ಒಂದಾದ ವಿಶ್ವ ಜಾನು.. ನಿಂತು ಹೋಗುತ್ತಾ ತನು ಮದುವೆ? – ಜಯಂತ್‌ ಜೊತೆ ಚಿನ್ನುಮರಿ ಹೋಗಲ್ವಾ?

ಒಂದಾದ ವಿಶ್ವ ಜಾನು.. ನಿಂತು ಹೋಗುತ್ತಾ ತನು ಮದುವೆ? – ಜಯಂತ್‌ ಜೊತೆ ಚಿನ್ನುಮರಿ ಹೋಗಲ್ವಾ?

ಜಯಂತ್‌ ನಿಂದ ದೂರವಾದ ಜಾನು ಇಷ್ಟು ದಿನ ವಿಶ್ವನ ಮನೆಯಲ್ಲೇ ಇದ್ಲು.. ಆದ್ರೂ ಕೂಡ ವಿಶ್ವನಿಗೆ ತಾನು ಪ್ರೀತಿಸಿದ ಹುಡುಗಿ ತನ್ನ ಮನೆಯಲ್ಲೇ ಇದ್ದಾಳೆ ಅನ್ನೋದು ಗೊತ್ತಾಗಿಲ್ಲ.. ಆಕೆ ಸತ್ತಿದ್ದಾಳೆ ಅಂತ ವಿಶ್ವ ಅಂದ್ಕೊಂಡಿದ್ದ. ಇದೀಗ ಎಂಗೇಜ್‌ಮೆಂಟ್‌ ಬೆನ್ನಲ್ಲೇ ಜಾಹ್ನವಿ ಬದುಕಿದ್ದಾಳೆ ಅನ್ನೋದು ವಿಶ್ವನಿಗೆ ಗೊತ್ತಾಗಿದೆ. ಇಬ್ಬರೂ ಮುಖಾಮುಖಿಯಾಗಿದ್ದಾರೆ. ಇದೀಗ ವಿಶ್ವನಿಗೆ ಜಾನು ಸಿಗ್ತಿದ್ದಂತೆ ನಿಶ್ಚಿತಾರ್ಥದ ಕತೆ ಏನು? ವಿಶ್ವ ಜಾಹ್ನವಿಯನ್ನ ಜಯಂತ್‌ ಬಳಿ ಕರ್ಕೊಂಡು ಹೋಗ್ತಾನಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ಇದನ್ನೂ ಓದಿ: ಟ್ರಂಪ್ ಮಾತೇ ಮೋದಿಗೆ ಮುಳ್ಳು? – ‘ಕೈ’ ಜಾಲದಲ್ಲಿ ಸಿಕ್ಕಿಬೀಳ್ತಾರಾ ಪ್ರಧಾನಿ?

ಲಕ್ಷ್ಮೀ ನಿವಾಸ ಸೀರಿಯಲ್‌ ಸ್ಟೋರಿ ಎತ್ತ ಸಾಗ್ತಿದೆ ಅನ್ನೋದೇ ಗೊತ್ತಾಗ್ತಿಲ್ಲ. ಒಂದ್ಕಡೆ ಸೀರಿಯಲ್‌ನಲ್ಲಿ ಪಾತ್ರಗಳ ಬದಲಾವಣೆ ಆಗ್ತಿದೆ. ಈಗಾಗಲೇ ಕೆಲ ನಟರು ಸೀರಿಯಲ್‌ಗೆ ಗುಡ್‌ಬೈ ಹೇಳ್ತಿದ್ದಾರೆ. ಇದೀಗ ಸೀರಿಯಲ್‌ನಲ್ಲಿ ಡೈರೆಕ್ಟರ್‌ ಹೊಸ ಟ್ವಿಸ್ಟ್‌ ಕೊಟ್ಟಿದ್ದಾರೆ. ವಿಶ್ವ ತನು ನಿಶ್ಚಿತಾರ್ಥ ಬೆನ್ನಲ್ಲೇ ಜಾನುಗೆ ಮಹಾ ಸತ್ಯ ಗೊತ್ತಾಗಿದೆ.. ಮತ್ತೊಂದ್ಕಡೆ ವಿಶ್ವನಿಗೆ ಜಾನು ಬದುಕಿರೋ ವಿಚಾರ ಕೂಡ ಗೊತ್ತಾಗಿದೆ. ಇದೀಗ ವಿಶ್ವ ಹಾಗೂ ಜಾನು ಮುಖಾಮುಖಿ ಆಗಿದ್ದಾರೆ.

