ಲಕ್ಷ್ಮೀ ಇನ್ನೊಂದು ಮುಖ ರಿವೀಲ್.. -ಕೀರ್ತಿ ರೀ ಎಂಟ್ರಿ? -ಕಾವೇರಿ ಕತೆ ಮುಗಿತು!!

ಲಕ್ಷ್ಮೀ ಬಾರಮ್ಮ ಸೀರಿಯಲ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಕೀರ್ತಿ ಸಾವಿನ ರಹಸ್ಯ ಬೇದಿಸ್ಬೇಕು.. ಕಾವೇರಿ ಬಣ್ಣ ಬಯಲು ಮಾಡ್ಬೇಕು ಅಂತಾ ಲಕ್ಷ್ಮೀ ಪಣ ತೊಟ್ಟಿದ್ದಾಳೆ.. ಇದೀಗ ಲಕ್ಷ್ಮೀ ಮೈಯಲ್ಲಿ ಕೀರ್ತಿ ದೆವ್ವ ಸೇರಿಕೊಂಡಿದೆ ಅಂತಾ ಸೀರಿಯಲ್ ನಲ್ಲಿ ತೋರಿಸಲಾಗ್ತಿದೆ.. ಇದೀಗ ಕೊನೆಗೂ ಲಕ್ಷ್ಮೀ ಅಸಲಿ ಆಟ ರಿವೀಲ್ ಆಗಿದೆ. ಈ ಬೆನ್ನಲ್ಲೇ ಕೀರ್ತಿ ಮತ್ತೆ ಎಂಟ್ರಿ ಕೊಡ್ತಾಳೆ ಅಂತಾ ವೀಕ್ಷಕರು ಲೆಕ್ಕಾಚಾರ ಶುರು ಮಾಡ್ಕೊಂಡಿದ್ದಾರೆ. ಅಷ್ಟಕ್ಕೂ ಸೀರಿಯಲ್ನಲ್ಲಿನ ಹೊಸ ಟ್ವಿಸ್ಟ್ ಏನು? ವೀಕ್ಷಕರು ಊಹೆ ಮಾಡಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪವಿತ್ರ ಬಗ್ಗೆ ದಚ್ಚು ಸ್ಫೋಟಕ ಸತ್ಯ – ಆ ಮಾತಿಗೆ ವಿಜಯಲಕ್ಷ್ಮೀ ಬದಲಾದ್ರಾ?
ವೀಕ್ಷಕರು ಏನು ಊಹೆ ಮಾಡಿದ್ರೋ ಅದೇ ಈಗ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ನಡೆತಾ ಇದೆ. ಕಳೆದ ಕೆಲವು ದಿನಗಳಿಂದ ಸತ್ತಿರುವ ಕೀರ್ತಿ ಆತ್ಮ ಲಕ್ಷ್ಮೀ ಮೈಮೇಲೆ ಸೇರಿಕೊಂಡಿದೆ. ಲಕ್ಷ್ಮೀ ಕೀರ್ತಿಯಾಗಿ ಬದಲಾಗಿದ್ದಾಳೆ ಅಂತಾ ತೋರಿಸಲಾಗ್ತಿತ್ತು. ವಿಷ್ಣುವರ್ಧನ್ ಸಿನಿಮಾ ಆಪ್ತಮಿಮಿತ್ರದಲ್ಲಿ ಗಂಗಾ ತರ ಲಕ್ಷ್ಮೀಯನ್ನ ತೋರಿಸಲಾಗ್ತಿತ್ತು.. ಸೀರಿಯಲ್ ನೋಡಿದ ವೀಕ್ಷಕರೆಲ್ಲಾ ಲಕ್ಷ್ಮೀ ಡ್ರಾಮಾ ಮಾಡ್ತಿದ್ದಾಳೆ.. ಕೀರ್ತಿ ಬದುಕಿದ್ದಾಳೆ ಅಂತಾ ಕಮೆಂಟ್ ಮಾಡಿದ್ರು.. ಇದೀಗ ವೀಕ್ಷಕರ ಲೆಕ್ಕಾಚಾರ ಸರಿಯಾಗೇ ಇದೆ.. ಸದಾ ಮುಗ್ಗೆಯಂತಿದ್ದ ಲಕ್ಷ್ಮೀ ಈಗ ಸತ್ಯ ತಿಳಿಯಲು ಡ್ರಾಮಾ ಮಾಡ್ತಿದ್ದಾಳೆ..
