ಜಯಂತ್‌ ಅಸಲಿ ಬಣ್ಣ ಬಯಲು! – ಸತ್ಯ ತಿಳಿದ ಜಾನು ಕತೆನೂ ಕ್ಲೋಸ್?‌
ಚಿನ್ನುಮುರಿ ಮುಂದೆ ಅಜ್ಜಿ ರಹಸ್ಯ!

ಜಯಂತ್‌ ಅಸಲಿ ಬಣ್ಣ ಬಯಲು! – ಸತ್ಯ ತಿಳಿದ ಜಾನು ಕತೆನೂ ಕ್ಲೋಸ್?‌ಚಿನ್ನುಮುರಿ ಮುಂದೆ ಅಜ್ಜಿ ರಹಸ್ಯ!

ಸೀರಿಯಲ್‌ ಫ್ಯಾನ್ಸ್‌ ಕಾಯ್ತಿದ್ದ ದಿನ ಬಂದೇ ಬಿಡ್ತು.. ಜಾಹ್ನವಿಗೆ ಯಾವ ಸತ್ಯ ಗೊತ್ತಾಗ್ಬಾರ್ದು ಅಂತಾ ಜಯಂತ್‌ ಇಷ್ಟೆಲ್ಲಾ ಡ್ರಾಮಾ ಮಾಡಿದ್ನೋ.. ಅದೇ ವಿಚಾರ ಈಗ ಆಕೆಗೆ ಗೊತ್ತಾಗಿದೆ. ತನ್ನ ಗಂಡ ಕಿಲ್ಲರ್‌ ಅನ್ನೋದು ಗೊತ್ತಾಗಿ ಜಾನುಗೆ ಆಘಾತ ಆಗಿದೆ.  ಹಾಲ್‌ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಹಾಗಾದ್ರೆ ಜಾಹ್ನವಿ ಮುಂದೆ ಏನ್‌ ಮಾಡ್ತಾಳೆ.. ಜಾಹ್ನವಿಗೆ ಸತ್ಯ ತಿಳಿತು ಅಂತಾ ಗೊತ್ತಾದ್ರೆ ಜಯಂತ್‌ ಏನ್‌ ಮಾಡ್ತಾನೆ? ಜಾಹ್ನವಿ ಜಯಂತ್‌ ನ ಪಂಚರದಿಂದ ಎಸ್ಕೇಪ್‌ ಆಗ್ತಾಳಾ? ಸತ್ಯ ಹೊರ ಬರುತ್ತೆ ಅಂತಾ ಜಯಂತ್‌ ಚಿನ್ನುಮರಿ ಚಾಪ್ಟರ್‌ ಕ್ಲೋಸ್‌ ಮಾಡ್ತಾನಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತವರಲ್ಲೇ ಹೀನಾಯವಾಗಿ ಸೋತ ಪಾಕ್ – ನ್ಯೂಜಿಲೆಂಡ್ಗೆ ಭರ್ಜರಿ ಜಯ

