ಲಕ್ಷ್ಮೀ ನಿವಾಸ ಸೀರಿಯಲ್‌ ಪ್ರೊಡ್ಯೂಸರ್ ಚೇಂಜ್‌.. ಆಕ್ಟರ್ಸ್‌ ಔಟ್!‌ – ಹೊಸ ನಿರ್ಮಾಪಕ ಸಂಭಾವನೆ ಕೊಡ್ತಿಲ್ವಾ?

ಲಕ್ಷ್ಮೀ ನಿವಾಸ ಸೀರಿಯಲ್‌ ಪ್ರೊಡ್ಯೂಸರ್ ಚೇಂಜ್‌.. ಆಕ್ಟರ್ಸ್‌ ಔಟ್!‌ – ಹೊಸ ನಿರ್ಮಾಪಕ ಸಂಭಾವನೆ ಕೊಡ್ತಿಲ್ವಾ?

ಲಕ್ಷ್ಮೀ ನಿವಾಸ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಳ್ತಿದೆ.. ಟಿಆರ್‌ಪಿ ರೇಸ್‌ನಲ್ಲೂ ಮುಂದಿದೆ. ಆದ್ರೆ ಇತ್ತೀಚೆಗೆ ಸೀರಿಯಲ್‌ ನಲ್ಲಿ ಪ್ರಮುಖ ಪಾತ್ರಗಳಲ್ಲಿ ಬದಲಾವಣೆ ಆಗ್ತಿದೆ.. ಕಳೆದ ಕೆಲ ದಿನಗಳ ಹಿಂದೆ ತನು ಪಾತ್ರ, ಹಾಗೇ ಲಕ್ಷ್ಮೀ ಪಾತ್ರದಲ್ಲೂ ನಟಿಯರ ಬದಲಾವಣೆ ಆಗಿತ್ತು. ಇದು ಸೀರಿಯಲ್‌ ಫ್ಯಾನ್ಸ್‌ ಗೆ ಬೇಸರ ತರಿಸಿತ್ತು. ಇದೀಗ ಮತ್ತೊಂದು ಶಾಕಿಂಗ್‌ ಸುದ್ಧಿ ಸೀರಿಯಲ್‌ ಫ್ಯಾನ್ಸ್‌ ಗೆ ಸಿಕ್ಕಿದೆ.. ಲಕ್ಷ್ಮೀ ನಿವಾಸ ಸೀರಿಯಲ್‌ ನ ಪ್ರಮುಖ ಪಾತ್ರಧಾರಿ ಸೀರಿಯಲ್‌ ನಿಂದ ಹೊರ ನಡೆದಿದ್ದಾರೆ.  ನರಸಿಂಹ ಪಾತ್ರಧಾರಿ ಅಶ್ವಥ್ ನೀನಾಸಂ ಸೀರಿಯಲ್‌ ನಿಂದ ಹೊರ ನಡೆದಿದ್ದಾರೆ.

ಇದನ್ನೂ ಓದಿ:ಮದ್ವೆಯಾಗದೇ ಗರ್ಭಿಣಿಯಾದ ಸ್ಯಾಂಡಲ್‌ವುಡ್ ನಟಿ! – ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಭಾವನ ‌

ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್‌ ಕೂಡ ಒಂದು. ಆರಂಭದಿಂದಲೂ ವೀಕ್ಷಕರ ಮನಗೆದ್ದಿದೆ. ಈ ಸೀರಿಯಲ್‌ನಲ್ಲಿ ಬರುವ ಒಬ್ಬೊಬ್ಬ ಕಲಾವಿದ ಕೂಡ ವೀಕ್ಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದ್ದರು. ಆದ್ರೀಗ ಒಬ್ಬೊಬ್ಬರೇ ಈ ಸೀರಿಯಲ್‌ನಿಂದ ಹೊರ ಹೋಗುತ್ತಿದ್ದಾರೆ. ಆ ಪಾತ್ರಕ್ಕೆ ಹೊಸ ನಟ  ನಟಿ ಎಂಟ್ರಿ ಆಗ್ತಿದೆ.. ಇತ್ತೀಚೆಗಷ್ಟೇ ಸೀರಿಯಲ್‌ ನ ಪ್ರಮುಖ ನಟಿ ಶ್ವೇತಾ ಲಕ್ಷ್ಮೀ ಪಾತ್ರಕ್ಕೆ  ಗುಡ್‌ಬೈ ಹೇಳಿದ್ರು.. ವೈಯಕ್ತಿಕ ಕಾರಣ ನೀಡಿ ಸೀರಿಯನಿಂದ ಹೊರ ನಡೆದ್ರು.. ಅದಕ್ಕೂ ಮುನ್ನ ತನು ಪಾತ್ರಕ್ಕೂ ನಟಿ ಯುಕ್ತ ಗುಡ್‌ಬೈ ಹೇಳಿದ್ರು.. ಇದೀಗ ಸೀರಿಯಲ್‌ ಫ್ಯಾನ್ಸ್‌ಗೆ ಮತ್ತೊಂದು ಶಾಕ್‌ ಎದುರಾಗಿದೆ. ಇದೀಗ ವಿಶ್ವನ ತಂದೆ ನರಸಿಂಹ ಪಾತ್ರದಲ್ಲಿ ನಟಿಸುತ್ತಿದ್ದ ಅಶ್ವಥ್ ನೀನಾಸಂ ಸೀರಿಯಲ್‌ ಗೆ ಗುಡ್‌ಬೈ ಹೇಳಿದ್ದಾರೆ. ಇದೀಗ ಇವ್ರ ಜಾಗಕ್ಕೆ ಬೇರೆ ನಟನ ಎಂಟ್ರಿಯಾಗಿದೆ.

ಹೌದು, ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಅಶ್ವಥ್‌ ನೀನಾಸಂ ನರಸಿಂಹ ಪಾತ್ರಕ್ಕೆ ಜೀವ ತುಂಬಿದ್ರು.. ನರಸಿಂಹ ಆಡುವ ಪ್ರತಿ ಮಾತಿನಲ್ಲೂ ತೂಕ ಇರ್ತಿತ್ತು.. ಆತನ ಗತ್ತು, ಗಾಂಭೀರ್ಯಕ್ಕೆ ವೀಕ್ಷಕರು ಫಿದಾ ಆಗಿದ್ರು.. ಆದ್ರೀಗ ಅಶ್ವಥ್‌ ಸೀರಿಯಲ್‌ ಗೆ ಗುಡ್‌ಬೈ ಹೇಳಿದ್ದಾರೆ.. ಇದೀಗ ನರಸಿಂಹ ಪಾತ್ರಕ್ಕೆ ನಟ  ಧರ್ಮೆಂದ್ರ ಎಂಟ್ರಿ ಕೊಟ್ಟಿದ್ದಾರೆ. ಇನ್ನುಮುಂದೆ ತೆರೆಮೇಲೆ ಧರ್ಮೇಂದ್ರ ನರಸಿಂಹನಾಗಿ ಮಿಂಚಲಿದ್ದಾರೆ. ಆದ್ರೆ ಸೀರಿಯಲ್‌ನಿಂದ ಒಬ್ಬೊಬ್ಬರೇ ಔಟ್‌ ಆಗ್ತಿದ್ದಂತೆ, ನಟ ನಟಿಯರು ಸೀರಿಯಲ್‌ ನಿಂದ ಹೊರಬರಲು ಏನ್‌ ಕಾರಣ ಅನ್ನೋ ಚರ್ಚೆ ನಡಿತಾ ಇದೆ. ಇದೀಗ ಶಾಕಿಂಗ್‌ ವಿಚಾರವೊಂದು ರಿವೀಲ್‌ ಆಗಿದೆ..

ಹೌದು, ಕಳೆದ ಕೆಲವು ದಿನಗಳಿಂದ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಲಕ್ಷ್ಮೀ ನಿವಾಸ ಸೀರಿಯಲ್‌ ನಿರ್ಮಾಪಕರು ಹಾಗೂ ಕಲಾವಿದರು, ತಂತ್ರಜ್ಞರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಹೀಗಾಗಿ ಸೀರಿಯಲ್‌ ನಿರ್ಮಾಪಕರು ಬದಲಾಗಿದ್ದಾರೆ. ಇದೀಗ ಜೀ ಕನ್ನಡ ವಾಹಿನಿ ಹೊಸ ನಿರ್ಮಾಪಕರನ್ನು ಕರೆತಂದಿದೆ. ಆದ್ರೆ ಹಿಂದಿದ್ದ ನಿರ್ಮಾಪಕರು ,ಕಲಾವಿದರು ಹಾಗೂ ತಂತ್ರಜ್ಞರಿಗೆ ನೀಡಬೇಕಿದ್ದ ಸಂಭಾವನೆಯನ್ನು ಉಳಿಸಿಕೊಂಡಿದ್ದಾರೆ. ಹೊಸದಾಗಿ ಸೇರ್ಪಡೆಯಾಗಿರುವ ನಿರ್ಮಾಪಕರು ಉಳಿಸಿಕೊಂಡಿರುವ ಸಂಭಾವನೆಯನ್ನು ನೀಡುವುದಕ್ಕೆ ಒಪ್ಪಿಲ್ಲ ಎಂದು ಹೇಳಲಾಗ್ತಿದೆ.. ಹೀಗಾಗಿ ಒಬ್ಬೊಬ್ಬರೇ ಈ ಧಾರಾವಾಹಿಯಿಂದ ಹೊರ ನಡೆಯುತ್ತಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸೀರಿಯಲ್‌ ಟೀಮ್‌ ಆಗ್ಲೀ.. ಯಾವ ಕಲಾವಿದರೂ ಮಾತನಾಡಿಲ್ಲ.. ಆದ್ರೆ ಸೀರಿಯಲ್‌ ಟೀಮ್‌ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇದೆ.. ಇದೇ ಕಾರಣಕ್ಕೆ ಒಬ್ಬೊಬ್ಬರೇ ಕಲಾವಿದರು ಈ ಸೀರಿಯಲ್‌ನಿಂದ ನಿರ್ಗಮಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಆದ್ರೆ ಒಳ್ಳೊಳ್ಳೆ ಕಲಾವಿದರು ಸೀರಿಯಲ್‌ ನಿಂದ ಹೊರ ಹೋಗುತ್ತಿರುವುದು ನಿಜಕ್ಕೂ ಎಫೆಕ್ಟ್‌ ಬೀಳಲಿದೆ. ಯಾಕಂದ್ರೆ ಸೀರಿಯಲ್‌ ನ ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕ, ವ್ಯಕ್ತಿತ್ವ ಇತ್ತು.. ಇದನ್ನ ಪ್ರೇಕ್ಷಕರು ಇಷ್ಟ ಪಟ್ಟಿದ್ರು.. ಇದೀಗ ಪ್ರಮುಖ ಪಾತ್ರಗಳಲ್ಲಿ ಬದಲಾವಣೆ ಆಗಿರೋದ್ರಿಂದ ಧಾರಾವಾಹಿಯ ಜನಪ್ರಿಯತೆಯನ್ನು ಕಡಿಮೆ ಆಗ್ಬೋದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.  ಹೀಗಾಗಿ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸೀರಿಯಲ್‌ ಟೀಮ್‌ ವೀಕ್ಷಕರನ್ನು ಹೇಗೆ ರಂಜಿಸುತ್ತೆ ಅನ್ನೋದನ್ನ ಕಾದು ನೋಡ್ಬೇಕು.

Shwetha M