ಲಕ್ಷ್ಮೀ ಸೀಮಂತ.. ಕೀರ್ತಿಗೆ ಮೋಸ.. – ಕುತಂತ್ರಿ ಕಾವೇರಿಗೆ ಜೈಲೇ ಗತಿ
ಕ್ಲೈಮ್ಯಾಕ್ಸ್‌ ನಲ್ಲಿ ಬಿಗ್‌ ಟ್ವಿಸ್ಟ್‌!

ಲಕ್ಷ್ಮೀ ಸೀಮಂತ.. ಕೀರ್ತಿಗೆ ಮೋಸ.. – ಕುತಂತ್ರಿ ಕಾವೇರಿಗೆ ಜೈಲೇ ಗತಿಕ್ಲೈಮ್ಯಾಕ್ಸ್‌ ನಲ್ಲಿ ಬಿಗ್‌ ಟ್ವಿಸ್ಟ್‌!

ಕಾವೇರಿ ಅಟ್ಟಹಾಸಕ್ಕೆ ಗುಂಡಿ ತೋಡೋಕೆ ಕೀರ್ತಿ, ಲಕ್ಷ್ಮೀ, ವೈಷ್ಣವ್​ ಮೂವರು ಒಂದಾಗಿದ್ದಾರೆ. ಇನ್ನೇನಿದ್ದರೂ ಸತ್ಯದ ಬಾಂಬ್​ ಬ್ಲಾಸ್ಟ್​ ಆಗೋದು ಒಂದೇ ಬಾಕಿ. ಹೀಗಾಗಿ ಕಾವೇರಿಯನ್ನ ಸರಿಯಾಗೆ ಆಟ ಆಡಿಸ್ತಿದ್ದಾರೆ. ಪದೇ ಪದೇ ಕಾಲ್‌ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡ್ತಿದ್ದಾರೆ. ಇದೀಗ ಸೀರಿಯಲ್‌ ಕ್ಲೈಮ್ಯಾಕ್ಸ್‌ ನಲ್ಲಿ ಒಂದು ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಇದ್ರ ಫೋಟೋ ಕೂಡ ಲೀಕ್‌ ಆಗಿದೆ.

ಇದನ್ನೂ ಓದಿ: ಬಿಹಾರದ ಬಂಕಾದಲ್ಲಿ ಸ್ವಘೋಷಿಚ ಮಾವೋವಾದಿಯ ಎನ್‌ಕೌಂಟರ್- ಹ*ತ್ಯೆಗೆ 1 ಲಕ್ಷ ರೂಪಾಯಿ ಬಹುಮಾನ

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಅನ್ನ ವೀಕ್ಷಕರು ಆರಂಭದಿಂದಲೂ ಇಷ್ಟ ಪಟ್ಟಿದ್ರು.. ಟಿಆರ್‌ಪಿ ರೇಸ್‌ ನಲ್ಲೂ ಮುಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಸೀರಿಯಲ್‌ ಅಂತ್ಯ ಆಗಲಿದೆ. ಸೀರಿಯಲ್‌ ಮುಕ್ತಾಯ ಆಗುತ್ತೆ ಅನ್ನೋ ಸುದ್ದಿ ಹೊರ ಬೀಳ್ತಿದ್ದಂತೆ ಕ್ಲೈಮ್ಯಾಕ್ಸ್‌ ಏನಾಗಲಿದೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡ್ತಿದೆ. ಇತ್ತ ಲಕ್ಷ್ಮೀ, ಕೀರ್ತಿ, ವೈಷ್ಣವ್‌ ಸೇರಿಕೊಂಡು ಕಾವೇರಿಯನ್ನ ಸರಿಯಾಗೇ ಆಟ ಆಡಿಸ್ತಿದ್ದಾರೆ. ಮತ್ತೊಂದ್ಕಡೆ ಚಿಂಗಾರಿ ಕಾವೇರಿಯ ಬಾಯಲ್ಲಿ ಸತ್ಯ ಹೇಳಿಸಿ ಅದನ್ನ ವಿಡಿಯೋ ಮಾಡಿದ್ಲು.. ಇದೀಗ ಆ ವಿಡಿಯೋ ಶೇರ್‌ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡಲಾಗ್ತಿದೆ. ವೈಷ್ಣವ್‌ ಗೂ ಆ ವಿಡಿಯೋ ಕಳುಹಿಸಲಾಗಿದೆ. ಇದ್ರ ಬೆನ್ನಲ್ಲೇ ಲಕ್ಷ್ಮೀ ಬಾರಮ್ಮ ಸೀರಿಯಲ್​ ಸೆಟ್‌ ನ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದ್ರಿಂದ ಸೀರಿಯಲ್‌ ಕ್ಲೈಮ್ಯಾಕ್ಸ್‌  ನಲ್ಲಿ ದೊಡ್ಡ ಟ್ವಿಸ್ಟ್‌ ಕಾಡಿದೆ ಅನ್ನೋದು ರಿವೀಲ್‌ ಆಗಿದೆ.

