ಜಾನು ಬಲೆಯಲ್ಲಿ ಜಯಂತ್‌ ವಿಲ ವಿಲ.. ಜಾಹ್ನವಿ ಸೇಡು ಸೈಕೋಪತಿ ಸುಸ್ತು! -ಚಿನ್ನುಮರಿ ತಿರುಗೇಟಿಗೆ ಬದಲಾದ ಜಯಂತ್‌!

ಜಾನು ಬಲೆಯಲ್ಲಿ ಜಯಂತ್‌ ವಿಲ ವಿಲ.. ಜಾಹ್ನವಿ ಸೇಡು ಸೈಕೋಪತಿ ಸುಸ್ತು! -ಚಿನ್ನುಮರಿ ತಿರುಗೇಟಿಗೆ ಬದಲಾದ ಜಯಂತ್‌!

ಜಯಂತ್‌ನ ಚಿನ್ನದ ಪಂಜರದಲ್ಲಿ ಬಂಧಿಯಾಗಿದ್ದ ಜಾನು ಈಗ ಸ್ವತಂತ್ರಳಾಗಿದ್ದಾಳೆ. ಮನೆಗೆ ವಾಪಾಸ್‌ ಬಂದ ಚಿನ್ನುಮರಿ ಈಗ ಮೊದಲಿನ ತರ ಇಲ್ಲ. ಫುಲ್‌ ರೆಬಲ್‌ ಆಗಿದ್ದಾಳೆ. ಇದೀಗ ಜಾಹ್ನವಿ ಕೊಡ್ತಿರೋ ಕಾಟಕ್ಕೆ ಸೈಕೋಪತಿ ವಿಲ ವಿಲ ಒದ್ದಾಡುತ್ತಿದ್ದಾನೆ.

ಇದನ್ನೂ ಓದಿ: ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆ!

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಲಕ್ಷ್ಮೀ ನಿವಾಸ ಸೀರಿಯಲ್‌ ಈಗ ರೋಚಕಘಟ್ಟ ತಲುಪಿದೆ. ಇಷ್ಟು ದಿನ ನಾಪತ್ತೆಯಾಗಿದ್ದ ಜಾನು ಕಡೆಗೂ ಮನೆಯವರ ಮುಂದೆ ಬಂದಿದ್ದಾಳೆ. ಅಷ್ಟೇ ಅಲ್ಲ.. ಜಯಂತ್‌ ಮನೆಗೂ ಬಲಗಾಲಿಟ್ಟು ಬಂದಿದ್ದಾಳೆ. ಚಿನ್ನುಮರಿ ಮನೆಗೆ ಬರ್ತಿದ್ದಂತೆ ಸೈಕೋಪತಿ ಖುಷಿಯಲ್ಲಿ ತೇಲಾಡುತ್ತಿದ್ದ. ಆದ್ರೀಗ ಚಿನ್ನುಮರಿ ಮೊದಲಿನಂತಿಲ್ಲ.. ಜಯಂತ್‌ ವಿರುದ್ದ ಕೆರಳಿ ಕೆಂಡವಾಗಿದ್ದಾಳೆ. ಆತ ಹೆಂಗೆಲ್ಲಾ ಕಾಟ ಕೊಟ್ಟಿದ್ನೋ ಆದೇ ರೀತಿ ಜಾನು ಕೂಡ ಕಾಟ ಕೊಡುತ್ತಿದ್ದಾಳೆ.

ಜಯಂತ್‌ನ ಮದುವೆಯಾದಾಗಿನಿಂದ ಜಾನು ಒಂದು ದಿನವೂ ಖುಷಿಯಾಗಿ ಇರಲಿಲ್ಲ. ಪ್ರೀತಿ ಹೆಸರಿನಲ್ಲಿ ಆಕೆಯನ್ನ ಸೈಕೋಪತಿ ಬಂಧಿಸಿದ್ದ. ಆಕೆ ದೂರ ಆಗ್ತಾಳೆ ಅನ್ನೋ ಕಾರಣಕ್ಕೆ ಜಾಹ್ನವಿಯಿಂದ ಎಲ್ಲರನ್ನ ದೂರ ಮಾಡುತ್ತಾ ಬಂದ. ಅಷ್ಟೇ ಅಲ್ಲ ಅಜ್ಜಿಯನ್ನ ಕೂಡ ಕೊಲ್ಲಲು ಮುಂದಾಗಿದ್ದ.. ಇದೆಲ್ಲ ಗೊತ್ತಾದ ಜಾನು ಸಾಯಲು ಹೊರಟಿದ್ಲು. ಆದ್ರೀಗ ಮತ್ತೆ ಮನೆಗೆ ವಾಪಾಸ್‌ ಬಂದಿರೋ ಜಾನು ಜಯಂತ್‌ ಸೈಕೋ ಅಂತ ಗೊತ್ತಿದ್ರೂ ಆಕೆಯನ್ನ ಎದುರು ಹಾಕಿಕೊಂಡಿದ್ದಾಳೆ. ಮೊದಲ ರಾತ್ರಿಯಿಂದ ಹಿಡಿದು ತಾನು ಕಳೆದ ಪ್ರತಿಯೊಂದು ಗಾಬರಿ ಕ್ಷಣಗಳನ್ನು ಜಯಂತ್‌ಗೆ ತಿರುಗಿಸಿಕೊಟ್ಟಿದ್ದಾಳೆ ಚಿನ್ನುಮರಿ. ಈಗೇನಿದ್ದರೂ ಜಾನು ಕೊಡುತ್ತಾ ಹೋಗುವುದು. ಜಯಂತ್ ವಿಲ ವಿಲ ಒದ್ದಾಡುತ್ತಾ ಹೋಗುವುದು. ಇದೀಗ ಈ ಸೀನ್‌ ನೋಡಿ ವೀಕ್ಷಕರು ಕೂಡ ಮಜಾ ತೆಗೆದುಕೊಳ್ತಿದ್ದಾರೆ.

