ಹರಿ, ಸಂತುಗೆ ಲಕ್ಷ ಲಕ್ಷ ಬಿಲ್!‌ – ಮಕ್ಕಳ ವಿರುದ್ಧ ಗೆದ್ದ ಶ್ರೀನಿವಾಸ್‌?

ಹರಿ, ಸಂತುಗೆ ಲಕ್ಷ ಲಕ್ಷ ಬಿಲ್!‌ – ಮಕ್ಕಳ ವಿರುದ್ಧ ಗೆದ್ದ ಶ್ರೀನಿವಾಸ್‌?

ಮೀನಾಕ್ಷಿ ಮೀನಾಕ್ಷಿ ಎಂಥ ಒಳ್ಳೆ ಮಕ್ಕಳಿಗೆ ಜನ್ಮ ಕೊಟ್ಟೆ.. ಅನ್ನೋ ಡೈಲಾಗ್‌ ಲಕ್ಷ್ಮೀ ನಿವಾಸದ ಲಕ್ಷ್ಮೀ ಗೆ ಪಕ್ಕಾ ಸೂಟ್‌ ಆಗುತ್ತೆ. ಯಾಕಂದ್ರೆ ಲಕ್ಷ್ಮೀನಿವಾಸ ಹೆಸ್ರಿಗೂ ಲಕ್ಷ್ಮೀ, ಶ್ರೀನಿವಾಸ್‌ ಮಕ್ಕಳು ವರ್ತನೆಗೂ ಒಂಚೂರು ಮ್ಯಾಚ್‌ ಆಗಲ್ಲ.. ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗಿದ್ರೂ ಅವ್ರೂ ಖುಷಿಯಾಗಿಲ್ಲ. ಇತ್ತ ತಮಗೆ ವಯಸ್ಸಾಗಿದೆ, ಗಂಡು ಮಕ್ಕಳು ನೋಡಿಕೊಳ್ತಾರೆ ಅಂತ ಲಕ್ಷ್ಮೀ ಶ್ರೀನಿವಾಸ್ ಅಂದ್ಕೊಂಡೆ, ದೊಡ್ಡ ಮಗ ಸಂತು ಜಿಪುಣ.. ಆಸೆ ಬುರುಕ.. ಇನ್ನು ಹರಿ ಸೋಮಾರಿ ಸಿದ್ಧ.. ಇವರಿಬ್ಬರಿಂದಾಗಿ ವಯಸ್ಸಾದ ಶ್ರೀನಿವಾಸ್, ಲಕ್ಷ್ಮೀ ಬೀದಿಗೆ ಬಿದ್ದಿದ್ದಾರೆ. ಈ ದಂಪತಿ ಮನೆ ಬಿಟ್ಟು ಬಂದು ಹೊಸ ಜೀವನ ಶುರುಮಾಡಿದ್ರೂ ಈ ಮಕ್ಕಳ ಕಾಟ ತಪ್ಪಿಲ್ಲ.. ಇದೀಗ ಮಕ್ಕಳಿಗೆ ತಕ್ಕ ಪಾಠ ಕಲಿಸಲು ಶ್ರೀನಿವಾಸ್‌ ಮುಂದಾಗಿದ್ದಾನೆ. ಸಂತೋಷ್, ಹರೀಶನ ವಿರುದ್ಧ ಶ್ರೀನಿವಾಸ್ ಕೇಸ್‌ ಹಾಕಿದ್ದು, ಇಲ್ಲಿವರೆಗು ಖರ್ಚು ಮಾಡಿದ ಹಣವನ್ನ ವಾಪಾಸ್‌ ಕೇಳಿದ್ದಾನೆ.

ಇದನ್ನೂ ಓದಿ: ಕಿಸ್‌ ಕೊಟ್ರೆ ಫೋನ್‌ ಕೊಡ್ತೀನಿ.. ಅಪ್ರಾಪ್ತೆಗೆ ಬಸ್‌ ಡ್ರೈವರ್‌ನಿಂದ ಕಿರುಕುಳ! – ಕಾಮುಕನಿಗೆ ಬಿತ್ತು ಧರ್ಮದೇಟು!

