ಜಾನು ಪ್ರೀತಿ.. ಜಯಂತ್‌ ಫೈರಿಂಗ್‌.. ಸೈಕೋತನಕ್ಕೆ ಇನ್ನೆಷ್ಟು ಬಲಿ?  

ಜಾನು ಪ್ರೀತಿ.. ಜಯಂತ್‌ ಫೈರಿಂಗ್‌.. ಸೈಕೋತನಕ್ಕೆ ಇನ್ನೆಷ್ಟು ಬಲಿ?  

ಜಾಹ್ನವಿ ಒಟ್ಟಿಗೆ ಇರುವಾಗ ಜಯಂತ್‌ ಆಕೆಗೆ ನೆಮ್ಮದಿಯಿಂದ ಇರಲು ಬಿಟ್ಟಿರ್ಲಿಲ್ಲ.. ಅಷ್ಟೇ ಅಲ್ಲ ಅವಳ ಮೇಲಿನ ವ್ಯಾಮೋಹದಿಂದಾಗಿ ಆತ ಅದೆಷ್ಟೋ ಮಂದಿ ಲೈಫ್‌ ಹಾಳು ಮಾಡಿದ್ದ.. ಇದೀಗ ಜಾಹ್ನವಿ ಇಲ್ಲದೇ ಜಯಂತ್‌ ಸೈಕೋ ಆಗಿದ್ದಾನೆ.. ಆಕೆ ಬದುಕಿದ್ದಾಳೆ ಅಂತಾ ಆತನ ಮನಸ್ಸು ಹೇಳ್ತಿದೆ. ಇದೀಗ ಚಿನ್ನುಮರಿ ಇಲ್ಲ ಅಂದ ಅಜ್ಜನ ಜೀವಕ್ಕೆ ಕುತ್ತಾಗಿದ್ದಾನೆ ಜಯಂತ್..‌ ಗನ್‌ ಹಿಡಿದು ಶೂಟ್‌ ಮಾಡಿದ್ದಾನೆ. ಇತ್ತ ವಿಶ್ವನಿಗೆ ಜಾಹ್ನವಿ ತನ್ನ ಮನೆಯಲ್ಲಿ ಇರೋ ವಿಚಾರ ಗೊತ್ತಿಲ್ಲ.. ಇದೀಗ ಜಾಹ್ನವಿ ವಿಶ್ವ ಮುಖಾಮುಖಿ ಆಗ್ತಾರಾ ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ.

ಇದನ್ನೂ ಓದಿ: ಸಮಂತಾ ಬಾಳಲ್ಲಿ ಅರಳಿತು ಪ್ರೀತಿ!‌ – ಬಾಲಿವುಡ್ ನಿರ್ದೇಶಕ ಜೊತೆ ನಿಶ್ಚಿತಾರ್ಥ?

ಲಕ್ಷ್ಮೀ ನಿವಾಸ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಜಾಹ್ನವಿ ಇಲ್ಲದೇ ಜಯಂತ್‌ ಒಂಟಿಯಾಗಿದ್ದಾನೆ. ಪ್ರತೀ ಕ್ಷಣ ಚಿನ್ನುಮರಿ ಬದುಕಿದ್ದಾರೆ.. ಆಕೆ ನಮ್ಮನ್ನ ಬಿಟ್ಟು ಹೋಗಿಲ್ಲ ಅಂತಾ ಹೇಳ್ತಾನೆ ಬಂದಿದ್ದಾನೆ. ಜಾಹ್ನವಿ ಕಾರ್ಯ ಮಾಡುವಾಗಲೂ ಜಾನು ಬದುಕಿದ್ದಾಳೆ ಅಂತಾ ಆಕೆ ಮನೆಯವರ ಬಳಿ ಜಯಂತ್‌ ಅಂತಾ ಹೇಳ್ತಾನೆ ಇದ್ದ. ಆದ್ರೆ ಆಕೆ ಎಲ್ಲಿದ್ದಾಳೆ ಅನ್ನೋ ಕ್ಲೂ ಆತನಿಗೆ ಸಿಕ್ಕಿಲ್ಲ.. ಇದ್ರಿಂದಾಗಿ ಆತ ದಿನೇ ದಿನೇ ಸೈಕೋ ಆಗ್ತಿದ್ದಾನೆ.. ಚಿನ್ನುಮರಿಯ ಜಪ ಮಾಡ್ತಿದ್ದ ಜಯಂತ್‌ ಮತ್ತೊಬ್ಬರ ಬಾಳಿಗೆ ಕಂಟಕ ಆಗಿದ್ದಾನೆ.

ಹೌದು, ಜಾಹ್ನವಿ ಬಿಟ್ಟು ಹೋದ ಮೇಲೆ ಜಯಂತ್‌ ಬದಲಾಗ್ತಾನೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ಚಿನ್ನುಮರಿ ವಿಚಾರ ಬಂದ್ರೆ ಜಯಂತ್‌ ಸೈಕೋ ಅವತಾರ ಮಾತ್ರ ತಪ್ಪಲ್ಲ.. ಆಕೆ ಬಗ್ಗೆ ಯಾರಾದ್ರೂ ಮಾತಾಡಿದ್ರೆ ಅವ್ರಿಗೆ ಉಳಿಗಾಲ ಇಲ್ಲ.. ಈಗಾಗಗ್ಲೇ ಆತ ಜಾಹ್ನವಿ ಮೇಲಿರುವ ಪೊಸೆಸಿವ್‌ನೆಸ್‌ನಿಂದ ಆಕೆಯ ಫ್ರೆಂಡ್ಸ್‌ ಗೆ ಒಂದು ಗತಿ ಕಾಣ್ಸಿದ್ದ.. ಅದಾದ್ಲೇಲೆ ತನ್ನ ಕೃತ್ಯ ಎಲ್ಲಿ ಬಯಲಾಗುತ್ತೆ ಅನ್ನೋ ಭಯದಲ್ಲಿ ಜಾನು ಅಜ್ಜಿಗೂ ಗತಿ ಕಾಣ್ಸಿದ್ದ. ಇದ್ರಿಂದಾಗೇ ಜಾನು ಜಯಂತ್‌ ನಿಂದ ದೂರ ಆಗಿದ್ಲು.. ಜಾನು ಸಮುದ್ರದಿಂದ ಬಿದ್ದ ಮೇಲೆ ಶಂತಮ್ಮನ್ನ ಆತನ ಮನೆಗೆ ಕರ್ಕೊಂಡು ಬಂದಿದ್ದ. ಜಯಂತ್‌ ಬಗ್ಗೆ ಗೊತ್ತಿರೋ ಶಾಂತಮ್ಮ ಎಚ್ಚರಿಕೆಯಿಂದಲೇ ಆತನ ಜೊತೆ ಮಾತಾಡ್ತಾಳೆ.. ಆದ್ರೆ ಜಯಂತ್‌ ಮನೆಗೆ ಬಂದ ವಯಸ್ಸಾದ ವ್ಯಕ್ತಿ ಜಾಹ್ನವಿ ಸಾವಿನ ಬಗ್ಗೆ ಮಾತನಾಡಿದ್ದಾರೆ. ಇದ್ರಿಂದ ಜಯಂತ್‌ ಉಗ್ರ ರೂಪ ತಾಳಿದ್ದಾನೆ. ಜಯಂತ್‌ ಆ ವ್ಯಕ್ತಿಯನ್ನ ಮನೆಗೆ ಕರೆಸಿ, ಅವ್ರಿಗೆ ಕೈತುಂಬಾ ದುಡ್ಡು ಕೊಟ್ಟಿದ್ದ. ಅದಾದ್ಮೇಲೆ.. ಇದ್ರಿಂದ ನಿಮ್ಮ ಮಗಳ ಮದುವೆ ಮಾಡಿಸಿ ಎಂದು ಹೇಳಿದ. ಆ ಅಜ್ಜಪ್ಪ ಸುಮ್ನೆ ದುಡ್ಡು ತೆಗೆದುಕೊಂಡೋ ಹೋಗೋ ಬದಲು.. ಜಾನು ಬಗ್ಗೆ ಮಾತನಾಡಿದ್ದಾರೆ. ನಿಮಗೆ ಹೀಗೆ ಆಗ್ಬಾರ್ದಿತ್ತು.. ಅವ್ಳಿಗೆ ನಿಮ್ಮ ಜೊತೆ ಬಾಳೋ ಯೋಗ್ಯತೆ ಇರ್ಲಿಲ್ಲ.. ಪಾಪಾ ಆಕೆ ಚಿಕ್ಕ ವಯಸ್ಸಲ್ಲಿ ಸತ್ತುಹೋದ್ಲು.. ಅಂತಾ ಹೇಳಿದ್ದಾರೆ.. ಇದ್ರಿಂದ ಕೋಪಗೊಂಡ ಜಯಂತ್‌ ಕಿರುಚಾಡಿದ್ದಾನೆ.. ಆಷ್ಟೇ ಅಲ್ಲ ಕೈಯಲ್ಲಿದ್ದ ಗನ್‌ನಿಂದ ಫಯರಿಂಗ್‌ ಆಗಿದೆ. ಹಾಗಾದ್ರೆ ಆ ಅಜ್ಜಪ್ಪನ ಕತೆಯೂ ಮುಗಿಸಿದ್ನಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.

