ಡ್ಯಾನ್ಸ್ ಗೂ ಸೈ, ನಟನೆಗೂ ಸೈ.. – ಜಯಂತ್‌ ನ ಚಿನ್ನುಮರಿ ಚಂದನ  
ಜಾಹ್ನವಿ ರಿಯಲ್ ಜರ್ನಿ!

ಡ್ಯಾನ್ಸ್ ಗೂ ಸೈ, ನಟನೆಗೂ ಸೈ.. – ಜಯಂತ್‌ ನ ಚಿನ್ನುಮರಿ ಚಂದನ  ಜಾಹ್ನವಿ ರಿಯಲ್ ಜರ್ನಿ!

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮಿ ನಿವಾಸ’ ಧಾರಾವಾಹಿ ಎಲ್ಲರ ಮೆಚ್ಚುಗೆ ಗಳಿಸಿದೆ. ಮಕ್ಕಳ ಮದುವೆ ಮಾಡುವ ಕನಸು ಕಂಡ ತಾಯಿ, ಒಂದು ಮನೆ ಕಟ್ಟುವ ಕನಸು ಕಾಣುವ ತಂದೆ.. ಇಬ್ಬರ ಆಸೆಗಳ ನಡುವೆ ಮಕ್ಕಳ ಜೀವನ ರೂಪಿಸುವ ಜವಾಬ್ದಾರಿಗಳ ಜೊತೆಗೆ ಮಧ್ಯಮ ವರ್ಗವನ್ನು ಪ್ರತಿನಿಧಿಸುತ್ತಿರುವ ಸೀರಿಯಲ್ ವೀಕ್ಷಕರ ಗಮನ ಸೆಳಿತಾ ಇದೆ. ಸದ್ಯ ಸೀರಿಯಲ್ನಲ್ಲಿ ಜಾಹ್ನವಿ ಸೈಕೋಪತಿ ಜಯಂತ್ ಪಾತ್ರ ಹೆಚ್ಚು ಹೈಲೈಟ್ ಆಗಿದೆ. ಜಾಹ್ನವಿ ಪಾತ್ರ ಮೂಲಕ ನಟಿ ಚಂದನ ಅನಂತಕೃಷ್ಣ ಜನರ ಮೆಚ್ಚುಗೆ ಗಳಿಸಿದ್ದಾರೆ. ಆಕೆಯ ಆಕ್ಟಿಂಗ್ಗೆ ವೀಕ್ಷಕರು ಬಹುಪರಾಕ್ ಅಂದಿದ್ದಾರೆ. ಅಂದ್ಹಾಗೆ ಜಾಹ್ನವಿ ಅಲಿಯಾಸ್ ಚಂದನ ರಿಯಲ್ ಜರ್ನಿ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IND Vs ZIM ಸಮರ ಗೆಲ್ಲೋದ್ಯಾರು? – ಗಿಲ್‌ ಗೆ ಅಗ್ನಿಪರೀಕ್ಷೆ.. ಗೆದ್ರೆ ಅದೃಷ್ಟ

ಲಕ್ಷ್ಮೀ‌ ನಿವಾಸ ಸೀರಿಯಲ್ ಸದ್ಯ ಟಿಆರ್ ಪಿ ರೇಸ್ ನಲ್ಲಿ ಮುಂದಿದೆ.‌ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನಗೆದ್ದಿದೆ. ಜಯಂತ್ ಹಾಗೂ ಜಾಹ್ನವಿ ಪಾತ್ರಕ್ಕೆ ವೀಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.. ಜಾಹ್ನವಿ ಜಯಂತ್ ಕೈವಶವಾಗಿದ್ದಾಳೆ. ಸದಾ ಹಕ್ಕಿಯಂತೆ ಮನೆ ತುಂಬಾ ಓಡಾಡುತ್ತಿದ್ದ ಜಾನು ಜಯಂತ್ ಮನೆಯಲ್ಲಿ ಬಂದಿಯಾಗಿದ್ದಾಳೆ. ಜಯಂತ್ ನ ಹುಚ್ಚು ಪ್ರೀತಿಯಿಂದಾಗಿ ಜಾನು ಕ್ಷಣ ಕ್ಷಣಕ್ಕೂ ಕಷ್ಟಪಡುತ್ತಿದ್ದಾಳೆ. ವೀಕ್ಷಕರು ಜಾಹ್ನವಿಯ ಸ್ಥಿತಿಗೆ ಮರುಗುವ ಜೊತೆಗೆ ಏನ್ ಆಕ್ಟಿಂಗ್ ಗುರು ಅಂತಾ ಅಂತಾ ಹೇಳ್ತಿದ್ದಾರೆ.. ಜಾಹ್ನವಿಯಾಗಿ, ಜಯಂತ್ ನ ಹೆಂಡ್ತಿ ಚಿನ್ನುಮರಿಯಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ ಚಂದನ ಅನಂತಕೃಷ್ಣ.

