ಭಾವನ ಹೋರಾಟ.. ಸಿದ್ದೇಗೌಡ್ರು ಜೈಲಿಗೆ? – ಗೆಳೆಯನ ಸಾವು ಗಂಡನಿಗೆ ಮುಳುವು?
ಆಕ್ಸಿಡೆಂಟ್ ರಹಸ್ಯ ಬಯಲಾಗುತ್ತಾ?

ಭಾವನ ಹೋರಾಟ.. ಸಿದ್ದೇಗೌಡ್ರು ಜೈಲಿಗೆ? – ಗೆಳೆಯನ ಸಾವು ಗಂಡನಿಗೆ ಮುಳುವು?ಆಕ್ಸಿಡೆಂಟ್ ರಹಸ್ಯ ಬಯಲಾಗುತ್ತಾ?

ಲಕ್ಷ್ಮೀ ನಿವಾಸ ಸೀರಿಯಲ್ ಸದ್ಯ ರೋಚಕ  ತಿರುವು ಪಡೆದುಕೊಂಡಿದೆ. ಭಾವನ ಈಗ ಮಾಜಿ ಬಾಯ್ ಫ್ರೆಂಡ್ ಸಾವಿಗೆ ನ್ಯಾಯ ಬೇಕು ಅಂತಾ ಹೋರಾಟ ಮಾಡ್ತಿದ್ದಾಳೆ.. ಇದ್ರಿಂದಾಗಿ ಸಿದ್ದೇಗೌಡ್ರ ಮನೆಯವರು ಭಾವನ ವಿರುದ್ಧ ಕಿಡಿಕಾರ್ತಿದ್ದಾರೆ. ಅವರಿಬ್ಬರನ್ನ ಮನೆಯಿಂದ ಆಚೆ ಕೂಡ ಹಾಕಿದ್ದಾರೆ. ಇದೀಗ  ಭಾವನಾ ಹೋರಾಟ ಸಿದ್ದೇಗೌಡ್ರಿಗೆ ಕಂಟಕ ಆಗುತ್ತಾ ಅನ್ನೋ ಅನುಮಾನ ವೀಕ್ಷಕರನ್ನು ಕಾಡ್ತಿದೆ. ಅಷ್ಟಕ್ಕೂ ಭಾವನಾ ಮಾಜಿ ಗೆಳೆಯನ ಆಕ್ಸಿಡೆಂಟ್ ಕೇಸ್ ಗೂ ಸಿದ್ದೇಗೌಡ್ರಿಗೂ ಏನ್ ಸಂಬಂಧ? ಇದ್ರಲ್ಲಿ ಸಿದ್ದೇಗೌಡ್ರ ರೋಲ್ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಆಂಗ್ಲರನ್ನು ಚೆಂಡಾಡಿದ ಅಭಿಷೇಕ್ & ಅರ್ಶದೀಪ್ ಸಿಂಗ್ – ಗೆದ್ದರೂ ಸೋತ ನಾಯಕ ಸೂರ್ಯಕುಮಾರ್  

ಲಕ್ಷ್ಮೀ ನಿವಾಸ ಸೀರಿಯಲ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಸದ್ಯ ಭಾವನ ಹಾಗೂ ಸಿದ್ದೇಗೌಡ್ರ ಮೇಲೆ ಕತೆ ಸಾಗ್ತಿದೆ. ಭಾವನ ಖುಷಿ ತಂದೆ ಶ್ರೀಕಾಂತ್ ಅನ್ನ ಮದುವೆಯಾಗಲು ಹೊರಟಿದ್ಲು.. ಆದ್ರೆ ಮದುವೆಯ ಸಮಯದಲ್ಲೇ  ಶ್ರೀಕಾಂತ್ ಆಕ್ಸಿಡೆಂಟ್ ನಲ್ಲಿ ಸಾಯುತ್ತಾನೆ. ಇದೀಗ ಶ್ರೀಕಾಂತ್ ಸಾವು ಸಹಜ ಸಾವಲ್ಲ ಅನ್ನೋ ಅನುಮಾನ ಭಾವನಾಗೆ ಮೂಡಿದೆ.   ಹೇಗಾದರೂ ಮಾಡಿ ಖುಷಿ ತಂದೆ ಸಾವು ಹೇಗಾಗಿದೆ ಎನ್ನುವ ವಿಚಾರ ತಿಳಿದುಕೊಳ್ಳಬೇಕು ಎನ್ನುವ ಆಲೋಚನೆಯನ್ನು ಭಾವನಾ ಮಾಡುತ್ತಿರುತ್ತಾಳೆ. ಭಾವನ ಗೆ ಸಿದ್ದೇ ಗೌಡರು ಬಹಳಷ್ಟು ಸಹಾಯ ಮಾಡುತ್ತಾರೆ. ಭಾವನ ಏನೇ ಕೆಲಸ ಮಾಡಿದರೂ ಅದಕ್ಕೆ ಸಪೋರ್ಟ್ ಸಿದ್ದೆ ಗೌಡರು ಮಾಡುತ್ತಾರೆ. ಪೊಲೀಸ್ ಸ್ಟೇಶನ್ ಎದುರಿಗೆ ಭಾವನ ಧರಣಿ ಮಾಡಿದ್ಲು.. ಹೇಗಾದರೂ ಶ್ರೀಕಾಂತ್ ಸಾವಿನ ವಿಚಾರ ಬಹಿರಂಗ ಆಗಬೇಕು ಹಾಗೆಯೇ ಆಕ್ಸಿಡೆಂಟ್ ಕೇಸ್ ನ ಪೊಲೀಸ್ ಸ್ಟೇಶನ್ ನಲ್ಲಿ ತೆಗೆದುಕೊಳ್ಳಬೇಕು ಎನ್ನುವ ವಿಚಾರಕೆ ಭಾವನ ಸ್ಟ್ರೈಕ್ ಮಾಡಿದ್ಲು.. ಆದ್ರೆ ಪೋಲಿಸರು ಸಿದ್ದೇಗೌಡ್ರ ತಂದೆಯ ಒತ್ತಡದಿಂದಾಗಿ ಕೇಸ್ ತೆಗೆದುಕೊಳ್ಳಲು ಒಪ್ಪೋದಿಲ್ಲ.. ಆಕೆಯ ಮೇಲೆ ಲಾಠಿ ಚಾರ್ಜ್ ಮಾಡಲು ಮುಂದಾಗಿದ್ರು.. ಅದನ್ನ ಸಿದ್ದೇಗೌಡ್ರು ತಡೆದಿದ್ದಾರೆ.

