ಕೀರ್ತಿ ಅಲ್ಲ.. ಲಕ್ಷ್ಮೀನೂ ಅಲ್ಲ.. ಇನ್ನೊಬ್ಬಳು.. ವೈಷ್ಣವ್‌ ಬಾಳಲ್ಲಿ ಕಾವೇರಿ ಆಟ
TRP ಗಾಗಿ ಸೀರಿಯಲ್‌ ಉಲ್ಟಾ ಪಲ್ಟಾ!

ಕೀರ್ತಿ ಅಲ್ಲ.. ಲಕ್ಷ್ಮೀನೂ ಅಲ್ಲ.. ಇನ್ನೊಬ್ಬಳು.. ವೈಷ್ಣವ್‌ ಬಾಳಲ್ಲಿ ಕಾವೇರಿ ಆಟTRP ಗಾಗಿ ಸೀರಿಯಲ್‌ ಉಲ್ಟಾ ಪಲ್ಟಾ!

ಜೈಲು ಸೇರಿದ್ದ ಕಾವೇರಿ ಮತ್ತೆ ತನ್ನ ಕುತಂತ್ರದಿಂದ ಮನೆಗೆ ವಾಪಾಸ್‌ ಬಂದಿದ್ದಾಳೆ. ಮನೆಗೆ ಬರ್ತಿದ್ದಂತೆ ಮತ್ತೆ ತನ್ನ ಅಟ್ಟಹಾಸ ಶುರುಮಾಡ್ಕೊಂಡಿದ್ದಾಳೆ. ತನ್ನನ್ನ ಜೈಲಿಗೆ ಕಳುಹಿಸಿದ್ದ ಲಕ್ಷ್ಮೀಯನ್ನ ಮನೆಯಿಂದ ಆಚೆ ಹಾಕಿದ್ದಾಳೆ. ಆದ್ರೀಗ ವೈಷ್ಣವ್‌ ಇದನ್ನೆಲ್ಲಾ ನೋಡ್ಕೊಂಡು ಸುಮ್ಮನಿದ್ದಾನೆ.. ಇದೀಗ ವೈಷ್ಣವ್‌ ಯಾರ ಪರ? ಅಮ್ಮನ ಪರನಾ? ಹೆಂಡ್ತಿ ಪರನಾ ಅನ್ನೋ ಕುತೂಹಲ ಮೂಡಿದೆ. ಈ ಬೆನ್ನಲ್ಲೇ ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ವೈಷ್ಣವ್‌ ಇನ್ನೊಂದು ಮದುವೆ ಆಗ್ತಿದ್ದಾನೆ.. ಹಾಗಾದ್ರೆ ವೈಷ್ಣವ್‌ ಲಕ್ಷ್ಮೀಗೆ ಡಿವೋರ್ಸ್‌ ಕೊಡ್ತಾನಾ? ಕೀರ್ತಿ ಕತೆ ಏನು? ವೈಷ್‌ ಬಾಳಲ್ಲಿ ಎಂಟ್ರಿಕೊಟ್ಟ ಹೊಸ ಹುಡುಗಿ ಯಾರು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಮಂದಿ ಬಲಿ – ಇಂದು ಪ್ರಯಾಗ್‌ರಾಜ್‌ಗೆ ಯೋಗಿ ಭೇಟಿ

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಲಕ್ಷ್ಮೀ ಕೀರ್ತಿಯನ್ನ ಕೊಲ್ಲಲು ಪ್ರಯತ್ನಪಟ್ಟಿದ್ದ ಕಾವೇರಿ ಜೈಲು ಸೇರಿದ್ಲು.. ಅದಾದ್ಮೇಲೆ   ಕಾವೇರಿ ಲಾಯರ್‌ ಭೇಟಿ ಮಾಡಿ ಪ್ರಕರಣ ಒಪನ್‌ ಮಾಡಿಸಿ ನಿರಪರಾಧಿ ಅಂತ ಸಾಬೀತುಪಡಿಸಿಕೊಂಡಿದ್ದಾಳೆ. ಇದೀಗ ಆಕೆ ಜೈಲಿನಿಂದ ಮನೆಗೆ ಬಂದಿದ್ದಾಳೆ.. ಮೆನೆಗೆ ಕಾಲಿಡ್ತಿದ್ದಂತೆ ಮತ್ತೆ ಕುತಂತ್ರ ಶುರುಮಾಡ್ಕೊಂಡಿದ್ದಾಳೆ..  ವೈಷ್ಣವ್‌ ಮುಂದೆ ಚೆನ್ನಾಗೇ ಡ್ರಾಮಾ ಮಾಡ್ತಿದ್ದಾಳೆ.. ಇದೀಗ ಲಕ್ಷ್ಮೀಯನ್ನೇ ಮನೆಯಿಂದ ಆಚೆ ಹಾಕಿದ್ದಾಳೆ.

