ಜಯಂತ್‌ನಿಂದ ಜಾನು ಬಚಾವ್.. ಚಿನ್ನುಮರಿಯಿಂದ ಸೈಕೋಗೆ ಗೇಟ್‌ಪಾಸ್! – ವಿಶ್ವನ ಜೊತೆ ಜಾಹ್ನವಿ ಮದುವೆ?

ಸೈಕೋ ಜಯಂತ್ ಕಾಟದಿಂದ ಬೇಸತ್ತ ಜಾನು ಶ್ರೀಲಂಕಾದಲ್ಲಿ ಸಮುದ್ರಕ್ಕೆ ಹಾರಿದ್ಲು. ಇದ್ರಿಂದಾಗಿ ಜಾನು ಮನೆಯವರು ಆಕೆ ಸತ್ತಿದ್ದಾಳೆ ಎಂದು ಇಷ್ಟು ದಿನ ಅಂದುಕೊಂಡಿದ್ರು.. ಆದ್ರೆ ಸೈಕೋ ಜಯಂತ್ ಗೆ ಚಿನ್ನುಮರಿ ಸತ್ತಿಲ್ಲ ಅನ್ನೋದು ಗೊತ್ತಾಗಿತ್ತು. ವಿಶ್ವನ ಮನೆಯಲ್ಲಿ ಇರೋದನ್ನ ಪತ್ತೆ ಹಚ್ಚಿದ್ದ. ಆದ್ರೆ ವಿಶ್ವ ತನ್ನ ಪ್ರಾಣವನ್ನು ಪಣಕ್ಕಿಟ್ಟು ಜಾಹ್ನವಿಯನ್ನ ಕಾಪಾಡಿದ್ದಾನೆ. ಅಷ್ಟೇ ಅಲ್ಲ ಜಾನು ಈಗ ಹೆತ್ತವರ ಮಡಿಲು ಸೇರಿದ್ದಾಳೆ.
ಇದನ್ನೂ ಓದಿ: ಕದನ ವಿರಾಮದ ಬೆನ್ನಲ್ಲೇ ಗುಡ್‌ನ್ಯೂಸ್ ಕೊಟ್ಟ ಇರಾನ್! – ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್!
ಲಕ್ಷ್ಮೀ ನಿವಾಸ ಸೀರಿಯಲ್ ಈಗ ರೋಚಕ ಘಟ್ಟ ತಲುಪಿದೆ. ಗಂಡ ಜಯಂತ್ ಸೈಕೋತನ ಗೊತ್ತಾಗುತ್ತಿದ್ದಂತೆ ಆತನ ಕಪಿಮುಷ್ಠಿಯಿಂದ ಪಾರಾಗಲು ಜಾನು ಪ್ರಯತ್ನಿಸಿದ್ಲು. ಆದ್ರೆ ಆತನ ಕಾಟ ಜಾಸ್ತಿ ಆಗ್ತಾನೆ ಹೋಯ್ತು. ಕಡೆಗೆ ಜಾನು ಶ್ರೀಲಂಕಾಗೆ ಹೋದಾಗ ಸಮುದ್ರಕ್ಕೆ ಹಾರಿದ್ಲು. ಜಾಹ್ನವಿಯನ್ನು ಎಷ್ಟು ಹುಡುಕಿದ್ರು ಸಿಕ್ಕಿರ್ಲಿಲ್ಲ. ಬಳಿಕ ಆಕೆ ಪತ್ತೆಯಾಗಿದ್ದು, ಚೆನ್ನೈನ ಬೀಚ್ ನಲ್ಲಿ. ಅದೂ ಕೂಡ ವಿಶ್ವನ ತಂದೆಗೆ. ಅಲ್ಲಿಂದ ನೇರವಾಗಿ ವಿಶ್ವನ ಮನೆಗೆ ಬಂದು, ಮನೆ ಕೆಲಸವಳಾಗಿ ಇದ್ಲು. ಆದ್ರೀಗ ಲಕ್ಷ್ಮೀ ತಂದೆಗೆ ಜಾಹ್ನವಿ ತನ್ನ ಮೊಮ್ಮಗಳು ಅನ್ನೋದು ಗೊತ್ತಾಗಿದೆ. ವಿಶ್ವ ಕೂಡ ಜಯಂತ್‌ನಿಂದ ಇಷ್ಟು ದಿನ ಬಚಾವ್ ಮಾಡಿಕೊಂಡು ಬಂದಿದ್ದ. ಇದೀಗ ಕೊನೆಗೂ ಜಾನು ಹೆತ್ತವರ ಮಡಿಲು ಸೇರಿದ್ದಾಳೆ.
