ವಿಶ್ವನ ಬಾಳಿಗೆ ಜಾಹ್ನವಿ ಎಂಟ್ರಿ! – ಜೈಲು ಸೇರ್ತಾನಾ ಸೈಕೋ ಜಯಂತ್‌?

ವಿಶ್ವನ ಬಾಳಿಗೆ ಜಾಹ್ನವಿ ಎಂಟ್ರಿ! – ಜೈಲು ಸೇರ್ತಾನಾ ಸೈಕೋ ಜಯಂತ್‌?

ಜಾಹ್ನವಿ ಸಮುದ್ರಕ್ಕೆ ಹಾರುತ್ತಿದ್ದಂತೆ ಆಕೆ ಸತ್ತು ಹೋದ್ಲು.. ಜಯಂತ್‌ ನ ಚಿನ್ನುಮರಿ ಇನ್ನು ವಾಪಾಸ್‌ ಬರಲ್ಲ.. ಈ ಪಾತ್ರವೇ ಎಂಡ್‌ ಆಯ್ತು ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ಸೀರಿಯಲ್‌ ಡೈರೆಕ್ಟರ್‌ ವೀಕ್ಷಕರ ಲೆಕ್ಕಾಚಾರ ಫುಲ್‌ ಉಲ್ಟಾ ಮಾಡಿದ್ದಾರೆ. ಜಾಹ್ನವಿ ಬದುಕಿ ಬಂದಿದ್ದಾಳೆ. ವಿಶ್ವನ ತಂದೆ ಜೊತೆ ಕಾರಿನಲ್ಲಿ ಹೊರಟಿದ್ದಾಳೆ. ಹಾಗಾದ್ರೆ ಜಾಹ್ನವಿ ವಿಶ್ವ ಜೊತೆ ಸೇರ್ಕೊಂಡು ಜಯಂತ್‌ ನ ಜೈಲಿಗೆ ಕಳಿಸ್ತಾಳಾ? ಬಳಿಕ ಆತನನ್ನೇ ಮದ್ವೆ ಆಗ್ತಾಳಾ? ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡ್ತಿದೆ.

ಇದನ್ನೂ ಓದಿ: ಇಂದು ಸೋದರರ ನಡುವೆ ಕದನ- ಆರ್ಸಿಬಿ Vs ಮುಂಬೈ ಪಂದ್ಯದಲ್ಲಿ ಗೆಲ್ಲೋದು ಯಾರು?

ಜಾಹ್ನವಿ ಸಮುದ್ರಕ್ಕೆ ಹಾರುತ್ತಿದ್ದಂತೆ ಈ ಪಾತ್ರವೇ ಮುಕ್ತಾಯ ಆಯ್ತು ಅನ್ನೋ ತರವೇ ತೋರಿಸಲಾಗಿತ್ತು. ಬಳಿಕ ಜಯಂತ್‌ ಕೂಡ ಇಂಡಿಯಾಗೆ ಬಂದು ಜಾನು ಮನೆಯವರ ಬಳಿ ಈ ವಿಚಾರ ತಿಳಿಸಿದ್ದ. ಜಯಂತ್‌ ಈ ವಿಚಾರ ಹೇಳ್ತಿದ್ದಂತೆ ಜಾಹ್ನವಿ ಮನೆಯವರು ಕಣ್ಣೀರಲ್ಲೇ ಕಾಲ ಕಳಿತಾ ಇದ್ದಾರೆ. ಅಷ್ಟೇ ಅಲದಲ ಲಕ್ಷ್ಮೀ ಮನೆಯಲ್ಲಿ ಜಾನು ಫೋಟೋಗೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಇತ್ತ ತನ್ಮೇಲೆ ಯಾವುದೇ ಅನುಮಾನ ಬಂದಿಲ್ಲ ಎಂದು ಜಯಂತ್ ನಿಟ್ಟುಸಿರು ಬಿಟ್ಟಿದ್ದಾನೆ.  ಮತ್ತೊಂದ್ಕಡೆ ಜಾಹ್ನವಿ ಮೀನುಗಾರರ ಕೈಗೆ ಸಿಕ್ಕಿದ್ದಾಳೆ. ಆಕೆ ಸಿಗ್ತಿದ್ದಂತೆ ಆಕೆಗೆ ಮೆಮೊರಿ ಲಾಸ್‌ ಆಗಿರೋ ಸಾಧ್ಯ ಇದೆ ಅಂತಾ ವೀಕ್ಷಕರು ಊಹೆ ಮಾಡಿದ್ರು.. ಆದರೀಗ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ. ಜಾನುಗೆ ಹಳೆಯದ್ದೆಲ್ಲಾ ನೆನಪಿದೆ. ಈಗ ಆಕೆಗೆ ವಿಶ್ವನ ಪ್ರಪಂಚಕ್ಕೆ ಕಾಲಿಡ್ತಿದ್ದಾಳೆ.

ಶ್ರೀಲಂಕಾ ಸಮುದ್ರಕ್ಕೆ ಹಾರಿದ್ದ ಚಿನ್ನುಮರಿ, ಚೆನ್ನೈನ ಕಡಲತೀರದಲ್ಲಿ ಪತ್ತೆಯಾಗಿದ್ದಳು. ಅಲ್ಲಿಯ ಮೀನುಗಾರರು ಜಾಹ್ನವಿಯನ್ನು ರಕ್ಷಣೆ ಮಾಡಿದ್ದರು. ಇದೇ ವೇಳೆ ಅಲ್ಲಿಗೆ ಬಂದಿದ್ದ ವಿಶ್ವನ ತಂದೆ ನರಸಿಂಹಯ್ಯ ಪೊಲೀಸರಿಗೆ ಮಾಹಿತಿ ನೀಡಿ ಹೇಳಿ ಎಂದು ಅಲ್ಲಿಯ ಮೀನುಗಾರರಿಗೆ ಹೇಳಿದ್ರು.. ಈ ವೇಳೆ ಜಾನುಗೆ ಪ್ರಜ್ಞೆ ಬಂದಿದೆ. ಜಾಹ್ನವಿಗೆ ಎಚ್ಚರ ಆಗ್ತಿದ್ದಂತೆ ನಾನಿನ್ನು ಬದುಕಿದ್ದೆನಾ? ಸತ್ತಿಲ್ಲವಾ? ಎಂದು ಚಿನ್ನುಮರಿ ಶಾಕ್‌ ಆಗಿದ್ದಾಳೆ. ಪಕ್ಕದಲ್ಲಿ ಪೊಲೀಸರು ಬರುತ್ತಿರೋದನ್ನು ನೋಡಿದ ಜಾನು, ಮತ್ತೆ ನನ್ನನ್ನು  ಜಯಂತ್ ಬಳಿ ಕಳುಹಿಸಿದ್ರೆ ಅಂತಾ ಭಯಗೊಂಡಿದ್ದಾಳೆ. ಕೂಡಲೇ ಅಲ್ಲಿನ ಜಾನು ಅಲ್ಲಿಂದ ಎಸ್ಕೇಪ್‌ ಆಗಿದ್ದಾಳೆ.  ಇತ್ತ ಬೋಟ್‌ನಲ್ಲಿ ಮಲಗಿದ್ದ ಜಾನು ದಿಡೀರ್ ಅಂತ ಕಾಣಿಸದಿದ್ದಾಗ ಮೀನುಗಾರರು ಮತ್ತು ಪೊಲೀಸರು ಮತ್ತೆ ಹುಡುಕಲು ಆರಂಭಿಸುತ್ತಾರೆ. ಆದ್ರೆ ಅಲ್ಲಿಂದ  ತಪ್ಪಿಸಿಕೊಂಡ ಜಾಹ್ನವಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಿಶ್ವನ ತಂದೆ ನರಸಿಂಹಯ್ಯ ಕಾರ್ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದಾಳೆ.

ಇದೀಗ ಜಾಹ್ನವಿ ವಿಶ್ವನ ತಂದೆ ಕಾರ್‌ ಹತ್ತಿದ್ದಾಳೆ. ಇದೀಗ ಚೆನ್ನೈ ಬೀಚ್‌ ನೇರವಾಗಿ ವಿಶ್ವನ ಮನೆ ತಲುಪೋದು ಪಕ್ಕಾ ಆಗಿದೆ. ಆದ್ರೆ ವಿಶ್ವನ ತಂದೆ ಮುಂದೆ ಜಾನು ಏನು ಹೇಳುತ್ತಾಳೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ. ತನ್ನ ಜೊತೆ ವ್ಯವಹಾರ ನಡೆಸುವ ಜಯಂತ್ ಗಂಡ್ತಿಯೇ ಜಾನು ಎಂಬ ವಿಷಯ ವಿಶ್ವನ ತಂದೆಗೂ ಗೊತ್ತಿಲ್ಲ.  ಇದೀಗ ಜಾಹ್ನವಿ ವಿಶ್ವನ ಮನೆಯಲ್ಲೇ ಉಳ್ಕೊಳ್ತಾಳಾ? ವಿಶ್ವ ಜಾಹ್ನವಿ ಒಂದಾಗ್ತಾರಾ? ಜಾಹ್ನವಿ ಲೈಫ್‌ ನಲ್ಲಿ ಏನೆಲ್ಲಾ ಟ್ವಿಸ್ಟ್‌ ಕಾದಿದೆ ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ. ಒಟ್ಟಿನಲ್ಲಿ ಇಲ್ಲಿಂದ ಜಾನು ಬದುಕಿನಲ್ಲಿ ಮಹಾತಿರುವು ಸಿಗಲಿದೆ ಎಂಬ ಸುಳಿವನ್ನು ನಿರ್ದೇಶಕರು ನೀಡಿದ್ದಾರೆ.

Shwetha M

Leave a Reply

Your email address will not be published. Required fields are marked *