ಮಗುವೇ ಜಯಂತ್‌ ಗೆ ಮೂರನೇ ವ್ಯಕ್ತಿ – ಅಬ್ಬಬ್ಬಾ.. ಈತ ಮನುಷ್ಯನಾ ರಾಕ್ಷಸನಾ?
ಸೈಕೋನಿಂದ ಮಗು ಉಳಿಸ್ತಾಳಾ ಜಾಹ್ನವಿ?

ಮಗುವೇ ಜಯಂತ್‌ ಗೆ ಮೂರನೇ ವ್ಯಕ್ತಿ – ಅಬ್ಬಬ್ಬಾ.. ಈತ ಮನುಷ್ಯನಾ ರಾಕ್ಷಸನಾ?ಸೈಕೋನಿಂದ ಮಗು ಉಳಿಸ್ತಾಳಾ ಜಾಹ್ನವಿ?

ಲಕ್ಷ್ಮೀ ನಿವಾಸದಲ್ಲಿ ಸದ್ಯ ನೆಮ್ಮದಿಯೇ ಇಲ್ಲದಂತಾಗಿದೆ.. ಒಂದ್ಕಡೆ ಲಕ್ಷ್ಮೀ ಶ್ರೀನಿವಾಸ್‌ ಮನೆಯಲ್ಲಿ ಮಕ್ಕಳು ಅಪ್ಪನ ದುಡ್ಡಿಗಾಗಿ ಕಿತ್ತಾಡ್ತಾ ಇದ್ದಾರೆ.. ಮತ್ತೊಂದ್ಕಡೆ ಭಾವನ ಮನೆಯವ ಟೀಕೆಗಳನ್ನ ಕೇಳಿಕೊಂಡು ಕಾಲಕಳಿತಾ ಇದ್ದಾಳೆ.. ಇನ್ನೂ ಜಾಹ್ನವಿ ಕತೆ ಕೇಳೋದೇ ಬೇಡ.. ಸೈಕೋ ಪತಿ ಕೈ ಸಿಕ್ಕಿ ನರಕ ಯಾತನೆ ಅನುಭವಿಸ್ತಾ ಇದ್ದಾಳೆ. ಇದೀಗ ಜಾನು ತಾಯಿಯಾಗ್ತಿದ್ದು, ಅದನ್ನೂ ಪಾಪಿ ಜಯಂತ್‌ ಮೂರನೇ ವ್ಯಕ್ತಿ ಅಂತಾ ಅಂದು ಬಿಟ್ಟಿದ್ದಾನೆ. ಇದೀಗ ಜಾನು ಮಗುವಿಗೂ ಉಳಿಗಾಲ ಇಲ್ವಾ? ಜಯಂತ್‌ ಮುಂದೇನು ಮಾಡ್ತಾನೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಮೋಕ್ಷಿತಾ ಎರಡು ತಲೆ ನಾಗರ ಹಾವು! – ಏಕಾಏಕಿ ತಿರುಗಿಬಿದ್ದ ತ್ರಿವಿಕ್ರಮ್‌

ಕಡೆಗೂ ವೀಕ್ಷಕರು ಹೇಳಿದಂತೆ ನಡಿತು.. ಲಕ್ಷ್ಮೀ ನಿವಾಸ ಸೀರಿಯಲ್‌ ನಲ್ಲಿ ಮುಂದಿನ ಟ್ವಿಸ್ಟ್‌ ಏನು ಅಂತಾ ವೀಕ್ಷಕರೇ ಕಮೆಂಟ್‌ ಮಾಡ್ತಾ ಬಂದಿದ್ರು.. ಅದೇ ತರ ಈಗ ಕತೆ ಸಾಗ್ತಾ ಇದೆ.. ಸದ್ಯ ಜಾಹ್ನವಿ ತಾಯಿಯಾಗೋ ಸಂಭ್ರಮದಲ್ಲಿದ್ದಾಳೆ. ಮನೆಯಲ್ಲಿ ಹಬ್ಬದ ವಾತಾವರಣ ಮೂಡಿದೆ.  ಜಯಂತ್ ಅಂತೂ ತಾನು ತಂದೆಯಾಗೋ ಸಂಭ್ರಮದಲ್ಲಿ, ಮುದ್ದಿನ ಚಿನ್ನುಮರಿಯನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದಾನೆ. ಆಕೆಗೆ ಬೇಕಾದ್ದನ್ನೆಲ್ಲಾ ಆಕೆಯ ಮುಂದೆ ಇಡುತ್ತಾ, ಆಕೆಗೆ ತಿಂಡಿ, ಹಾಲು ಹಣ್ಣುಗಳನ್ನು ನೀಡುತ್ತಾ, ಆಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾನೆ. ಜೊತೆಗೆ ಆಫೀಸ್ ಕೆಲಸ ಕೂಡ ಬಿಟ್ಟು ತನ್ನ ಹೆಂಡತಿಯ ಆರೈಕೆಗೆ ನಿಂತಿದ್ದಾನೆ.

ನನ್ನಿಂದಾಗಿ ಗಂಡನ ಕೆಲಸಕ್ಕೆ ಅಡ್ಡಿಯಾಗೋದು ಬೇಡ ಅಂತ, ಗಂಡನಿಗೆ ಆಫೀಸಿಗೆ ಹೋಗೋದಕ್ಕೆ ಹೇಳಿ, ಯಾರದ್ರೂ ಕೇರ್ ಟೇಕರ್ ನ್ನು ನೇಮಿಸೋದಕ್ಕೂ ಹೇಳ್ತಾಳೆ ಜಾಹ್ನವಿ. ಆದರೆ ತಮ್ಮ ನಡುವೆ ಬೇರೆ ಯಾವ ವ್ಯಕ್ತಿ ಬರೋದಕ್ಕೂ ಇಷ್ಟಪಡದ ಜಯಂತ್, ಅದಕ್ಕೆ ಒಪ್ಪೋದಿಲ್ಲ. ನಮ್ಮಿಬ್ಬರ ನಡುವೆ ಬೇರೆ ಯಾರೂ ಕೂಡ ಬರಬಾರದು ಅಂತ ಖಡಾಖಂಡಿತವಾಗಿ ಹೇಳುತ್ತಾ ಬಂದಿದ್ದಾನೆ ಜಯಂತ್..‌

ಒಟ್ಟಲ್ಲಿ ತನ್ನ ಗಂಡನಲ್ಲಿ ಆದ ಬದಲಾವಣೆ, ಗಂಡ ತನ್ನ ಮೇಲೆ ತೋರಿಸುವ ಪ್ರೀತಿ ಎಲ್ಲಾ ನೋಡಿ ಸಂಭ್ರಮಿಸುತ್ತಿರುವ ಜಾಹ್ನವಿ, ಇನ್ನಾದರೂ ನನ್ನ ಗಂಡ ಹೀಗೆ ಇರಲಿ, ಯಾವಾಗ್ಲೂ ಅವರು ಖುಷಿ ಖುಷಿಯಾಗಿರಲಿ, ನಮ್ಮ ಪ್ರೀತಿಯಲ್ಲಿ ಅವರ ಹಳೆ ನೆನೆಪುಗಳು ಕಳೆದು ಹೋದರೆ ಸಾಕು ಎನ್ನುವ ಯೋಚನೆಯಲ್ಲಿರುತ್ತಾಳೆ ಜಾಹ್ನವಿ.

ಇಷ್ಟೆಲ್ಲಾ ಸಂಭ್ರಮದ ನಡುವೆ ಜಾಹ್ನವಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ಅದೇನಪ್ಪಾ ಅಂದ್ರೆ ಜಾಹ್ನವಿ ಮತ್ತು ಜಯಂತ್ ಜೊತೆಯಲ್ಲಿ ಮಲಗುವಾಗ, ಜಯಂತ್ ಜಾನು ಹೊಟ್ಟೆ ಮೇಲೆ ಕೈ ಇಡುತ್ತಾನೆ, ಸಡನ್ ಆಗಿ ಮಗು ಇದೆ ಅನ್ನೋದು ನೆನಪಾಗಿ  ಕೈ ಹಿಂತೆಗೆದುಕೊಳ್ಳುತ್ತಾನೆ. ಮಗುವಿದೆ ಅಲ್ವಾ.. ತಾನು ಹೊಟ್ಟೆ ಮೇಲೆ ಕೈ ಇಟ್ರೆ, ಮಗುವಿಗೆ ತೊಂದ್ರೆ ಆಗುತ್ತೆ.. ಹೀಗಾಗಿ ತಾನು ಕೈ ತೆಗೆದಿರೋದಾಗಿ ಹೇಳುತ್ತಾನೆ. ಅದಕ್ಕೆ ಜಾಹ್ನವಿ ಹಾಗೇನೂ ಆಗಲ್ಲ, ಮಗು ಇನ್ನೂ ಬೆಳೆದೇ ಇಲ್ಲ ಎನ್ನುತ್ತಾಳೆ.. ಕೂಡ ಆತನ ಸೈಕೋತನ ಜಾಗೃತವಾಗುತ್ತೆ… ನಮ್ಮಿಬ್ಬರ ನಡುವೆ ಮೂರನೇ ವ್ಯಕ್ತಿ ಬರಬಾರದು ಅಂತಾ ಮಾತಾಡಿಕೊಂಡಿದ್ವಿ ಅಲ್ವಾ? ಇದೀಗ ಮಗು ಬಂದ್ರೆ, ಅದು ಮೂರನೇ ವ್ಯಕ್ತಿಯಾಗುತ್ತಾನೆ. ಇದರಿಂದ ನಮ್ಮ ಸಂಬಂಧದಲ್ಲಿ ಬಿರುಕು ಉಂಟಾಗುತ್ತೆ ಎನ್ನುತ್ತಾನೆ ಜಯಂತ್.

