ಸೈಕೋಪತಿ ವಿರುದ್ಧ ಜಾನು ಸೇಡು.. ಜಯಂತ್‌ ಗೆ ಕಾಡ್ತಿದೆ ಪಾಪಪ್ರಜ್ಞೆ – ಜೈಲಿಗೆ ಹೋಗ್ತಾನಾ ಸಿದ್ದೇಗೌಡ್ರು

ಸೈಕೋಪತಿ ವಿರುದ್ಧ ಜಾನು ಸೇಡು.. ಜಯಂತ್‌ ಗೆ ಕಾಡ್ತಿದೆ ಪಾಪಪ್ರಜ್ಞೆ – ಜೈಲಿಗೆ ಹೋಗ್ತಾನಾ ಸಿದ್ದೇಗೌಡ್ರು

ಜಾಹ್ನವಿಯನ್ನ ಕಳ್ಕೊಂಡಿರೋ ಜಯಂತ್‌ ಈಗ ಒಂಟಿಯಾಗಿದ್ದಾನೆ. ಚಿನ್ನುಮರಿ ನೆನಪಲ್ಲೇ ಕಣ್ಣೀರು ಹಾಕ್ತಿದ್ದಾನೆ. ಕೆಲಸ ಮಾಡೋಣ ಎಂದು ಲ್ಯಾಪ್‌ ಟಾಪ್‌ ಆನ್‌ ಮಾಡಿದ್ರು ಆಕೆಯದ್ದೇ ನೆನಪು ಕಾಡ್ತಿದೆ. ಇದೀಗ ಜಾಹ್ನವಿ ವಿಶ್ವನ ಪ್ರಪಂಚಕ್ಕೆ ಕಾಲಿಡ್ತಿದ್ದಾಳೆ. ಚಿನ್ನುಮರಿ ವಿಶ್ವನ ಜೊತೆ ಸೇರ್ಕೊಂಡು ಸೇಡು ತೀರಿಸಿಕೊಳ್ತಾಳಾ ಅನ್ನೋ ಕುತೂಹಲ ಮೂಡಿದೆ. ಅಷ್ಟೇ ಅಲ್ಲ ಸಿದ್ದೇ ಗೌಡರು ಈಗ ಜೈಲು ಸೇರ್ತಾನಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿ ಕೆಣಕಿದ DC – ಇಷ್ಟದ ಫುಡ್ ನೆಪದಲ್ಲಿ ಟಾರ್ಗೆಟ್

ಲಕ್ಷ್ಮೀ ನಿವಾಸ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಜಾಹ್ನವಿ ಸಮುದ್ರಕ್ಕೆ ಹಾರುತ್ತಿದ್ದಂತೆ ಆಕೆ ಸತ್ತೇ ಹೋದ್ಲು ಅಂತಾ ಜಯಂತ್‌ ಅಂದ್ಕೊಂಡಿದ್ದಾನೆ. ಹೀಗಾಗಿ ಜಯಂತ್‌ ಜಾಹ್ನವಿ ಮನೆಗೆ ಬಂದು ಆಕೆ ಸತ್ತು ಹೋದ್ಲು ಅಂತಾ ಹೇಳಿದ್ದಾನೆ. ಆತನ ಮಾತು ನಂಬಿ ಜಾಹ್ನವಿ ಮನೆಯವರು ಆಕೆಯನ್ನ ಹುಡುಕಿಸೋದು ಬಿಟ್ಟು, ಫೋಟೋ ಇಟ್ಟು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಇತ್ತ ಲಕ್ಷ್ಮೀ ಜಾನುವಿನ ಆಟಿಕೆ ಸಾಮಾನುಗಳು, ಅಂಗಿ, ಕಾಲ್ಗಜ್ಜೆ, ಬಳೆಗಳನ್ನು ಮುಂದೆ ಕಣ್ಣೀರು ಹಾಕುತ್ತಿದ್ದಾಳೆ. ನಮಗಿಂತ ಮೊದಲೇ ಜಾನು ಹೋದಳು. ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕು ಎಂದು ಶ್ರೀನಿವಾಸ್ ಸಹ ಕಣ್ಣೀರು ಹಾಕಿದ್ದಾನೆ.

