ಜಾನು ಪಾತ್ರಕ್ಕೆ ಚಂದನ ಗುಡ್‌ಬೈ? – ಚಿನ್ನುಮರಿ ಪಾತ್ರ ಎಂಡ್?

ಜಯಂತ್ ಗೆ ಜಾಹ್ನವಿ ಮೇಲೆ ಪ್ರೀತಿಯೋ, ವ್ಯಾಮೋಹವೋ ಗೊತ್ತಿಲ್ಲ.. ಹೀಗಾಗೇ ಜಾಹ್ನವಿ ಜೊತೆ ಕ್ಲೋಸ್ ಆದವರ ಕತೆಯನ್ನೇ ಕ್ಲೋಸ್ ಮಾಡಿದ್ದಾನೆ ಜಯಂತ್.. ಇದೀಗ ತನ್ನ ಗಂಡನ ಕೃತ್ಯಗಳೆಲ್ಲಾ ಜಾಹ್ನವಿ ಮುಂದೆ ಬಯಲಾಗಿದೆ. ಸೈಕೋ ವರ್ತನೆಯಿಂದ ಬೇಸತ್ತ ಜಾಹ್ನವಿ ಮಹಾ ನಿರ್ಧಾರವನ್ನೇ ತೆಗೆದುಕೊಂಡಿದ್ದಾಳೆ. ಜಯಂತ್ ನ ಕಟ್ಟಿ ಹಾಕಿ ತಾನೇ ಸಮುದ್ರಕ್ಕೆ ಹಾರಿದ್ದಾಳೆ. ಜಾಹ್ನವಿ ಸಮುದ್ರಕ್ಕೆ ಹಾರ್ತಿದ್ದಂತೆ ವೀಕ್ಷಕರಿಗೆ ನಾನಾ ಪ್ರಶ್ನೆ ಕಾಡ್ತಿದೆ. ಚಿನ್ನುಮರಿ ಪಾತ್ರಕ್ಕೆ ನಟಿ ಚಂದನ ಗುಡ್‌ಬೈ ಹೇಳಿದ್ರಾ? ಜಾಹ್ನವಿ ಪಾತ್ರ ಎಂಡ್ ಆಯ್ತಾ ಅಂತಾ ಕೇಳ್ತಿದ್ದಾರೆ.
ಇದನ್ನೂ ಓದಿ:ವೈರಲ್ ಆಗೋಕೆ ಹೀಗೆಲ್ಲಾ ಮಾಡ್ತಾರಾ? – ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್ ಮಾಡಿದ ಯುವಕರು!
ಲಕ್ಷ್ಮೀ ಬಾರಮ್ಮ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಪ್ರೀತಿ ಹೆಸರಲ್ಲಿ ಜಯಂತ್ ಜಾಹ್ನವಿಯನ್ನ ಮನೆಯಲ್ಲೇ ಕೂಡಿಹಾಕಿದ್ದ.. ಆದ್ರೀಗ ಚಿನ್ನುಮರಿಗೆ ಗಂಡನ ಸೈಕೋತನ ಗೊತ್ತಾಗಿದೆ. ನನಗೋಸ್ಕರ ಜಯಂತ್ ಬೇರೆಯವರಿಗೆ ಕಷ್ಟಕೊಡ್ತಾನೆ ಅಂತಾ ಗೊತ್ತಾಗಿದೆ. ಹೀಗಾಗೇ ಜಾಹ್ನವಿ ಸೈಕೋ ಅವತಾರ ಎತ್ತಿದ್ದಾಳೆ. ಶ್ರೀಲಂಕಾಗೆ ಹೋಗ್ತಿದ್ದಂತೆ ಜಯಂತ್ ನ ಫ್ರೆಂಡ್ ಅನ್ನ ಮೀಟ್ ಆಗಿ ಎಲ್ಲಾ ವಿಚಾರ ತಿಳ್ಕೊಂಡಿದ್ದಾಳೆ. ಗಂಡನ ಕೃತ್ಯವೆಲ್ಲಾ ತಿಳಿದ ಜಾನು, ಶಾಕ್ ಆಗಿದ್ದಾಳೆ. ಅಷ್ಟೇ ಅಲ್ಲ ಮಹಾ ನಿರ್ಧಾರ ತೆಗೆದುಕೊಂಡಿದ್ದಾಳೆ.
ಜಯಂತ್ ನ ಕ್ರೂಸ್ ನಲ್ಲಿ ಕರ್ಕೊಂಡು ಹೋದ ಜಾನು, ಪ್ರೀತಿಯಿಂದ ನಿಮ್ಮನ್ನು ಕಟ್ಟಿಹಾಕ್ತೀನಿ ಅಂತ ಹೇಳಿ, ಆತನನ್ನ ಹಗ್ಗದಿಂದ ಕಟ್ಟಿಹಾಕಿದ್ದಾಳೆ. ಇದು ಜಯಂತ್‌ಗೆ ಶಾಕ್ ಆಗಿದೆ. ಈ ಹಗ್ಗದಿಂದ ನೀವು ಹೇಗೆ ಬಿಡಿಸಿಕೊಳ್ಳೋಕೆ ಆಗೋದಿಲ್ಲವೋ ಹಾಗೆ ನಿಮ್ಮ ಪ್ರೀತಿಯಿಂದ ನಾನು ಬಿಡಿಸಿಕೊಳ್ಳೋಕೆ ಆಗೋದಿಲ್ಲ ಎಂದು ಜಾನು ಪರೋಕ್ಷವಾಗಿ ಹೇಳಿದ್ದಾಳೆ. ಆಗ ಜಯಂತ್, ಪ್ರೀತಿ ಮಾಡಿದೋರನ್ನು ಕಟ್ಟಿಹಾಕೋದು ತಪ್ಪಲ್ವಾ? ಅಂತ ಕೇಳಿದ್ದಾನೆ. ಆಗ ಜಾನು, ನಿಮ್ಮ ಪ್ರೀತಿಯಲ್ಲಿ ಕುರುಡಿ ಆಗಿದ್ದೆ. ನೀವು ಕಟ್ಟಿಹಾಕಿದ್ದ ಪ್ರೀತಿಯಲ್ಲಿ ನಾನು ನರಳಾಡುತ್ತಿದ್ದೆ, ಇದು ನಿಮಗೆ ಅರ್ಥ ಆಗಲ್ವಾ? ಆದರೆ ಇದಕ್ಕೆಲ್ಲ ಅಂತ್ಯ ಇನ್ನೋದು ಇದ್ದೇ ಇರುತ್ತೆ ಅಲ್ವಾ? ಎಂದು ಹೇಳಿದ್ದಾಳೆ. ಪ್ರೀತಿ ಎನ್ನೋ ನೆಪದಲ್ಲಿ ನನ್ನ ಮದುವೆಯಾಗಿ ಜೀವನ ಹಾಳು ಮಾಡಿದ್ರಿ. ನನ್ನ ಅಜ್ಜಿಗೂ ಎಂಥ ಪರಿಸ್ಥಿತಿ ತಂದಿಟ್ರಿ. ನನ್ನ ವೆಂಕಿ ಅಣ್ಣನ ಜೀವನ ಹಾಳು ಮಾಡಿದ್ರಿ. ವೆಂಕಿ ಅಣ್ಣ ಹುಡುಕುತ್ತಿರೋ ಫ್ರೆಂಡ್ ನೀವೆ ಅಂತ ನನಗೆ ಯಾಕೆ ಹೇಳಿಲ್ಲ? ನನ್ನ ಅಣ್ಣ ಕಣ್ಣೀರಿಟ್ರೂ ನಿಮ್ಮ ಮನಸ್ಸು ಕರಗಿಲ್ಲ ಅಲ್ವಾ? ನಿಮ್ಮ ಪ್ರೀತಿ, ಪ್ರೀತಿಯಲ್ಲ, ಅದು ಕ್ರೂರತೆ ಎನ್ನೋದು ಅರ್ಥ ಆಗೋಕೆ ಇಷ್ಟುದಿನ ಬೇಕಾಯ್ತು. ಇಷ್ಟೆಲ್ಲ ಮಾಡಿರೋ ನಿಮ್ಮನ್ನು ನಾನು ಸುಮ್ಮನೆ ಬಿಡಬೇಕಾ? ನೀವೇ ನಿಮ್ಮನ್ನು ಕೊಲ್ಲೋ ಸ್ಥಿತಿಗೆ ತಂದಿಟ್ಟಿದ್ದೀರಿ? ನನ್ನನ್ನು ಇಷ್ಟೊಂದು ಪ್ರೀತಿಸುವ ನಿಮ್ಮನ್ನು ನಾನು ಕೊಲ್ಲೋಕೆ ಆಗೋದಿಲ್ಲ. ನಿಮ್ಮನ್ನು ಹಾಗೆ ಬಿಟ್ಟರೆ ನನ್ನವರನ್ನು ನೀವು ಸುಮ್ಮನೆ ಬಿಡೋದಿಲ್ಲ ಅಂತ ಜಾನು ಗೋಗರೆದಿದ್ದಾಳೆ. ನೀವು ಮಾಡಿರೋ ಪಾಪ ಕರ್ಮಕ್ಕೆ ನೀವು ಒಂದೇ ಸಲ ಸಾಯಬಾರದು, ನರಳಿ ನರಳಿ ಸಾಯಬೇಕು ಅಂತಾ ಹೇಳಿ ಜಾನು ಸಮುದ್ರಕ್ಕೆ ಹಾರಿದ್ದಾಳೆ. ಇದನ್ನು ಕಂಡು ಜಯಂತ್ ಕಣ್ಣೀರು ಹಾಕಿದ್ದಾನೆ.
ಜಾನು ಸಮುದ್ರಕ್ಕೆ ಹಾರುತ್ತಿದ್ದಂತೆ ಜಯಂತ್ ಹಗ್ಗದಿಂದ ಬಿಡಿಸಿಕೊಂಡು ಗೋಳಾಡಿದ್ದಾನೆ. ಬಳಿಕ ಜಯಂತ್ ಒಂಟಿಯಾಗಿ ಭಾರತಕ್ಕೆ ಬಂದಿದ್ದಾನೆ. ಕಾಲು ಜಾರಿ ಜಾಹ್ನವಿ ಸಮುದ್ರಕ್ಕೆ ಬಿದ್ದಿದ್ದಾಳೆ ಅಂತ ಅವನು ಎಲ್ಲರ ಮುಂದೆ ಹೇಳಿದ್ದಾನೆ. ಈ ಮಾತು ಕೇಳಿ ಲಕ್ಷ್ಮೀ ಮನೆಯವರು ಶಾಕ್ ಆಗಿದ್ದಾರೆ. ಆದ್ರೀಗ ವೀಕ್ಷಕರು ಈ ಸೀನ್ ನೋಡಿ ಬೇರೆಯದ್ದೇ ಲೆಕ್ಕಾಚಾರ ಹಾಕಿದ್ದಾರೆ.
ಜಾನು ಸಮುದ್ರಕ್ಕೆ ಹಾರುತ್ತಿದ್ದಂತೆ, ಈ ಪಾತ್ರಧಾರಿಯನ್ನ ಬದಲಾಯಿಸಲು ಈ ರೀತಿ ಮಾಡಲಾಗಿದ್ಯಾ? ಚಂದನಾ ಅನಂತಕೃಷ್ಣ ಈ ಪಾತ್ರಕ್ಕೆ ಗುಡ್‌ಬೈ ಹೇಳಿದ್ರಾ? ಜಾಹ್ನವಿ ಪಾತ್ರಕ್ಕೆ ಬೇರೆ ಯಾರಾದರೂ ಬರ್ತಾರಾ? ಅಥವಾ ಜಾನು ಪಾತ್ರ ಅಂತ್ಯ ಆಗೋಯ್ತಾ? ನಿಜಕ್ಕೂ ಜಾಹ್ನವಿ ಸಾಯ್ತಾಳಾ ಎನ್ನುವ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.. ಒಟ್ಟಿನಲ್ಲಿ ಈ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.