ಜಾನು ಮುಂದೆ ಜಯಂತ್‌ ಜನ್ಮ ರಹಸ್ಯ! – ಚಿನ್ನುಮರಿ ಮನೆಗೆ ವಾಪಸ್ ಬರಲ್ವಾ?
ಸೈಕೋಪತಿ ಹೆಂಡ್ತಿನೂ ಮುಗಿಸ್ತಾನಾ?

ಜಾನು ಮುಂದೆ ಜಯಂತ್‌ ಜನ್ಮ ರಹಸ್ಯ! – ಚಿನ್ನುಮರಿ ಮನೆಗೆ ವಾಪಸ್ ಬರಲ್ವಾ?ಸೈಕೋಪತಿ ಹೆಂಡ್ತಿನೂ ಮುಗಿಸ್ತಾನಾ?

ಕಡೆಗೂ ವೀಕ್ಷಕರು ಕಾಯ್ತಾ ಇದ್ದ ದಿನ ಬಂದೇ ಬಿಟ್ಟಿದೆ.. ಲಕ್ಷ್ಮೀ ನಿವಾಸ ಸೀರಿಯಲ್‌ ನಲ್ಲಿ ಸೈಕೋಪತಿ ಜಯಂತ್‌ ವಿಕೃತಿ ಜಾಹ್ನವಿಗೆ ಗೊತ್ತಾಗಿದೆ..  ಪ್ರಾಣಕ್ಕಿಂತ ಹೆಚ್ಚಾಗಿ ಗಂಡನನ್ನ ಪ್ರೀತಿಸ್ತಿದ್ದ ಜಾನು ಈಗ ಆತನ ಹೆಸ್ರು ಕೇಳಿದ್ರೆ ಬೆಚ್ಚಿ ಬೀಳ್ತಾಳೆ.. ಇದೀಗ ಜಯಂತ್‌ ಸತ್ಯ ಗೊತ್ತಾದ ಜಾಗ್ನವಿ ಆತನ ಜನ್ಮ ರಹಸ್ಯ ಹುಡುಕಲು ಹೊರಟಿದ್ದಾಳೆ.. ಜಯಂತ್‌ ಜನ್ಮ ರಹಸ್ಯ ಗೊತ್ತಾಗ್ತಿದ್ದಂತೆ ಜಾನು ಏನ್‌ ಮಾಡ್ತಾಳೆ? ಜಯಂತ್‌ ನ ಬಿಟ್ಟು ಹೋಗ್ತಾಳಾ? ಅಥವಾ ಜಯಂತನ್ನ ಬದಲಾಯಿಸ್ತಾಳಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮುಡಾ ಕೇಸ್‌ ಗೆ ಬಿಗ್‌ ಟ್ವಿಸ್ಟ್‌ – ಹಂಚಿಕೆಯಾದ 2 ಸಾವಿರ ಸೈಟ್‌ಗಳ ಮೂಲ ದಾಖಲೆ ಮಿಸ್ಸಿಂಗ್?‌  

ಲಕ್ಷ್ಮೀ ನಿವಾಸ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ.. ಸೈಕೋ ಜಯಂತ್‌ ವರ್ತನೆ ಈಗ ಜಾಹ್ನವಿ ಮುಂದೆ ಬಯಲಾಗಿದೆ. ಅಷ್ಟೇ ಅಲ್ಲ ಮನೆಯಲ್ಲಿ ಕೆಲಸಕ್ಕಿದ್ದ ವಾಚ್‌ ಮ್ಯಾನ್ ಜಾಹ್ನವಿಗೆ ಎಲ್ಲಾ ವಿಚಾರವನ್ನು ಈ ಹೇಳಿ ಬಿಟ್ಟಿದ್ದಾನೆ. ಸತ್ಯ ಗೊತ್ತಾದ ಜಾಹ್ನವಿ ಈಗ ಗಂಡನ ಹೆಸ್ರು ಕೇಳಿದ್ರೇನೆ ಹೆದರಿ ಬಿಡ್ತಾಳೆ..  ಇತ್ತ ವಾಚ್‌ ಮ್ಯಾನ್‌  ಜಯಂತ್‌ ವರ್ತನೆ ಬಗ್ಗೆ ಹೇಳಿರೋದ್ರಿಂದ ಹೆಂಡ್ತಿ ಮುಂದೆ ಹೋಗಲು ಆತನಿಗೆ ಭಯ ಆಗಿತ್ತು.. ಆಮೇಲೆ ಆ ವಾಚ್‌ಮ್ಯಾನ್ ಅನ್ನು ಸಾಯಿಸಲು ಜಯಂತ್ ಮುಂದಾಗಿದ್ದ.. ಆಗ ವಾಚ್‌ಮ್ಯಾನ್ ಬೇಡಿಕೊಳ್ಳುತ್ತಾನೆ. ದಯವಿಟ್ಟು ಹಾಗೆಲ್ಲ ಮಾಡಬೇಡಿ. ನನ್ನನ್ನು ಸಾಯಿಸಬೇಡಿ ನನಗೆ ಬದುಕಬೇಕೆಂಬ ಆಸೆ ಇದೆ. ನನಗೆ ಹೆಂಡತಿ ಹಾಗೂ ಮಕ್ಕಳು ಇದ್ದಾರೆ. ನನ್ನನ್ನೇ ಅವರು ನಂಬಿದ್ದಾರೆ. ದಯವಿಟ್ಟು ನನ್ನ ಬಿಟ್ಟು ಬಿಡಿ ಎಂದು ಹೇಳುತ್ತಾನೆ. ಆಗ ಜಯಂತ್‌  ಸೈಕೋ ತರ ಆಲೋಚನೆ ಮಾಡ್ತಾನೆ. ನಿನ್ನ ಮಾತನ್ನು ಕೇಳಿದ ಜಾಹ್ನವಿ ಮನಸ್ಸಿಗೆ ಎಷ್ಟು ಆಘಾತ ಆಗಿರಬೇಡ. ನನ್ನ ಜೊತೆ ಅವರು ಹೇಗೆ ಕಾಲ ಕಳೆಯುತ್ತಾರೆ. ಇಲ್ಲ ನಾನು ಈ ವಾಚ್‌ಮ್ಯನ್‌ ಅನ್ನು ಸುಮ್ಮನೆ ಬಿಡುವುದು ಇಲ್ಲ ಎಂದು ಹಿಂದೆ ತಿರುಗಿ ನೋಡಿದಾಗ ವಾಚ್‌ಮ್ಯಾನ್‌ ಅಲ್ಲಿಂದ ಎಸ್ಕೇಪ್‌ ಆಗಿದ್ದ..

ಇನ್ನು ಜಾಹ್ನವಿ ಮನೆಯಲ್ಲಿಸದಾ ಒಬ್ಬೊಂಟಿಯಾಗಿ ಇರುತ್ತಾಳೆ. ಆಕೆಗೆ ಜಯಂತ್‌ನದ್ದೆ ಭಯ. ಜಯಂತ್ ಏನಾದರು ಪ್ರಶ್ನೆ ಮಾಡಿದರೆ ನಾನು ಏನು ಅಂತ ಅವರಿಗೆ ಉತ್ತರವನ್ನು ನೀಡಲಿ. ಅಷ್ಟಕ್ಕೂ ಜಯಂತ್ ಗೆ ನಾನು ವಾಚ್ ಮ್ಯಾನ್ ಭೇಟಿ ಆಗಿದ್ದು ತಿಳಿದಿದೆ. ಅವರಿಗೆ ಈ ವಿಚಾರಗಳು ನಿಜವಾಗಲೂ ತಿಳಿದಿರುತ್ತದೆ. ಏನು ಮಾಡಲಿ ಎಂದುಕೊಂಡು ಜಾಹ್ನವಿ ಮನೆಯಿಂದ ಹೋಗಲು ನಿರ್ಧಾರ ಮಾಡುತ್ತಾಳೆ. ಅವರು ಬರುವ ಮುಂಚೆ ಅಮ್ಮನ ಮನೆಗೆ ಹೋಗೋಣ.. ಅವರಿಗೆ ಆ ಮೇಲೆ ಫೋನ್ ಮಾಡಿ ಹೇಳಿದರೆ ಆಯಿತು ಎಂದುಕೊಂಡು ಜಯಂತ್ ಬರುವ ಮುನ್ನ ಜಾಹ್ನವಿ ಅಲ್ಲಿಂದ ಹೊರಟು ಹೋಗುತ್ತಾಳೆ. ಜಾಹ್ನವಿ ಮನೆಯಿಂದ ಹೋದ ಬಳಿಕ ಜಯಂತ್ ಮನೆಗೆ ಬರುತ್ತಾನೆ. ಮನೆಯಲ್ಲಿ ಕತ್ತಲು ಆವರಿಸಿದ್ದನ್ನ ನೋಡಿ ಚಿನ್ನುಮರಿ ಎಂದು ಕರೆಯುತ್ತಾನೆ. ಆದರೆ, ಜಾಹ್ನವಿ ಎಲ್ಲೂ ಕಾಣಿಸದೆ ಇರುವುದನ್ನು ಕಂಡು ಜಯಂತ್‌ ಗೆ ಭಯ ಆಗಿದೆ. ಚಿನ್ನುಮರಿ ಕಾಣದೇ ಹುಚ್ಚನಂತೆ ಆಡಲು ಶುರುಮಾಡಿದ್ದಾರೆ.. ಮನೆಯ ಪ್ರತಿ ಮೂಲೆ ಮೂಲೆಯಲ್ಲಿ ಹುಡುಕಿದ್ದಾನೆ.. ಎಷ್ಟರ ಮಟ್ಟಿಗೆ ಅಂದ್ರೆ, ಅವನ ಆಫೀಸ್‌ ಫೈಲ್‌ ಓಪನ್‌ ಮಾಡಿ ಅದ್ರಲ್ಲೂ ಜಾನುನಾ ಹುಡುಕಿದ್ದಾನೆ.. ಬಳಿಕ ಮನೆಯ ಒಳಗೆ ನೆಟ್ಟಿದ್ದ ಪ್ರತಿ ಗಿಡದ ಬಳಿ ಹೋಗಿ ಎಲ್ಡ್ರೋ ನನ್ನ ಜಾನು.. ಎಲ್‌ ಹೋಗಿದ್ದಾರೆ ಹೇಳ್ಡ್ರೋ ಅಂತಾ ಕೇಳಿದ್ದಾನೆ.. ಆತನ ಹುಚ್ಚು ವರ್ತನೆ ನೋಡಿ ವೀಕ್ಷಕರು ಕೂಡ ಶಾಕ್‌ ಆಗಿದ್ದಾರೆ.. ಮನೆ ಬಿಟ್ಟು ಹೋದವರನ್ನ ಹೀಗೂ ಹುಡುಕ್ತಾರಾ ಅಂತಾ ಹೇಳಿದ್ದಾರೆ..