ಇನ್ನು ಜಾಹ್ನವಿ ಸತ್ತಿದ್ದಾಳೆ ಎಂದು ಹೇಳಲು ಬಂದಿದ್ದ ಜಯಂತ್‌ ಲಕ್ಷ್ಮೀ ಮನೆಯಲ್ಲೇ ಉಳಿದುಕೊಂಡಿದ್ದ. ಈ ವೇಳೆ ನನ್ನಿಂದಾಗಿಯೇ ಜಾನು ಪ್ರಾಣ ಹೋಯ್ತು. ನಿಮ್ಮ ಬಳಿಯಲ್ಲಿದಿದ್ದರೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಿ. ಶ್ರೀಲಂಕಾಗೆ ಕರೆದುಕೊಂಡು ಹೋಗಿ ತಪ್ಪು ಮಾಡಿದೆ ಎಂದು ಶ್ರೀನಿವಾಸ್ ಮುಂದೆ ಜಯಂತ್ ಕಣ್ಣೀರು  ಹಾಕಿದ್ದಾನೆ. ಇದೀಗ ಇಲ್ಲೇ ಇದ್ರೆ ತನ್ನ ಸತ್ಯ ಎಲ್ಲರ ಮುಂದೆ ಬಯಲಾಗುತ್ತೆ ಅನ್ನೋ ಭಯ ಆತನಿಗೆ ಕಾಡ್ತಿದ್ರೆ, ಮತ್ತೊಂದ್ಕಡೆ ಆತನ ಕನಸಿನಲ್ಲಿ ಜಾನು ಬರ್ತಿದ್ದಾಳೆ. ಹೀಗಾಗಿ ಇಲ್ಲಿದ್ರೆ ತನಗೆ ಸೇಫ್‌ ಅಲ್ಲ ಅಂತಾ ಜಯಂತ್ ತನ್ನ ಮನೆಗೆ ಹೋಗಿದ್ದಾನೆ.

ಜಾಹ್ನವಿಯನ್ನ ಮದುವೆಯಾಗಿ ಬಂದ ಮೇಲೆ ಜಯಂತ್‌ ಬದುಕು ಬದಲಾಗಿತ್ತು. ಇಡೀ ದಿನ ಆಕೆಯದ್ದೇ ಜಪ ಮಾಡ್ತಿದ್ದ.. ಜಾನು ಮೇಲೆ ಪ್ರೀತಿಗಿಂತ ವ್ಯಾಮೋಹವೇ ಹೆಚ್ಚಾಗಿತ್ತು. ಹೀಗಾಗಿ ಚಿನ್ನುಮರಿಯನ್ನ ಪ್ರೀತಿ ಎಂಬ ಹೆಸರಿನಲ್ಲಿ ಪಂಜರದೊಳಗೆ ಕೂಡಿ ಹಾಕಿದ್ದ. ಇದ್ರಿಂದಾಗೆ ಈಗ ಜಾನು ದೂರವಾಗಿದ್ದಾಳೆ. ಇದೀಗ ಜಾಹ್ನವಿಯನ್ನ ಕಳೆದುಕೊಂಡಿರುವ ಜಯಂತ್‌ ಬದುಕು ಕಂಪ್ಲೀಟ್‌ ಚೇಂಜ್‌ ಆಗಿದೆ. ತನ್ನನ್ನ ಸೇಫ್‌ ಮಾಡಿಕೊಳ್ಳಲು ಯಾರ ಜೀವ ತೆಗಿಬೇಕು ಅಂತಾ ಯೋಚನೆ ಮಾಡ್ತಿದ್ದ ಜಯಂತ್‌ ಈಗ ಕಣ್ಣಿರಲ್ಲೇ ಕಾಲ ಕಳಿತಾ ಇದ್ದಾನೆ. ಆತನಿಗೆ ಈಗ ಒಂಟಿತನ ಕಾಡ್ತಿದೆ. ತನ್ನ ಮನೆಯಲ್ಲಿ ಒಂಟಿಯಾಗಿರುವ ಜಯಂತ್, ಮೊಬೈಲ್‌ನಲ್ಲಿರುವ ಜಾನು ಹೇಳಿದ ಹಾಡನ್ನು ಕೇಳುತ್ತಿದ್ದಾನೆ. ಆಕೆಯನ್ನ ನೆನೆದು ಕಣ್ಣೀರು ಹಾಕುತ್ತಿದ್ದಾನೆ. ಇದೀಗ ಜಯಂತ್‌ ಅವಸ್ಥೆಯನ್ನ ನೋಡಿ ವೀಕ್ಷಕರು ಈತ ಸೈಕೋ ಆದರೂ ಚಿನ್ನುಮರಿಯನ್ನು ತುಂಬಾನೇ ಪ್ರೀತಿಸುತ್ತಿದ್ದನು. ಜಯಂತ್ ನೋವು ನೋಡೋಕೆ ಆಗ್ತಿಲ್ಲ ಅಂತ ಹೇಳಿದ್ರೆ, ಇನ್ನೂ ಕೆಲವರು ಜಾಹ್ನವಿ ಮರೆಯಲ್ಲೇ ಇದ್ದು ಜಯಂತ್‌ ವಿರುದ್ಧ ಸೇಡು ತೀರಿಸಿಕೊಳ್ಬೋದು ಅಂತಾ ಕಾಮೆಂಟ್‌ ಮಾಡ್ತಿದ್ದಾರೆ.