ಹೌದು, ಲಕ್ಷ್ಮೀ ಮತ್ತು ಶ್ರೀನಿವಾಸರ ಷಷ್ಟಿಪೂರ್ತಿ ಸಮಾರಂಭ ನಡೆಯುತ್ತಿದೆ. ಇದರಲ್ಲಿ ಲಕ್ಷ್ಮೀ ತಂದೆ ಕೂಡಾ ಭಾಗಿಯಾಗಿದ್ದಾರೆ. ಅಪ್ಪನ ಎದುರು ಷಷ್ಟಿಪೂರ್ತಿ ಸಮಾರಂಭ ನಡೆಯುತ್ತಿರುವುದಕ್ಕೆ ಲಕ್ಷ್ಮೀ ಸಂಭ್ರಮ ಹೇಳತೀರದಾಗಿದೆ. ಜೊತೆಗೆ ಮಕ್ಕಳು ಕೂಡಾ ತಂದೆ ತಾಯಿಯ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇವೆಲ್ಲದ್ರ ಮಧ್ಯೆ ಲಕ್ಷ್ಮೀ ತಂದೆ ಆಕೆಗೆ ಬಿಗ್ ಸರ್‌ಪ್ರೈಸ್ ಕೊಟ್ಟಿದ್ದಾರೆ. ಇಷ್ಟು ದಿನ ಸತ್ತಿದ್ದಳೆ ಅಂತ ಅಂದುಕೊಂಡಿದ್ದ ಜಾನುವನ್ನ ಲಕ್ಷ್ಮೀ ಶ್ರೀನಿವಾಸ್ ಮುಂದೆ ಕರೆತಂದಿದ್ದಾರೆ. ಅಷ್ಟೇ ಅಲ್ಲ ಜಾನು ಬೆಸ್ಟ್ ಫ್ರೆಂಡ್ ವಿಶ್ವ ಬೇರೆ ಯಾರು ಅಲ್ಲ.. ನಿನ್ನ ಅಣ್ಣನ ಮಗಳು ಅಂತ ಹೇಳಿದ್ದಾರೆ. ಇದ್ರಿಂದಾಗಿ ಜಾನು ಮನೆಯವರು ಫುಲ್ ಖುಷಿಯಾಗಿದ್ದಾರೆ.
ಮತ್ತೊಂದ್ಕಡೆ ಜಯಂತ್‌ಗೆ ಜಾಹ್ನವಿ ಬದುಕಿರೋದು ಮೊದಲೇ ಗೊತ್ತಾಗಿತ್ತು. ಹೀಗಾಗಿ ವಿಶ್ವ ಜಾಹ್ನವಿಯನ್ನು ದೇವಸ್ಥಾನಕ್ಕೆ ಕರೆಸುವಾಗ ಅವರ ಮೇಲೆ ರೌಡಿಗಳಿಂದ ಅಟ್ಯಾಕ್ ಮಾಡಿಸಿದ್ದ. ಜಾಹ್ನವಿ ಹಾಗೂ ವಿಶ್ವ ಅವರಿಂದ ತಪ್ಪಿಕೊಂಡು ಷಷ್ಠಿಪೂರ್ತಿ ನಡೆಯುವ ಸ್ಥಳಕ್ಕೆ ಬಂದಿದ್ದಾರೆ. ಇದ್ರಿಂದಾಗಿ ಜಯಂತ್ ಪ್ಲ್ಯಾನ್ ಫುಲ್ ಉಲ್ಟಾ ಆಗಿದೆ. ಈಗ ಜಯಂತ್ ಕೃತ್ಯದ ಬಗ್ಗೆ ಜಾನು ಮನೆಯವರಿಗೆ ಹೇಳ್ತಾಳಾ? ಸೈಕೋ ಜಯಂತ್ ಜೈಲಿಗೆ ಸೇರ್ತಾನಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಮತ್ತೊಂದ್ಕಡೆ ಜಾನು ಹಾಗೂ ವಿಶ್ವ ಮೊದಲಿನಿಂದಲೂ ಬೆಸ್ಟ್ ಫ್ರೆಂಡ್ಸ್. ವಿಶ್ವ ಜಾಹ್ನವಿಯನ್ನು ಮೊದಲಿನಿಂದ ಪ್ರೀತಿಸುತ್ತಿದ್ದ. ಇದೀಗ ಜಾನು ತನ್ನ ಅತ್ತೆ ಮಗಳು ಅನ್ನೋದು ಗೊತ್ತಾಗಿದೆ. ಜಾಹ್ನವಿ ಜಯಂತ್‌ನಿಂದ ದೂರ ಆದ್ರೆ ವಿಶ್ವನ ಜೊತೆ ಆಕೆ ಮದುವೆ ಆಗೋ ಸಾಧ್ಯತೆ ಹೆಚ್ಚಾಗಿದೆ. ಯಾಕಂದ್ರೆ ಸೀರಿಯಲ್‌ನಲ್ಲಿ ವಿಶ್ವನ್ನ ಜಾನು ಪಾಲಿಗೆ ಹೀರೋ ಅನ್ನೋ ರೀತಿಯಲ್ಲೇ ತೋರಿಸಲಾಗಿತ್ತು. ಸೋ ಮುಂದಿನ ದಿನಗಳಲ್ಲಿ ಸೀರಿಯಲ್ ಸ್ಟೋರಿಗೆ ಯಾವ ರೀತಿ ಟ್ವಿಸ್ಟ್ ಸಿಗಲಿಗೆ ಅಂತ ಕಾದು ನೋಡ್ಬೇಕು.

ನೋಡಿರಿ