ಜಯಂತ್‌ ನ ಇನ್ನೊಂದು ಮುಖ ಗೊತ್ತಾಗ್ತಿದ್ದಂತೆ ಜಾನು ಆತನಿಂದ ದೂರ ಆಗಿದ್ಲು.. ಶ್ರೀಲಂಕಾದಲ್ಲಿ ಸಮುದ್ರಕ್ಕೆ ಹಾರಿದ್ದ ಜಾಹ್ನವಿ ಚೆನ್ನೈನ ಸಮುದ್ರ ದಡದಲ್ಲಿ ಪತ್ತೆಯಾಗಿದ್ಲು.. ಅದಾದ ಬಳಿಕ ವಿಶ್ವನ ತಂದೆ ಜೊತೆ ಮನೆಗೆ ಬಂದಿದ್ಲು.. ಇಷ್ಟು ದಿನ ತನ್ನ ಮನೆಯಲ್ಲಿ ಜಾಹ್ನವಿ ಇದ್ರೂ ಆತನಿಗೆ ಗೊತ್ತಾಗಿರ್ಲಿಲ್ಲ.. ಯಾಕಂದ್ರೆ ಜಾನು ಮುಖ ಮುಚ್ಚಿಕೊಂಡು ಓಡಾಡ್ತಿದ್ಲು.. ಆದ್ರೆ ನಿಶ್ಚಿತಾರ್ಥದ ದಿನ ಜಾಹ್ನವಿ ಎಲ್ಲರ ಮುಂದೆ ಹಾಡಿದ್ಲು. ಜಾನು ವಾಯ್ಸ್‌ ಕೇಳಿದ ವಿಶ್ವನಿಗೆ ಡೌಟ್‌ ಬಂದಿದೆ. ಇಷ್ಟು ದಿನದಿಂದ ಮನೆಯಲ್ಲಿದ್ದಿದ್ದು ಜಾನುನಾ ಅಥವಾ ಬೇರೆ ಹುಡುಗಿಯಾ ಅನ್ನೋದು ಕಾಡೋದಿಕ್ಕೆ ಶುರುವಾಗಿತ್ತು. ಕೊನೆಗೂ ವಿಶ್ವನಿಗೆ ಸತ್ಯ ಗೊತ್ತಾಗಿದ್ದು, ಇದೀಗ ಕಡೆಗೂ ಜಾನುವನ್ನ ಪತ್ತೆ ಮಾಡುವಲ್ಲಿ ವಿಶ್ವ ಯಶಸ್ವಿಯಾಗಿದ್ದಾನೆ.

ಜಾನು ಹಾಗೂ ವಿಶ್ವ ಕಾಲೇಜು ದಿನಗಳಿಂದಲೇ ಕ್ಲೋಸ್‌ ಫ್ರೆಂಡ್ಸ್‌.. ಎಷ್ಟು ಹೊತ್ತಿಗೂ ಒಟ್ಟಿಗೆ ತಿರುಗಾಡ್ತಿದ್ರು. ನಾನು ಪ್ರೀತಿಸಿದ ಹುಡುಗಿ ಯಾರು ಅಂತ ಹೇಳ್ತೀನಿ  ಅಂತ ವಿಶ್ವ ಹೇಳುತ್ತಿದ್ರೂ ಕೂಡ ಹೆಸರು ರಿವೀಲ್‌ ಮಾಡಿರಲಿಲ್ಲ. ಒಮ್ಮೆ ವಿಶ್ವ ಜಾನುಗೆ ಪ್ರೇಮ ನಿವೇದನೆ ಮಾಡಿದರೂ ಕೂಡ ಅವಳು ಇದೆಲ್ಲ ಜೋಕ್‌ ಎಂದು ನಕ್ಕಿದ್ದಳು. ಅದಾದ ಬಳಿಕ ಜಯಂತ್‌ ಜೊತೆ ಜಾಹ್ನವಿ ಮದುವೆ ಆಗಿತ್ತು. ಜಾಹ್ನವಿ ಮದುವೆ ಆಗ್ತಿದ್ದಂತೆ ವಿಶ್ವ ಕೂಡ ಕಂಪ್ಲೀಟ್‌ ಚೇಂಜ್‌ ಆಗಿದ್ದ.. ಇದೀಗ ವಿಶ್ವನ ಬಾಳಿಗೆ ತನು ಎಂಟ್ರಿಯಾಗಿದೆ. ಅವರಿಬ್ಬರ ಎಂಗೇಜ್‌ಮೆಂಟ್‌ ಕೂಡ ಆಗಿದೆ. ಇದೀಗ ಜಾನುಗೆ ವಿಶ್ವ ತನ್ನನ್ನ ಸೀರಿಯಸ್‌ ಆಗಿ ಪ್ರೀತಿಸುತ್ತಿದ್ದ ಅನ್ನೋದು ಗೊತ್ತಾಗಿದೆ. ಅವತ್ತು ವಿಶ್ವನ ಮಾತು ಕೇಳಿ ನಕ್ಕಿದೆ ಎಂದು ಅವಳು ಬೇಜಾರು ಮಾಡಿಕೊಂಡಿದ್ದಾಳೆ. ಬಳಿಕ ಆಕೆ ವಿಶ್ವನ ಮನೆಯಿಂದ ಆಚೆ ಬಂದಿದ್ದಾಳೆ. ಅಷ್ಟೊತ್ತಿಗೆ ವಿಶ್ವ ಜಾನು ಮುಂದೆ ಬಂದಿದ್ದಾನೆ. ಇನ್ನು ವಿಶ್ವನಿಂದ ಚಿನ್ನುಮರಿ ತಪ್ಪಿಸಿಕೊಳ್ಳೋಕೆ ಆಗಲ್ಲ.. ಮುಂದೆ ಇವರಿಬ್ರು ಏನೇನು ಮಾತಾಡಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದೀಗ ವಿಶ್ವನ ಬಳಿ ಜಾಹ್ನವಿ ತನ್ನ ಜೀವನದಲ್ಲಿ ಏನು ನಡೆಯಿತು? ಜಯಂತ್‌ ನ ಇನ್ನೊಂದು ಮುಖವನ್ನ ಬಯಲು ಮಾಡ್ಬೋದು. ಜಯಂತ್‌ ಕೆಟ್ಟವನು ಅಂತ ಗೊತ್ತಾದ್ಮೇಲೆ ಜಾನುನಾ ಮದುವೆ ಆಗೋ ಅವಕಾಶ ಇನ್ನೂ ಇದೆ ಅಂತ  ತನು ಜೊತೆ ವಿಶ್ವ ಬ್ರೇಕ್‌ಅಪ್‌ ಮಾಡಿಕೊಳ್ಳೋ ಸಾಧ್ಯತೆ ಇದೆ ಅಂತಾ ವೀಕ್ಷಕರೇ ಲೆಕ್ಕಾಚಾರ ಹಾಕಿದ್ದಾರೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

Shwetha M