ಲಕ್ಷ್ಮೀ ಸಾವು.. ಭಾಗ್ಯ ಸಂಸಾರ ಗೋಳು.. ತಂಗಿ ಸತ್ರೂ ಅಕ್ಕನಿಗೆ ಗೊತ್ತಾಗಲ್ವಾ? – ಟ್ವಿಸ್ಟ್ ಅಲ್ಲ.. ಠುಸ್ ಸ್ಟೋರಿ!
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಹೊಸ ತಿರುವು ಪಡೆದುಕೊಂಡಿದೆ. ಭಾಗ್ಯ ಲಕ್ಷ್ಮೀ ಸೀರಿಯಲ್ನಲ್ಲಿ ಭಾಗ್ಯಗೆ ತಾಂಡವ್ ಕಳ್ಳಾಟ ಗೊತ್ತಾಗಿದೆ. ಇತ್ತ ಲಕ್ಷ್ಮೀಬಾರಮ್ಮ ಸೀರಿಯಲ್ ನಲ್ಲಿ ಕಾವೇರಿ ಕೃತ್ಯಕ್ಕೆ ಬ್ರೇಕ್ ಹಾಕ್ತೀನಿ ಅಂತಾ ಹೋಗಿ, ಈಗ ಸುಟ್ಟು ಭಸ್ಮವಾಗಿದ್ದಾಳೆ.. ಆದ್ರೀಗ ಅದ್ಯಾಕೋ ಸೀರಿಯಲ್ ಫ್ಯಾನ್ಸ್ ಸಿಟ್ಟಾಗಿದ್ದಾರೆ. ಸೀರಿಯಲ್ ನಲ್ಲಿ ಆಗಾಗ ತೋರಿಸಲಾಗ್ತಿದ್ದ ಅಕ್ಕ ತಂಗಿ ಬಾಂಧವ್ಯ ಈಗ ಮರೆಯಾಗಿದೆ. ಇದೀಗ ತಂಗಿ ಸತ್ತಿದ್ರೂ ಭಾಗ್ಯ ಯಾಕೆ ಏನು ರಿಯಾಕ್ಟ್ ಮಾಡ್ತಿಲ್ಲ ಅಂತಾ ವೀಕ್ಷಕರು ಕೇಳ್ತಾ ಇದ್ದಾರೆ.. ಅಕ್ಕ ತಂಗಿ ಸಂಬಂಧ ಹೀಗೆ ಇರುತ್ತಾ? ಸೀರಿಯಲ್ ಟೀಂ ಕಾಟಾಚಾರಕ್ಕೆ ಸೀನ್ಗಳನ್ನ ಬರೀತಾರಾ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ. ಅಷ್ಟಕ್ಕೂ ಸೀರಿಯಲ್ ನಲ್ಲಿ ಆಗಿದ್ದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮೀ ನಿವಾಸ ಸೀರಿಯಲ್ ನಟಿ ಚಂದನಾ ಅನಂತಕೃಷ್ಣ
ಲಡ್ಡು ಲಡ್ಡು ಅಂತಿದ್ದ ಭಾಗ್ಯ.. ಅಕ್ಕಮ್ಮ ಅಕ್ಕಮ್ಮ ಅಂತ ಬಾಯ್ತುಂಬಾ ಕರಿತಿದ್ದ ಲಕ್ಷ್ಮೀ.. ಲಕ್ಷ್ಮೀಗೆ ಏನಾದ್ರೂ ಸಮಸ್ಯೆ ಆದ್ರೆ ಓಡೋಡಿ ಬರ್ತಿದ್ಲು ಭಾಗ್ಯ.. ಅಕ್ಕ, ತಂಗಿ ಬಾಂಧವ್ಯ ಅಂದ್ರೆ ಹೀಗೆ ಇರ್ಬೇಕು ಅಂತಾ ಈ ಸೀರಿಯಲ್ ನೋಡಿ ವೀಕ್ಷಕರು ಹೇಳ್ತಿದ್ರು.. ಅಕ್ಕ ತಂಗಿ ಬಾಂಧವ್ಯವನ್ನ ಹೊಗಳ್ತಿದ್ದ ಸೀರಿಯಲ್ ಫ್ಯಾನ್ಸ್ ಅದ್ಯಾಕೋ ಸಿಟ್ಟಾಗಿದ್ದಾರೆ.. ಸೀರಿಯಲ್ ಟೀಮ್ ಬಾಯಿಗೆ ಬಂದಂತೆ ಬೈತಾ ಇದ್ದಾರೆ.. ಅಷ್ಟಕ್ಕೂ ಆಗಿದ್ದೇನು ಅನ್ನೋದನ್ನ ಹೇಳ್ತೇನೆ..
