ಜಯಂತ್‌ ಕಾಟ.. ಜಾನು ಹುಚ್ಚಿ?  – ವಿಶ್ವನ ಬಳಿ ಹೋಗ್ತಾಳಾ ಚಿನ್ನುಮರಿ?
ಸೋಕೋಪತಿ ಅಜ್ಜಿನಾ ಏನ್‌ ಮಾಡ್ದಾ?

ಜಯಂತ್‌ ಕಾಟ.. ಜಾನು ಹುಚ್ಚಿ?  – ವಿಶ್ವನ ಬಳಿ ಹೋಗ್ತಾಳಾ ಚಿನ್ನುಮರಿ?ಸೋಕೋಪತಿ ಅಜ್ಜಿನಾ ಏನ್‌ ಮಾಡ್ದಾ?

ಜಾಹ್ನವಿ ಮೇಲಿನ ವ್ಯಾಮೋಹ ಜಯಂತ್‌ ನ ಸೈಕೋ ಆಗುವಂತೆ ಮಾಡಿದೆ. ಇದ್ರಿಂದಾಗಿ ಜಾಹ್ನವಿ ಮಗು ಕಳ್ಕೊಂಡಿದ್ದಾಳೆ. ಇದೀಗ ಜಯಂತ್‌ನ ಕಂಡ್ರೆ ಸಾಕು ಉರಿದುಬೀಳ್ತಿದ್ದಾಳೆ.. ಜಯಂತ್‌ ಹತ್ರ ಬಂದ್ರೆ ಮಾರುದ್ದ ದೂರ ಹೋಗ್ತಿದ್ದಾಳೆ. ಆತನ ಜೊತೆ ಬದುಕುವುದೇ ಹಿಂಸೆಯಾಗಿದೆ. ಇದೀಗ ಮಗು ಕಳ್ಕೊಂಡಿರೋ ಜಾನುಗೆ ಹುಚ್ಚು ಹಿಡಿತಾ ಅನ್ನೋ ಅನುಮಾನ ಎಲ್ಲರನ್ನ ಕಾಡ್ತಿದೆ. ಮಗುವಿನ ನೆನಪಲ್ಲಿರೋ ಜಾನು ಪಾಪು ಪಾಪು ಅಂತಾ ಮನೆಯಲ್ಲೆಲ್ಲಾ ಓಡಾಡ್ತಿದ್ದಾಳೆ. ಹಾಗಾದ್ರೆ ಜಾನು ಜಯಂತ್ ನ ಪಂಚರದಿಂದ ಹೊರ ಬರ್ತಾಳಾ? ವಿಶ್ವ ಜಾಹ್ನವಿಗೆ ಹೆಲ್ಪ್‌ ಮಾಡ್ತಾನಾ? ಸೀರಿಯಲ್‌ ಸ್ಟೋರಿ ಮುಂದೇನಾಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೋಹಿತ್ ಔಟ್.. ಗಿಲ್ ಕ್ಯಾಪ್ಟನ್ – ಚಾಂಪಿಯನ್ಸ್ ಟ್ರೋಫಿಯಲ್ಲಿ ಬಿಗ್ ಟ್ವಿಸ್ಟ್

ಲಕ್ಷ್ಮೀ ನಿವಾಸ ಸೀರಿಯಲ್‌ ಹೊಸ ತಿರುವು ಪಡೆದುಕೊಂಡಿದೆ. ತಾನು ಮಗು ಕಳೆದುಕೊಂಡಿರೋದಕ್ಕೆ ಜಯಂತ್ ಕಾರಣ ಎಂದು ಜಾನು ಕೋಪಗೊಂಡಿದ್ದಾಳೆ. ಜಯಂತ್‌ ನ ಕಂಡ್ರೆ ಕೂಗಾಡುತ್ತಿದ್ದಾಳೆ.. ಆತ ಏನ್‌ ಹೇಳಿದ್ರೂ ಆಕೆ ಕೇಳುವ ಸ್ಥಿತಿಯಲ್ಲಿಲ್ಲ.. ಹೀಗಾಗಿ ಜಾನು ಎಷ್ಟೇ ಬೈದರೂ ಜಯಂತ್ ಏನು ಮಾತನಾಡದೇ ಅಸಹಾಯಕನಾಗಿದ್ದಾನೆ. ಜೀವನ ಅನ್ನೋದು ನಿಂತ ನೀರು  ಆಗಬಾರದು. ಹರಿಯುವ ನೀರಿನ ರೀತಿಯಲ್ಲಿ ಜೀವನ ಸಾಗುತ್ತಿರಬೇಕು. ಕೆಟ್ಟ ವಿಷಯಗಳನ್ನು ಬಿಟ್ಟು ಮುಂದೆ ಸಾಗಬೇಕು ಎಂದು ಜಾಹ್ನವಿಗೆ ಜಯಂತ್ ಹೇಳಿದ್ದಾನೆ. ಆತನ ಮಾತು ಕೇಳಿದ ಚಿನ್ನುಮರಿ ಇನ್ನೆಲ್ಲಿಂದ ಸಂತೋಷ ಎಂದು ಕೋಪಗೊಂಡಿದ್ದಾಳೆ. ಇದೀಗ ಮಗುವನ್ನು ಕಳೆದುಕೊಂಡಿರುವ ಜಾನು ಮಾನಸಿಕವಾಗಿ ಖಿನ್ನತೆಗೆ ಜಾರುತ್ತಿದ್ದಾಳೆ .

ಜಯಂತ್‌ ಶಿವರಾತ್ರಿ ಪೂಜೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ. ಆದ್ರೆ ಜಾನು ಮಾತ್ರ ಸ್ನಾನ ಮಾಡದೇ ಕುಳಿತಿದ್ಲು.. ಜಯಂತ್ ಎಷ್ಟೇ ಹೇಳಿದರೂ ಜಾನು ಕೋಪ ಮಾತ್ರ ಕಡಿಮೆಯಾಗುತ್ತಿಲ್ಲ. ಅತ್ತ ಮನೆಯಲ್ಲಿ ಒಂಟಿಯಾಗಿ ಕುಳಿತಿರುವ ಜಾನುಗೆ ತನ್ನ ಮಗು ಕೂಗುತ್ತಿರುವ ಹಾಗೆ ಕೇಳುತ್ತಿದೆ. ಮನೆ ತುಂಬಾ ಅಮ್ಮಾ.. ಅಮ್ಮಾ.. ಎಂಬ ಕೂಗು ಕೇಳಿಸುತ್ತಿದೆ. ಇದರಿಂದ ಜಾನು ಭಯಗೊಂಡು ಹಾಲ್‌ನಿಂದ ಹೋಗಿ ಬೆಡ್‌ರೂಮ್‌ಗೆ ಹೋದರೂ.. ಅಮ್ಮಾ ಅನ್ನೋ ಕೂಗು ಚಿನ್ನುಮರಿಯ ಬೆನ್ನ ಹಿಂದೆಯೇ ಬಂದಿದೆ. ಆಗ ಜಾನು ಒಂಟಿಯಾಗಿದ್ದ ಬದುಕಿಗೆ ಮಗು ಜೊತೆಯಾಗಿತ್ತು. ಅದರ ಜೊತೆ ಆಟ ಆಡುತ್ತಾ, ಮಗುವಿನ ತುಂಟಾಟ ನೋಡ್ಕೊಂಡು ಜೀವನ ನಡೆಸಬೇಕೆಂದು ಕನಸು ಕಂಡಿದ್ದೆ. ಮಗು ನನ್ನೊಂದಿಗೆ ಇದ್ದಿದ್ರೆ ಈ ಒಂಟಿತನ ದೂರವಾಗುತ್ತಿತ್ತು. ಆದರೆ ದೇವರು ಇದಕ್ಕೆ ಅವಕಾಶ ಕೊಡಲಿಲ್ಲ. ನನ್ನ ಜೀವನ ಈಗ ಬಂಗಾರದ ಪಂಜರದಲ್ಲಿರೋ ಗಿಳಿಯಂತಾಗಿದೆ. ಇಲ್ಲಿಂದ ಹೊರಗೆ ಹೋಗಲು ಆಗದೆ, ಏನು ಮಾಡಬೇಕು ಅನ್ನೋದು ಗೊತ್ತಾಗುತ್ತಿಲ್ಲ ಎಂದು ಜಾಹ್ನವಿ ಕೊರಗುತ್ತಿದ್ದಾಳೆ.  ನನ್ನ ಮಗು ನನ್ನೊಂದಿಗೆ ಇದ್ದಿದ್ರೆ ಈ ರೀತಿಯ ಯೋಚನೆಗಳು ಬರುತ್ತಿರಲಿಲ್ಲ. ಆದರೆ ಈಗ ಏನು ಮಾಡೋದು ಅಂತ ಜಾನು ಯೋಚಿಸುತ್ತಿರುವಾಗಲೇ, ಪುಟ್ಟ ಮಗುವೊಂದು ಅಮ್ಮಾ ಎಂದು ಕೂಗುವ ಧ್ವನಿ ಕೇಳುತ್ತದೆ. ಜಾನು ಕಿವಿ ಮುಚ್ಚಿಕೊಂಡರೂ ಅಮ್ಮಾ.. ಅಮ್ಮಾ.. ಎಂದು ಕೇಳಿಸುತ್ತದೆ. ಅಮ್ಮಾ.. ನನ್ನನ್ನು ಯಾಕೆ ಉಳಿಸಿಕೊಳ್ಳಲಿಲ್ಲ. ನಾನು ನಿನಗೆ ಬೇಡವಾದ್ನಾ ಎಂದು ಮಗು ಕೇಳುತ್ತದೆ. ಇದಕ್ಕೆ ಜಾಹ್ನವಿ ಮನೆಯಲ್ಲಿರುವ ಬಾಲಕೃಷ್ಣನ ಫೋಟೋ ಮುಂದೆ ಮಾತಾಡಿದ್ಲು.. ಇದೀಗ ನಾನೆಲ್ಲೇ ಹೋದ್ರು ಅವ್ರು ಬಂದು ನನ್ನ ಹುಡುಕ್ತಾರೆ.. ಹಾಗಾಂತ ನನ್ಗೆ ಇಲ್ಲಿ ಇರೋಕೆ ಆಗಲ್ಲ..  ನಾನು ಈ ಮನೆಯಲ್ಲಿ ಇರಲಾರೆ ಎಂದು ಜಯಂತ್‌ನ ಬಂಗಾರದ ಪಂಜರದಿಂದ ಜಾಹ್ನವಿಗೆ ಹೊರ ಬಂದಿದ್ದಾಳೆ. ಈಗಾಗಲೇ ಎರಡು ಬಾರಿ ಮನೆ ಬಿಟ್ಟು ಹೋಗಿದ್ದ ಜಾಹ್ನವಿಯನ್ನು ಜಯಂತ್‌ ಉಪಾಯವಾಗಿ ಕರೆದುಕೊಂಡು ಬಂದಿದ್ದನು. ಇದೀಗ ಜಯಂತ್‌ ಸತ್ಯ ಜಾನುಗೆ ಗೊತ್ತಾಗಿದೆ. ಇದೀಗ ಮತ್ತೆ ಜಯಂತ್‌ ಜೊತೆ ಬರೋದು ಡೌಟ್‌.. ಜಾಹ್ನವಿಗೆ ಹುಚ್ಚು ಹಿಡಿತಿದೆ ಅಂತಾ ಸೀರಿಯಲ್‌ ನೋಡಿದ ವೀಕ್ಷಕರು ಹೇಳ್ತಿದ್ದಾರೆ.

ಇನ್ನು‌ ಜಯಂತ್‌ ಮನೆಯಲ್ಲಿ ಇಷ್ಟೆಲ್ಲಾ ಆಗ್ತಿದೆ. ಆತನ ಮನೆಯಲ್ಲೇ ಜಾನು ಅಜ್ಜಿ ಕೂಡ ಇದ್ದಾರೆ. ಇದೀಗ  ಅಜ್ಜಿಯ ಕತೆ ಏನು? ಅಜ್ಜಿಗೆ ಒಂದು ಗತಿ ಕಾಣಿಸ್ತಾನಾ ಅಂತಾ ವೀಕ್ಷಕರು ಕೇಳ್ತಿದ್ದಾರೆ. ಆದ್ರೆ ಅಜ್ಜಿಗೆ ಇನ್ನು ಜಯಂತ್‌ ಏನ್‌ ಮಾಡ್ಲಿಕ್ಕೆ ಇಲ್ಲ.. ಯಾಕಂದ್ರೆ ಎಲ್ಲಾ ಸತ್ಯವೂ ಜಾಹ್ನವಿಗೆ ಗೊತ್ತಾಗಿದೆ. ಹೀಗಾಗಿ ಅಜ್ಜಿಗೆ ಜಯಂತ್‌ ಏನೂ ಮಾಡ್ಲಿಕ್ಕೆ ಇಲ್ಲ ಅಂತಾ ವೀಕ್ಷಕರು ಹೇಳ್ತಿದ್ದಾರೆ.

ಮತ್ತೊಂದ್ಕಡೆ ಜಾನು ತನ್ನ ಆಪ್ತ ಗೆಳೆಯ ವಿಶ್ವ ಮತ್ತೆ ಸಿಕ್ಕಿದ್ದಾನೆ. ಜಾನುವಿನ ಕಷ್ಟ ನೋಡಿದ ವಿಶ್ವ ಆಕೆಯ ಸಹಾಯಕ್ಕೆ ಬರೋದಾಗಿ ಭರವಸೆ ನೀಡಿದ್ದಾನೆ. ಜಯಂತ್‌ನ ಬಂಗಾರದ ಪಂಜರದಿಂದ ಹಾರಿ ಹೊರಗೆ ಬಂದಿರುವ ಜಾನು ವಿಶ್ವನ ಬಳಿಗೆ ಹೋಗ್ತಾಳೆ.. ಜಯಂತ್‌ ಗೆ ವಿಶ್ವ ಪಾಠ ಕಲಿಸ್ತಾನೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.

Shwetha M