ಜೈಲಿನಿಂದ ಕಾವೇರಿ.. ಲಕ್ಷ್ಮೀ ಮೋಸ ಮಾಡಿದ್ದಾಳೆ.. ನಿಮ್ಮಿಂದ ಸಾಕಷ್ಟು ವಿಷಯವನ್ನು ಮುಚ್ಚಿಟ್ಟಿದ್ದಾಳೆ ಅಂತ ಕಾವೇರಿ ಪದೇ ಪದೇ ಹೇಳುತ್ತಿದ್ದಾಳೆ. ಅಷ್ಟೇ ಅಲ್ಲ ತಾನು ಜೈಲಿಗೆ ಹೋಗಲು ಕಾರಣವಾಗಿದ್ದ ಲಕ್ಷ್ಮೀಯನ್ನೇ ಈಗ ಮನೆಯಿಂದ ಆಚೆ ಹಾಕಿದ್ದಾಳೆ. ಆದ್ರೆ ಇಷ್ಟು ದಿನ ಮಹಾ ಲಕ್ಷ್ಮೀ ಮಹಾಲಕ್ಷ್ಮೀ ಅಂತಾ ಹಿಂದೆ ಸುತ್ತಾಡ್ತಿದ್ದ ವೈಷ್ಣವ್‌ ಕೂಡ ಹೆಂಡ್ರಿಗೆ ಬೆಂಬಲ ಕೊಡ್ತಿಲ್ಲ.

ಹೌದು, ಕಾವೇರಿ ಲಕ್ಷ್ಮೀಯನ್ನ ಮನೆಯಿಂದ ಹೊರ ಹಾಕ್ತಿದ್ದಂತೆ  ಲಕ್ಷ್ಮೀಯನ್ನು ವೈಷ್ಣವ್‌ ತಡೆದು ನಿಲ್ಲಿಸಿದ್ದಾನೆ. ಆದರೆ ಲಕ್ಷ್ಮೀ ಮನೆಯಿಂದ ಹೊರಗಡೆ ಹೋಗಬೇಕೋ, ಬೇಡವೋ ಎನ್ನುವುದರ ಬಗ್ಗೆ ವೈಷ್ಣವ್‌ ಮಾತನಾಡ್ತಿಲ್ಲ. ನಾನು ನಂಬಿದ ಗಂಡ ನಾನು ಮನೆಯಿಂದ ಹೋಗಬೇಕೋ? ಬೇಡವೋ ಎಂಬ ಬಗ್ಗೆ ಮಾತನಾಡದರಿರೋದು ಲಕ್ಷ್ಮೀಗೆ ಶಾಕ್‌ ತರಿಸಿದೆ. ಇನ್ನು ಮನೆಯವರು ಕೂಡ ಶಾಕ್‌ ಆಗಿದ್ದಾರೆ.. ಒಟ್ಟಿನಲ್ಲಿ ಲಕ್ಷ್ಮೀಯನ್ನು ಎಲ್ಲರ ಎದುರು ಕೆಟ್ಟವಳನ್ನಾಗಿ ಮಾಡೋದು ಕಾವೇರಿ ಪ್ಲ್ಯಾನ್.‌