ಲಕ್ಷ್ಮೀ ಬಾರಮ್ಮ ಸೀರಿಯಲ್ ಸ್ಟೋರಿ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ.. ಕಾವೇರಿಯ ಆಟವಂತೂ ದಿನದಿಂದ ದಿನಕ್ಕೆ ಮುಂದುವರೆಯುತ್ತಲೆ ಇದೆ. ಇದೆಲ್ಲಾ ನೋಡಿ ವೀಕ್ಷಕರು ಏನಾಗ್ತಿದೆ ಇಲ್ಲಿ, ಮುಂದೇನಾಗುತ್ತೆ ಎಂದು ತಲೆ ಚಚ್ಚಿಕೊಳ್ತಾ ಇದ್ದಾರೆ. ವಿಷ್ಯ ಏನಂದ್ರೆ, ವೈಷ್ಣವ್ ಜೊತೆ ಯಾರೇ ಹತ್ತಿರವಾದರೂ ಅದನ್ನು ಕಾವೇರಿ ಸಹಿಸೋದಿಲ್ಲ.. ವೈಷ್ಣವ್ ಗೆ ಯಾರು ಹತ್ರ ಆಗ್ತಾರೋ ಅವರಿಗೊಂದು ಗತಿ ಕಾಣಿಸ್ತಾಳೆ ಕಾವೇರಿ.. ಎಲ್ಲರನ್ನೂ ವೈಷ್ಣವ್ ನಿಂದ ದೂರ ಮಾಡಿ, ಆತ ತಾನು ಹೇಳಿದ ಹಾಗೆ ಮಾತ್ರ ಕೇಳಬೇಂದು ಎಂದು ಬಯಸುವ ಸ್ವಾರ್ಥಿ. ಅದಕ್ಕಾಗಿ ಆತನಿಗೆ ಹತ್ತಿರವಾಗಿದ್ದ ಕೀರ್ತಿಯನ್ನು ದೂರ ಮಾಡಿ, ಲಕ್ಷ್ಮೀ ಜೊತೆ ಮದ್ವೆ ಮಾಡಿಸಿದ್ದಳು.
ಲಕ್ಷ್ಮೀ ಜೊತೆ ಮದ್ವೆಯಾದ ನಂತರ ವೈಷ್ಣವ್ ಲಕ್ಷ್ಮೀಗೆ ಹತ್ತಿರವಾಗ್ತಿದ್ದಾನೆ ಅನ್ನೋದು ಗೊತ್ತಾಗಿ ಲಕ್ಷ್ಮೀಯನ್ನು ದೂರ ಮಾಡೋ ಪ್ಲ್ಯಾನ್ ಕೂಡ ಮಾಡಿದ್ಲು.. ಕೊನೆಗೆ ಲಕ್ಷ್ಮೀ- ಕೀರ್ತಿ ಇಬ್ಬರನ್ನೂ ವೈಷ್ಣವ್ ನಿಂದ ದೂರ ಮಾಡೋದಕ್ಕೆ ಕಾವೇರಿ ಇಬ್ಬರ ಕೊಲೆಗೂ ಸಂಚು ರೂಪಿಸಿದ್ದಳು.
ಕಾವೇರಿಯ ಪ್ಲ್ಯಾನ್ ನಂತೆ ಕೀರ್ತಿಯನ್ನು ಬೆಟ್ಟದಿಂದ ದೂಡಿ ಹಾಕಿದ್ಲು.. ಕೀರ್ತಿ ಸಾವಿಗೆ ನ್ಯಾಯ ಸಿಗ್ಬೇಕು.. ಸತ್ಯ ಎಲ್ಲರ ಮುಂದೆ ತೆರೆದಿಡ್ತೇನೆ ಅಂತಾ ಲಕ್ಷ್ಮೀ ಹೊರಟಿದ್ಲು.. ಆಕೆ ಕುತಂತ್ರಿ ಕಾವೇರಿ ಆಕೆಗೆ ಹುಚ್ಚಿಯ ಪಟ್ಟ ಕಟ್ಟಿ ಆಕೆಯನ್ನು ರಿಟ್ರೀಟ್ ಸೆಂಟರ್ ಗೆ ಸೇರುವಂತೆ ಕೂಡ ಮಾಡಿದ್ದಳು. ಕಾವೇರಿ, ಜೊತೆಗೆ ಅಲ್ಲಿಯೇ ಲಕ್ಷ್ಮೀಯನ್ನು ಕೊಲ್ಲಲು ಪ್ಲ್ಯಾನ್ ಮಾಡಿ, ಲಕ್ಷ್ಮಿಯ ಕತೆಯನ್ನೂ ಸಹ ಮುಗಿಸಿದ್ದಾಳೆ.
