ಜಾನು ಮುಂದೆ ಅಜ್ಜಿ ಚಾಪ್ಟರ್ ಕ್ಲೋಸ್.. ಜಯಂತ್ ಹುಚ್ಚಾಟಕ್ಕೆ ಕೊನೆ ಇಲ್ವಾ?
ಸೈಕೋಪತಿ ಹುಚ್ಚು ಪ್ರೀತಿ!
ಮನುಷ್ಯ ತನ್ನ ಒಂದು ತಪ್ಪನ್ನ ಮರೆ ಮಾಚಲು ಏನೇನು ಮಾಡ್ತಾನೆ ಅನ್ನೋದಕ್ಕೆ ಲಕ್ಷ್ಮೀ ನಿವಾಸ ಸೀರಿಯಲ್‌ನ ಜಯಂತ್ ಬೆಸ್ಟ್ ಎಕ್ಸಾಂಪಲ್.. ಅಬ್ಬಾ ಆತನ ಹುಚ್ಚಾಟ ಒಂದಾ ಎರಡಾ? ಸೀರಿಯಲ್ ನೋಡೋ ವೀಕ್ಷಕರಿಗೆ ಹುಚ್ಚು ಹಿಡಿಯುತ್ತಿದೆ.. ತಾನು ಸೇಫ್ ಆಗಲು ತನ್ನ ಸುತ್ತ ಮುತ್ತ ಇರೋರಿಗೆಲ್ಲಾ ತೊಂದರೆ ಕೊಡ್ತಾ ಇದ್ದಾನೆ. ಇದೀಗ ಜಾಹ್ನವಿ ಅಜ್ಜಿಗೆ ತನ್ನ ರಹಸ್ಯ ಗೊತ್ತಾಯ್ತು ಅಂತಾ ಆಕೆಯನ್ನ ಮುಗಿಸಲು ಹೊರಟಿದ್ದಾನೆ. ಅಷ್ಟೊತ್ತಿಗೆ ಅಲ್ಲಿಗೆ ಜಾಹ್ನವಿ ಎಂಟ್ರಿಕೊಟ್ಟಿದ್ದಾಳೆ.. ಹಾಗಾದ್ರೆ ಅಜ್ಜಿ ಕತೆ ಏನಾಯ್ತು? ಜಾಹ್ನವಿಗೆ ಸತ್ಯ ಗೊತ್ತಾಯ್ತಾ? ಸತ್ಯ ಗೊತ್ತಾದ ಜಾನು ಜಯಂತ್ ನ ಸುಮ್ನೆ ಬಿಡ್ತಾಳಾ? ಈಗ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವರೂ.. ಇಲ್ಲದ ಟಾಕೀಸ್ ಹೇಗಿರುತ್ತೆ? – ಮಜಾ ಕೊಡೋಕೆ ಸೃಜಾ ರೆಡಿ!!
ಲಕ್ಷ್ಮೀ ನಿವಾಸ ಸೀರಿಯಲ್ ಸದ್ಯ ಮಹಾ ತಿರುವು ಪಡೆದುಕೊಂಡಿದೆ. ಜಾಹ್ನವಿ ಮನೆಗೆ ಬಂದ ಅಜ್ಜಿಗೆ ಜಯಂತ್‌ನ ಹಳೇ ಕತೆಗಳು ಗೊತ್ತಾಗಿದೆ. ಅಜ್ಜಿ ಜಯಂತ್ ನ ಮಾತು ಕೇಳಿ ಸುಮ್ನೆ ಇರ್ತಿದ್ರೆ ಏನು ಆಗ್ತಿರ್ಲಿಲ್ವೇನೋ.. ಆದ್ರೆ ಅಜ್ಜಿ ಬಾಯಿ ಸುಮ್ನೆ ಇರ್ಬೇಕಲ್ವಾ.. ಇದನ್ನ ಜಾಹ್ನವಿಗೆ ಹೇಳೇ ಹೇಳ್ತೀನಿ ಅಂತಾ ಹೊರಟಿದ್ದಾಳೆ.. ಆಗ್ಲೇ ಅಜ್ಜಿ ಕತೆ ಫಿನಿಶ್ ಅಂತಾ ವೀಕ್ಷಕರು ಹೇಳಿದ್ರು.. ಅವರು ಹೇಳಿದಂತೆ ಈಗ ಆಗ್ತಿದೆ.. ಸೈಕೋ ಜಯಂತ್ ತನ್ನ ಸತ್ಯ ಎಲ್ಲಿ ಹೊರಗೆ ಬರುತ್ತೆ ಅನ್ನೋ ಭಯದಲ್ಲಿ ಅಜ್ಜಿಯ ಕುತ್ತಿಗೆ ಹಿಡಿಸಿದ್ದ.. ಆತ ಕುತ್ತಿಗೆ ಹಿಡಿಯುತ್ತಿದ್ದಂತೆ ಅಜ್ಜಿ ಪ್ರಜ್ಞೆತಪ್ಪಿ ಬಿದ್ದು ಬಚಾವ್ ಆಗಿದ್ಲು..
