ಜಾನು ಎದುರು ವಿಶ್ವ ಹೀರೋ – ಶ್ರೀನಿವಾಸ ಮತ್ತು ಲಕ್ಷ್ಮೀ ಕಣ್ಣೆದುರು ಮುದ್ದಿನ ಮಗಳು ಪ್ರತ್ಯಕ್ಷವಾಗ್ತಾಳಾ?

ಜಾನು ಎದುರು ವಿಶ್ವ ಹೀರೋ – ಶ್ರೀನಿವಾಸ ಮತ್ತು ಲಕ್ಷ್ಮೀ ಕಣ್ಣೆದುರು ಮುದ್ದಿನ ಮಗಳು ಪ್ರತ್ಯಕ್ಷವಾಗ್ತಾಳಾ?

ಲಕ್ಷ್ಮೀನಿವಾಸ ಸೀರಿಯಲ್ ರೋಚಕ ಘಟ್ಟ ತಲುಪಿದೆ.ಮಗಳು ಜಾಹ್ನವಿ ಇಲ್ಲದೇ ದುಃಖದಲ್ಲಿದ್ದ ಶ್ರೀನಿವಾಸ ಮತ್ತು ಲಕ್ಷ್ಮೀ ದಂಪತಿ ಎದುರು ಜಾನು ಪ್ರತ್ಯಕ್ಷವಾಗುವ ಸಮಯ ಹತ್ತಿರ ಬರುತ್ತಿದೆ. ಇದರ ಮಧ್ಯೆ ಜಾನು ರಕ್ಷಣೆಗಾಗಿ ವಿಶ್ವ ಹೀರೋ ಆಗಿರುವ ರೋಚಕ ಸನ್ನಿವೇಶ ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ:ಬಾಕ್ಸ್ ಆಫೀಸ್ ಸುಲ್ತಾನ್ ಆದ ಧುರಂಧರ್‌ 2 – ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಲಕ್ಷ್ಮೀ ನಿವಾಸ ಧಾರಾವಾಹಿ ಇತ್ತೀಚೆಗೆ ಬಿರುಸಾದ ಕಥೆಯೊಂದಿಗೆ ಸಾಗುತ್ತಿದೆ. ಭಾವನಾ ಸಿದ್ದೇಗೌಡರ ಕಥೆಗೊಂದು ತಿರುವು ಕೊಟ್ಟ ಮೇಲೆ ಇದೀಗ ಜಾನು ಬದುಕಿನ ಕಥೆ ಶುರುವಾಗಿದೆ. ಒಂದು ಕಡೆ ಲಕ್ಷ್ಮೀ ಮತ್ತು ಶ್ರೀನಿವಾಸರ ಷಷ್ಟಿಪೂರ್ತಿ ಸಮಾರಂಭ ನಡೆಯುತ್ತಿದೆ. ಅದಕ್ಕೆ ಲಕ್ಷ್ಮೀ ತಂದೆ ಕೂಡ ಬಂದಿದ್ದಾರೆ. ಇನ್ನೊಂದೆಡೆ ಜಯಂತ್ ಕಣ್ಣು ತಪ್ಪಿಸಿ, ವಿಶ್ವ ಜಾಹ್ನವಿಯನ್ನು ಇಷ್ಟು ದಿನ ರಕ್ಷಣೆ ಮಾಡಿಕೊಂಡು ಬಂದಿದ್ದಾನೆ. ಇದೀಗ ವಿಶ್ವ ತನ್ನ ಚಿನ್ನುಮರಿಯನ್ನು ಎಲ್ಲಿ ಅಡಗಿಸಿಟ್ಟಿದ್ದಾನೆ ಎಂದು ತಿಳಿದಿರುವ ಜಯಂತ್, ಹೇಗಾದರೂ ಅವನಿಂದ ತನ್ನ ಚಿನ್ನುಮರಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾನೆ. ವಿಶ್ವನ ಮೇಲೆ ರೌಡಿಗಳನ್ನು ಛೂ ಬಿಟ್ಟಿದ್ದಾನೆ. ಆದರೆ ವಿಶ್ವ ರೌಡಿಗಳಿಗೆ ಹೆದರದೇ ಜಾನು ಮುಂದೆ ಹೀರೋ ಆಗಿದ್ದಾನೆ.

ಜಾಹ್ನವಿ ಕೂಡಾ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾಳೆ. ರೌಡಿಗಳ ಜೊತೆ ಫೈಟ್ ಮಾಡುವಾಗ ವಿಶ್ವನ ತಲೆಗೆ ಏಟು ಬೀಳುತ್ತಿದ್ದಂತೆ, ಸೊಂಟಕ್ಕೆ ಸೆರಗು ಸಿಕ್ಕಿಸಿ, ಕೋಲನ್ನು ಕೈಯಲ್ಲಿ ಹಿಡಿದು,ರೌಡಿಗಳ ವಿರುದ್ಧ ಹೋರಾಟಕ್ಕೆ ನಿಂತಿದ್ದಾಳೆ. ಇಷ್ಟು ಧೈರ್ಯವಿರುವ ಜಾನು ಜಯಂತ್ ನನ್ನೂ ಸರಿ ಮಾಡಬಹುದಿತ್ತು ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಂದೆಡೆ ಜಾನು, ವಿಶ್ವನ ಕಥೆ ಬೇರೊಂದು ರೀತಿಯಲ್ಲಿ ಸಾಗುತ್ತಿದೆ. ಜಾನುನ ಅವಳ ಅಪ್ಪ ಅಮ್ಮನ ಎದುರು ತಂದು ನಿಲ್ಲಿಸಲು ವಿಶ್ವ ಪ್ರಯತ್ನಿಸುತ್ತಿದ್ದಾನೆ. ಸದ್ಯದಲ್ಲೇ ಮುದ್ದಿನ ಮಗಳು ಬದುಕಿರುವ ಸತ್ಯ ಹೆತ್ತವರಿಗೆ ಗೊತ್ತಾಗಲಿದೆ. ನಂತರ ಜಯಂತ್ ವಿಚಾರವೂ ಬಯಲಾಗಲಿದೆ. ಇದಾದ ನಂತರ ಈ  ಸೀರಿಯಲ್ ಕಥೆ ಯಾವ ತಿರುವು ಪಡೆದುಕೊಳ್ಳುತ್ತದೋ ಕಾದು ನೋಡಬೇಕಿದೆ.

Sulekha