ಲಕ್ಷ್ಮೀ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮನೆಯಲ್ಲಿ ಎಲ್ಲರೂ ಶೋಕಾಚರಣೆ ಮಾಡ್ತಿದ್ದಾರೆ.. ಲಕ್ಷ್ಮೀ ಸತ್ತಿದ್ದಾಳೆ ಎನ್ನುವ ವಿಷ್ಯವನ್ನೆ ಅರಗಿಸಿಕೊಳ್ಳಲಾಗದೆ ವೈಷ್ಣವ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಇನ್ನೊಂದೆಡೆ, ಎಲ್ಲವೂ ತಾನು ಅಂದುಕೊಂಡಂತೆ ಆಯಿತು ಎಂದು ಲಕ್ಷ್ಮೀ ಕಥೆಯನ್ನು ಮುಗಿಸಿದ ಕಾವೇರಿ ಬೀಗುತ್ತಿದ್ದಾಳೆ. ಆದರೆ ವಿಷ್ಯ ಏನಂದ್ರೆ ಇಷ್ಟು ದೊಡ್ಡ ಘಟನೆ ಆದ್ರೂ ಭಾಗ್ಯಂಗೆ ಏನೂ ಗೊತ್ತೇ ಇಲ್ಲ.
ಹೌದು, ಲಕ್ಷ್ಮೀ ಸಾವನ್ನಪ್ಪಿ ಈಗಾಗಲೇ ಕೆಲ ದಿನಗಳೇ ಕಳೆದಿದೆ. ಆದ್ರೆ ಪ್ರೀತಿಯ ಲಡ್ಡು ಸತ್ತಿದ್ದು ಅಕ್ಕ ಭಾಗ್ಯಂಗೆ ಗೊತ್ತೇ ಇಲ್ಲ, ಅಕ್ಕನ ಸಂಸಾರದ ಗೋಳು ಬೇರೆ ನಡಿತಿದೆ.. ಅದು ಬೇರೆ ವಿಷ್ಯ, ಆದ್ರೆ, ತಂಗಿಯ ಪ್ರತಿ ನೋವು ನಲಿವಿನಲ್ಲಿ ಜೊತೆಯಾಗೋ ಅಕ್ಕನಿಗೆ ಒಂದು ಮಾತು ಹೇಳದೇ, ಅಷ್ಟೇ ಯಾಕೆ ಲಕ್ಷ್ಮೀ ದೊಡ್ಡಪ್ಪ, ದೊಡ್ಡಮ್ಮನಿಗೆ ವಿಷ್ಯವನ್ನೇ ತಿಳಿಸದೇ ಮನೆಯವರು ಸುಮ್ಮನಿರೋದು ಸರೀನಾ? ಇದು ಏನ್ ಕಥೆ ಅಂತ ಕೇಳ್ತಿದ್ದಾರೆ ವೀಕ್ಷಕರು. ಇನ್ನೂ ಕೆಲವರು ಕುಸುಮಾ ಕಾವೇರಿ ಅಕ್ಕ ತಂಗಿ ಅಂತಾ ತೋರಿಸಲಾಗಿದೆ.. ಲಕ್ಷ್ಮೀ ಸತ್ತಿದ್ದಾಳೆ ಓಕೆ.. ಆದ್ರೆ ಕಾವೇರಿ ತನ್ನ ಅಕ್ಕನ ಬಳಿ ಯಾಕೆ ಲಕ್ಷ್ಮೀ ಸತ್ತಿರೋ ವಿಚಾರ ಹೇಳಿಲ್ಲ? ಜಗತ್ತಿನಲ್ಲಿ ಹೀಗೆಲ್ಲಾ ಆಗುತ್ತಾ ಅಂತಾ ಕೇಳಿದ್ದಾರೆ.. ಇನ್ನೂ ಕೆಲವರು ಸೀರಿಯಲ್ ಟೀಮ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.. ಸೀರಿಯಲ್ ಕತೆನಾ ಎಳಿಬೇಕು ಅಂತಾ ಹೀಗೆ ಮಾಡ್ತೀರಾ? ಒಂದು ಲಾಜಿಲ್ ಬೇಡ್ವಾ ಅಂತಾ ಕಾಮೆಂಟ್ ಮಾಡ್ತಿದ್ದಾರೆ.