡ್ತಾ ಇರ್ತಾರೆ ಅಂತ ಕಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಮೊದ್ಲು ಈ ಕಥೆಯನ್ನು ಬದಲಾವಣೆ ಮಾಡಿ.. ಪಾಪ ಜಾಹ್ನವಿ ಪಡ್ತೀರೋ ಕಷ್ಟ ನೋವು ತೊಂದರೆ. ನೋಡೋಕೆ ಆಗ್ತಾ ಇಲ್ಲ. ಇಂತಹ ಮುದ್ದಾದ ಚಲುವೇನ. ಆ ಸೈಕೋಗೆ ಮದುವೆ ಮಾಡ್ಸಿ ದೊಡ್ಡ ತಪ್ಪು ಮಾಡಿದ್ದಾರೆ ನಮ್ಮ ಕಥೆಗಾರರು.. ಗಿಳಿನ ತಗೊಂಡೋಗಿ ಗಿಡುಗನ ಕೈಯಲ್ಲಿ ಕೊಟ್ಟಂಗಾಯ್ತು.. ಬೇರೆ ಯಾವ ಹೆಣ್ಣುಮಕ್ಕಳು ಇತರ ಪರಿಸ್ಥಿತಿಗೆ ಸಿಲುಕಬಾರದು.. ಅಂತಾ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಸೀರಿಯಲ್ ತುಂಬಾ ಕುತೂಹಲ ಮೂಡಿಸಿದೆ.