ಇತ್ತ ಜಾಹ್ನವಿ ಜಯಂತ್‌ ಜನ್ಮ ರಹಸ್ಯ ಹುಡುಕಲು ಹೊರಟಿದ್ದಾಳೆ.. ಜಾಹ್ನವಿ ಜಯಂತ್‌ ಇದ್ದ ಆಶ್ರಮ ಅನ್ನ ಹುಡುಕಿಕೊಂಡು ಹೋಗಿದ್ದಾಳೆ.. ಈ ವೇಳೆ ಆಶ್ರಮದವರು  ಜಾಹ್ನವಿಯನ್ನ ಮಾತನಾಡಿಸಿದ್ದಾರೆ.. ಆಗ ಜಾನು ತಾನು ಜಯಂತ್‌ ನ ಹೆಂಡ್ತಿ.. ಜಯಂತ್‌ ಜನ್ಮ ರಹಸ್ಯ ತಿಳಿಸುವಂತೆ ಕೇಳಿದ್ದಾಳೆ.. ಜಾನು ಮಾತು ಕೇಳಿದ ಆ ವ್ಯಕ್ತಿ ಒಂದು ಕ್ಷಣ ಬೆಚ್ಚಿ ಬಿದ್ರೂ ಸತ್ಯ ಹೇಳಲು ಒಪ್ಪಿಕೊಂಡಿದ್ದಾರೆ.. ಇತ್ತ ಜಯಂತ್‌ ಹೆಣ ಮುಂದೆ ಕುಣಿಯೋದು.. ಹಾಸ್ಟೇಲ್‌ ಲೈಫ್‌..  ಕಾಫಿ ಕೊಡಲು ಹೋದ ಜಯಂತನನ್ನ ಕಾಲಲ್ಲಿ ಒದೆಯೋದನ್ನ ಪ್ರೋಮೋದಲ್ಲಿ ತೋರಿಸಲಾಗಿದೆ..

ಇದೀಗ ಜಯಂತ್‌ ಜನ್ಮ ರಹಸ್ಯ ಗೊತ್ತಾದ ಜಾಹ್ನವಿ ಮುಂದೇನು ಮಾಡ್ತಾಳೆ? ಜಯಂತ್‌ ನನ್ನ ಬಿಟ್ಟು ತವರು ಮನೆ ಸೇರ್ಕೊಳ್ತಾಳಾ ಅಥವಾ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸಿ ಜಯಂತನನ್ನ ಬದಲಾಸ್ತಾಳಾ ಅಂತಾ ಕಾದು ನೋಡ್ಬೇಕು.

Shwetha M