ಹೌದು, ಅಜ್ಜಿ ಪ್ರಜ್ಞೆ ತಪ್ಪಿದ್ದನ್ನ ನೋಡಿ ಜಾಹ್ನವಿ ಆಸ್ಪತ್ರೆಗೆ ಸೇರಿಸಿದ್ದಾಳೆ. ಬಳಿಕ ಅಜ್ಜಿ ಹುಷಾರಾಗಿದ್ದಳು. ಅಜ್ಜಿಯನ್ನ ವಾರ್ಡ್‌ನಲ್ಲಿ ಮಲಗಿಸಿದ್ದಾಗಲು ಜಯಂತ್ ಆಕೆಯನ್ನ ಕೊಲ್ಲೋದಿಕ್ಕೆ ಪ್ರಯತ್ನಪಟ್ಟಿದ್ದ. ಆಗ ಸಿದ್ದೇಗೌಡರು ವಾರ್ಡ್ ಬಂದು ಅಜ್ಜಿ ಬಚಾವ್ ಆಗಿದ್ಲು.. ಈಗ ಅಜ್ಜಿಗೆ ಡಿಶ್ಚಾರ್ಜ್ ಆಗಿದೆ.. ಅಜ್ಜಿಯನ್ನ ಲಕ್ಷ್ಮೀ ಮತ್ತು ಶ್ರೀನಿವಾಸ ತಮ್ಮ ಮನೆಗೆ ಕರೆದುಕೊಂಡು ಹೋಗ್ಬೋದು ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ಡೈರೆಕ್ಟರ್ ಅಲ್ಲೂ ತನ್ನ ಜಾಣತನ ಮೆರೆದಿದ್ದಾರೆ.. ಅಜ್ಜಿನ ಶ್ರೀನಿವಾಸ್ ಮನೆಗೆ ಕಳುಹಿಸಿದ್ರೆ ಮಜಾ ಇರಲ್ಲ ಅಂತಾ.. ಮತ್ತೆ ಜಯಂತ್ ಮನೆಗೆ ಕಳುಹಿಸಿದ್ದಾರೆ.
ಹೌದು. ಅಜ್ಜಿಯನ್ನ ಆಸ್ಪತ್ರೆಯಿಂದ ಮತ್ತೆ ಜಯಂತ್ ಮನೆಗೆ ಕಳುಹಿಸಿದ್ದಾರೆ. ಅಜ್ಜಿ ಮನೆಗೆ ಬರ್ತಿದ್ದಂತೆ ಜಯಂತ್ ನ ಸೈಕೋತನ ಜಾಗೃತವಾಗಿದೆ. ಜಾಹ್ನವಿ ಮಲಗುತ್ತಿದ್ದಂತೆ ಜಯಂತ್ ನೇರವಾಗಿ ಅಜ್ಜಿ ರೂಮ್ ಗೆ ಬಂದಿದ್ದಾನೆ. ಅಜ್ಜಿಯನ್ನ ನೋಡಿದ ಕೂಡಲೇ.. ಲೇ ಜಯಂತ.. ಮುಗಿಸಿ ಬಿಡು ಅಂತಾ ಮನಸ್ಸು ಹೇಳಿದೆ. ಇನ್ನೊಮ್ಮೆ ಹಾಗೇ ಮಾಡಿದ್ರೆ ನಮ್ಮನ್ನೆಲ್ಲಾ ಬಿಟ್ಟು ಹೋಗ್ತಾರೆ.. ಹಾಗೇ ಮಾಡಿಲ್ಲ ಅಂದ್ರೂ ಚಿನ್ನುಮರಿ ನಿನ್ನನ್ನ ಬಿಟ್ಟುಹೋಗ್ತಾರೆ ಜಯಂತಾ ಅಂತಾ ಜಯಂತ್ ಮಾತನಾಡಿಕೊಂಡಿದ್ದಾನೆ.. ಬಳಿಕ ಅಜ್ಜಿ ನಿಮಗೊಂದು ದಾರಿ ತೋರಿಸ್ತೀನಿ ಅಂತಾ ವೆಂಟಿಲೇಷನ್ ನ ಆಫ್ ಮಾಡಿದ್ದಾನೆ.. ಅಜ್ಜಿ ನರಳಲು ಶುರುಮಾಡ್ತಿದ್ದಂತೆ ಜಾಹ್ನವಿ ಎದ್ದು ಅಜ್ಜಿ ರೂಮ್ ಗೆ ಬಂದಿದ್ದಾಳೆ.. ಹಾಗಾದ್ರೆ ಜಾಹ್ನವಿಗೆ ಸತ್ಯ ಗೊತ್ತಾಯ್ತಾ? ಅಜ್ಜಿಯನ್ನ ಸಾಯಿಸಿರೋದನ್ನ ಆಕೆ ನೋಡಿದ್ಲಾ? ಜಯಂತ್ ಮುಂದೇನು ಮಾಡ್ತಾನೆ? ಸತ್ಯ ಗೊತ್ತಾದ ಮೇಲೆ ಚಿನ್ನುಮರಿ ಆತನೊಂದಿಗೆ ಇರ್ತಾಳಾ ಅನ್ನೋದೇ ಈಗಿರುವ ಕುತೂಹಲ.
ಇದೀಗ ಸೀರಿಯಲ್ ಪ್ರೋಮೋ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡಿದ್ದಾರೆ.. ಅಜ್ಜಿನ ಸಾಯಿಸೊ ಮುಂಚೆ ನಿಜ ಹೇಳಿಸಿಬಿಡಿ. ಆ ಪಾತ್ರಕ್ಕೂ ಒಂದು ತೂಕ ಇರುತ್ತೆ… ಜಯಂತ್ ನಾ ಮುಖವಾಡ ಅಜ್ಜಿ ಮೂಲಕ ಆದ್ರೂ ಬಯಲಿಗೆ ಬರಲಿ. ಇದೊಂದು ಮುಗಿಯದ ಮೆಂಟಲ್ ಧಾರವಾಹಿ. ಒಬ್ಬ ಒಬ್ಬರ ತಲೆಯೂ ಚೆನ್ನಾಗಿ ಕೆಟ್ಟಿದೆ.. ಭಾವನ ಜೊತೆ ಸಿದ್ದೇಗೌಡರು ಫೋನಿನಲ್ಲಿ ಮಾತನಾಡುವಾಗ ಧ್ವನಿ ಗೊತ್ತಾಗಲಿಲ್ಲ.. ಸಂತೋಷನಿಗೆ ಅವನಪ್ಪ ಫೋನಿನಲ್ಲಿ ಮಾತನಾಡುವಾಗ ಧ್ವನಿ ಗೊತ್ತಾಗುವುದಿಲ್ಲ.. ಇನ್ನು ಜಾಹ್ನವಿ ದೊಡ್ಡ ಪೆದ್ದಿ. ಗಂಡ ಏನೇ ಮಾಡಿದ್ರು ಅದು ಪ್ರೀತಿ ಅಂತಾ ಅಂದುಕೊಳ್ತಾಳೆ.. ಇದು ಹುಚ್ಚುತನದ ಪರಮಾವಧಿ.. ಸಮಾಜಕ್ಕೆ ಈ ಸೀರಿಯಲ್ ನಿಂದ ಏನು ಸಂದೇಶ ನೀಡ್ತಾ ಇದ್ದೀರಾ? ಕೆಟ್ಟ ಕೆಲಸ ಮಾಡಲು ಪ್ರೋವೋಕ್ ಮಾಡ್ತಿದ್ದೇರಾ ಅಂತಾ ಕಾಮೆಂಟ್ ಮಾಡಿದ್ದಾರೆ.