ಹೌದು, ಕಾವೇರಿ ಮುಚ್ಚಿಟ್ಟ ಸತ್ಯವನ್ನ ರಿವೀಲ್ ಮಾಡಲು ಲಕ್ಷ್ಮೀ ಹೊರಟಿದ್ದಾಳೆ. ಹೀಗಾಗಿ ಲಕ್ಷ್ಮೀ ಸರಿಯಾಗಿ ಕಾವೇರಿಗೆ ಚಮಕ್ ಕೊಟ್ಟಿದ್ದಾಳೆ. ಕಾವೇರಿಗೆ ಸಖತ್ ಆಗಿಯೇ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ. ಕೀರ್ತಿ ಸತ್ತು ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಕೀರ್ತಿಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಲಕ್ಷ್ಮೀ ಹಾಗೂ ಗಂಗಾ ಸೇರಿ ಹೊಸ ಪ್ಲಾನ್ ಮಾಡಿರುವುದು ಪಕ್ಕಾ ಆಗಿದೆ. ಕೀರ್ತಿ ಕಾಣೆಯಾದ ಬಳಿಕ ಲಕ್ಷ್ಮೀ ಕೂಡ ಅವಳ ಮೊಬೈಲ್ ಲಾಕ್ ತೆಗೆಸಲು ಪ್ರಯತ್ನ ಪಟ್ಟಿದ್ದಳು. ಅಷ್ಟರಲ್ಲಿ ಕಾವೇರಿಗೆ ತಿಳಿದು ಆ ಮೊಬೈಲ್ ಒಡೆದು ಹಾಕಿದ್ದಳು. ಇದಾದ ಬಳಿಕ ಮೊಬೈಲ್ ಒಡೆದಿದ್ದು ಕಾವೇರಿ ಎಂದು ಲಕ್ಷ್ಮೀಗೆ ಗೊತ್ತಾಗಿತ್ತು. ಅಲ್ಲಿಂದ ಲಕ್ಷ್ಮೀ ಹಾಗೂ ಗಂಗಾ ಈ ಡ್ರಾಮ ಶುರುಮಾಡಿದ್ದಾರೆ. ಮೈ ಮೇಲೆ ದೆವ್ವ ಬಂದವರಂತೆ ನಾಟಕ ಮಾಡಿದ್ದಾಳೆ ಲಕ್ಷ್ಮೀ. ಇದೀಗ ಲಕ್ಷ್ಮೀ ಹಾಗೂ ಗಂಗಾ ಇಲ್ಲಿವರೆಗೆ ಏನೆಲ್ಲಾ ಆಯ್ತು ಅಂತಾ ಮೆಲುಕು ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರ ಫಾರ್ಫಾಮೆನ್ಸ್ ಗೆ ಅವರೇ ಬಿದ್ದು ಬಿದ್ದು ನಕ್ಕಿದ್ದಾರೆ. ಗಂಗಾ, ಲಕ್ಷ್ಮೀ ಹೊಸ ನಾಟಕಕ್ಕೆ ವೀಕ್ಷಕರು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ನಾವು ಊಹೆ ಮಾಡಿದ ಹಾಗೇ ಆಯ್ತು ಅಂತಾ ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ.
ಹೌದು, ಲಕ್ಷ್ಮೀ ಕೀರ್ತಿಯ ಹಾಗೇ ನಾಟಕವಾಡಲು ಶುರುಮಾಡುತ್ತಿದ್ದಂತೆ ವೀಕ್ಷಕರು ಕೂಡ ಒಂದೊಂದಾಗೇ ಕಮೆಂಟ್ ಹಾಕ್ತಾ ಬಂದಿದ್ರು.. ಇದು ಲಕ್ಷ್ಮೀಯ ಡ್ರಾಮಾ ಅಂತಾ ಆಕೆ ಮಾಡಿರೋ ತಪ್ಪನ್ನ ಪತ್ತೆ ಹಚ್ಚಿ ಹೇಳ್ತಾ ಇದ್ರು.. ಇದು ಕೀರ್ತಿ ಮತ್ತೆ ಕಾವೇರಿ ನಡುವೆ ಏನ್ ಆಯ್ತು ಅಂತ ತಿಳ್ಕೊಳೋಕೆ ಲಕ್ಷ್ಮೀ ಪ್ಲ್ಯಾನ್ ಅಂತಾ ಹೇಳಿದ್ರು. ಕೀರ್ತಿ ಆದಷ್ಟು ಬೇಗ ಬರ್ತಾಳೆ.. ಕಾವೇರಿ ಗ್ರಹಚಾರ ಸರಿ ಇಲ್ಲ ಅನಿಸುತ್ತದೆ. ಅದಕ್ಕೆ ಒಂದುಕಡೆ ಕೀರ್ತಿ ಬಿಡುತ್ತಿಲ್ಲ, ಇನ್ನೊಂದು ಕಡೆ ಲಕ್ಷ್ಮೀ ಬಿಡುತ್ತಿಲ್ಲ ಅಂತಾ ಸೀರಿಯಲ್ ಫ್ಯಾನ್ಸ್ ಹೇಳಿದ್ರು.. ಇದೀಗ ಕಲರ್ಸ್ ಕನ್ನಡ ವಾಹಿನಿ ಲಕ್ಷ್ಮೀ ಗಂಗಾ ಪ್ರೋಮೋ ಬಿಡುಗಡೆ ಮಾಡ್ತಿದ್ದಂತೆ ವೀಕ್ಷಕರು ನಾವು ಊಹೆ ಮಾಡಿದ್ದೇ ಆಯ್ತು.. ಲಕ್ಷ್ಮೀ.. ಗಂಗಾ ಆಕ್ಟಿಂಗ್ ಸೂಪರೋ ಸೂಪರ್ ಅಂತಾ ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ವೀಕ್ಷಕರ ಮನಗೆದ್ದಿದೆ.. ಗಂಗಾ ಲಕ್ಷ್ಮೀ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಕೀರ್ತಿ ಮತ್ತೆ ಎಂಟ್ರಿ ಕೊಟ್ಟು ಕಾವೇರಿ ಬಣ್ಣ ಬಯಲು ಮಾಡ್ತಾಳೆ ಅಂತಾ ಸೀರಿಯಲ್ ಫ್ಯಾನ್ಸ್ ಲೆಕ್ಕಾಚಾರ ಶುರು ಮಾಡ್ಕೊಂಡಿದ್ದಾರೆ.