ಲಕ್ಷ್ಮೀ ನಿವಾಸ ಸೀರಿಯಲ್‌ ಮಹಾ ತಿರುವು ಪಡೆದುಕೊಂಡಿದೆ. ಸಂತು ದೊಡ್ಡ ಜಿಪುಣ.. ಬರೀ ಹಣ ಉಳಿಸೋದ್ರ ಬಗ್ಗೆಯೇ ಯೋಚನೆ ಮಾಡ್ತಾನೆ. ಒಂದೊಂದು ರೂಪಾಯುನೂ ಲೆಕ್ಕ ಹಾಕ್ತಾನೆ.. ಆದ್ರೆ ಹರೀಶ ದೊಡ್ಡ ಸೋಂಬೇರಿ.. ಕೆಲಸಕ್ಕೆ ಹೋಗಲ್ಲ. ಊರು ತುಂಬಾ ಸಾಲ ಮಾಡಿಕೊಂಡಿದ್ದಾನೆ. ಶ್ರೀನಿವಾಸ್‌ ಕೆಲಸಕ್ಕೆ ಹೋಗುವಾಗ ಆ ಮನೆಯ ಸ್ಥಿತಿ ಒಂದು ಹಂತಕ್ಕೆ ಸರಿಯಿತ್ತು. ಯಾವಾಗ ಶ್ರೀನಿವಾಸ್‌ ಕೆಲಸ ಕಳ್ಕೊಂಡ್ರೋ ಅಲ್ಲಿಂದಲೇ ಈ ಸಂತು ತನ್ನ ನೀಚ ಬುದ್ದಿಯನ್ನ ತೋರಿಸಲು ಶುರು ಮಾಡಿದ್ದ. ಶ್ರೀನಿವಾಸ್‌ ನ ಪದೇ ಪದೇ ನಿಂದಿಸ್ತಾ ಬಂದಿದ್ದ. ಆದ್ರೆ ಮಕ್ಕಳು ಎಷ್ಟು ನೋಯಿಸಿದ್ರೂ ಲಕ್ಷ್ಮೀ ಶ್ರೀನಿವಾಸ್‌ ಅದನ್ನೆಲ್ಲ ಅಷ್ಟೊಂದಾಗಿ ತಲೆಗೆ ಹಾಕಿಕೊಂಡಿರ್ಲಿಲ್ಲ. ಬಳಿಕ ಸಿಂಚನಾ ವೀಣಾ ಮಧ್ಯೆ ಜಗಳ ನಡೆದು ಮನೆ ಎರಡು ಭಾಗವಾಯ್ತು. ಅದಾದ ನಂತ್ರ ಸಿಂಚನಾ ತಂದೆ ತಾಯಿ ಇಬ್ಬರಿಗೂ ಬೇರೆ ಮನೆ ಕಟ್ಟಿಸಿಕೊಟ್ಟಿದ್ರು. ಆಗ ಈ ಪಾಪಿ ಮಕ್ಕಳು ತಂದೆ ತಾಯಿಯನ್ನ ಕೂಡ ದೂರ ಮಾಡಿದ್ರು.. ಇದೆಲ್ಲದ್ರಿಂದ ನೊಂದ ಲಕ್ಷ್ಮೀ, ಶ್ರೀನಿವಾಸ್‌ ಮನೆ ಬಿಟ್ಟು ಬಂದು ಹೊಸ ಜೀವನ ಶುರು ಮಾಡಿದ್ರು.. ಸಣ್ಣ ಮನೆ ಕಟ್ಟಿ, ಗ್ಯಾರೇಜ್‌ ಬೇರೆ ಶುರು ಮಾಡಿದ್ರು.. ಆದ್ರೆ ಅದ್ರ ಮೇಲೂ ಸಂತು, ಹರಿ ಕಣ್ಣು ಬಿತ್ತು.. ಇದ್ರಲ್ಲೂ ಪಾಲು ಕೊಡಿ ಅಂತ ಕೇಳಿದ್ದಲ್ಲದೇ, ಲಕ್ಷ್ಮೀ ತವರು ಮನೆಯಿಂದಲೂ ಪಾಲು ಬೇಕು ಅಂತಾ ನೋಟಿಸ್‌ ಕಳ್ಸಿದ್ರು..  ಮಕ್ಕಳ ವರ್ತನೆಯಿಂದ ಲಕ್ಷ್ಮೀ ನೊಂದಿದ್ದಾಳೆ. ಹೀಗಾಗಿ  ಶ್ರೀನಿವಾಸ್‌ ಮಕ್ಕಳಿಗೆ ತಕ್ಕ ಶಾಸ್ತಿ ಮಾಡಲು ಹೊರಟಿದ್ದಾನೆ. ಇದೀಗ ಕೋರ್ಟ್‌ ನಲ್ಲಿ ಯಾರೂ ಊಹೆ ಮಾಡಿರದ ಕೇಸ್‌ ಕೊಟ್ಟಿದ್ದಾನೆ. ಈ ಮೂಲಕ ಸಮಾಜಕ್ಕೂ ಒಂದೊಳ್ಳೆ ಸಂದೇಶ ಸಿಕ್ಕಿದೆ.

