ಲಕ್ಷ್ಮೀ ನಿವಾಸದಲ್ಲಿ ನಟಿಗೆ ಅವಮಾನ.. ಸೀರಿಯಲ್‌ ವಿರುದ್ಧ ಸಿಟ್ಟಾದ ಅಂಜಲಿ!

ಲಕ್ಷ್ಮೀ ನಿವಾಸದಲ್ಲಿ ನಟಿಗೆ ಅವಮಾನ.. ಸೀರಿಯಲ್‌ ವಿರುದ್ಧ ಸಿಟ್ಟಾದ ಅಂಜಲಿ!

ಜೀ ಕನ್ನಡ ಜನಪ್ರಿಯ ಸೀರಿಯಲ್‌ಗಳಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್‌ ಕೂಡ ಒಂದು. ಆರಂಭದಿಂದಲೂ ಟಿಆರ್‌ಪಿ ರೇಸ್‌ನಲ್ಲಿ ಮುಂದಿದೆ. ಲಕ್ಷ್ಮೀನಿವಾಸ ಸೀರಿಯಲ್‌ ಸ್ಟೋರಿ ಚೆನ್ನಾಗಿ ಮೂಡಿ ಬಂದ್ರೂ, ಸೀರಿಯಲ್‌ ಟೀಮ್‌ ಮಧ್ಯೆ ಎಲ್ಲವೂ ಸರಿಯಿಲ್ವಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಈಗಾಗಲೇ ಕೆಲ ನಟ, ನಟಿಯರು ಸೀರಿಯಲ್‌ಗೆ ಈಗಾಗಲೇ ಗುಡ್‌ಬೈ ಹೇಳಿದ್ದಾರೆ. ಆ ಪಾತ್ರಗಳಿಗೆ ಹೊಸ ಕಲಾವಿದರ ಎಂಟ್ರಿಯಾಗಿದೆ. ಆದ್ರೀಗ ಲಕ್ಷ್ಮೀನಿವಾಸದ ಬಗ್ಗೆ ಹಿರಿಯ ನಟಿ  ಅಂಜಲಿ ಸುಧಾಕರ್ ಬಹಿರಂಗವಾಗಿ ಅಸಮಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ನಡು ರಸ್ತೆಯಲ್ಲೇ ಮಲಗಿದ ಭೂಪ! – ಅಕ್ಕ ಪಕ್ಕ ವಾಹನ ಓಡಾಡಿದ್ರೂ ಡೋಂಟ್‌ ಕೇರ್!‌

ಲಕ್ಷ್ಮೀನಿವಾಸ ಸೀರಿಯಲ್‌ ಸ್ಟೋರಿ ಈಗ ರೋಚಕ ಘಟ್ಟ ತಲುಪಿದೆ. ಆದ್ರೆ ಈ ಸೀರಿಯಲ್‌ ಟೀಮ್‌ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋ ವಿಚಾರ ಪದೇ ಪದೇ ಮುನ್ನಲೆಗೆ ಬರ್ತಿದೆ. ಒಬ್ಬರಾದ ಮೇಲೆ ಒಬ್ರು ಸೀರಿಯಲ್‌ ಗೆ ವಿದಾಯ ಹೇಳ್ತಿದ್ದಾರೆ. ಈಗಾಗಲೇ ನಟಿ ಶ್ವೇತಾ ಲಕ್ಷ್ಮೀ ಪಾತ್ರಕ್ಕೆ ಗುಡ್‌ಬೈ ಹೇಳಿದ್ರು. ಅದಾದ್ಮೇಲೆ ತನು ಪಾತ್ರಧಾರಿ ನಟಿ ಯುಕ್ತಾ, ವಿಶ್ವ ಪಾತ್ರಧಾರಿ ಭವಿಷ್‌ ಗೌಡ ಕೂಡ ಸೀರಿಯಲ್‌ ನಿಂದ ಹೊರನಡೆದಿದ್ದಾರೆ. ಈ ಬೆನ್ನಲ್ಲೇ  ಮತ್ತೊಬ್ಬ ನಟಿ ಸೀರಿಯಲ್‌ನಿಂದ ಹೊರ ಬರ್ತಾರಾ ಅನ್ನೋ ಅನುಮಾನ ಸೀರಿಯಲ್‌ ಪ್ರೇಮಿಗಳನ್ನ ಕಾಡ್ತಿದೆ. ಇದೀಗ ಲಕ್ಷ್ಮೀ ನಿವಾಸ ವಿರುದ್ಧ ಹಿರಿಯನಟಿ ಅಂಜಲಿ ಸುಧಾಕರ್ ಅಸಮಧಾನ ಹೊರಹಾಕಿದ್ದಾರೆ. ಯಾವುದೋ ಪಾತ್ರವನ್ನ ಮೇಲೆತ್ತಲು ತಮ್ಮನ್ನ ವಿಲನ್‌ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಲಕ್ಷ್ಮೀ ನಿವಾಸ ಸೀರಿಯಲ್‌ ನಲ್ಲಿ ನಟಿ ಅಂಜಲಿ ಸುಧಾಕರ್ ಸಿದ್ದೇಗೌಡ್ರ ತಾಯಿ ರೇಣುಕಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೀಗ ನಟಿ ಸಂದರ್ಶನವೊಂದ್ರಲ್ಲಿ ಸೀರಿಯಲ್‌ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ಲಕ್ಷ್ಮೀ ನಿವಾಸ ಸೀರಿಯಲ್‌ ಕತೆ ನನಗೆ ಬೇರೆಯೇ ಹೇಳಿದ್ರು. ಹೀಗಾಗಿ ನಾನು ಒಪ್ಪಿಕೊಂಡಿದ್ದೆ. ಆರಂಭದಲ್ಲಿ ರೇಣುಕಾ ಪಾತ್ರ  ಪಾಸಿಟಿವ್ ಆಗಿತ್ತು. ಆದರೆ, ಬರ್ತಾ ಬರ್ತಾ ಅದು ನೆಗೆಟಿವ್ ಆಗಿ ಟರ್ನ್ ಆಗುತ್ತಿದೆ. ಕಾರಣವೇ ಇಲ್ಲದೆ ಪಾತ್ರ ನೆಗೆಟಿವ್ ಆಗಿ ಬದಲಾಗುತ್ತಿದೆ. ಕಲಾವಿದರನ್ನ ಸೀರಿಯಲ್‌ ಗೆ ಆಯ್ಕೆ ಮಾಡುವಾಗ ಅವರ ಪಾತ್ರವನ್ನ ಹೇಳಿಬಿಡಿ. ಪಾತ್ರ ಇಷ್ಟವಾದ್ರೆ ಒಪ್ಪಿಕೊಳ್ಳುತ್ತಾರೆ.. ಆಮೇಲೆ ಅವಮಾನ ಮಾಡ್ಬೇಡಿ ಎಂದಿದ್ದಾರೆ.