ಹೌದು.. ಜಾನು ಜಯಂತ್‌ ಏನೆಲ್ಲಾ ಮಾಡಿದ್ನೋ ಅದನ್ನೇ ರಿಪೀಟ್‌ ಮಾಡಿದ್ದಾಳೆ. ರೂಮ್‌ನಲ್ಲಿ ಜಿರಳೆ ಸಿಕ್ಕಿತು ಅಂತ ಅದನ್ನೇ ಹಾಲಲ್ಲಿ ಹಾಕಿ ಕುಡಿಸಿದ್ದಾಳೆ. ಬಳಿಕ ಹಿಂದೆ ಇದ್ದ ಜಾನು ನಾನಲ್ಲ. ನೀವು ಹೇಳಿದಂತೆ ಕೇಳಿಕೊಂಡು ಇರೋ ಜಾನು ನಾನಲ್ಲ. ಇನ್ಮುಂದೆ ನಾನು ಹೇಳಿದಂತೆಯೇ ನೀವು ಕೇಳಿಕೊಂಡಿರಬೇಕು ಎಂದು ಜಯಂತ್‌ಗೆ ತಿರುಗೇಟು ಕೊಟ್ಟಿದ್ದಾಳೆ ಜಾನು. ತನ್ನನ್ನು ಬಂಗಾರದ ಪಂಜರದಲ್ಲಿರಿಸಿದ್ದರ ಬಗ್ಗೆಯೂ ಜಾನು ಮಾತನಾಡಿದ್ದಾಳೆ. ತನ್ನ ಪ್ರೀತಿಯ ಜಾನು ಮಾತುಗಳನ್ನು ಕೇಳುತ್ತಿದ್ದಂತೆ ಜಯಂತ್ ಫುಲ್ ಶಾಕ್ ಆಗಿದ್ದಾನೆ. ರಾತ್ರಿ ಜಾನು ಮಾತುಗಳನ್ನು ಕೇಳಿಸಿಕೊಂಡು ಆಘಾತಕ್ಕೊಳಗಾಗಿದ್ದ ಜಯಂತ್‌ಗೆ ಬೆಳಗ್ಗೆಯೂ ಶಾಕ್ ಎದುರಾಗಿತ್ತು. ಜಯಂತ್‌ಗೆ ಮನೆಯಲ್ಲಿರುವ ವಸ್ತುಗಳ ಸ್ಥಾನ ಬದಲಾಗಬಾರದು. ಒಂದು ಸಣ್ಣ ಬದಲಾವಣೆಯಾದ್ರೂ ಜಯಂತ್ ಗಮನಕ್ಕೆ ಬರುತ್ತದೆ. ಇದೀಗ ಇದನ್ನೇ ತನ್ನ ಲಾಭಕ್ಕಾಗಿ ಜಾನು ಬಳಸಿಕೊಂಡಿದ್ದಾಳೆ. ಮನೆಯಲ್ಲಿದ್ದ ಫ್ಲವರ್‌ ಪಾಟ್‌ನ ತನಗೆ ಬೇಕಾದ ಜಾಗದಲ್ಲಿಜಾನು ಇಟ್ಟಿದ್ದಾಳೆ. ಜಾನು ಇಲ್ಲದೇ ಇರೋ ಟೈಮ್‌ನಲ್ಲಿ ಜಯಂತ್ ಇದೇ ಹೂವಿನ ಕುಂಡಗಳ ಜೊತೆ ಮಾತನಾಡುತ್ತಿದ್ದ. ಈಗ ಹೂವಿನ ಕುಂಡಗಳ ಸ್ಥಾನ ಬದಲಾಗಿರೋದನ್ನು ಕಂಡು ಜಯಂತ್ ಸಿಟ್ಟಾಗಿದ್ದಾನೆ. ನನಗೆ ಇದು ಇಷ್ಟವಿಲ್ಲ ಅಂತ ಗೊತ್ತಿದ್ರೂ ಯಾಕೆ ಹೀಗೆ ಮಾಡ್ತಿದ್ದೀಯಾ ಎಂದು ಜಯಂತ್ ಪ್ರಶ್ನೆ ಮಾಡಿದ್ದಾನೆ. ನನಗೆ ಇಷ್ಟಬಂದಂತೆ ಈ ಮನೆಯಲ್ಲಿರಲು ಬಂದಿದ್ದೇನೆ. ಎಲ್ಲವೂ ನೀವು ಅಂದುಕೊಂಡಂತೆ ಆಗಲು ಸಾಧ್ಯವಿಲ್ಲ. ಹಾಗೆಯೇ ನಿಮ್ಮಿಷ್ಟದಂತೆ ಎಲ್ಲರೂ ಇರಬೇಕು ಅನ್ನೋದು ನಿಮ್ಮದು ತಪ್ಪು ಕಲ್ಪನೆ. ನಾನು ಹೇಳಿದಂತೆಯೇ ಮುಂದೆ ನಡೆಯಬೇಕು ಎಂದು ಜಯಂತ್‌ಗೆ ಜಾನು ಎಚ್ಚರಿಕೆ ನೀಡಿದ್ದಾಳೆ.

ಇದೀಗ ಜಯಂತ್ ಅಂದುಕೊಂಡಿದ್ದೆಲ್ಲಾ ಉಲ್ಟಾ ಆಗುತ್ತಿದೆ. ಚಿನ್ನುಮರಿಯನ್ನ ತನ್ನ ಕಂಟ್ರೋಲ್‌ನಲ್ಲಿಕೊಂಡಿದ್ದ ಜಯಂತ್, ಈಗ ತಾನೇ ಜಾನು ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾನೆ. ಇನ್ನಾದ್ರೂ ಜಯಂತ್‌ಗೆ ತನ್ನ ತಪ್ಪಿನ ಅರಿವಾಗುತ್ತಾ? ಹೀಗಾದ್ರೂ ಸೈಕೋಪತಿ ಬದಲಾಗುತ್ತಾನಾ ಅಥವಾ ಜಾನು ಮೇಲೆ ರಿವೇಂಜ್‌ ತೀರಿಸಿಕೊಳ್ಳುತ್ತಾನಾ ಅಂತ ಕಾದು ನೋಡ್ಬೇಕು.

Shwetha M