ಇನ್ನು ಮನೆಗೆ ಬಂದ ಭಾವನ ಹಾಗೂ ಸಿದ್ದೇಗೌಡ್ರುಗೆ ಶಾಕ್ ಕಾದಿತ್ತು.. ತಾಯವ್ವ ಭಾವನ ವಿರುದ್ಧ ರೇಗಾಡಿದ್ದಾಳೆ.. ಪೊಲೀಸ್ ಸ್ಟೇಷನ್ ಮುಂದೆ ಪ್ರತಿಭಟನೆ ಮಾಡಿ ಮನೆ ಮರ್ಯಾದೆ ತೆಗೆದಿದ್ದಾಳೆ ಎಂದು ಮನೆಯಿಂದ ಆಚೆ ಹಾಕಿದ್ರು. ಇದೀಗ ಭಾವನ ಜೊತೆ ಸಿದ್ದೇಗೌಡರು ಕೂಡ ಮನೆ ಬಿಟ್ಟು ಹೊರಟಿದ್ದಾರೆ.. ಇದೀಗ ಭಾವನ ಮಾಜಿ ಗೆಳೆಯನ ಕೇಸ್ ಸಿದ್ದೇಗೌಡ್ರಿಗೆ ಮುಳುವಾಗುತ್ತಾ ಅನ್ನೋ ಅನುಮಾನ ವೀಕ್ಷಕರಿಗೆ ಕಾಡ್ತಿದೆ. ಯಾಕಂದ್ರೆ ಶ್ರೀಕಾಂತ್ ಸಾಯಬೇಕು ಅನ್ನೋ ಪ್ಲ್ಯಾನ್ ಬೇರೆಯವರದ್ದಾದ್ರೂ.. ಶ್ರೀಕಾಂತ್ ಗೆ ಗುದ್ದಿದ್ದು ಸಿದ್ದೇಗೌಡ್ರ ಕಾರು. ಇದ್ರಿಂದಾಗೇ ಆತ ಸತ್ತಿದ್ದಾನೆ ಎಂದು ತೋರಿಸಲಾಗಿದೆ. ಇದೀಗ ಈ ಸತ್ಯ ಹೊರಬಂದ್ರೆ ಸಿದ್ದೇಗೌಡ್ರು ಜೈಲಿಗೆ ಹೋಗ್ತಾರೆ. ಇದಕ್ಕಾಗೇ ಸಿದ್ದೇಗೌಡ್ರ ತಂದೆ ಈ ಕೇಸ್ ತೆಗೆದುಕೊಳ್ಬಾರ್ದು ಅಂತಾ ಪೊಲೀಸರಿಗೆ ಒತ್ತಡ  ಹಾಕ್ತಿದ್ದಾರೆ.. ಇದೀಗ ಸತ್ಯ ಆಚೆ ಬಂದ್ರೆ ಸಿದ್ದೇಗೌಡರು ಜೈಲಿಗೆ ಹೋಗೋದು ಫಿಕ್ಸ್ ಆಗಿದೆ. ಹಾಗಾದ್ರೆ ಸತ್ಯ ಗೊತ್ತಾದ ಭಾವನ ಏನ್ ಮಾಡ್ತಾಳೆ? ಸಿದ್ದೇಗೌಡ್ರನ್ನ ಕ್ಷಮಿಸ್ತಾಳಾ ಅಂತಾ ಕಾದು ನೋಡ್ಬೇಕು..

Shwetha M

Leave a Reply

Your email address will not be published. Required fields are marked *