ಕೀರ್ತಿ.. ಕೀರ್ತಿನೇ ಅಲ್ಲ..! ಲಕ್ಷ್ಮೀ ಪಾತ್ರ ಎಂಡ್? – ಮುಖವಾಡದ ಆಟ ಗೆಲ್ಲೋದ್ಯಾರು?
ಲಕ್ಷ್ಮೀ ಬಾರಮ್ಮ ಸೀರಿಯಲ್ ಮೆಗಾ ಟ್ವಿಸ್ಟ್ ಪಡೆದುಕೊಂಡಿದೆ.. ಇದೀಗ ಸತ್ತು ಹೋಗಿದ್ದ ಕೀರ್ತಿ ಎಂಟ್ರಿಯಾಗಿದ್ದು, ಕಾವೇರಿಯ ಒಂದೊಂದೇ ಮುಖವಾಡ ಕಳಚುತ್ತಾ ಬಂದಿದ್ದಾಳೆ.. ಇದ್ರಿಂದಾಗಿ ಕಾವೇರಿ ಜೈಲು ಪಾಲಾಗಿದ್ದಾಳೆ.. ಇದೀಗ ಕೀರ್ತಿ ಎಂಟ್ರಿ ವೀಕ್ಷಕರಿಗೆ ಖುಷಿ ತಂದಿದ್ರೂ, ಇಲ್ಲಿ ಏನೋ ಮಿಸ್ ಹೊಡಿತಿದ್ಯಲ್ಲ ಅಂತಾ ಅನ್ನಿಸ್ಲಿಕ್ಕೆ ಶುರುವಾಗಿದೆ.. ಅಷ್ಟಕ್ಕೂ ವೈಷ್ಣವ್ ಮನೆಗೆ ಬಂದಿರೋದು ಕೀರ್ತಿ ಅಲ್ವಾ? ಸೀರಿಯಲ್ ಡೈರೆಕ್ಟರ್ ಮತ್ತೆ ವೀಕ್ಷಕರ ತಲೆಗೆ ಹುಳಬಿಟ್ರಾ? ಹಾಗಾದ್ರೆ ಲಕ್ಷ್ಮೀ, ಕೀರ್ತಿ ಎಲ್ಲಿ ಹೋದ್ರು? ಕಾವೇರಿ ಕಡೆಗೂ ತನ್ನ ತಪ್ಪನ್ನ ಒಪ್ಕೊಂಡ್ಲಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: IPLನ ಕೋಟಿವೀರ ಸೂರ್ಯವಂಶಿ – 13 ವರ್ಷ.. ₹1.1 ಕೋಟಿ.. ದ್ರಾವಿಡ್ ಗೇಮ್
ಕೀರ್ತಿ ಸತ್ತೇ ಹೋದ್ಲು.. ಲಕ್ಷ್ಮೀ ಕೀರ್ತಿ ಸಾವಿಗೆ ನ್ಯಾಯ ಕೊಡಿಸ್ತಾಳೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ನಮ್ಮ ಸೀರಿಯಲ್ ಡೈರೆಕ್ಟರ್ ಟ್ವಿಸ್ಟ್ ಕೊಟ್ಟು ವೀಕ್ಷಕರಿಗೆ ಚಮಕ್ ಕೊಟ್ಟೇ ಬಿಟ್ಟಿದ್ದಾರೆ.. ಇದೀಗ ಕೀರ್ತಿ ಬದುಕಿ ಬಂದಿದ್ದು ಕಾವೇರಿಯನ್ನ ಜೈಲಿಗೆ ಕಳುಹಿಸೋದ್ರಯಲ್ಲಿ ಸಕ್ಸಸ್ ಆಗಿದ್ದಾಳೆ.. ಕಾವೇರಿಗೆ ಜೈಲು ಪಾಲಾದೆನಲ್ಲಾ ಅನ್ನೋ ಟೆನ್ಷನ್ ಒಂದ್ಕಡೆಯಾದ್ರೆ, ಮತ್ತೊಂದ್ಕಡೆ ಕೀರ್ತಿ ಹೇಗೆ ಬದುಕಿಬಂದ್ಲು ಅನ್ನೋ ಯೋಚನೆ ಕಾಡ್ತಾ ಇದೆ.. ಆದ್ರೀಗ ಸೀರಿಯಲ್ ವೀಕ್ಷಕರು ಕೂಡ ಫುಲ್ ಕನ್ಫ್ಯೂಸ್ ಆಗಿದ್ದಾರೆ.. ಈಗ ಬಂದಿರೋದು ಕೀರ್ತಿನಾ ಅಥವಾ ಬೇರೆ ಯಾರಾ ಅಂತಾ ತಲೆಕೆಡಿಸ್ಕೊಂಡಿದ್ದಾರೆ..
