ಕೀರ್ತಿಗೆ ಹಳೇ ನೆನಪು ವಾಪಾಸ್.. ಲಕ್ಷ್ಮೀ, ವೈಷ್ ಒಂದಾಗೋದೇ ಇಲ್ವಾ?

ವೈಷ್ಣವ್ ಲೈಫ್ ಹಾಳಾದ್ರೂ ಪರವಾಗಿಲ್ಲ.. ತಾನು ಹೇಳಿದ್ದೇ ನಡಿಬೇಕು ಅನ್ನೋ ಮನಸ್ಥಿತಿ ಕಾವೇರಿಯದ್ದು.. ಹೀಗಾಗೇ ವೈಷ್ಣವ್ ಗೆ ಎರಡನೇ ಮದುವೆ ಮಾಡಿಸಲು ಪ್ಲ್ಯಾನ್ ಮಾಡಿದ್ದಾಳೆ. ಲಕ್ಷ್ಮೀ ಈ ಮದುವೆ ಅಡ್ಡಿ ಆಗ್ತಾಳೆ ಅನ್ನೋ ಭಯದಲ್ಲಿ ಕಾವೇರಿ ಆಕೆಯನ್ನ ಕಿಡ್ನಾಪ್ ಮಾಡಿಸಿದ್ಲು.. ಆದ್ರೆ ಲಕ್ಷ್ಮೀ ಇರೋ ಜಾಗವನ್ನ ಕೀರ್ತಿ ಪತ್ತೆ ಮಾಡಿ ಅವಳನ್ನ ಸೇವ್ ಮಾಡಲು ಹೊರಟಿದ್ಲು. ಇದೀಗ ಕೀರ್ತಿ ತಲೆಗೆ ಜೋರಾದ ಪೆಟ್ಟು ಬಿದ್ದಿದೆ. ಇದೀಗ ಕೀರ್ತಿಗೆ ಹಳೇ ನೆನಪು ವಾಪಾಸ್ ಬಂದಿದೆ. ಕೀರ್ತಿಗೆ ಹಳೇ ನೆನಪು ವಾಪಾಸ್ ಬರ್ತಿದ್ದಂತೆ ವೈಷ್ಣವ್ ಹಿಂದೆ ಬೀಳ್ತಾಳಾ? ಲಕ್ಷ್ಮೀ ವೈಷ್ಣವ್ ನಿಂದ ದೂರ ಹೋಗ್ತಾಳಾ? ಸೀರಿಯಲ್ ಕ್ಲೈಮ್ಯಾಕ್ಸ್ ಏನಾಗುತ್ತೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
ಲಕ್ಷ್ಮೀಬಾರಮ್ಮ ಸೀರಿಯಲ್ ಈಗ ಕೊನೆಯ ಹಂತಕ್ಕೆ ಬಂದಿದೆ. ಕಾವೇರಿ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ವೈಷ್ಣವ್ ಮುಂದಾಗಿದ್ದಾನೆ. ಹೀಗಾಗೇ ಆತ ಎರಡನೇ ಮದುವೆಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ. ಕಾವೇರಿ ಒಂದ್ಕಡೆ ಮದುವೆ ಸಿದ್ಧತೆ ಮಾಡಿಕೊಂಡ್ರೆ, ಮತ್ತೊಂದ್ಕಡೆ ಲಕ್ಷ್ಮೀ ಮದುವೆಗೆ ಅಡ್ಡಿ ಆಗ್ತಾಳೆ ಅಂತಾ ಆಕೆಯನ್ನ ಕೂಡ ಕಿಡ್ನ್ಯಾಪ್ ಮಾಡ್ಸಿದ್ದಾಳೆ. ಕಾವೇರಿ ಚಿಂಗಾರಿ ಪ್ಲ್ಯಾನ್ ಅನ್ನ ಕೀರ್ತಿ ಮರೆಯಲ್ಲಿ ನಿಂತು ಕೇಳಿಸಿಕೊಂಡಿದ್ದಾಳೆ. ಬಳಿಕ ಚಿಂಗಾರಿಯನ್ನ ಫಾಲೋ ಮಾಡ್ಕೊಂಡು ಹೋಗಿ ಲಕ್ಷ್ಮೀ ಇರೋ ಜಾಗಕ್ಕೆ ಕೀರ್ತಿ ತಲುಪಿದ್ದಾಳೆ. ಆದ್ರೀಗ ಲಕ್ಷ್ಮೀಯನ್ನ ಕಾಪಾಡೋ ಹೊತ್ತಲ್ಲೇ ಕೀರ್ತಿ ತಲೆಗೆ ಪೆಟ್ಟಾಗಿದೆ. ಇದ್ರಿಂದಾಗಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ಲಕ್ಷ್ಮೀನ ಕಟ್ಟಿ ಹಾಕಿದ ಜಾಗಕ್ಕೆ ತಲುಪ್ತಿದ್ದಂತೆ ಕೀರ್ತಿ ಮರೆಯಲ್ಲಿ ನಿಂತು ಎಲ್ಲವನ್ನ ಗಮನಿಸಿದ್ದಾಳೆ. ಅಷ್ಟೊತ್ತಿಗೆ ಅಲ್ಲಿರೋ ಸ್ಟ್ಯಾಂಡ್ ಬಿದ್ದಿದೆ. ಹೀಗಾಗಿ ಅಲ್ಲಿರೋ ರೌಡಿಗಳು ಯಾರು ಎಂದು ಹೊರಗಡೆ ಬಂದಿದ್ದಾರೆ. ಆಗ ಕೀರ್ತಿ ರೌಡಿಗಳಿಗೆ ಹೊಡೆದಿದ್ದು, ಅವ್ರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಕೀರ್ತಿ ಲಕ್ಷ್ಮೀ ಹತ್ರ ಬಂದು ಆಕೆಯನ್ನ ಬಿಡಿಸಿದ್ದಾಳೆ. ಆಗ ಚಿಂಗಾರಿ ಕೀರ್ತಿ ತಲೆಗೆ ಜೋರಾಗಿ ಹೊಡೆದಿದ್ದಾಳೆ. ಚಿಂಗಾರಿ ಹೊಡೆದ ಏಟಿಗೆ ಕೀರ್ತಿ ಅಲ್ಲೇ ಬಿದ್ದಿದ್ದಾಳೆ. ಬಳಿಕ ಲಕ್ಷ್ಮೀ ಆಕೆಯನ್ನ ಕರ್ಕೊಂಡು ದೇವಸ್ಥಾನಕ್ಕೆ ಕರ್ಕೊಂಡು ಬಂದು ದೇವರ ಮುಂದೆ ಮಲಗಿಸಿದ್ದಾಳೆ. ಬಳಿಕ ದೇವರ ಮುಂದೆ ಲಕ್ಷ್ಮೀ ಕುಣಿಯುತ್ತಿದ್ದಂತೆ ಕೀರ್ತಿಗೆ ಎಚ್ಚವಾಗಿದೆ. ಆಕೆಯೂ ಲಕ್ಷ್ಮೀಯೊಂದಿಗೆ ನೃತ್ಯ ಮಾಡಿದ್ದಾಳೆ. ಇದೀಗ ಕೀರ್ತಿಗೆ ಹಳೆ ನೆನಪು ಮರಳಿ ಬಂದಿದೆ. ನಾನು ಗೊಂಬೆ ಅಲ್ಲ ಕೀರ್ತಿ ಅಂತಾ ಹೇಳಿದ್ದಾಳೆ. ಇದೀಗ ಕೀರ್ತಿಗೆ ನೆನಪಾಗುತ್ತಿದ್ದಂತೆ ಕೀರ್ತಿ ಹಳೇ ಕೀರ್ತಿಯಾಗಿ ಬದಲಾಗುತ್ತಾಳಾ? ವೈಷ್ಣವ್ ಬೇಕು ಅಂತಾ ಹಠ ಹಿಡಿತಾಳಾ ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ. ಕೀರ್ತಿಗೆ ಹಳೆ ನೆನಪು ವಾಪಾಸ್ ಬಂದ ನಂತರ ಎಲ್ಲಾ ಕಾವೇರಿ ನಿಜ ರೂಪವನ್ನ ಬಯಲು ಮಾಡ್ಬೋದು. ವೈಷ್ಣವ್‌ನ ಲಕ್ಷ್ಮೀಗೆ ಒಪ್ಪಿಸಿ ತಾಯಿ ಜೊತೆ ಫಾರಿನ್ ಗೆ ಹೋಗ್ಬೋದು.. ಕಾವೇರಿ ಜೈಲು ಪಾಲಾಗುವುದನ್ನ ಸೀರಿಯಲ್ ಕ್ಲೈಮ್ಯಾಕ್ಸ್ ನಲ್ಲಿ ತೋರಿಸ್ಬೋದು ಅಂತಾ ವೀಕ್ಷಕರೇ ಹೇಳ್ತಿದ್ದಾರೆ.