ಇನ್ನು ಜಾಹ್ನವಿ ವಿಶ್ವನ ಮನೆಯಲ್ಲಿದ್ದಾಳೆ. ಆಕೆ ಬದುಕಿದ್ದಾಳೆ.. ಅದೂ ತನ್ನ ಮನೆಯಲ್ಲಿದ್ದಾಳೆ ಅನ್ನೋ ವಿಚಾರ ವಿಶ್ವನಿಗೆ ಗೊತ್ತಿಲ್ಲ.. ಹೀಗಾಗಿ ಆತ ಕೂಡ ಜಾನು ನೆನಪಲ್ಲೇ ಕೊರಗ್ತಿದ್ದಾನೆ. ಇದೀಗ ಜಾನು ಮನ ಮುಂದೆ ಕೂತು ಹಾಡು ಹಾಡಿದ್ದಾನೆ. ಇದನ್ನ ವಿಶ್ವ ಕೇಳಿಸಿಕೊಂಡಿದ್ದಾನೆ. ರೂಮ್‌ ನಿಂದ ಆಚೆ ಬಂದು.. ಜಾನು ಇಲ್ಲ ಅಂದ್ರೂ ಆಕೆ ತನ್ನನ್ನ ಎಷ್ಟು ಆವರಿಸಿದ್ದಾಳೆ ಅಂತಾ ಹೇಳಿದ್ದಾನೆ. ಇದೀಗ ಜಾಹ್ನವಿ ಬದುಕಿರೋ ವಿಚಾರ ವಿಶ್ವನಿಗೆ ಗೊತ್ತಾಗುತ್ತಾ? ವಿಶ್ವನ ಮುಂದೆ ಜಾನು ಬರ್ತಾಳಾ? ನಡೆದಿರೋದನ್ನೆಲ್ಲಾ ಆತನ ಮುಂದೆ ಹೇಳಿಕೊಳ್ತಾಳಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡ್ತಿದೆ.

ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ನಾನಾ ಕಾಮೆಂಟ್‌ ಮಾಡ್ತಿದ್ದಾರೆ.  ಅಯ್ಯೋ ಯಾಕೆ ಎಲ್ಲರೂ ಜಯಂತ ಹತ್ತಿರ ನೇ ಹೋಗ್ತರೋ ಸಾಯೊಕ್ಕೆ ಅವ್ನು ಮೊದಲೆ ಸೈಕೋ.. ಇನ್ನು ಚಿನ್ನುಮರಿ ಬಗ್ಗೆ ಮಾತನಾಡಿದ್ರೆ ಬಿಡ್ತಾನಾ? ಚಿನ್ನುಮರಿ ಸಿಗೋವರೆಗೂ ಇನ್ನೆಷ್ಟು ಜನರ ಜೀವ ತೆಗಿತಾನೋ ಏನೋ ಅಂತಾ ಕಾಮೆಂಟ್‌ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *