ಜಾನು ನೆನಪು.. ಜಯಂತ್ ಗೆ ಹುಚ್ಚು.. ಚಿನ್ನುಮರಿ ಆತ್ಮಕ್ಕಾಗಿ ಹುಡುಕಾಟ – ಜಾಹ್ನವಿ ಸೈಕೋಪತಿ ಮುಖಾಮುಖಿ

ಜಾನು ಜಲಸಮಾಧಿಯಾಗಿದ್ದಾಳೆ ಅಂತಾ ಜಯಂತ್ ಹಾಗೂ ಲಕ್ಷ್ಮೀ ಮನೆಯವರು ಅಂದ್ಕೊಂಡಿದ್ದಾರೆ. ಆಕೆ ಬದುಕಿದ್ದಾಳೆ ಅಂತಾ ಯಾರಿಗೂ ಗೊತ್ತಿಲ್ಲ. ಆದ್ರೀಗ ಚಿನ್ನುಮರಿ ನೆನಪಲ್ಲಿ ಜಯಂತ್ ಮಾತ್ರ ಸೈಕೋ ಆಗ್ತಿದ್ದಾನೆ. ಆತ್ಮದ ಜೊತೆ ಮಾತಾಡ್ತೀನಿ ಅಂತಾ ಹೊರಟಿದ್ದಾನೆ. ಇತ್ತ ಜಾಹ್ನವಿ ಕೂಡ ತವರು ಮನೆಗೆ ಬಂದಿದ್ದಾಳೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಹಿರಿಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶ – ಸಂಜೆ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಲಕ್ಷ್ಮೀ ನಿವಾಸ ಸೀರಿಯಲ್ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಸೈಕೋ ಪತಿ ಜಯಂತ್ನಿಂದ ಮುಕ್ತಿ ಪಡೆಯಬೇಕು ಅಂತ ಜಾಹ್ನವಿ ಸಮುದ್ರಕ್ಕೆ ಹಾರಿದ್ದಳು. ಆದ್ರೆ, ಅಚ್ಚರಿಯ ಎಂಬಂತೆ ಜಾನೂ ಬದುಕಿ ಬಂದಿದ್ದಾಳೆ. ಆದ್ರೆ ಚಿನ್ನುಮರಿ ಬದುಕಿರೋ ವಿಚಾರ ಜಯಂತ್ ಆಗ್ಲೀ ಆಕೆಯ ಮನೆಯವರಿಗಾಗ್ಲೀ ತಿಳಿದಿಲ್ಲ. ಆದ್ರೆ ಜಯಂತ್ ಮಾತ್ರ ಚಿನ್ನುಮರಿ ಜೊತೆಗಿಲ್ಲ ಅಂತಾ ಕಣ್ಣೀರು ಹಾಕ್ತಿದ್ದಾನೆ. ಅವಳಿಲ್ಲದೇ ಆತನಿಗೆ ಒಂಟಿತನ ಕಾಡ್ತಿದೆ. ಹೀಗಾಗಿ ಆತ ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ. ಇದೀಗ ಸೈಕೋಪತಿ ಜಾಹ್ನವಿ ಆತ್ಮದ ಹುಡುಕಾಟಕ್ಕಾಗಿ ಹೊರಟಿದ್ದಾನೆ.
ಜಾಹ್ನವಿಯನ್ನ ಕಳ್ಕೊಂಡ ಮೇಲೆ ಜಯಂತ್ ಒಂಟಿಯಾಗಿದ್ದಾನೆ. ಹೀಗಾಗಿ ಆತ ತನ್ನ ಮನೆಗೆ ಬಾಲ್ಯದಲ್ಲಿ ಆರೈಕೆ ಮಾಡಿದ್ದ ಶಾಂತಮ್ಮಳನ್ನು ಕೆಲಸ ಮಾಡಲು ಕರೆಸಿಕೊಂಡಿದ್ದಾನೆ. ಆದ್ರೆ ಜಯಂತ್ ಬಗ್ಗೆ ತಿಳಿದುಕೊಂಡಿರೋ ಶಾಂತಮ್ಮ ಮೊದಲು ಬರಲು ಹಿಂದೇಟು ಹಾಕಿದ್ದಳು. ಆದ್ರೆ ಜಯಂತ್ ಕೈತುಂಬಾ ಹಣ ಕೊಟ್ಟಿದ್ದರಿಂದ ಗಂಡನ ಒತ್ತಾಯದಿಂದ ಶಾಂತಮ್ಮ ಸೈಕೋ ಮನೆ ಸೇರಿದ್ದಾಳೆ. ಇದೀಗ ಜಯಂತ್ ಮನೆಗೆ ಬಂದ ಶಾಂತಮ್ಮನಿಗೂ ನರಕ ತೋರಿಸಲು ಹೊರಟಿದ್ದಾನೆ. ಜಾನು ಕುಟುಂಬಸ್ಥರು ಹಾಲು-ತುಪ್ಪ ಬಿಡುವ ಕಾರ್ಯ ಮಾಡಿದ್ರು.. ಅದಾದ್ಮೇಲೆ ಜಯಂತ್ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ. ಇದನ್ನೂ ನೋಡಿ ಶಾಂತಮ್ಮ ಮಾತಾಡಲು ಆಗದೇ ಶಾಕ್ನಲ್ಲಿ ನಿಂತುಕೊಂಡಿದ್ದಾಳೆ. ಆ ಮಗು ಜಾನೂ ಕೂಡ ಜಯಂತ್ನ ಈ ರೀತಿಯ ವರ್ತನೆಗೆ ಬೇಸರಗೊಂಡಿದ್ದಳು ಅಂತ ಮಾತಾಡಿಕೊಳ್ಳುತ್ತಿದ್ದಾಳೆ. ಅಲ್ಲದೇ ರಾತ್ರಿ ಮಲಗಿಕೊಂಡಿದ್ದ ಶಾಂತಮ್ಮನನ್ನು ಎಬ್ಬಿಸಿ ಬನ್ನಿ ಜಾನೂ ಬಳಿ ಹೋಗಿ ಬರೋಣ ಅಂತ ಕರೆದುಕೊಂಡು ಹೋಗಿದ್ದಾನೆ ಜಯಂತ್. ಈ ಹೊತ್ತಲ್ಲೇ ಜಾನು ತನ್ನ ತವರು ಮನೆಗೆ ಬಂದಿದ್ದಾಳೆ.
ಜಾಹ್ನವಿ ರಾತ್ರಿ ವೇಳೆ ತಾಯಿಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಎಲ್ಲರೂ ಮಲಗಿದ್ದ ವೇಳೆ ತಂದೆ ತಾಯಿ ರೂಮ್ ಗೆ ಎಂಟ್ರಿ ಕೊಟ್ಟಿದ್ದಾಳೆ. ಇದೇ ಹೊತ್ತಲ್ಲಿ ಜಯಂತ್ ಕೂಡ ಜಾನು ಆತ್ಮದ ಜೊತೆ ಮಾತನಾಡ್ಬೇಕು ಅಂತಾ ಅಲ್ಲಿಗೆ ಬಂದಿದ್ದಾನೆ. ಜಾಹ್ನವಿ ಬದುಕಿರುವ ವಿಚಾರ ಎಲ್ಲರಿಗೂ ಗೊತ್ತಾಗುತ್ತಾ ಅಥವಾ ಜಾನುನನ್ನು ಸೈಕೋ ಜಯಂತ್ ನೋಡಿ ಬಿಡ್ತಾನಾ ಅಂತ ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.