ಲಕ್ಷ್ಮೀ ನಿವಾಸ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಜಯಂತ್‌ ಗೆ ಜಾಹ್ನವಿ ಮೇಲೆ ಪ್ರೀತಿಯೋ ವ್ಯಾಮೋಹವೋ ಗೊತ್ತಾಗ್ತಿಲ್ಲ.. ಆದ್ರೆ ಪಕ್ಷಿಯಂತೆ ಹಾರಾಟ್ತಿದ್ದ ಜಾಹ್ನವಿಯನ್ನ ಪ್ರೀತಿಯೆಂಬ ಪಂಚರದಲ್ಲಿ ಬಂಧಿಯಾಗಿಸಿದ್ದಾನೆ ಜಯಂತ್.‌ ಇದೀಗ ಈತನ ಅತಿಯಾದ ಪ್ರೀತಿ ಚಿನ್ನುಮರಿಗೆ ಉಸಿರುಗಟ್ಟಿಸುತ್ತಿದೆ. ಆದ್ರೆ ಹೇಳಿಕೊಳ್ಳಲು ಆಗದೇ ಒದ್ದಾಡ್ತಿದ್ದಾಳೆ.. ಇತ್ತ ಸೈಕೋಪತಿ ಚಿನ್ನುಮರಿ ತನ್ನಿಂದ ದೂರ ಆಗ್ಬಾರ್ದು ಅಂತಾ ಮಾಡಬಾರದ್ದನ್ನೆಲ್ಲಾ ಮಾಡ್ತಿದ್ದಾನೆ.. ಜಾನು ಫ್ರೆಂಡ್ಸ್‌ ಗೆ ಒಂದು ಗತಿ ತಂದಿದ್ದ.. ಅದಾದ್ಮೇಲೆ ಅಜ್ಜಿಯನ್ನೂ ಕೊಲ್ಲೋದಿಕ್ಕೆ ಟ್ರೈ ಮಾಡಿದ್ದ.. ತನ್ನ ಸುತ್ತಮುತ್ತ ಇಷ್ಟೆಲ್ಲಾ ನಡೆದಿದ್ರೂ ಜಾನುಗೆ ಮಾತ್ರ ಯಾವುದೂ ಗೊತ್ತಾಗ್ತಿರ್ಲಿಲ್ಲ. ಅಷ್ಟರಮಟ್ಟಿಗೆ ಜಯಂತ್‌ ಎಲ್ಲವನ್ನೂ ಹ್ಯಾಂಡಲ್‌ ಮಾಡ್ತಾ ಬಂದಿದ್ದ.. ಇಲ್ಲಿತನಕ ಜಯಂತ್‌ ಲಕ್‌ ಚೆನ್ನಾಗಿತ್ತು ಕಾಣುತ್ತೆ.. ಆದ್ರೆ ಯಾವಾಗ ಅಜ್ಜಿ ಕೊಲೆ ಪ್ರಯತ್ನ ಮಾಡಿದ್ನೋ ಅಲ್ಲಿಂದ ಆತನ ಗ್ರಹಚಾರ ಕೆಟ್ಟು ಹೋಗಿದೆ.. ಇದೀಗ ಜಾನು ಕೈಗೆ ಹಂತ ಹಂತವಾಗಿ ಸಿಕ್ಕಿಬೀಳ್ತಿದ್ದಾನೆ..

ಹೌದು, ಅಜ್ಜಿ ಕೋಮಾಗೆ ಹೋಗ್ತಿದ್ದಂತೆ ಜಯಂತ್‌ ಮನೆಯ ಮೂಲೆ ಮೂಲೆಯಲ್ಲಿ ಸಿಸಿಟಿವಿ ಹಾಕಿಸಿದ್ದ.. ಅಜ್ಜಿಗೆ ಎಲ್ಲಿ ಎಚ್ಚರ ಆಗುತ್ತೆ. ತನ್ನ ಗುಟ್ಟು ರಟ್ಟಾಗುತ್ತೆ ಅನ್ನೋ ಭಯದಲ್ಲೇ ಕಾಲ ಕಳಿತಾ ಇದ್ದಾನೆ.. ಆದ್ರೆ ಜಾಹ್ನವಿಗೆ ಜಯಂತ್‌ ಸಿಸಿಟಿವಿ ಹಾಕಿಸಿದ್ದು ಗೊತ್ತಾಗಿದೆ.  ಅದಾದ್ಮೇಲೆ ಜಯಂತ್‌ ಏನೋ ಮಾಡಲು ಹೊರಟಿದ್ದಾನೆ ಅನ್ನೋ ಡೌಟ್‌ ಆಕೆಗೆ ಕಾಡಲು ಶುರುವಾಗಿತ್ತು.. ಅಲ್ಲಿಂದ ಜಯಂತ್‌ ಮೇಲೆ ಒಂದು ಕಣ್ಣಿಡಲು ಶುರುಮಾಡಿದ್ಲು.. ವ್ಯಾಲೆಂಟೈನ್ಸ್ ಡೇಯವತ್ತು ಜಯಂತ್‌ ಜಾನುಗೆ ದೊಡ್ಡ ಸರ್‌ಪ್ರೈಸ್‌ ನೀಡಿದ್ದ.. ಆಕೆಯ ಜೊತೆ ರೊಮ್ಯಾಂಟಿಕ್‌ ಆಗಿ ಡ್ಯಾನ್ಸ್‌ ಕೂಡ ಮಾಡಿದ್ದ. ಆದ್ರೆ ಜಾಹ್ನವಿ ಮಾತ್ರ ಜಯಂತ್‌ ನಡವಳಿಕೆ ಮೇಲೆ ಒಂದು ಕಣ್ಣಿಟ್ಟಿದ್ಲು.. ಇದೀಗ ಜಾನುಗೆ ಮಹಾ ಸತ್ಯ ಗೊತ್ತಾಗಿದೆ. ವಿಷ್ಯ ಗೊತ್ತಾದ ಜಾನು ಪ್ರಜ್ಞೆತಪ್ಪಿ ಬಿದ್ದಿದ್ದಾಳೆ.

ಜಾಹ್ನವಿ ಜಯಂತ್‌ ಮಲಗಿದ್ದ ವೇಳೆ ಆತನ ಫೋನ್‌ ತಗೊಂಡು ಚೆಕ್‌ ಮಾಡಿದ್ದಾಳೆ. ಇದ್ರಲ್ಲಿ ಸಿಸಿಟಿವಿ ಫೂಟೇಜ್‌ ಚೆಕ್‌ ಮಾಡಿದ್ದಾಳೆ.. ಅಜ್ಜಿಯನ್ನ ಸಾಯಿಸಲು ಪ್ರಯತ್ನಪಟ್ಟಿದ್ದು ಜಯಂತ್‌ ಅನ್ನೋದು ಈಗ ಜಾನುಗೆ ಗೊತ್ತಾಗಿದೆ. ವಿಡಿಯೋ ನೋಡಿದ ಜಾಹ್ನವಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.. ಇದೀಗ ಸತ್ಯ ಗೊತ್ತಾದ ಜಾಹ್ನವಿ ಏನ್‌ ಮಾಡ್ತಾಳೆ? ಜಾಹ್ನವಿ ಜಯಂತ್‌ ಗೆ ಬುದ್ದಿ ಕಲಿಸ್ತಾಳಾ? ಮನೆ ಬಿಟ್ಟು ಹೋಗ್ತಾಳಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ಜಾಹ್ನವಿ ಭವಿಷ್ಯವನ್ನ ಮೊದಲೇ ಹೇಳಿಬಿಟ್ಟಿದ್ದಾರೆ.. ಜಾಹ್ನವಿ ಕತೆ ಮುಗಿದಂತೆ ಲೆಕ್ಕಾ? ಜಾನುಗೆ ಸತ್ಯ ಗೊತ್ತಾಗಿದೆ ಅಂತಾ ಜಯಂತ್‌ ಗೆ ಗೊತ್ತಾದ್ರೆ ಆಕೆಯ ಕತೆನೂ ಫಿನಿಷ್‌.. ಇದು ಲಕ್ಷ್ಮೀ ನಿವಾಸ ಅಲ್ಲ, ಕಿಲ್ಲಿಂಗ್‌ ನಿವಾಸ.. ಸೀರಿಯಲ್‌ ಹೆಸರಿಗೂ, ಸ್ಟೋರಿಗೂ ಒಂಚೂರು ಮ್ಯಾಚೇ ಆಗ್ತಿಲ್ಲ ಅಂತಾ ವೀಕ್ಷಕರು ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *