ಅಂಜಲಿ ಬೆನ್ನಲ್ಲೇ ಲಕ್ಷ್ಮೀ ನಿವಾಸ ಸೀರಿಯಲ್ ಗೆ ಮತ್ತೊಬ್ಬ ನಟಿ ಗುಡ್ಬೈ? – ಹಿರಿಯ ನಟಿ ಎಚ್ಚರಿಕೆ ಕೊಟ್ಟಿದ್ಯಾರಿಗೆ?

ಲಕ್ಷ್ಮೀ ನಿವಾಸ ಸೀರಿಯಲ್ ಸ್ಟೋರಿ ರೋಚಕ ತಿರುವು ಪಡೆದುಕೊಂಡಿದೆ. ಟಿ ಆರ್ಪಿ ರೇಸ್ನಲ್ಲೂ ಮುಂದಿದೆ. ಆದ್ರೀಗ ಸೀರಿಯಲ್ ಟೀಮ್ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋ ವಿಚಾರ ಪದೇ ಪದೆ ಸುದ್ದಿಯಾಗ್ತಿದೆ. ಮೊನ್ನೆಯಷ್ಟೇ ಹಿರಿಯ ನಟಿ ಅಂಜಲಿ ಸೀರಿಯಲ್ ಟೀಮ್ ವಿರುದ್ಧ ಅಸಮಧಾನ ಹೊರ ಹಾಕಿದ್ರು. ತನ್ನ ಪಾತ್ರದ ವಾಲ್ಯೂ ಕಡಿಮೆ ಆಗ್ತಿದೆ ಎಂದು ಹೇಳಿದ್ರು. ಬಳಿಕ ನಟಿ ಅಂಜಲಿ ಸೀರಿಯಲ್ ಗೆ ಗುಡ್ಬೈ ಹೇಳಿದ್ದಾರೆ. ಇದೀಗ ಮತ್ತೊಬ್ಬ ಹಿರಿಯ ನಟಿ ಸೀರಿಯಲ್ ನಿಂದ ಹೊರ ಬರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಮಂಚದ ಒಳಗೆ ಪ್ರಿಯಕರ.. ಕೋಣೆಯೊಳಗೆ ಯುವತಿ! – ಹೆಂಡತಿ ಗುಟ್ಟು ಗಿಫ್ಟ್ ಸಿಕ್ಕ ಮಂಚದಲ್ಲಿ ರಟ್ಟು!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿ ಅಂಜಲಿ ಸುಧಾಕರ್ ರೇಣುಕಾ ಪಾತ್ರದಲ್ಲಿ ನಟಿಸುತ್ತಿದ್ದರು. ಕೆಲವೇ ದಿನಗಳ ಹಿಂದೆ ಅವರು ಮಾಧ್ಯಮವೊಂದರಲ್ಲಿ ಈ ಪಾತ್ರದ ಬಗ್ಗೆ ಅಸಮಾಧಾನ ಇದೆ ಎಂದು ಹೇಳಿದ್ದರು. ಅದಾದ ಬಳಿಕ ಅವರು ಈ ಸೀರಿಯಲ್ನಲ್ಲಿ ಕಾಣಿಸಿರಲಿಲ್ಲ. ಇದೀಗ ಈ ಪಾತ್ರಕ್ಕೆ ಹೊಸ ನಟಿಯ ಎಂಟ್ರಿಕೊಟ್ಟಿದ್ದಾರೆ. ಈ ಬೆನ್ನಲ್ಲೇ ಅಂಜಲಿ ಸಹನಟಿ ವಿಜಯಲಕ್ಷ್ಮೀ ಸುಬ್ರಮಣಿ ಸೀರಿಯಲ್ ಟೀಮ್ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ. ತಾನೂ ಸೀರಿಯಲ್ ಬಿಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರನಡೆದ ನನ್ನ ಗೆಳತಿ ನಟಿ ಅಂಜಲಿ. ಅತಿಯಾದ ರಾಜಕೀಯ ನಿಜವಾದ ಕಲಾವಿದೆಯರಿಗೆ ಮನ್ನಣೆ, ಗೌರವ ಇಲ್ಲ, ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ನಾವಿಬ್ಬರೂ ಯಾವ ಕೊರತೆಯನ್ನು ಮಾಡಿಲ್ಲ. ಬೇಸರ ನೋವು ಇದೆ. ಅಂಜಲಿ ಇಂದು ನೀನು ಹೊರಗಡೆ ಬಂದಿರುವೆ, ಅತೀ ಶೀಘ್ರದಲ್ಲಿ ನಾನು ಕೂಡ ಈ ಸೀರಿಯಲ್ನಿಂದ ಹೊರಬರ್ತೀನಿ ಎಂದು ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಂದಹಾಗೆ ಸಿದ್ದೇಗೌಡ್ರ ತಾಯಿಯಾಗಿ ಅಂಜಲಿ, ವಿಶ್ವನ ತಾಯಿಯಾಗಿ ನಟಿ ವಿಜಯಲಕ್ಷ್ಮೀ ನಟಿಸಿದ್ದರು. ವಿಶ್ವ ಪಾತ್ರಧಾರಿ ಭವಿಷ್ ಗೌಡ ಕೂಡ ಈ ಸೀರಿಯಲ್ನಿಂದ ಹೊರಬಂದಿದ್ದಾರೆ. ತನು ಪಾತ್ರಧಾರಿ ಕೂಡ ಬದಲಾವಣೆ, ವಿಶ್ವನ ತಂದೆ ಪಾತ್ರ ಕೂಡ ಬದಲಾಗಿದೆ, ಲಕ್ಷ್ಮೀ ಪಾತ್ರದಿಂದ ಶ್ವೇತಾ ಕೂಡ ಹೊರಬಂದಿದ್ದಾರೆ. ಒಟ್ಟಿನಲ್ಲಿ ಈ ಸೀರಿಯಲ್ನಲ್ಲಿ ಅನೇಕ ಪಾತ್ರಧಾರಿಗಳು ಹೊರಗಡೆ ಬಂದಿದ್ದಾರೆ. ಮೊದಲು ನಿತ್ಯ ಒಂದು ಗಂಟೆ ಪ್ರಸಾರ ಆಗ್ತಿದ್ದ ಈ ಸೀರಿಯಲ್ ಈಗ ಅರ್ಧ ಗಂಟೆ ಪ್ರಸಾರ ಆಗ್ತಿದೆ.

ನೋಡಿರಿ