ಲಕ್ಷ್ಮೀ ನಿವಾಸ ಸೀರಿಯಲ್‌ ಟೀಮ್‌ ನಲ್ಲಿ ಕೆಲ ಮನಸ್ತಾಪ ಇದೆ ಎಂಬ ವಿಚಾರ ಕೆಲ ಸಮಯದ ಹಿಂದೆ ಸುದ್ದಿಯಾಗಿತ್ತು. ಇದೀಗ ನಟಿ ಅಂಜಲಿ ಈ ಬಗ್ಗೆಯೂ ಮಾತನಾಡಿದ್ದಾರೆ. ಕೆಲ ಸಮಯದ ಹಿಂದೆ ಪ್ರೊಡ್ಯೂಸರ್ ಹಾಗೂ  ಆರ್ಟಿಸ್ಟ್ಗಳ ಮಧ್ಯೆ ಪೇಮೆಂಟ್ ವಿಚಾರಕ್ಕೆ ಜಗಳ ನಡೆದಿತ್ತು. ಈ ವೇಳೆ  ಕೆಲ ಕಲಾವಿದರು ಬರ್ತಿರ್ಲಿಲ್ಲ. ಈ ವೇಳೆ ಬಂದ ಪಾತ್ರಗಳಿಗೆ ತಕ್ಕಂತೆ ಕತೆ ಬರಿತಾ ಇದ್ರು.  ಆ ಮನೆಯ ಪಾತ್ರಧಾರಿಗಳು ಸಿಕ್ಕಿಲ್ಲ ಅಂದ್ರೆ ಈ ಮನೆಯ ಪಾತ್ರಗಳ ಮೇಲೆ ಕಥೆ ಬರೆದುಬಿಡ್ತಾರೆ. ಇದ್ರಿಂದಾಗಿ ಇನ್ನೊಂದು ಪಾತ್ರಕ್ಕೆ ಏಟು ಬೀಳುತ್ತೆ, ಅವಮಾನ ಆಗುತ್ತೆ.. ಇದು ಪಾತ್ರಧಾರಿಗಳಿಗೆ ಸೂಟ್‌ ಆಗುತ್ತಾ ಇಲ್ವಾ ಅನ್ನೋದನ್ನ ಕೂಡ ಯೋಚನೆಯೇ ಮಾಡಲ್ಲ. ಸೀರಿಯಲ್‌ ನಲ್ಲಿ ಯಾರೋ ಒಂದಷ್ಟು ಜನ ಆರ್ಟಿಸ್ಟ್ ಇಲ್ಲ ಎಂದು ಪಾತ್ರ ಪಾಸಿಟಿವ್‌ ಇದ್ರೂ ನೆಗೆಟಿವ್ ಆಂಗಲ್‌ ಕೊಟ್ಟು ಬರೆದುಕೊಂಡು ಹೋಗ್ತಾರೆ. ಹೀಗಾಗಿ, ಸೀರಿಯಲ್‌ ಟೀಮ್‌ ಮಧ್ಯೆ ಪ್ರತಿ ಬಾರಿ ವೈಮನಸ್ಸು, ವಾದ, ವಿವಾದ ನಡೆದುಕೊಂಡು ಹೋಗುತ್ತಲೇ ಇದೆ. ಈ ಬಗ್ಗೆ ನಿರ್ದೇಶಕರನ್ನ ಪ್ರಶ್ನೆ ಮಾಡಲಾಗ್ತಿದ್ಯಂತೆ. ಮುಂದಿನ ದಿನಗಳಲ್ಲಿ ಇದನ್ನ ಸರಿಪಡಿಸಲು ಒಪ್ಪಿದ್ದಾರೆ ಎಂದು ನಟಿ ಹೇಳಿದ್ದಾರೆ. ಹೀಗಾಗಿ ನಟಿ ಅಂಜಲಿ ಸುಧಾಜರ್‌ ಅವರು ಸೀರಿಯಲ್‌ ಬಿಡೋದು ಡೌಟ್‌ ಅಂತ ಹೇಳಲಾಗ್ತಿದೆ. ರೇಣುಕಾಪಾತ್ರದಲ್ಲಿ ಮುಂದುವರಿಯುತ್ತಾರೆ ಎನ್ನಲಾಗಿದೆ. ಸೋ ಈ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಟ್ಟಿನಲ್ಲಿ ಈ ಸೀರಿಯಲ್‌ ಟೀಮ್‌ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋ ವಿಚಾರ ಪದೇ ಪದೇ ಮುನ್ನಲೆಗೆ ಬರ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳು ಬಗೆಹರಿಯುತ್ತಾ ಅಂತಾ ಕಾದುನೋಡ್ಬೇಕು.

Shwetha M