ಗೃಹಲಕ್ಷ್ಮೀ ಹಣ ಅತ್ತೆಗೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್ – ₹2 ಸಾವಿರಕ್ಕಾಗಿ ಸಿಡಿದೇಳ್ತಾರಾ ಸೊಸೆಯಂದಿರು?

ಗೃಹಲಕ್ಷ್ಮೀ ಹಣ ಅತ್ತೆಗೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್ – ₹2 ಸಾವಿರಕ್ಕಾಗಿ ಸಿಡಿದೇಳ್ತಾರಾ ಸೊಸೆಯಂದಿರು?

ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಜಾರಿ ವಿಚಾರವಾಗಿ ಸಾಕಷ್ಟು ಗೊಂದಲಗಳು ಶುರುವಾಗಿದ್ದವು. ಅದರಲ್ಲೂ 2 ಸಾವಿರ ರೂಪಾಯಿ ಹಣವನ್ನ ಅತ್ತೆಗೆ ಕೊಡಬೇಕೋ ಅಥವಾ ಸೊಸೆಗೆ ಕೊಡಬೇಕೋ ಎನ್ನುವ ಚರ್ಚೆ ಶುರುವಾಗಿದೆ. ಮನೆಯೊಡತಿ ಯಾರು ಎಂದು ಗುರುತಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮೀ ಹಣಕ್ಕಾಗಿ ಪೈಪೋಟಿ ಶುರುವಾಗಿದೆ. ಇನ್ನು ಈ ಗೊಂದಲಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೆರೆ ಎಳೆದಿದ್ದಾರೆ.

ನಮ್ಮ ಸಂಪ್ರದಾಯದ ಪ್ರಕಾರ ಮನೆಯ ಒಡತಿ ಅತ್ತೆ ಆಗುತ್ತಾರೆ. ಹೀಗಾಗಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಅತ್ತೆಗೆ ನೀಡುತ್ತೇವೆ. ಅತ್ತೆ ಪ್ರೀತಿಯಿಂದ ಬೇಕಾದರೆ ಸೊಸೆಗೆ ಯೋಜನೆಯ ಹಣ ನೀಡಲಿ. ನಾಳೆ ಅಧಿಕಾರಿಗಳ ಜತೆ ಸಭೆ ನಡೆಸಿ ಅನುಷ್ಠಾನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು. ಈ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ಗೃಹಲಕ್ಷ್ಮೀ ಯೋಜನೆ ಸೊಸೆಗೆ ಸಿಗುವುದಿಲ್ಲ ಎನ್ನುವ ಸುಳಿವು ನೀಡಿದ್ದಾರೆ.

ಇದನ್ನೂ ಓದಿ : APL, BPL ಎನ್ನುವ ಷರತ್ತುಗಳಿಲ್ಲ.. ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ – ಸಾರಿಗೆ ಸಚಿವರಿಂದ ಮಹತ್ವದ ಘೋಷಣೆ

ಇನ್ನೊಂದೆಡೆ ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮೀಗಾಗಿ ಪೈಪೋಟಿ ಶುರುವಾಗಿದ್ದು, ಅತ್ತೆ ಸೊಸೆ ಇಬ್ಬರಿಗೂ ಸರ್ಕಾರ ಎರಡು ಸಾವಿರ ರೂಪಾಯಿ ನೀಡಬೇಕು. ಒಬ್ಬರಿಗೆ ಕೊಟ್ಟು ಇಬ್ಬರ ನಡುವೆ ಬೇಧಭಾವ ಮಾಡಬಾರದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಸಲಿಗೆ ಇದನ್ನೆಲ್ಲಾ ನೋಡ್ತಿದ್ರೆ ಸರ್ಕಾರ ಹಾಗೋ ಹೀಗೋ ಬಜೆಟ್ ಹೊಂದಿಸಿ ಮನೆಯೊಡತಿಗೆ 2 ಸಾವಿರ ರೂಪಾಯಿ ಕೊಟ್ಟರೂ ಕೂಡ ಇಲ್ಲಿ ಅತ್ತೆ ಸೊಸೆ ಮೈತ್ರಿ ಬಹಳ ಮುಖ್ಯವಾಗುತ್ತೆ.  ಇಬ್ಬರೂ ಕೂಡ ನನಗೊಂದು ಸಾವಿರ, ನಿನಗೊಂದು ಸಾವಿರ ಅಂತಾ ಒಳಒಪ್ಪಂದ ಮಾಡಿಕೊಳ್ಳಬೇಕಾಗುತ್ತೆ. ಅದನ್ನ ಬಿಟ್ಟು ಸರ್ಕಾರ 2 ಸಾವಿರ ರೂಪಾಯಿ ಕೊಟ್ಟಿರೋದು ನನಗೆ, ನಾನ್ಯಾಕೆ ನಿನಗೆ ಕೊಡ್ಲಿ ಅಂತಾ ಅತ್ತೆಯಂದಿರು ತಗಾದೆ ತೆಗೆದ್ರೆ ಸೊಸೆಯಂದಿರು ಸಿಡಿದೇಳೋ ಸಾಧ್ಯತೆ ಇದೆ. ಹಾಗೇ ಅದೇ ಹಣಕ್ಕಾಗಿ ಗಲಾಟೆಗಳು ನಡೆಸೋ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಸರ್ಕಾರ 2 ಸಾವಿರ ರೂಪಾಯಿ ಕೊಟ್ರೂ ಕೂಡ ಮುಂದಿನ ದಿನಗಳಲ್ಲಿ ಸಮಸ್ಯೆಗಳಂತೂ ತಪ್ಪಿದ್ದಲ್ಲ. ಮನೆ ಯಜಮಾನರು 2 ಸಾವಿರ ಹಣ ಸಿಗುತ್ತೆ ಅನ್ನೋ ಖುಷಿ ಒಂದು ಕಡೆಯಾದ್ರೆ ಅತ್ತೆ ಸೊಸೆ ಜಗಳ ಹೆಂಗಪ್ಪಾ ಬಿಡಿಸೋದು ಅಂತಾ ತಲೆಕೆಡಿಸಿಕೊಂಡಿದ್ದಾರೆ.

 

suddiyaana