ಜಯಂತ್ ಕಾಟ.. ಜಾನು ಸೂಸೈಡ್.. – ಇಬ್ಬರನ್ನ ಕಾಪಾಡೋರು ಯಾರು?

ಜಯಂತ್ ಕೃತ್ಯ ಜಾಹ್ನವಿಗೆ ಯಾವಾಗ ಗೊತ್ತಾಯ್ತೋ ಅಲ್ಲಿಂದ ಆಕೆ ಕಂಪ್ಲೀಟ್ ಚೇಂಜ್ ಆಗಿದ್ದಾಳೆ.. ಆತನ ವಿರುದ್ಧ ಒಂದೊಂದಾಗೇ ರಿವೇಂಜ್ ತೀರಿಸಿಕೊಳ್ತಿದ್ದಾಳೆ. ಜಾನು ಚೇಂಜ್ ಆಗ್ತಿದ್ದಂತೆ ಜಯಂತ್ ಆಕೆಗೆ ಚೇಂಜಸ್ ಬೇಕು ಅಂತಾ ಶ್ರೀಲಂಕಾಗೆ ಕರ್ಕೊಂಡು ಹೋಗಿದ್ದ.. ಆದ್ರೆ ಜಾನು.. ಜಯಂತ್ ಪನಿಷ್ಮೆಂಟ್ ಕೊಡೋ ಬದಲು ಆಕೆಯೇ ಸಮುದ್ರಕ್ಕೆ ಜಿಗಿದಿದ್ದಾಳೆ.. ಹಾಗಾದ್ರೆ ಜಾಹ್ನವಿ ಸಾಯ್ತಾಳಾ? ಜಯಂತ್ ಕತೆ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಏ.2ಕ್ಕೆ ದೆಹಲಿಯಲ್ಲಿ ಹೊಸ ಕರ್ನಾಟಕ ಭವನ ಉದ್ಘಾಟನೆ
ಲಕ್ಷ್ಮೀ ನಿವಾಸ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಸೀರಿಯಲ್ ಡೈರೆಕ್ಟರ್ ಕೊಟ್ಟ ಟ್ವಿಸ್ಟ್ ಗೆ ವೀಕ್ಷಕರು ದಂಗಾಗಿ ಹೋಗಿದ್ದಾರೆ. ಜಾಹ್ನವಿ ಚೇಂಜ್ ಆಗ್ತಿದ್ದಂತೆ ಜಯಂತ್ ಆಕೆ ಮೈಂಡ್ ಫ್ರೀ ಆಗ್ಲಿ ಅಂತಾ ಶ್ರೀಲಂಕಾಗೆ ಕರ್ಕೊಂಡು ಹೋಗಿದ್ರು.. ಅಲ್ಲಿ ಜಯಂತ್ -ಜಾಹ್ನವಿ ಮತ್ತು ಭಾವನಾ ಸಿದ್ದೇಗೌಡ್ರು ಶ್ರೀಲಂಕಾದಲ್ಲಿ ಮುಖಾಮುಖಿಯಾಗಿದ್ರು.. ಎಲ್ಲರೂ ಸೇರಿ ಒಂದಷ್ಟು ಸ್ಥಳಗಳನ್ನು ಸುತ್ತಾಡಿದ್ದಾರೆ. ಒಟ್ಟಿಗೆ ಊಟ ಮಾಡಿದ್ರು.. ಅದಾದ್ಮೇಲೆ ಜಯಂತ್ ಜಾನು ರೂಮ್ ಗೆ ಬಂದಿದ್ದಾರೆ. ಜಯಂತನಿಗೂ ನಿದ್ದೆ ಮಾತ್ರೆ ನೀಡಿ, ಸಚಿನ್ ಜತೆಗೆ ಜಯಂತ್‌ನ ಇನ್ನೊಂದು ಮುಖವನ್ನು ತಿಳಿದುಕೊಂಡಿದ್ದಾಳೆ. ಜಯಂತನ ಅಸಲಿ ಹೆಸರು, ಆತನ ಊರು ಎಲ್ಲವನ್ನೂ ತಿಳ್ಕೊಂಡಿದ್ದಾರೆ.. ಸತ್ಯ ಗೊತ್ತಾದ ಜಾನು ಫುಲ್ ಶಾಕ್ ಆಗಿದ್ದಾಳೆ.. ಎಂಥ ವ್ಯಕ್ತಿಯನ್ನು ನಾನು ಮದುವೆಯಾದೆ, ಇವನನ್ನು ಕ್ಷಮಿಸುವುದಾದರೂ ಹೇಗೆ? ಇವನ ಜೊತೆ ನಾನು ಹೇಗೆ ಬದುಕಲಿ? ಅಂತಾ ಜಾಹ್ನವಿ ಹೇಳಿಕೊಂಡಿದ್ದಾಳೆ.. ಇಷ್ಟೆಲ್ಲಾ ಆದ್ಮೇಲೆ ಜಾನು ಒಂದು ಶಾಕಿಂಗ್ ನಿರ್ಧಾರ ತೆಗದುಕೊಂಡಿದ್ದಾಳೆ.. ಆಕೆ ಜಯಂತ್ ಗೆ ಶಿಕ್ಷೆ ಕೊಡೋ ಬದಲು ಸಾಯುವ ನಿರ್ಧಾರಕ್ಕೆ ಬಂದಿದ್ದಾಳೆ.
ಹೌದು. ಕ್ರೂಸ್ ನಲ್ಲಿ ಜಾನು ಜಯಂತ್ ನನ್ನ ಹಡಗಿನಲ್ಲಿದ್ದ ಕುರ್ಚಿ ಮೇಲೆ ಕೂರಿಸಿ, ಹಗ್ಗದಿಂದ ಕಟ್ಟಿದ್ದಾಳೆ.. ಬಳಿಕ ಚಾಕುವನ್ನ ಎತ್ತಿಕೊಂಡಿದ್ದಾಳೆ. ಆಕೆಯ ವರ್ತನೆ ನೋಡಿ ಜಾನು ಜಯಂತ್ ನ ಸಾಯಿಸ್ತಾಳೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ಅಲ್ಲಾಗಿದ್ದೇ ಬೇರೆ.. ಪ್ರೀತಿ ಅನ್ನೋದು ಹೂವಿನ ಮೇಲೆ ನಡೆಯೋದು… ಅಪ್ಪ ಅಮ್ಮ ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ. ಇದನ್ನು ನನ್ನ ಕೈಯಿಂದ ಸಹಿಸಿಕೊಳ್ಳಲು ಆಗ್ತಿಲ್ಲ ಎಂದು ಹೇಳಿ ಸಮುದ್ರಕ್ಕೆಹಾರಿಯೇ ಬಿಟ್ಟಿದ್ದಾಳೆ. ಹಾಗಾದ್ರೆ ಜಾಹ್ನವಿ ಸಾಯ್ತಾಳಾ? ಜಯಂತ್ ಕತೆ ಏನು? ಅಥವಾ ಅವರನ್ನ ಯಾರಾದ್ರೂ ಬಂದು ಕಾಪಾಡ್ತಾರಾ? ಸೀರಿಯಲ್ ಸ್ಟೋರಿ ಮತ್ತೆ ಯಾವ ಟ್ವಿಸ್ಟ್ ಪಡೆದುಕೊಳ್ಳಲಿದೆ ಅಂತಾ ಕಾದು ನೋಡ್ಬೇಕು..
ಇದೀಗ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ.. ಅಂತವರ ಜೊತೆ ಬಾಳೋಕಿಂತ… ಸಾಯೋದೇ ಮೇಲು.. ಜಾನು ಒಳ್ಳೇ ಕೆಲಸ ಮಾಡಿದಳು.. ಅಸಹಾಯಕ ಹೆಣ್ಣು ಮಕ್ಕಳ ಕೊನೆ ನಿರ್ಧಾರ ಇದೇ ಆಗಿರುತ್ತೆ. ಹೀಗೆ ಇಂತಹ ಸೈಕೋ ಜೊತೆ ದಿನ ಸಾಯುವುದಕ್ಕಿಂತ ಒಂದೇ ಸಲ ಸಾಯುವುದು ಒಳ್ಳೆಯದು ಎಂದೂ ಕಾಮೆಂಟ್ ಹಾಕುತ್ತಿದ್ದಾರೆ.