ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಗುಡ್‌ಬೈ ಹೇಳಿದ ನಟ! – ವಿಶ್ವ ಪಾತ್ರಕ್ಕೆ ಹೊಸ ನಟ ಎಂಟ್ರಿ!

ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಗುಡ್‌ಬೈ ಹೇಳಿದ ನಟ! – ವಿಶ್ವ ಪಾತ್ರಕ್ಕೆ ಹೊಸ ನಟ ಎಂಟ್ರಿ!

ಜೀಕನ್ನಡದಲ್ಲಿ ಪ್ರಸಾರವಾಗ್ತಿರೋ ಲಕ್ಷ್ಮೀ ನಿವಾಸ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ತಂದೆ ತಾಯಿಗೆ ಕಾಟ ಕೊಡ್ತಿದ್ದ ಸಂತೋಷ್‌ ಹಾಗೂ ಹರೀಶನಿಗೆ ಶ್ರೀನಿವಾಸ್‌ ಸರಿಯಾಗೇ ಪಾಠ ಕಲಿಸಿದ್ದಾನೆ. ಸೀರಿಯಲ್‌ ಸ್ಟೋರಿ ವೀಕ್ಷಕರಿಗೆ ಸಖತ್‌ ಇಷ್ಟ ಆಗಿದೆ. ಆದ್ರೀಗ ಸೀರಿಯಲ್‌ ಫ್ಯಾನ್ಸ್‌ ಗೆ ಶಾಕಿಂಗ್‌ ಸುದ್ದಿಯೊಂದಿದೆ. ಪ್ರಮುಖ ನಟ ಸೀರಿಯಲ್‌ಗೆ ಗುಡ್‌ಬೈ ಹೇಳಿದ್ದಾರೆ. ಇದೀಗ ಆ ಪಾತ್ರಕ್ಕೆ ಹೊಸ ನಟನ ಎಂಟ್ರಿಯಾಗಿದೆ.

ಇದನ್ನೂ ಓದಿ: ಚೀನಾದಿಂದ ಪಾಕ್‌ಗೆ ಬಿಗ್ ಶಾಕ್ – ಸಿಪಿಇಸಿಯ ಪ್ರಮುಖ ಯೋಜನೆಯಿಂದ ಹಿಂದಕ್ಕೆ ಸರಿದ ಡ್ರ್ಯಾಗನ್

ಹೌದು, ಇತ್ತೀಚೆಗೆ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಲಕ್ಷ್ಮೀ ಪಾತ್ರಧಾರಿ ಶ್ವೇತಾ ಹೊರಗಡೆ ಬಂದಿದ್ದರು. ಇದೀಗ ಮತ್ತೊಬ್ಬ ನಟ ಸೀರಿಯಲ್‌ ಗೆ ಗುಡ್‌ಬೈ ಹೇಳಿದ್ದಾರೆ.  ವಿಶ್ವ ಪಾತ್ರಧಾರಿ ಭವಿಷ್‌ ಗೌಡ ಸೀರಿಯಲ್‌ನಿಂದ ಹೊರಗಡೆ ಬಂದಿದ್ದಾರಂತೆ. ಇವರ ಜಾಗಕ್ಕೆ ಹೊಸ ನಟನ ಎಂಟ್ರಿ ಆಗಿದೆ.

ಇದೀಗ ಭವಿಷ್‌ ಗೌಡ ಜಾಗಕ್ಕೆ ಹೊಸ ನಟನ ಎಂಟ್ರಿ ಆಗಿದೆ. ನಟ ನಕುಲ್‌ ಶರ್ಮಾ ಅವರು ವಿಶ್ವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿಷೇಕ್‌ ಪಾತ್ರದಲ್ಲಿ ನಟಿಸುತ್ತಿದ್ದ ನಕುಲ್‌ ಈಗ ಈ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಅಂತ್ಯವಾದ ಬಳಿಕ ನಕುಲ್‌ ಈಗ ಈ ಸೀರಿಯಲ್‌ನಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಸೀರಿಯಲ್‌ನಲ್ಲಿ ನಕುಲ್‌ ಬಂದಿರುವ ಎಪಿಸೋಡ್‌ ಕೂಡ ಪ್ರಸಾರ ಆಗುತ್ತಿದೆ.

ಇನ್ನು ಭವಿಷ್‌ ಗೌಡ ಸೀರಿಯಲ್‌ ಬಿಡೋದಿಕ್ಕೂ ಕಾರಣವೇನು ಅನ್ನೋದು ರಿವೀಲ್‌ ಆಗಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ʼಗಂಧದ ಗುಡಿʼ ಎನ್ನುವ ಧಾರಾವಾಹಿ ಆರಂಭವಾಗುತ್ತಿದೆ. ಈ ಸೀರಿಯಲ್‌ನಲ್ಲಿ ಭವಿಷ್‌ ಗೌಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ಒಂದೇ ಭಾಷೆಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಕಲಾವಿದರು ಏಕಕಾಲಕ್ಕೆ ಎರಡು ಧಾರಾವಾಹಿಗಳಲ್ಲಿ ಅಥವಾ ಬೇರೆ ವಾಹಿನಿಯಲ್ಲಿ ಕೂಡ ನಟಿಸುವಂತಿಲ್ಲ. ಹೀಗಾಗಿಯೇ ಭವಿಷ್‌ ಗೌಡ ಅವರು ಈ ಸೀರಿಯಲ್‌ನಿಂದ ಹೊರಗಡೆ ಹೋಗಿದ್ದಾರೆ ಎಂದು ಹೇಳಲಾಗ್ತಿದೆ.

ಅಂದ್ಹಾಗೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಐದು ಜೋಡಿಗಳಿವೆ. ಇವರಲ್ಲಿ ಒಂದು ಜೋಡಿಯದ್ದು ಒಂದೊಂದು ಕಥೆ. ಈ ಹಿಂದೆ ನಿತ್ಯ ಒಂದು ಗಂಟೆಗಳ ಕಾಲ ಪ್ರಸಾರ ಆಗ್ತಿದ್ದ ಈ ಧಾರಾವಾಹಿಯು ಈಗ ಅರ್ಧ ಗಂಟೆ ಪ್ರಸಾರ ಆಗುತ್ತಿದೆ. ಹೀಗಾಗಿ ಓರ್ವ ಕಲಾವಿದನಿಗೆ ತಿಂಗಳಲ್ಲಿ ಮೂರರಿಂದ ನಾಲ್ಕು ದಿನ ಶೂಟಿಂಗ್‌ ಮಾಡಲು ಅವಕಾಶ ಸಿಗೋದು ಕೂಡ ಕಷ್ಟ. ಅಷ್ಟೇ ಅಲ್ಲದೆ ಹೊಸ ಪಾತ್ರಗಳು ಬಂದಾಗ ಅದನ್ನು ಸ್ವೀಕರಿಸಬೇಕು ಎಂದು ಭವಿಷ್‌ ಗೌಡ ಅವರು ಹೊಸ ಧಾರಾವಾಹಿಯನ್ನು ಒಪ್ಪಿಕೊಂಡಿರುವ ಸಾಧ್ಯತೆ ಹೆಚ್ಚಿದೆ.

Shwetha M