ವಿಶ್ವನ ಮುಂದೆ ಜಯಂತ್‌ ರಹಸ್ಯ.. – ಜಾನುನ ಪಂಜರದಿಂದ ಬಿಡಿಸ್ತಾನಾ?
ಜಾಹ್ನವಿ ಹೊಸ ಲೈಫ್‌ ಶುರು?

ವಿಶ್ವನ ಮುಂದೆ ಜಯಂತ್‌ ರಹಸ್ಯ.. – ಜಾನುನ ಪಂಜರದಿಂದ ಬಿಡಿಸ್ತಾನಾ?ಜಾಹ್ನವಿ ಹೊಸ ಲೈಫ್‌ ಶುರು?

ಜಾಹ್ನವಿ ಮಗುನೂ ಸಾತ್ತೊಯ್ತು.. ಜಯಂತ್‌ ರಹಸ್ಯನೂ ಜಾನುಗೆ ಗೊತ್ತಾಯ್ತು.. ಇನ್ನೇನಿದ್ರೂ ಜಾಹ್ನವಿ ಜಯಂತ್‌ ಮನೆಯಿಂದ ಎಸ್ಕೇಪ್ ಆಗೋದೊಂದು ಮಾತ್ರ ಬಾಕಿ.. ಇದೀಗ ಜಯಂತ್‌ ಕೂಡಿ ಹಾಕಿರೋ ಪಂಚರದಿಂದಲೂ ಹೊರ ಬರೋ ಟೈಮ್‌ ಕೂಡ ಬಂದಾಯ್ತು.. ಇದೀಗ ಜಾನು ಜೀವನದ ಕಹಿ ವಿಚಾರ ವಿಶ್ವನಿಗೆ ಗೊತ್ತಾಗಿದೆ. ವಿಶ್ವ ಮುಂದೇನು ಮಾಡ್ತಾನೆ.. ಜಾಹ್ನವಿಯನ್ನ ಜಯಂತ್‌ ನಿಂದ ಹೇಗೆ ಬಚಾವ್‌ ಮಾಡ್ತಾನೆ ಅನ್ನೋದು ವೀಕ್ಷಕರನ್ನು ಕಾಡ್ತಿದೆ.

ಇದನ್ನೂ ಓದಿ: ಮಾರ್ಚ್ 2ಕ್ಕೆ ಭಾರತ Vs ನ್ಯೂಜಿಲೆಂಡ್ –  ಟೀಂ ಇಂಡಿಯಾಗಿದ್ಯಾ ಚಾಂಪಿಯನ್ ಚಾನ್ಸ್?

ಲಕ್ಷ್ಮೀ ನಿವಾಸ ಸೀರಿಯಲ್‌ ಈಗ ರೋಚಕ ಘಟ್ಟ ತಲುಪಿದೆ.  ಇದೀಗ ಜಾಹ್ನವಿ ಮತ್ತು ಜಯಂತ್‌ ಕತೆಯಲ್ಲಿ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ಮದುವೆ ಬಳಿಕ ಜಾಹ್ನವಿ ಲೈಫ್‌ ನಿಂದ ದೂರವಾಗಿದ್ದ ಆಪ್ತ ಗೆಳೆಯ ವಿಶ್ವನ ಎಂಟ್ರಿಯಾಗಿದೆ. ಇದೀಗ ಆಸ್ಪತ್ರೆಯಲ್ಲಿ ಜಾನು ವಿಶ್ವ ಮೀಟ್‌ ಆಗಿದ್ದಾರೆ. ಜಯಂತ್‌ ಮೆಡಿಸಿನ್‌ ತರಲು  ವಾರ್ಡ್‌ನಿಂದ ಹೊರಗೆ ಹೋದ ಸಂದರ್ಭದಲ್ಲಿ ವಿಶ್ವ  ಜಾಹ್ನವಿ ಬಳಿ  ಬಂದಿದ್ದಾನೆ. ಆತನನನ್ನ ನೋಡ್ತಿದ್ದಂತೆ ಜಾಹ್ನವಿ ಜೋರಾಗಿ ಅತ್ತಿದ್ದಾಳೆ. ತನ್ನ  ಅಜ್ಜಿ ಮನೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದಾರೆ.. ತಾನು ಮಗು ಕಳೆದುಕೊಂಡಿರುವ ವಿಷಯವನ್ನು ವಿಶ್ವನ ಮುಂದೆ ಜಾಹ್ನವಿ ಹೇಳಿದ್ದಾಳೆ.

ಹೌದು, ಸೈಕೋ ಜಯಂತ್‌ ಅಸಲಿ ಮುಖ ಜಾಹ್ನವಿ ಮುಂದೆ ಬಯಲಾಗಿದೆ. ಸಿಸಿಟಿವಿ ಫೂಟೇಜ್‌ ನೋಡ್ತಿದ್ದಂತೆ ಜಾನು ಆಘಾತದಿಂದ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದಿದ್ಲು.. ಇದ್ರಿಂದಾಗಿ ಜಾಹ್ನವಿಗೆ ಗರ್ಭಪಾತವಾಗಿದೆ. ಇಷ್ಟೆಲ್ಲಾ ಆದ್ರೂ ಜನು ತಂದೆ ತಾಯಿಗೆ ಜಯಂತ್ ಯಾವುದೇ  ವಿಷಯವನ್ನು ತಿಳಿಸಿಲ್ಲ. ಜಾಹ್ನವಿ ತಂದೆ ಶ್ರೀನಿವಾಸ್, ತಾಯಿ ಲಕ್ಷ್ಮೀ, ಸೋದರ ವೆಂಕಿ ಮತ್ತು ಅತ್ತಿಗೆ ಚೆಲುವಿ ಬಂದರೂ ಜಯಂತ್ ಸುಳ್ಳು ಹೇಳಿದ್ದಾನೆ. ನಾರ್ಮಲ್ ಚೆಕಪ್‌ಗಾಗಿ ಜಾಹ್ನವಿ ಆಸ್ಪತ್ರೆಯಲ್ಲಿದ್ದಾಳೆ. ನೀವು ಬಂದಿದ್ದೀರಿ ಅಲ್ಲವಾ? ಹೋಗಿ ಕರೆದುಕೊಂಡು ಬರ್ತೇನೆ ಅಂತಾ ಆಸ್ಪತ್ರೆಗೆ ಬಂದಿದ್ದಾನೆ.. ಆಸ್ಪತ್ರೆಗೆ ಬಂದ ಜಯಂತ್‌ ಜಾನುನ ಮನೆಗೆ ಕರ್ಕೊಂಡು ಹೋಗ್ತೇನೆ ಎಂದು ಡಾಕ್ಟರ್‌ ಬಳಿ ಹೇಳಿದ್ದಾನೆ. ಡಾಕ್ಟರ್‌ ಆಕೆಯ ಆರೋಗ್ಯದಲ್ಲಿ ಇನ್ನೂ ಚೇತರಿಕೆ ಕಂಡಿಲ್ಲ. ಮನೆಗೆ ಕರ್ಕೊಂಡು ಹೋಗೋದು ಬೇಡ ಅಂದ್ರೂ ಒತ್ತಾಯ ಮಾಡಿದ್ದಾನೆ. ಅಷ್ಟೊತ್ತಿಗೆ ವಾರ್ಡ್‌ ನಲ್ಲಿ ಮಲಗಿದ್ದ ಜಾಹ್ನವಿ ವಿಶ್ವನಿಗೆ ಕಾಣಿಸಿದ್ದಾಳೆ. ವಿಶ್ವನನ್ನ ನೋಡಿದ ಜಾಹ್ನವಿ ಜೋರಾಗಿ ಅತ್ತಿದ್ದಾಳೆ. ದೇವರು ಒಳ್ಳೆಯದನ್ನು ಮಾಡ್ತಾನೆ ಅನ್ನೋ ನಂಬಿಕೆ ಹೊರಟು ಹೋಗಿದೆ. ನಾನು ಇಷ್ಟಪಟ್ಟವರು ನನ್ನಿಂದ ದೂರ ಆದ್ರು. ನನಗಿದ್ದ ಬೆಸ್ಟ್ ಫ್ರೆಂಡ್ ಅಂದ್ರೆ ನೀನು ಒಬ್ಬನೇ. ಮೆಸೇಜ್, ಕಾಲ್ ಇಲ್ಲ ನೀನು ಸಹ ಹೇಳದೇ ಕೇಳದೇ ನನ್ನಿಂದ ದೂರವಾದೆ. ಇವಾಗ ನನ್ನ ಮಗು ಸಹ ದೂರವಾಯ್ತು. ನಾನು ನಂಬಿದ ಜೀವನವೇ ನನ್ನನ್ನು ಈ ಸ್ಥಿತಿಗೆ ತಂದಿದೆ.  ಯಾರ ಮುಂದೆಯೂ ಹೇಳದ ಸ್ಥಿತಿಯಲ್ಲಿದ್ದೇನೆ ಕಣ್ಣೀರು ಒರೆಸುವ ಕೈಗಳೇ ಇಲ್ಲ ಎಂದು ವಿಶ್ವನ ಮುಂದೆ ಜಾಹ್ನವಿ ಕಣ್ಣೀರು ಹಾಕಿದ್ದಾಳೆ. ಜಾಹ್ನವಿ ಮಾತು ಕೇಳಿದ ವಿಶ್ವ ಮರುಗಿದ್ದಾನೆ.. ಬಳಿಕ  ಎಲ್ಲದಕ್ಕೂ ಅಳೋದು ಒಂದೇ ಉತ್ತರ ಅಲ್ಲ. ಇವತ್ತು ಆ ದೇವರು ನಿನ್ನ ಮಗುವನ್ನು ಕಿತ್ತುಕೊಂಡಿರಬಹುದು. ಆದ್ರೆ ಯಾವತ್ತೋ ಒಂದು ದಿನ ಆ ದೇವರೇ ನಿನಗೆ ಒಳ್ಳೆದು ಮಾಡುತ್ತಾನೆ. ಆ ನಂಬಿಕೆ ನನಗಿದೆ. ಮಗುವನ್ನು ಕಳೆದುಕೊಂಡಿರುವ ನೋವಿನಲ್ಲಿ ಏನೇನೋ ಮಾತನಾಡಬೇಡ. ಎಲ್ಲವೂ ಸರಿ ಹೋಗುತ್ತೆ. ಸಮಾಧಾನ ಮಾಡಿಕೊ ಜಾಹ್ನವಿ. ಯಾಕೆ ಹೀಗೆ ಆಯ್ತು ಅಂತಾ ಗೊತ್ತಾಗುತ್ತಿಲ್ಲ. ಇದೆಲ್ಲಾ ಹೇಗಾಯ್ತು? ಎಷ್ಟು ಧೈರ್ಯವಾಗಿರೋ ಹುಡುಗಿ ನೀನು. ನಿನ್ನನ್ನು ನೋಡಲು ಆಗುತ್ತಿಲ್ಲ. ನಿನ್ನ ನೋವನ್ನು ಕಡಿಮೆ ಮಾಡುವ ಶಕ್ತಿ ನನಗಿಲ್ಲ. ಆದ್ರೆ ಅದನ್ನು ಕೇಳುವ ಅರ್ಹತೆ ನನಗಿದೆ. ಏನಾಯ್ತು ಹೇಳು ಜಾನು ಎಂದು ವಿಶ್ವ ಕೇಳುತ್ತಾನೆ. ಅಷ್ಟರಲ್ಲಿಯೇ ಜಯಂತ್ ಅಲ್ಲಿಗೆ ಬರ್ತಾನೆ. ನನ್ನ ಗಂಡ ಬಂದ, ಇಲ್ಲಿಂದ ಹೋಗು, ನಾನೇ ಫೋನ್ ಮಾಡುತ್ತೇನೆ ಎಂದು ಜಾಹ್ನವಿ ಸನ್ನೆ ಮಾಡಿ ಅಲ್ಲಿಂದ ವಿಶ್ವನನ್ನು ಕಳುಹಿಸಿದ್ದಾಳೆ. ಇನ್ನೇನು ವಿಶ್ವನನ್ನ ಜಯಂತ್‌ ನೋಡ್ಬೇಕು ಅನ್ನುವಷ್ಟರಲ್ಲಿ ನರ್ಸ್‌ ಜಯಂತ್‌ ನನ್ನ ಕರೆದಿದ್ದಾಳೆ. ಇದೀಗ ಅಷ್ಟೊತ್ತಿಗೆ ವಿಶ್ವ ಬಾಗಿಲ ಸಂದಿಯಲ್ಲಿ ಅಡಗಿಕೊಂಡಿದ್ದಾನೆ.  ಇದೀಗ  ವಿಶ್ವ ಜಾಹ್ನವಿಯನ್ನ ಮೀಟ್‌ ಆಗಿರೋ ವಿಚಾರ ಜಯಂತ್‌ ಗೆ ಗೊತ್ತಾದ್ರೆ ಆತನ ಕತೆಯನ್ನೂ ಮುಗಿಸೋದು ಫಿಕ್ಸ್‌ ಅಂತಾ ವೀಕ್ಷಕರು ಹೇಳಿದ್ದಾರೆ. ಇನ್ನು ಸೀರಿಯಲ್‌ ಸ್ಟೋರಿ ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ.

ವಿಶ್ವನಿಗೆ ಜಾನು ಸಂಕಷ್ಟದಲ್ಲಿ ಇದ್ದಾಳೆ ಅನ್ನೋ ಕ್ಲೂ ಸಿಕ್ಕಿದೆ.. ಫೋನ್‌ ಮಾಡಿ ಎಲ್ಲಾ ವಿಚಾರ ಹೇಳ್ತೀನಿ ಅಂತಾ ಜಾನು ಕೂಡ ಹೇಳಿದ್ದಾಳೆ. ಆದ್ರೆ ಜಯಂತ್‌ ಜಾಹ್ನವಿ ಮೇಲೆ ಸದಾ ಕಣ್ಣಿಟ್ಟಿರ್ತಾನೆ. ಮನೆ ತುಂಬಾ ಸಿಸಿಟಿವಿ ಕೂಡ ಹಾಕಿಸಿದ್ದಾನೆ. ಹೀಗಾಗಿ ಜಾಹ್ನವಿ ವಿಶ್ವನಿಗೆ ನಡೆದಿರೋದನ್ನ ಹೇಳೋದು ಕಷ್ಟವೇ.. ಇನ್ನು ಜಾಹ್ನವಿ ವಿಶ್ವನನ್ನ ಗೂಬೆ ಅಂತಾ ಕರೆಯೋದು.. ಆಂಭದಿಂದಲೂ ಗೂಬೆ ಯಾರು ಅಂತಾ ಜಯಂತ್‌ ಹುಡುಕ್ತಿದ್ದಾನೆ. ಇದೀಗ ಗೂಬೆ ವಿಶ್ವ ಅಂತಾ ಗೊತ್ತಾದ್ರೆ ವಿಶ್ವನ ಕತೆನೂ ಜಯಂತ್‌ ಮುಗಿಸ್ತಾನೆ. ಇದೀಗ ವಿಶ್ವ ಹೇಗೆ ಸತ್ಯ ತಿಳ್ಕೊಳ್ತಾನೆ.. ಜಯಂತ್‌ ಅಸಲಿ ಮುಖ ಗೊತ್ತಾದ ವಿಶ್ವ ಆಕೆಯನ್ನ ಮನೆಯಿಂದ ಹೊರ ಕರ್ಕೊಂಡು ಬರ್ತಾನಾ? ಸೈಕೋ ಜಯಂತ್‌ಗೆ ಕಾದಿದೆಯಾ ಮಾರಿಹಬ್ಬ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Shwetha M

Leave a Reply

Your email address will not be published. Required fields are marked *