ಕೀರ್ತಿ ಸತ್ತಾಗ ಲಕ್ಷ್ಮೀ.. ಲಕ್ಷ್ಮೀ ಸತ್ತಾಗ ಕೀರ್ತಿ.. ಸೀರಿಯಲ್ ಟ್ವಿಸ್ಟಾ? ಟಾರ್ಚರಾ?
ಲಕ್ಷ್ಮೀ ಬಾರಮ್ಮ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಇದೀಗ ಕಾವೇರಿ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕೊನೆಗೂ ಕೀರ್ತಿ ಎಂಟ್ರಿ ಕೊಟ್ಟಿದ್ದಾಳೆ.. ಕಾವೇರಿಯ ನಿಜರೂಪ ಗೊತ್ತು ಮಾಡ್ತೇನೆ ಅಂತಾ ಕೀರ್ತಿ ಹೇಳ್ತಾ ಇದ್ದಾಳೆ.. ಸತ್ಯ ಗೊತ್ತಾಗ್ಲಿ ಅಂತಾ ಕಾಯ್ತಾ ಇದ್ದ ವೀಕ್ಷಕರು ಮಾತ್ರ ಈಗ ಸೀರಿಯಲ್ ಮೇಲೆ ಸಿಟ್ಟಾಗಿದ್ದಾರೆ.. ಅಯ್ಯೋ ಈ ಗೋಳು ಮುಗಿಯೋ ತರ ಕಾಣ್ತಾ ಇಲ್ಲ.. ಇದೊಂದು ಕತೆನಾ? ಸೀರಿಯಲ್ ಟೀಮ್ ಯಾಕೆ ಹೀಗೆ ಮಾಡ್ತಾ ಇದೆ ಅಂತಾ ಕಿಡಿ ಕಾರ್ತಾ ಇದ್ದಾರೆ.. ಅಷ್ಟಕ್ಕೂ ಸೀರಿಯಲ್ ನಲ್ಲಿ ಆಗಿದ್ದೇನು? ವೀಕ್ಷಕರು ಸಿಟ್ಟಾಗಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗೌತಮ್ ಅದಾನಿಗೆ ಮಹಾ ಸಂಕಷ್ಟ – ನೆಲಕಚ್ಚಿದ ಷೇರು, ಎಷ್ಟು ಕೋಟಿ ಲಾಸ್?
ಒಂದ್ಸಲ ಕೀರ್ತಿ ಸಾಯೋದು.. ಮತ್ತೊಂದ್ಸಲ ಲಕ್ಷ್ಮೀ ಸಾಯೋದು.. ಅವರಿಬ್ಬರ ಆತ್ಮ, ಪ್ರೇತಾತ್ಮ ಆಗಾಗ ಬಂದು ಹೋಗೋದು.. ಲಕ್ಷ್ಮೀ ಬಾರಮ್ಮ ಸೀರಿಯಲ್ ಕತೆ ಸಾಗ್ತಾ ಇರೋದು ಹೀಗೆ.. ಇದೀಗ ಸೀರಿಯಲ್ ಟ್ವಿಸ್ಟ್ ನೋಡಿ ವೀಕ್ಷಕರಿಗೆ ತಲೆ ಕೆಟ್ಟು ಹೋಗಿದೆ.. ಸೀರಿಯಲ್ ಕತೆ ಎಲ್ಲಿಂದ ಎಲ್ಲಿಗೆ ಹೋಗ್ತಿದೆ ಎಂದು ಅಂತ ಅರ್ಥ ಮಾಡೋದಿಕ್ಕೂ ಸಾಧ್ಯ ಆಗ್ತಾ ಇಲ್ಲ ಅಂತಾ ಹೇಳ್ತಾ ಇದ್ದಾರೆ. ಅಷ್ಟಕ್ಕೂ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಆಗಿರೋದು ಏನು ಅಂತಾ ಹೇಳ್ತೆನೆ..
ಕೀರ್ತಿಯನ್ನ ಕಾವೇರಿ ಬೆಟ್ಟದಿಂದ ತಳ್ಳಿ ಹಾಕಿದ್ಲು.. ಹೀಗಾಗಿ ಆಕೆ ಸತ್ತು ಹೋಗಿದ್ದಾಳೆ ಅಂತಾ ಇಲ್ಲಿವರೆಗೂ ತೋರಿಸಲಾಗ್ತಿತ್ತು. ಹೀಗಾಗಿ ಕೀರ್ತಿ ಸಾವಿಗೆ ನ್ಯಾಯ ಒದಗಿಸಬೇಕು.. ಕಾವೇರಿಯ ಬಾಯಲ್ಲೇ ಸತ್ಯ ಆಚೆ ಬರ್ಬೇಕು ಅಂತಾ ಲಕ್ಷ್ಮೀ ಪರದಾಡುತ್ತಿದ್ದಳು. ಕಾವೇರಿ ಮುಖವಾಡ ಕಳಚೋದಕ್ಕೆ ಲಕ್ಷ್ಮೀ ಮಾಡದ ನಾಟಕಗಳಿಲ್ಲ.. ಈಗಿನ ಕಾಲದಲ್ಲಿ ಸತ್ಯಕ್ಕೆ ಬೆಲೆ ಇಲ್ಲ ಅಂತಾರಲ್ಲ,.. ಹಾಗೇ ಲಕ್ಷ್ಮೀ ಪ್ಲ್ಯಾನ್ ಯಾವುದೂ ವರ್ಕ್ ಔಟ್ ಆಗಿಲ್ಲ.. ಕೊನೆಗೆ ತನ್ನ ತಪ್ಪನ್ನೆಲ್ಲಾ ಕಾವೇರಿ ಲಕ್ಷ್ಮೀ ಮೇಲೆ ಹಾಕಲು ಶುರು ಮಾಡಿದ್ಲು.. ಎಲ್ಲಿವರೆಗೆ ಅಂದ್ರೆ ಆಕೆಗೆ ಹುಚ್ಚು ಹಿಡಿದಿದೆ ಅಂತಾನೇ ಬಿಂಬಿಸಿದ್ಲು ಕಾವೇರಿ.. ಆಷ್ಟೇ ಅಲ್ಲ ಆಕೆಯನ್ನ ಹುಚ್ಚಾಸ್ಪತ್ರೆಗೆ ಸೇರಿಸಿ, ಅಲ್ಲಿ ಲಕ್ಷ್ಮೀ ಕಥೆ ಮುಗಿಸಿಯೇ ಬಿಟ್ಟಿದ್ದಾಳೆ ಕಾವೇರಿ.
ಇದೀಗ ಲಕ್ಷ್ಮೀ ಸಾವಿನ ಶಾಕ್ ನಿಂದ ವೈಷ್ಣವ್ ಗೆ ಹೊರಬರಲು ಆಗ್ತಾ ಇಲ್ಲ.. ಮಹಾಲಕ್ಷ್ಮೀ ಮಹಾಲಕ್ಷ್ಮೀ ಅಂತಾ ಆಕೆಯ ಗುಂಗಿನಲ್ಲೇ ಇದ್ದಾನೆ.. ಆದ್ರೆ ಮನೆಯವರೆಲ್ಲಾ ಲಕ್ಷ್ಮೀ ಸಾವಿನ ಶೋಕಾಚರಣೆ ಮಾಡ್ತಾ ಇದ್ದಾರೆ.. ಇದೀಗ ಲಕ್ಷ್ಮೀ ಸಾಯ್ತಾ ಇದ್ದಂತೆ, ಸತ್ತಿದ್ದ ಕೀರ್ತಿ ಏಕಾಏಕಿ ಎಂಟ್ರಿ ಕೊಟ್ಟಿದ್ದಾಳೆ.. ವೈಷ್ಣವ್ ಮನೆಗೆ ಬಂದ ಕೀರ್ತಿಯನ್ನ ನೋಡಿ ಮನೆಯವರು ಮಾತ್ರವಲ್ಲದೇ, ವೀಕ್ಷಕರು ಕೂಡ ಶಾಕ್ ಆಗಿದ್ದಂತೂ ಸತ್ಯ..
ಇದೀಗ ಸೀರಿಯಲ್ ಕತೆ ವೀಕ್ಷಕರ ತಲೆಗೆ ಹುಳ ಬಿಟ್ಟಂತಾಗಿದೆ.. ಒಂದು ಸಲ ಕೀರ್ತಿ ಸಾಯ್ತಾಳೆ, ಮತ್ತೊಂದು ಸಲ ಲಕ್ಷ್ಮೀ ಸಾಯ್ತಾಳೆ.. ಕೀರ್ತಿ ಸತ್ತಾಗ ಲಕ್ಷ್ಮೀ ಬರ್ತಾರೆ, ಲಕ್ಷ್ಮೀ ಸತ್ತಾಗ ಕೀರ್ತಿ ಬರ್ತಾಳೆ, ಏನಂತ ಕಥೆ ಮಾಡ್ತಿರಾ? ನೀವು ಏನೇ ಕಥೆ ಮಾಡಿದ್ರೂ ಕಾವೇರಿಯ ಮುಖವಾಡ ಮಾತ್ರ ಕಳಚಿ ಬೀಳೋದಿಲ್ಲ.. ಕೊನೆಗೆ ಜಯಗಳಿಸೋದು ಮಾತ್ರ ಕಾವೇರಿನೆ ಅಂತ ಹೇಳ್ತಿದ್ದಾರೆ ವೀಕ್ಷಕರು.
ಅಷ್ಟೇ ಅಲ್ಲ ಈ ಕತೆ ಬರ್ದಿರೋ ಡೈರೆಕ್ಟರ್ ಗೆ ಒಂದ್ ದೊಡ್ಡ ನಮಸ್ಕಾರ. ಏನು ಅಂತ ಬರಿತ ಇದ್ದಾರೆ ಅಂತ ಗೊತ್ತಾಗ್ತಿಲ್ಲ ಅಂತಾನೂ ಹೇಳಿದ್ದಾರೆ ಜನ. ಲಕ್ಷ್ಮಿಗೆ ಏನಾದ್ರೂ ಪ್ಲಾಸ್ಟಿಕ್ ಸರ್ಜರಿ ಮಾಡಿ ಕೀರ್ತಿ ಫೇಸ್ ಕೊಟ್ರ ಅಂತಾನೂ ಕೇಳ್ತಿದ್ದಾರೆ ಕೆಲವರು. ಇನ್ನೂ ಕೆಲವರು ಲಕ್ಷ್ಮೀಯನ್ನು ಕೀರ್ತಿ ಕಾಪಾಡಿ, ಇಬ್ಬರೂ ಸೇರಿ ಪ್ಲ್ಯಾನ್ ಮಾಡ್ತಿದ್ದಾರ ಅಂತಾನೂ ಕೇಳಿದ್ದಾರೆ. ಇನ್ನು ಈ ಕತೆನಾ ಎಷ್ಟು ವರ್ಷ ಎಳ್ಕೊಂಡು ಹೋಗ್ತಾರೋ ಅಂತಾನೂ ಕೇಳ್ತಿದ್ದಾರೆ..