ತಂದೆ ತಾಯಿ ಮಕ್ಕಳನ್ನ ಮೈಯೆಲ್ಲಾ ಕಣ್ಣಾಗಿಟ್ಟು ಸಾಕ್ತಾರೆ.. ತಮಗೆ ಎಷ್ಟು ಕಷ್ಟ ಇದ್ರೂ ಮಕ್ಕಳ ಆಸೆಗಳನ್ನ ನೆರವೇರಿಸ್ತಾರೆ. ಆದ್ರೆ ಮಕ್ಕಳು ದೊಡ್ಡರಾದ್ಮೇಲೆ ತಂದೆ ತಾಯಿಯನ್ನೇ ಕಡೆಗಣಿಸ್ತಾರೆ. ಇದೀಗ ಲಕ್ಷ್ಮೀ ನಿವಾಸದ ಕತೆ ಕೂಡ ಇದೇ ರೀತಿಯಲ್ಲಿ ಸಾಗ್ತಿದೆ.. ಎದೆಯೆತ್ತರಕ್ಕೆ ಬೆಳೆದ ಮಕ್ಕಳು ನಮ್ಮನ್ನ ನೋಡಿಕೊಳ್ತಾರೆ ಅಂತ ಲಕ್ಷ್ಮೀ ಶ್ರೀನಿವಾಸ್‌ ಅಂದ್ಕೊಂಡ್ರೆ, ಸಂತು, ಹರಿ ಅವರ ಬಳಿ ಇರೋದನ್ನೆಲ್ಲಾ ಕಿತ್ಕೊಂಡು ಬೀದಿಗೆ ಬರುವಂತೆ ಮಾಡಿದ್ದಾರೆ. ಇದೀಗ ಶ್ರೀನಿವಾಸ್‌ ನ್ಯಾಯ ಕೇಳಲು ಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ. ಸಂತು ಹಾಗೂ ಹರಿಗೆ ಹುಟ್ಟಿದಾಗಿನಿಂದ ಯಾವುದಕ್ಕೆ ಎಷ್ಟು ಖರ್ಚು ಮಾಡಿದೆ.. ಇವರಿಬ್ಬರು ಎಷ್ಟು ಹಣ ವಾಪಾಸ್‌ ಕೊಡ್ಬೇಕು ಅಂತಾ ಲೆಕ್ಕ ಕೊಟ್ಟಿದ್ದಾರೆ. ಇದೀಗ ಲಾಯರ್‌ ಇಬ್ಬರ ಕೈಗೂ ಫೈಲ್‌ ಕೊಟ್ಟು.. ಸಂತು ಬಳಿ, ಸಣ್ಣ ವಯಸ್ಸಿನಿಂದ ನಿಮಗೆ ಖರ್ಚು ಮಾಡಿದ್ದು 12.5  ಲಕ್ಷ ಚಿಲ್ಡ್ರೆ.. ಇನ್ನು ರೀಸೆಂಟ್‌ ಆಗಿ ಕೊಟ್ಟ 5 ಲಕ್ಷ ಸೇರಿ 18 ಲಕ್ಷದ 61 ಸಾವಿರದ 117 ರೂಪಾಯಿ ಆಗಿದೆ ಎಂದಿದ್ದಾರೆ.. ಇನ್ನು ಸಂತುಗೆ ಸಣ್ಣ ವಯಸ್ಸಿನಿಂದ 16 ಲಕ್ಷ ಚಿಲ್ಡ್ರೆ. ರಿಸೆಂಟ್‌ ಆಗಿ ಕೊಟ್ಟಿರೋದು 5 ಲಕ್ಷ ಸೇರಿ 22 ಲಕ್ಷದ 11 ಸಾವಿರದ 262 ಆಗಿದೆ ಎಂದು ಲೆಕ್ಕ ಕೊಟ್ಟಿದ್ದಾರೆ. ಇದ್ರಿಂದಾಗಿ ಅಣ್ಣ ತಮ್ಮ ಇಬ್ಬರು ಶಾಕ್‌ ಆಗಿದ್ದಾರೆ.

ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ಫುಲ್‌ ಖುಷಿಪಟ್ಟಿದ್ದಾರೆ. ಈ ಸೀರಿಯಲ್‌ ಮುಖಾಂತರ ಸಮಾಜಕ್ಕೆ ಒಂದೊಳ್ಳೆ ಮೆಸೆಜ್‌ ಕೊಟ್ಟಂತಾಗಿದೆ. ಅಪ್ಪ ಅಮ್ಮರನ್ನ ಬೀದಿ ಹಾಕುವ, ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳಿಗೆ ಇದು ಉತ್ತಮ ಪಾಠ. ನಿಜ ಜೀವನದಲ್ಲೂ ಇಂತಹ ಮಕ್ಕಳಿಗೆ ಹೀಗೆ ಮಾಡ್ಬೇಕು ಅಂತಾ ಕಾಮೆಂಟ್‌ ಮಾಡಿದ್ದಾರೆ.

Shwetha M