ಕನ್ನಡದ ಕಲರ್ಸ್ ಸೂಪರ್ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಧರಣಿ ರಮೇಶ್ ನಿರ್ದೇಶನದ  ರಾಜಾ ರಾಣಿ ಧಾರಾವಾಹಿಯ ಮೂಲಕ ಕನ್ನಡ ಕಿರುತರೆಗೆ ಎಂಟ್ರಿ ಕೊಟ್ಟ ನಟಿ ಚಂದನ ಅನಂತಕೃಷ್ಣ, ಆ ಧಾರಾವಾಹಿಯಲ್ಲಿ ಚುಕ್ಕಿ ಪಾತ್ರದ ಮೂಲಕ ರಾಜ್ಯದ ಮನೆಮಾತಾದರು. ಎಡವಟ್ಟು ರಾಣಿ ಚುಕ್ಕಿಯಾಗಿ, ವಟ ವಟ ಎಂದು ದಿನವಿಡೀ ಮಾತನಾಡುತ್ತಲೇ ಇರುವ ಅವರ ಪಾತ್ರ ಕನ್ನಡಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಆ ಧಾರಾವಾಹಿ ಬಳಿಕ ಹೂಮಳೆ ಸೀರಿಯಲ್ ನಲ್ಲಿ ಲಹರಿ ಎಂಬ ಪ್ರೌಢ, ಮದುವೆಗೆ ಮುನ್ನವೇ ಗರ್ಭಿಣಿಯಾಗೋ ಯುವತಿಯ ಪಾತ್ರದಲ್ಲೂ ಅದ್ಭುತವಾಗಿ ನಟಿಸಿದ್ದರು ಚಂದನ.

ಕನ್ನಡ ಕಿರುತೆರೆ ಮಾತ್ರವಲ್ಲ, ತೆಲುಗು ಕಿರುತೆರೆಯಲ್ಲೂ ಚಂದನಾ ಗುರುತಿಸಿಕೊಂಡಿದ್ದಾರೆ. ತೆಲುಗಿನ ವರುಧಿನಿ ಪರಿಣಯಂ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 7 ರಲ್ಲೂ ಚಂದನ ಸ್ಪರ್ಧಿಸಿ ಮನೆಮಾತಾಗಿದ್ರು. ಅಷ್ಟೇ ಅಲ್ಲ‍ದೆ ರಿಯಾಲಿಟಿ ಶೋ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲೂ ಭಾಗಿಯಾಗಿದ್ದರು. ಜೊತೆಗೆ ಹಾಡು ಕರ್ನಾಟಕ ಸಿಂಗಿಂಗ್ ರಿಯಾಲಿಟಿ ಶೋ ನಿರೂಪಕರೂ ಆಗಿದ್ದರು.

ತುಮಕೂರಿನ ಹುಡುಗಿಯಾಗಿರುವ ಚಂದನಾ ತುಮಕೂರಿನ ಟಿವಿಎಸ್ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಪದವಿಪೂರ್ವ ಶಿಕ್ಷಣವನ್ನು ಆಳ್ವಾಸ್ ಕಾಲೇಜು ಮೂಡುಬಿದಿರೆಯಲ್ಲಿ, ಪದವಿ ಶಿಕ್ಷಣವನ್ನು ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಮುಗಿಸಿದರು. ಇದೀಗ ಪರ್ಫಾರ್ಮಿಂಗ್ ಆರ್ಟ್ ನಲ್ಲಿ ಸ್ನಾತ್ತಕೋತರ ಪದವಿ ಕೂಡ ಪಡೆದಿದ್ದಾರೆ.

ಕಿರುತರೆ ನಟಿ,ರಂಗಭೂಮಿ ಕಲಾವಿದೆ, ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯೂ ಆಗಿರುವ ಮಲ್ಟಿ ಟ್ಯಾಲೆಂಟೆಡ್ ನಟಿ ಚಂದನ ಇನ್ನೇನು ಸಿನಿಮಾಗೂ ಎಂಟ್ರಿಕೊಡಲಿದ್ದಾರೆ. ಇದರ ನಡುವೆಯೂ ನಟಿ ತಮ್ಮ ಪ್ಯಾಷನ್ ಆಗಿರುವ ಭರತನಾಟ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಭರತನಾಟ್ಯ ರಂಗಪ್ರವೇಶ ಮಾಡಿರುವ ಚಂದನಾ ಅಪಾರ ಮೆಚ್ಚುಗೆಯನ್ನೂ ಪಡೆದಿದ್ದರು. ಸದ್ಯ ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಮಿಂಚುತ್ತಿದ್ದಾರೆ ಚಂದನ.

Shwetha M