ಹೌದು, ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಡೈರೆಕ್ಟರ್ ಕೊಡ್ತಿರೋ ಟ್ವಿಸ್ಟ್ ನೋಡಿ ಫುಲ್ ಕನ್ಫ್ಯೂಸ್ ಆಗಿದ್ದಾರೆ ಸೀರಿಯಲ್ ಫ್ಯಾನ್ಸ್.. ಯಾಕೆಂದರೆ ಕಥೆ ಅದೇ ರೀತಿ ಸಾಗುತ್ತಿದೆ. ಅವತ್ತು ಕೀರ್ತಿ ಕಾಣೆಯಾಗಿದ್ದಾಗ, ಲಕ್ಷ್ಮಿ ಕೀರ್ತಿ ತರ ನಟನೆ ಮಾಡಿದ್ಲು. ಈವಾಗ ಲಕ್ಷ್ಮಿ ಕಾಣೆಯಾಗಿದ್ದಾಳೆ, ಕೀರ್ತಿ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ. ಹಾಗಾಗಿ ವೀಕ್ಷಕರು ಏನಪ್ಪಾ ಕಥೆ ಅನ್ನೋದು ಗೊತ್ತಾಗದೆ ತಲೆ ಕೆರೆದುಕೊಳ್ಳುತ್ತಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರವಾಹಿಯ ಸದ್ಯದ ಕಥೆ ಏನಂದರೆ, ವೈಷ್ಣವ್ ಮನೆಯಲ್ಲಿ ಲಕ್ಷ್ಮಿಯ ಸಾವಿನ ಶೋಕಚಾರಣೆ ಮಾಡ್ತಾ ಇರೊವಾಗ, ಅಲ್ಲಿಗೆ ಕೀರ್ತಿ ಎಂಟ್ರಿ ಕೊಡ್ತಾಳೆ. ಅಷ್ಟೇ ಅಲ್ಲ ಕಾವೇರಿಯ ಒಂದೊಂದೇ ನಿಜರೂಪವನ್ನು ಬಿಡಿಸಿ ಹೇಳುತ್ತಾ, ಅದಕ್ಕೆ ತಕ್ಕಂತ ಎಲ್ಲಾ ಸಾಕ್ಷಿಯನ್ನು ಕೂಡ ಒದಗಿಸುವ ಮೂಲಕ, ಕಾವೇರಿ ಜೈಲು ಸೇರುವಂತೆ ಮಾಡಿದ್ದಾಳೆ ಕೀರ್ತಿ.
ಆದರೆ ಕೀರ್ತಿಯ ವರ್ತನೆ ಯಾಕೋ ಬೇರೆ ರೀತಿಯಾಗಿದೆ. ಕೀರ್ತಿಯ ಮಾತಿನಲ್ಲಿ ಮೊದಲಿನ ಚುರುಕುತನ ಕಾಣಿಸೋದೆ ಇಲ್ಲ. ಮನೆಯವರಂತೂ ಕಾವೇರಿಯನ್ನ ಜೈಲಿಗೆ ಹಾಕಿಸಿದಕ್ಕಾಗಿ ಕೀರ್ತಿ ಮೇಲೆ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಆದರೆ ಕೀರ್ತಿ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ, ತಾನು ಯಾರು ಆಡಿಸುವ ಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾಳೆ. ಇದನ್ನೆಲ್ಲ ನೋಡ್ತಾ ಇದ್ರೆ ಸುಪ್ರೀತ ಯಾರೋ ಬೇರೆಯವರನ್ನು ಕೀರ್ತಿಯಂತೆ ಮುಖವಾಡ ಹಾಕಿಸಿ, ಕರೆದುಕೊಂಡು ಬಂದು ಕಾವೇರಿಯ ಬಂಡವಾಳ ಬಯಲು ಮಾಡೋದಕ್ಕೆ ನೋಡ್ತಾ ಇದ್ದಾಳೆ ಅನ್ಸುತ್ತೆ. ಜೊತೆಗೆ ಕೀರ್ತಿ ಪದೇ ಪದೇ ಕೀರ್ತಿಯಾಗಿ ಸಾಕಾಗಿದೆ ಅಂತಾಳೆ. ಆದ್ರೆ ಅಲ್ಲೂ ಒಂದು ಟ್ವಿಸ್ಟ್ ನೀಡಲಾಗಿದೆ. ಅದೇನಂದ್ರೆ ಕೀರ್ತಿ ತನ್ನ ಬ್ಯಾಗ್ನಿಂದ ಗೊಂಬೆಯನ್ನು ಹೊರಗೆ ತೆಗೆದು ಅದರಂತೆ ತಲೆ ಆಡಿಸ್ತಾಳೆ. ಅಂದ್ರೆ ಇದರ ಅರ್ಥ ಏನು? ಆ ಗೊಂಬೆ ಲಕ್ಷ್ಮಿಯ ಗೊಂಬೆ. ಲಕ್ಷ್ಮಿಯ ಪ್ರೀತಿಯ ರಾಣಿ ಗೊಂಬೆ ಅದು. ಅದನ್ನು ತೆಗೆದುಕೊಳ್ಳಲು ಹೋಗಿಯೇ ಲಕ್ಷ್ಮಿಯ ಜೀವ ರಾವಣನ ಜೊತೆ ದಹನವಾಗಿತ್ತು.. ಆದರೆ ನಿಜವಾಗಿಯೂ ಲಕ್ಷ್ಮೀ ಸಾಯದೆ, ಸುಟ್ಟು ಹೋದ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸುವ ಮೂಲಕ ಕೀರ್ತಿ ಆಗಿದ್ದಾಳೆಯೇ ಅನ್ನೋ ಸಂಶಯ ಕಾಡುತ್ತಾ ಇದೆ. ಆದ್ರೆ ಲಕ್ಷ್ಮೀ ಆಗಿದ್ರೆ ಆಕೆಗೆ ಹಿಂದಿನದ್ದೆಲ್ಲಾ ನೆನಪಿರ್ಬೇಕಿತ್ತು.. ಮೆಮೊರಿ ಲಾಸ್ ಆಗ್ಲಿಕ್ಕೆ ಚಾನ್ಸ್ ಇಲ್ಲ.. ಮೊಸ್ಟ್ಲಿ ಇದು ಕೀರ್ತಿಯೇ ಆಗಿರ್ಬೇಕು.. ಆಕೆ ಬೆಟ್ಟದಿಂದ ಬಿದ್ದು ನೆನಪಿನ ಶಕ್ತಿ ಕಳೆದುಕೊಂಡಿರ್ಬೋದು ಅಂತಾ ಹೇಳಲಾಗ್ತಿದೆ..