ಅಷ್ಟೇ ಅಲ್ಲ, ಮಗುವಾದ ಬಳಿಕ ಜಾನು ಮಗುವಿನ ಕಡೆಗೆ ಹೆಚ್ಚಿನ ಗಮನ ನೀಡುತ್ತಾಳೆ. ಇದರಿಂದ ನನ್ನ ಬಗ್ಗೆ ಕೇರ್ ಕಡಿಮೆಯಾಗುತ್ತೆ, ಚಿನ್ನುಮರಿ ಮಗುವಿನ ಜೊತೆ ಇರೋವಾಗ, ನನಗೆ ಸಮಯ ಕೊಡೋದಕ್ಕೂ ಸಾಧ್ಯವಿಲ್ಲ ಎನ್ನುವ ಯೋಚನೆ ಬಂದು ಮಗುವನ್ನು ತೆಗೆಸಿಬಿಡುವ ಬಗ್ಗೆ ಮಾತನಾಡುತ್ತಾನೆ ಜಯಂತ್. ಜಾಹ್ನವಿ ಹಾಗೇನೂ ಆಗಲ್ಲ.. ನೀವೇ ನನ್ನ ಮೊದಲ ಮಗು ಅಂತ ಅಂದ್ರೂನೂ ಅದನ್ನ ಒಪ್ಪಿಕೊಳ್ಳೋಕೆ ಜಯಂತ್ ರೆಡಿ ಇಲ್ಲ. ಇದೀಗ ಜಯಂತ್ ಮುಂದಿನ ಯೋಚನೆ ಜಾಹ್ನವಿಯ ಗರ್ಭಪಾತ.

ಇದೀಗ ಜಯಂತ್‌ ವರ್ತನೆ ನೋಡಿ ವೀಕ್ಷಕರು ನಾನಾ ಕಾಮೆಂಟ್‌ ಮಾಡ್ತಾ ಇದ್ದಾರೆ.. ಈ ಜಯಂತ್ ಎನ್ನುವ ಪ್ರಾಣಿ ಯಾವಾಗ ಒಳ್ಳೆಯವನಾಗುತ್ತಾನೋ,  ಯಾವಾಗ ಕೆಟ್ಟವನಾಗುತ್ತಾನೋ ಅಂತ ಹೇಳುವುದು ಬಹಳ ಕಷ್ಟ ಅಂತ ಕೆಲವರು ಹೇಳಿದ್ದಾರೆ.. ಇನ್ನೂ ಕೆಲವರು ಸೈಕೊ ಪಾತ್ರಧಾರಿಯನ್ನು ಮೆರೆಸುವುದು ಸರಿಯಲ್ಲ.. ಸಮಾಜದ ಯುವ ಜನರ ಹಾದಿ ತಪ್ಪಿಸುವ ಪಾತ್ರಗಳಿಗೆ ಕತ್ತರಿ ಹಾಕಬೇಕಿದೆ. ಸೆನ್ಸಾರ್ ಮಂಡಳಿ ಈ ಬಗ್ಗೆ ಗಮನ ಹರಿಸಬೇಕಾಗುತ್ತೆ.. ಗರ್ಭಪಾತ ಮಾಡಿಸುವುದು ಸಮಾಜಕ್ಜೆ ಕೆಟ್ಟ ಸಂದೇಶ ನೀಡುವಂತಾಗುತ್ತೆ.. ವಿಕೃತಗಳ ವೈಭವೀಕರಿಸುವ ಲಕ್ಷ್ಮಿನಿವಾಸ ಧಾರವಾಹಿಯ ನಿರ್ಮಾಪಕ ,ನಿರ್ದೇಶಕ ,ನಟ, ಮತ್ತು ಪ್ರಸಾರ ಮಾಡುವ ಟಿ ವಿ ಚಾನೆಲ್ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿದ್ದಾರೆ.

ಇನ್ನು ಕೆಲವರು, ಈ ಸೀರಿಯಲ್ ನಿಲ್ಸಿ.. ಇದ್ರಿಂದಾಗಿ ಪ್ರತಿಯೊಂದ ಹೆಣ್ಣು ಮಕ್ಕಳಿಗೂ ಕಷ್ಟ ಆಗುತ್ತೆ ಅಂತಾ ಹೇಳಿದ್ದಾರೆ.. ಸೀರಿಯಲ್‌ ಕತೆ ಮುಂದೆ ಹೇಗೆ ಸಾಗುತ್ತೆ.. ಚಿನ್ನು ಮರಿ ಸೈಕೋಪತಿಯಿಂದ ಮಗುವನ್ನ ಕಾಪಾಡ್ತಾಳಾ ಅನ್ನೋದನ್ನ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *