ಸೇವಂತಿ ಸೇವಂತಿ ಸಿನಿಮಾ ಕಥೆ ಸೀರಿಯಲ್‌ನಲ್ಲಿ‌! – ನಿದ್ದೆಯಲ್ಲಿದ್ದ ಭಾವನಾ ಕೊರಳಲ್ಲಿ ತಾಳಿ
ಮದುವೆಯಾದ ಸಿದ್ದೇಗೌಡ್ರು ಮುಂದೇನು?

ಸೇವಂತಿ ಸೇವಂತಿ ಸಿನಿಮಾ ಕಥೆ ಸೀರಿಯಲ್‌ನಲ್ಲಿ‌! – ನಿದ್ದೆಯಲ್ಲಿದ್ದ ಭಾವನಾ ಕೊರಳಲ್ಲಿ ತಾಳಿಮದುವೆಯಾದ ಸಿದ್ದೇಗೌಡ್ರು ಮುಂದೇನು?

ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ನಟನೆಯ ಸೇವಂತಿ ಸೇವಂತಿ ಸಿನಿಮಾ ನಿಮಗೆ ಗೊತ್ತಿರಬಹುದು. ಈ ಸಿನಿಮಾದಲ್ಲಿ ನಾಯಕ ವಿಜಯ್ ರಾಘವೇಂದ್ರ ನಾಯಕಿ ರಮ್ಯಾರನ್ನು ಪ್ರೀತಿ ಮಾಡುತ್ತಿರುತ್ತಾರೆ. ರಮ್ಯಾಗೆ ಮದುವೆ ಫಿಕ್ಸ್ ಆಗಿರುತ್ತದೆ. ಆದ್ರೆ, ಪ್ರೀತಿ ಕಳೆದುಕೊಳ್ಳಲು ಹೀರೋ ರೆಡಿಯಿರುವುದಿಲ್ಲ. ಹೀಗಾಗಿ ವಿಜಯ್ ರಾಘವೇಂದ್ರ ಅವರು ರಮ್ಯಾ ನಿದ್ದೆ ಮಾಡುತ್ತಿರುವಾಗ ತಾಳಿ ಕಟ್ಟುತ್ತಾರೆ. ಮಲಗಿದ್ದಾಗ ತಾಳಿ ಕಟ್ಟಿದ್ದಕ್ಕೆ ರಮ್ಯಾಗೆ ಯಾರು ತಾಳಿ ಕಟ್ಟಿದ್ರು ಅಂತ ಗೊತ್ತೇ ಇರೋದಿಲ್ಲ. ಕೊನೆಯಲ್ಲಿ ಈ ಸತ್ಯ ಗೊತ್ತಾಗುತ್ತದೆ. ಅದೇ ರೀತಿ ಈಗ ಧಾರಾವಾಹಿಯೊಂದ್ರಲ್ಲಿ ಇದೇ ರೀತಿಯ ಸೀನ್‌ ಮಾಡಲಾಗಿದೆ.

ಇದನ್ನೂ ಓದಿ: ಬಿಗ್‌ ಬಾಸ್ ಸಿರಿ ಸಿಂಪಲ್ ಮದುವೆ – 40 ವರ್ಷದ ಮೇಲೆ ಸಿಕ್ಕ ಸಂಗಾತಿ

ಝೀಕನ್ನಡದಲ್ಲಿ ಪ್ರಸಾರವಾಗ್ತಿರೋ ಲಕ್ಷ್ಮೀ ನಿವಾಸ ಸೀರಿಯಲ್ ಪ್ರೇಕ್ಷಕರ ಮನಗೆದ್ದಿದೆ. ಈ ಸೀರಿಯಲ್ ನ ವಿಶೇಷ ಏನ್ ಗೊತ್ತಾ, ಇಲ್ಲಿನ ಕಥೆ ಹೀಗೇ ಸಾಗ್ತಿದೆ ಅಂತಾ ಗೆಸ್ ಮಾಡಲು ಸಾಧ್ಯವೇ ಇಲ್ಲ. ಇಲ್ಲಿ ಆಲ್‌ರೆಡೆ ಸೈಕೋ ಜಯಂತ್ ಕಥೆ ಗೊತ್ತೇ ಇದೆ. ಅತಿರೇಕದ ಪ್ರೀತಿ ಪಾಪದ ಹೆಂಡತಿ ಜಾನುಗೆ ಇನ್ನೂ ಅರಿವಿಗೆ ಬರದೇ ಇರೋದು ಕೂಡಾ ವಿಪರ್ಯಾಸ. ಇದ್ರ ಬೆನ್ನಲ್ಲೇ ವೀಕ್ಷಕರ ಮನಗೆದ್ದ ಮತ್ತೊಂದು ಜೋಡಿಯೇ ಸಿದ್ದೇಗೌಡ ಮತ್ತು ಭಾವನಾ. ಸಿದ್ದೇಗೌಡ್ರ ಸ್ಟೈಲ್ ಸೇಮ್ ಸಿನಿಮಾದಲ್ಲಿ ರವಿಚಂದ್ರನ್ ಅವ್ರನ್ನ ನೋಡಿದಂಗೆ ಆಗುತ್ತೆ. ಮಿರಮಿರ ಶರ್ಟ್, ಗರಿ ಗರಿ ಪಂಚೆಯಲ್ಲಿ ಸಿದ್ದೇಗೌಡ್ರು ಮಿಂಚುತ್ತಿರ್ತಾರೆ. ಇನ್ನು ಭಾವಾನ ಮೇಲೆ ಸಿದ್ದೇಗೌಡ್ರಿಗೆ ಶ್ಯಾನೇ ಪ್ರೀತಿ. ಆದ್ರೆ, ಭಾವನಂಗೆ ಗೌಡ್ರನ್ನ ಕಂಡ್ರೆ ಆಗಲ್ಲ. ಗೌಡ್ರು ಬಿಡಲ್ಲ, ಭಾವನಾ ಬಗ್ಗಲ್ಲ. ಇದ್ರ ಮಧ್ಯೆ ಸಿದ್ದೇಗೌಡ್ರಿಗೆ ಹುಡುಗಿ ಫಿಕ್ಸ್ ಆಗ್ತಾಳೆ. ಎಂಗೇಜ್‌ಮೆಂಟ್ ಕೂಡಾ ನಡೆದುಹೋಗುತ್ತೆ. ಮನಸು ಕೊಟ್ಟವಳಿಗೆ ತಾಳಿ ಕಟ್ಬೇಕು ಕಣ್ಲಾ ಅಂತಾ ಪಕ್ಕ ಹಳ್ಳಿಶೈಲಿಯಲ್ಲಿ ಡೈಲಾಗ್ ಹೊಡೆಯೋ ಗೌಡ್ರು ಕೊನೆಗೂ ಕ್ರೇಜಿಸ್ಟಾರ್ ರವಿಚಂದ್ರನ್ ಥರಾನೇ ಪ್ರೀತಿಯನ್ನ ಗೆಲ್ಲಿಸಲು ಹಠ ತೊಡ್ತಾರೆ. ಇನ್ನೇನು ಸೀರಿಯಲ್‌ಗೆ ರಾಮಾಚಾರಿ ಟಚ್ ಸಿಗ್ಬಹುದು ಅಂತಾ ಕಾಯ್ತಿದ್ದ ಪ್ರೇಕ್ಷಕರಿಗೆ ಸೀರಿಯಲ್ ನಿರ್ದೇಶಕರು ಸೇವಂತಿ ಸೇವಂತಿ ಸಿನಿಮಾ ತೋರಿಸಿದ್ದಾರೆ. ಊರಹಬ್ಬಕ್ಕೆಂದು ಕುಟುಂಬ ಸಮೇತರಾಗಿ ಬಂದ ಸಿದ್ದೇಗೌಡ್ರು ಮತ್ತು ಭಾವನಾ ಬದುಕಲ್ಲಿ ಟ್ವಿಸ್ಟ್ ಸಿಕ್ಕಿದೆ. ದೇವಿಯ ಕೊರಳಲ್ಲಿದ್ದ ಮಾಂಗಲ್ಯವನ್ನು ರಾತ್ರೋರಾತ್ರಿ ತೆಗೆದುಕೊಂಡು ಬಂದ ಸಿದ್ದೇಗೌಡ್ರು ಮಲಗಿದ್ದ ಭಾವಾನಳಾ ಕುತ್ತಿಗೆ ಕಟ್ಟಿದ್ದಾರೆ.

ಸಿದ್ದೇಗೌಡ್ರು ಭಾವನಾಗೆ ತಾಳಿ ಕಟ್ಟಿಯಾಗಿದೆ. ಇದು ಕನಸೋ? ನನಸೋ? ಅಂತಾ ಗೊತ್ತಾಗುವಷ್ಟರಲ್ಲಿ ಭಾವನಾ ಕೊರಳಲ್ಲಿ ತಾಳಿಯಿದೆ. ತನಗಿಂತ ವಯಸ್ಸಿನಲ್ಲಿ ದೊಡ್ಡವಳಾದ ಭಾವನಾಳನ್ನು ರಾತ್ರೋರಾತ್ರಿ ಯಾರಿಗೂ ಗೊತ್ತಾಗದಂತೆ ಮದ್ವೆಯಾಗಿದ್ದಾರೆ ಸಿದ್ದೇಗೌಡ್ರು. ಬೆಳಗ್ಗೆ ಎದ್ದಾಗ ಕೊರಳಲ್ಲಿ ತಾಳಿ ನೋಡಿ ಭಾವನಾ ಬೆಚ್ಚಿಬಿದ್ರೆ ಇತ್ತ ಸಿದ್ದೇಗೌಡ್ರ ಸಂಭ್ರಮ ಏನ್ ಕೇಳ್ತೀರಾ. ಥೇಟ್ ಅಣ್ಣಾವ್ರ ಸಿನಿಮಾದಲ್ಲಿ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಸ್ಟೈಲ್‌ನಲ್ಲಿ ಪಂಜೆ ಎತ್ತಿಕೊಂಡು ಸಿದ್ದೇಗೌಡ್ರು ಫುಲ್ ಹುಮ್ಮಸ್ಸಲ್ಲಿ ಬರ್ತಾರೆ. ಜೊತೆಗೆ ಭಾವಾನ ನನ್ನ ಸ್ವಂತ ಅನ್ನೋ ಹೆಮ್ಮೆ ಗೌಡರದ್ದು. ಆದ್ರೆ, ಪಾಪದ ಹುಡುಗಿ ಭಾವಾನ ತನ್ನ ಬಾಳಲ್ಲಿ ಇದೆಂಥಾ ದೇವರ ಆಟ ಅಂತಾ ಬಿಕ್ಕಿ ಬಿಕ್ಕಿ ಅಳ್ತಾಳೆ. ಸೀರೆಯ ಸೆರಗನ್ನು ಮುಚ್ಚಿಕೊಂಡು ನೋವಲ್ಲಿ ಓಡಾಡುತ್ತಾಳೆ. ಭಾವನಾಳನ್ನು ಕದ್ದು ಮುಚ್ಚಿ ನೋಡುತ್ತಾ ಆಕೆ ತನ್ನ ಹೆಂಡತಿಯಾದ ಖುಷಿಯಲ್ಲಿದ್ದಾರೆ ಸಿದ್ದೇಗೌಡ್ರು. ಭಾವನಾ ತನ್ನನ್ನು ಇಷ್ಟಪಡಲ್ಲ ಅಂತ ಸಿದ್ದೇಗೌಡ್ರಿಗೆ ಗೊತ್ತಿದೆ. ಹಾಗಾಗಿ ಭಾವನಾ ಒಪ್ಪಿಗೆಯೇ ಇಲ್ಲದೆ ತಾಳಿ ಕಟ್ಟಿಯಾಗಿದೆ. ಇನ್ನು ಮುಂದೆ ಅದೇನ್ ಟ್ವಿಸ್ಟ್ ಕಾದಿದಿಯೋ ಅಂತ ಕಾದು ನೋಡಬೇಕು. ಅಂತೂ ಈ ಎಪಿಸೋಡ್ ನೋಡಿದ ಪ್ರೇಕ್ಷಕರಿಗೆ ಸೇವಂತಿ ಸೇವಂತಿ ಸಿನಿಮಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಕಣ್ಣಮುಂದೆ ಬಂದಿರೋದಂತೂ ಸುಳ್ಳಲ್ಲ.

Shwetha M

Leave a Reply

Your email address will not be published. Required fields are marked *