ಲಕ್ಷ್ಮೀ ಬಾರಮ್ಮ ಸೀರಿಯಲ್‌ ನಲ್ಲಿ ಸುಪ್ರಿತಾ ಪಾತ್ರ ಮಾಡ್ತಿರೋ ನಟಿ ರಜನಿ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ. ರಜನಿ ಸೀರಿಯಲ್​ ಕೊನೆ ದಿನದ ಶೂಟಿಂಗ್​ ಫೋಟೋಗಳನ್ನು ಸೇರಿಸಿ ಒಂದು ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ಲಕ್ಷ್ಮೀಗೆ ಸೀಮಂತ ಮಾಡುತ್ತಿರುವ ಮತ್ತು ಕಾವೇರಿ ಕೈಗೆ ಬೇಡಿ ಹಾಕಿರುವ ಫೋಟೋ ಇದೆ. ಇದು ಸಿಕ್ಕಾಪಟ್ಟ ವೈರಲ್‌ ಆಗ್ತಿದೆ. ಅಂದರೆ ಈ ಸೀರಿಯಲ್‌ ಕ್ಲೈಮ್ಯಾಕ್ಸ್‌ ನಲ್ಲಿ ಕಾವೇರಿ ಬಣ್ಣ ಎಲ್ಲರ ಮುಂದೆ ಬಯಲಾಗುತ್ತೆ. ಕಾವೇರಿ ಜೈಲಿಗೆ ಹೋಗ್ತಾಳೆ. ಬಳಿಕ ಲಕ್ಷ್ಮೀ ಕೀರ್ತಿ ಒಂದಾಗ್ತಾರೆ. ಅಷ್ಟೇ ಅಲ್ಲ ಆಕೆ ಲಕ್ಷ್ಮೀ ಗರ್ಭಿಣಿಯಾಗ್ತಾಳೆ ಅಂತಾ ವೀಕ್ಷಕರು ಊಹೆ ಮಾಡಿದ್ದಾರೆ. ಆದ್ರೀಗ ವೀಕ್ಷಕರು ಕೀರ್ತಿ ಕತೆ ಏನು ಅಂತಾ ಕೇಳ್ತಿದ್ದಾರೆ. ಕೀರ್ತಿ ಆರಂಭದಲ್ಲಿ ವೈಷ್ಣವ್‌ ನ ಲವ್‌ ಮಾಡ್ತಿದ್ಲು.. ಆದ್ರೆ ಕಾವೇರಿ ಕುತಂತ್ರದಿಂದ ಲಕ್ಷ್ಮೀಯನ್ನ ವೈಷ್‌ ಜೊತೆ ಮದ್ವೆ ಮಾಡಿಸಿದ್ಲು.. ಮದುವೆ ಆದ ಮೇಲೂ ಕೀರ್ತಿಗೆ ವೈಷ್ಣವ್‌ ಜೊತೆ ಮದುವೆ ಮಾಡಿಸ್ತೀನಿ ಅಂತಾ ನಂಬಿಸ್ತಾ ಬಂದಿದ್ಲು.. ಆದ್ರೆ ಕೊನೆಗೂ ಕೀರ್ತಿಗೆ ಮೋಸ ಆಗಿದೆ. ಅವಳಿಗೂ ನ್ಯಾಯ ಕೊಡಿಸ್ಬೋದಿತ್ತು ಅಂತಾ ವೀಕ್ಷಕರು ಹೇಳ್ತಿದ್ದಾರೆ.

Shwetha M

Leave a Reply

Your email address will not be published. Required fields are marked *