ಇನ್ನು ಲಕ್ಷ್ಮೀ ಕಾವೇರಿಗೆ ಸರಿಯಾಗೇ ಟಾಂಗ್‌ ನೀಡಿದ್ದಾಳೆ.. ನಾನು ಈ ಮನೆ ಬಿಟ್ಟು ಹೋಗೋದಿಲ್ಲ.. ಕೋರ್ಟ್‌ನಲ್ಲಿ ಕಾವೇರಿ ಅತ್ತೆ ಪರ ತೀರ್ಪು ಬಂತು ಅಂದಮಾತ್ರಕ್ಕೆ ಅವರು ಒಳ್ಳೆಯವರಲ್ಲ. ಕಾವೇರಿ ಅತ್ತೆ ಕೊಲೆ ಪ್ರಯತ್ನ ಮಾಡಿದ್ದು, ಮೋಸ ಮಾಡಿದ್ದು ನನಗೆ ಗೊತ್ತಿದೆ. ಮನೆಯವರಿಗೆ ಒಳ್ಳೆಯದಾಗಲಿ ಅಂತ ನಾನು ಕೆಲ ವಿಷಯಗಳನ್ನು ಮುಚ್ಚಿಟ್ಟಿದ್ದೆ ಅಷ್ಟೇ ಎಂದು ಲಕ್ಷ್ಮೀ ವಾದ ಮಾಡಿದ್ದಾಳೆ. ಆದ್ರೀಗ ಕಪಟಿ ಕಾವೇರಿ ವೈಷ್ಣವ್‌ ಗೆ ಮತ್ತೊಂದು ಮದುವೆ ಮಾಡಿಸಲು ಮುಂದಾಗಿದ್ದಾಳೆ.. ಇದೀಗ ವೈಷ್ಣವ್‌ ಬಾಳಲ್ಲಿ ಮತ್ತೊಬ್ಬಳು ಎಂಟ್ರಿ ಕೊಟ್ಟಿದ್ದಾಳೆ.

ಲಕ್ಷ್ಮೀ ಬಾರಮ್ಮ ಸೀರಿಯಲ್‌ ನ ಹೊಸ ಅಧ್ಯಾಯ ಎಂಬ ಹೊಸ ಪ್ರೋಮೋವನ್ನ ಕಲರ್ಸ್‌ ಕನ್ನಡ ರಿಲೀಸ್‌ ಮಾಡಿದೆ.  ಅದರಲ್ಲಿ ವೈಷ್ಣವ್‌ ಮತ್ತೆ ಎಂಗೇಜ್‌ ಮೆಂಟ್‌ ಮಾಡಿಕೊಳ್ತಿದ್ದಾನೆ. ಲಕ್ಷ್ಮೀ, ಕೀರ್ತಿಯನ್ನು ಬಿಟ್ಟು ವೈಷ್ಣವ್‌ ಮತ್ತೊಬ್ಬಳು ಹುಡುಗಿಯನ್ನು ಎಂಗೇಜ್‌ ಮೆಂಟ್‌ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆಗ ವೈಷ್ಣವ್‌ ನನ್ನ ಗಂಡ.. ಅವರು ನನ್ನ ಉಸಿರು ಅಂತಾ ಹೇಳಿದ್ದಾಳೆ.. ಆಗ ಕೀರ್ತಿ ಎಂಟ್ರಿಕೊಟ್ಟು ರಿಂಗ್‌ ಎಳೆದುಕೊಂಡು ಎಂಗೇಜ್‌ ಮೆಂಟ್‌ ಗೆ  ಅಡ್ಡಿ ಆಗಿದ್ದಾಳೆ.. ವೈಷ್‌ ಪಕ್ಕ ಯಾವಾಗ್ಲೂ ಲಚ್ಚಿ ಇರ್ಬೇಕು ಅಂತಾ ಹೇಳಿದ್ದಾಳೆ. ಇನ್ನೊಂದ್ಕಡೆ ವೈಷ್ಣವ್‌ ಅಮ್ಮನ ಮಾತಿಗೆ ಸೋಲಲ್ಲ.. ಕೀರ್ತಿ ಪ್ರೀತಿಗೆ ಕರಗಲ್ಲ.. ಮಹಾಲಕ್ಷ್ಮೀಗೆ ಕಟ್ಟಿದ ತಾಳಿಯ ಮೇಲಾಣೆ.. ಇದು ವೈಷ್ಣವ್‌ ಹೊಸ ಅಧ್ಯಾಯ ಅಂತಾ ವೈಷ್‌ ಹೇಳಿದ್ದಾನೆ.. ಇದೀಗ ವೈಷ್ಣವ್‌ ಬೇರೆ ಹುಡುಗಿ ಜೊತೆ ಮದುವೆ ಮಾಡಿಕೊಳ್ಳೋದು ಕನ್ಪರ್ಮ್‌ ಆಗಿದೆ. ಇದ್ರಿಂದಾಗಿ ಹೊಸ ನಟಿ ಎಂಟ್ರಿ ಆಗೋದು ಫಿಕ್ಸ್‌ ಆಗಿದೆ..  ಆದರೆ ಆ ಹುಡುಗಿಯ ಮುಖ ತೋರಿಸಿಲ್ಲ.

ಇನ್ನೊಂದು ಕಡೆ ಕೀರ್ತಿ ಜೊತೆ ವೈಷ್ಣವ್‌ ಮದುವೆ ಆಗಬಾರದು ಅಂತಲೇ ಕಾವೇರಿಯು ಲಕ್ಷ್ಮೀಯನ್ನು ತನ್ನ ಸೊಸೆಯಾಗಿ ಮಾಡಿಕೊಂಡಳು. ಈಗ ಲಕ್ಷ್ಮೀ ತನ್ನ ದಾರಿಗೆ ಅಡ್ಡ ಆಗುತ್ತಿದ್ದಾಳೆ ಅಂತ ಅವಳು ಇನ್ನೊಂದು ಹುಡುಗಿ ಜೊತೆ ಮಗನ ಮದುವೆ ಮಾಡಿಸುವ ಪ್ಲ್ಯಾನ್‌ ಮಾಡಿದ್ದಾಳೆ..  ಮಗ-ಸೊಸೆ ಚೆನ್ನಾಗಿರೋದು ಕಾವೇರಿಗೆ ಇಷ್ಟವೇ‌ ಇಲ್ಲ. ಆದರೆ ಅವಳಿಗೆ ತಾನು ಏನು ತಪ್ಪು ಮಾಡುತ್ತಿದ್ದೀನಿ ಎನ್ನುವ ಅರಿವು ಕೂಡ ಇಲ್ಲ.‌ ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಏನಾಗಲಿವೆ? ಏನು ಟ್ವಿಸ್ಟ್‌ ಕಾದಿವೆ ಎಂಬ ಕುತೂಹಲ ಜೋರಾಗಿದೆ.

ಪ್ರೋಮೋ ರಿಲೀಸ್‌ ಆಗ್ತಿದ್ದಂತೆ ವೀಕ್ಷಕರು ನಾನಾ ಕಾಮೆಂಟ್‌ ಮಾಡ್ತಿದ್ದಾರೆ.. ಸೀರಿಯಲ್‌ ಟಿ ಆರ್‌ಪಿ ಬಿದ್ದುಹೋಯ್ತು ಅಂತಾ ಏನೇನೋ ಸರ್ಕಸ್‌ ನಡಿತಾ ಇದೆ.. ಮೊದ್ಲಿಗೆ ಕೀರ್ತಿನ ಸಾಯಿಸಿ ಬದುಕಿಸಿದ್ರು.. ಆಮೇಲೆ ಲಕ್ಷ್ಮೀನಾ ಸಾಯಿಸಿ ಬದುಕಿಸಿದ್ರು.. ಈಗ ವೈಷ್ಣವ್‌ ಗೆ ಮತ್ತೊಂದು ಮದುವೆ ಮಾಡ್ತಿದ್ದೀರಾ.. ಸೀರಿಯಲ್‌ ಸಮಾಜಕ್ಕೆ ಏನ್‌ ಸಂದೇಶ ಕೊಡ್ತಿದೆ.. ಸೀರಿಯಲ್‌ ಕತೆ ಹಳ್ಳ ಹಿಡಿತಾ ಇದೆ.. ಟಿ ಆರ್‌ ಪಿಗಾಗಿ ಕತೆಯನ್ನೇ ಉಲ್ಟಾ ಪಲ್ಟಾ ಮಾಡ್ತಿದ್ದೀರಾ.. ಕಥೆ ನೇ ಮುಗಿತು ಅನ್ನೋಷ್ಟ್ರಲ್ಲಿ ಮತ್ತ್ತೊಂದು ಕಥೆನಾ.. ಇನ್ನು ಆ ಕಥೆ.. ಮತ್ತೆ ಇನ್ಯಾವಾ ಕಥೇನೋ ಏನೋ.. ಹೊಸ ಅಧ್ಯಾಯ ಆದಷ್ಟು ಬೇಗ ಮುಗಿಯಲಿ ಅಂತಾ ಕಾಮೆಂಟ್‌ ಮಾಡ್ತಿದ್ದಾರೆ.. ಇದೀಗ  ಕಲರ್ಸ್‌ ಕನ್ನಡ ವಾಹಿನಿಯ ಸೀರಿಯಲ್‌ ಗಳಲ್ಲಿ ಹೊಸ ಹೊಸ ಟ್ವಿಸ್ಟ್‌ ಕೊಡುತ್ತಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

Shwetha M

Leave a Reply

Your email address will not be published. Required fields are marked *