ಇದೀಗ ಸೀರಿಯಲ್ ಟ್ವಿಸ್ಟ್ ನೋಡಿ ಕನ್’ಫ್ಯೂಸ್ ಆಗಿರುವ ವೀಕ್ಷಕರು ನಾನಾ ಕಾಮೆಂಟ್ ಹಾಕೋ ಮೂಲಕ, ತಮ್ಮ ಸಂಶಯಗಳನ್ನು ತಿಳಿಸುತ್ತಿದ್ದಾರೆ. ಲಕ್ಷ್ಮಿ ಗೆ ಪ್ಲಾಸ್ಟಿಕ್ ಸರ್ಜರಿ ಆಗಿದ್ರೂ ಆಗಿರಬಹುದು.. ಕೀರ್ತಿ ಆಗಿ ಸಾಕಾಗಿದೆ ಅಂದ್ರೆ ಈವಾಗ ಇರೋದು ಕೀರ್ತಿ ಗೆಟಪ್ ನಲ್ಲಿರೋ ಲಕ್ಷ್ಮಿ ನಾ? ಲಕ್ಷ್ಮಿ ಗೊಂಬೆ ಇವಳ ಹತ್ರ ಹೇಗೆ ಬಂತು? ಫುಲ್ ಕನ್ಫ್ಯೂಸ್ ಆಗ್ತಿದೆ ಎನ್ನುತ್ತಿದ್ದಾರೆ ವೀಕ್ಷಕರು. ಇನ್ನೂ ಕೆಲವರು ಲಕ್ಷ್ಮಿ ಮುಖ ಸುಟ್ಟು ಹೋಗಿದೆ. ಡಾಕ್ಟರ್ ಕೀರ್ತಿ ಮುಖ ಹಾಕಿದಾರೆ ಅನ್ಸುತ್ತೆ ಅಂತನೂ ಹೇಳುತ್ತಿದ್ದಾರೆ.
ಅಷ್ಟೇ ಅಲ್ಲ ಅಯ್ಯೋ ಇದು ಕೀರ್ತಿ ಅಲ್ವಾ ? ಏನಿದು ದೇವರೇ ಕೀರ್ತಿ ಬಂದರು ಅಂತ ಖುಷಿಯಾಗಿ ಇದ್ದರೆ, ಇದೇನು ಕರ್ಮ. ಕೀರ್ತಿ ಬರಬೇಕು ಪ್ಲೀಸ್ ಡೈರೆಕ್ಟರ್ ಕೀರ್ತಿ ಬೇಕು. ಇದೇನ್ ಕರ್ಮ ಗುರು, ಕೀರ್ತಿ ಇಲ್ದಿರೊವಾಗ ಲಕ್ಷ್ಮಿ ಕೀರ್ತಿ ತರ ಆಡೋದು, ಈಗ ಲಕ್ಷ್ಮಿ ಇಲ್ಲ ಕೀರ್ತಿ ಲಕ್ಷ್ಮಿತರ ಆಡೋಕ್ ಶುರು ಮಾಡಿದ್ಲು. ಹಾಗಾದ್ರೆ ವರ್ಷವಿಡೀ ಇದೇ ಮಾಡ್ತಾ ಇರ್ತೀರೋ ಅಥವ ಕಾವೇರಿಯ ನಾಟಕ ಕಳಚ್ತೀರೋ ಎಂದು ಒಬ್ರು ಹೇಳಿದ್ರೆ, ಇನ್ನೊಬ್ಬರು ಅಂತೂ ಸತ್ಯ ಹೊರಗೆ ಬರಲ್ಲಾ .ಕಥೆ ಮುಗಿಯೋದಿಲ್ಲಾ. ವೈಷ್ಣವ್ ದಡ್ಡನ ತರ ಆಡೋದ್ ಬಿಡಲ್ಲಾ ಅಂತಾನೂ ಟೀಕಿಸಿದ್ದಾರೆ.