ಮತ್ತೊಂದ್ಕಡೆ, ಸಿದ್ದೇಗೌಡ್ರನ್ನ ಕಾಪಾಡಲು ಆತನ ಮನೆಯವರು ವೆಂಕಿಯನ್ನ ಜೈಲಿಗೆ ಕಳುಹಿಸಿದ್ದಾರೆ. ಆದ್ರೆ ಈ ವಿಚಾರ ಲಕ್ಷ್ಮೀ ಮನೆಯವರಿಗಾಗಲಿ ಗೊತ್ತಿಲ್ಲ. ಸಿದ್ದೇಗೌಡ್ರಿಗೂ ತನ್ನ ಬದಲು ಬೇರೆಯವರು ಜೈಲಿನಲ್ಲಿ ಇದ್ದಾರೆ ಅಂತಾ ಮಾತ್ರ ಗೊತ್ತು. ಹೀಗಾಗಿ ಸಿದ್ದೇಗೌಡ್ರು ಆ ವ್ಯಕ್ತಿಯನ್ನ ಮೀಟ್‌ ಆಗ್ಬೇಕು ಅಂತಾ ಹೇಳಿದ್ದಾನೆ. ವೆಂಕಿ ಕಾಣೆಯಾಗಿದ್ದಾನೆ ಅಂತಾ ಚೆಲುವಿ ಅಂದ್ಕೊಂಡಿದ್ದಾಳೆ. ಹೀಗಾಗೇ ಆಕೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ. ಆದ್ರೆ ವೆಂಕಿ ಜೈಲಿನಲ್ಲಿ ಇದ್ದಾನೆ ಚೆಲುವಿಗೆ ಗೊತ್ತಿಲ್ಲ. ಅತ್ತೆಯ ಹಾರ್ಟ್ ಆಪರೇಷನ್‌ಗೆ ಹಣ ಹೊಂದಿಸಲು ಮಾಡದೇ ಇರೋ ತಪ್ಪನ್ನು ಒಪ್ಪಿಕೊಂಡು ವೆಂಕಿ ಜೈಲುಪಾಲಾಗಿದ್ದಾನೆ. ಇದೀಗ ಶ್ರೀನಿವಾಸ್‌ ಗೆ ಚೆಲುವಿ ವೆಂಕಿ ಮಿಸ್‌ ಆಗಿರೋ ವಿಚಾರವನ್ನ ಹೇಳಿದ್ದಾಳೆ. ಈ ಸುದ್ದಿ ಕೇಳ್ತಿದ್ದಂತೆ ಶ್ರೀನಿವಾಸ್‌ ಶಾಕ್‌ ಆಗಿದ್ದಾರೆ. ಬಳಿಕ ಶ್ರೀನಿವಾಸ್‌ ಸಿದ್ದೇಗೌಡ್ರು ಹಾಗೂ ಭಾವನಾಗೆ ಈ ವಿಚಾರ ತಿಳಿಸಿದ್ದಾರೆ. ಇದೀಗ ವೆಂಕಿಯೇ ಸಿದ್ದೇಗೌಡ್ರನ್ನ ಕಾಪಾಡಲು ಜೈಲಿಗೆ ಹೋಗಿದ್ದಾನೆ ಅಂತಾ ಗೊತ್ತಾದ್ರೆ ಆತ ಇದನ್ನ ಸಹಿಸೋದಿಲ್ಲ.. ವೆಂಕಿಯನ್ನ ಜೈಲಿನಿಂದ ಬಿಡಿಸಿ, ಆತನೇ ತನ್ನ ತಪ್ಪನ್ನ ಒಪ್ಪಿಕೊಂಡು ಜೈಲಿಗೆ ಹೋಗುವ ಸಾಧ್ಯತೆ ಇದೆ ಅಂತಾ ಸೀರಿಯಲ್‌ ಫ್ಯಾನ್ಸ್‌ ಊಹೆ ಮಾಡ್ತಿದೆ.

Shwetha M

Leave a Reply

Your email address will not be published. Required fields are marked *