ವೈಷ್ ಒಪ್ಕೊಂಡಿದ್ದು ಲಕ್ಷ್ಮೀನಾ, ಕೀರ್ತಿನಾ? – ಲಕ್ಷ್ಮೀ ಬಾರಮ್ಮ ಕೊನೆ ಸೀನ್‌ ಇದೇ?

ವೈಷ್ ಒಪ್ಕೊಂಡಿದ್ದು ಲಕ್ಷ್ಮೀನಾ, ಕೀರ್ತಿನಾ? – ಲಕ್ಷ್ಮೀ ಬಾರಮ್ಮ ಕೊನೆ ಸೀನ್‌ ಇದೇ?

ಕಾವೇರಿ ಆಟಕ್ಕೆ ಕೊನೆಗೂ ಬ್ರೇಕ್‌ ಬಿದ್ದಿದೆ. ಕಡೆಗೂ ವೈಷ್ಣವ್‌ ಗೆ ಅಮ್ಮ ಕೆಟ್ಟವಳು.. ಲಕ್ಷ್ಮೀ ಒಳ್ಳೆಯವಳು ಅಂತಾ ಗೊತ್ತಾಗಿದೆ. ಇದೀಗ ಸೀರಿಯಲ್‌ ಅಂತ್ಯವಾಗ್ತಿದೆ ಅನ್ನೋದನ್ನ ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿದೆ. ಆದ್ರೀಗ ಸೀರಿಯಲ್‌ ಕ್ಲೈಮ್ಯಾಕ್ಸ್‌ ಏನು? ವೈಷ್ಣವ್‌ ಯಾರನ್ನ ಒಪ್ಪಿಕೊಂಡ? ಸಡನ್‌ ಆಗಿ ಸೀರಿಯಲ್‌ ಎಂಡ್‌ ಆಗಲು ಕಾರಣ ಏನು  ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.

ಇದನ್ನೂ ಓದಿ: ಬಾಹ್ಯಾಕಾಶದಿಂದ ಭಾರತ ಅದ್ಬುತವಾಗಿವೆ ಕಾಣುತ್ತೆ

ಅಕ್ಕ ತಂಗಿಯರ ಜೀವನದ ಕತೆಯನ್ನೇ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ತೋರಿಸಲಾಗ್ತಿತ್ತು.. ಆದ್ರೆ ಲಕ್ಷ್ಮೀ – ವೈಷ್ಣವ್ ಮದುವೆ ಆಗ್ತಿದ್ದಂತೆ ಭಾಗ್ಯ ಲಕ್ಷ್ಮೀ ಸೀರಿಯಲ್‌ ಅನ್ನ ಎರಡು ಭಾಗ ಮಾಡಲಾಗಿತ್ತು. ಲಕ್ಷ್ಮೀ  ಸಂಸಾರದ ಸುತ್ತ ನಡೆಯುವ ಘಟನೆಗಳನ್ನ ಲಕ್ಷ್ಮೀ ಬಾರಮ್ಮ ಕಥೆಯಾಗಿ ಹೆಣೆಯಲಾಗಿತ್ತು. ಆದ್ರೀಗ  ಲಕ್ಷ್ಮೀ ಬಾರಮ್ಮ ಸೀರಿಯಲ್ ಮುಕ್ತಾಯವಾಗ್ತಿದೆ. ವಾಹಿನಿಯೇ ಈ ಬಗ್ಗೆ ಅಧಿಕೃತವಾಗಿ ಹೇಳಿದೆ. ಸೀರಿಯಲ್‌ ಎಂಡ್‌ ಅಂತಿದ್ದಂತೆ ಕ್ಲೈಮ್ಯಾಕ್ಸ್‌ ಏನು ಅನ್ನೋದು ವೀಕ್ಷಕರನ್ನ ಕಾಡ್ತಿದೆ. ಇದೀಗ ಆ ವಿಚಾರ ರಿವೀಲ್‌ ಆಗಿದೆ.

ಲಕ್ಷ್ಮೀ ಮುಂದೆ ತಾನೇ ಗೆದ್ದೆ ಎಂದು ಬೀಗಲು ಕಾವೇರಿ ಈಗ ವೈಷ್ಣವ್‌ಗೆ ಎರಡನೇ ಮದುವೆ ಮಾಡಿಸಲು ರೆಡಿಯಾಗಿದ್ದಾಳೆ. ಇತ್ತ ಚಿಂಗಾರಿ ಕೂಡ ಕಾವೇರಿ ಬಾಯಿ ಬಿಡಿಸಿ, ಅದನ್ನ ಮೊಬೈಲ್‌ ನಲ್ಲಿ ರೆಕಾರ್ಡ್‌ ಮಾಡಿದ್ದಾಳೆ. ಚಿಂಗಾರಿ ಮುಂದೆ ಕಾವೇರಿ ಮಾತಾಡೋದನ್ನ ವೈಷ್‌ ಕೇಳಿಸಿಕೊಂಡಿದ್ದಾನೆ. ಆದ್ರೂ ವೈಷ್ಣವ್‌ ಮಾತ್ರ ತನಗೆ ಏನೂ ಗೊತ್ತಿಲ್ಲ ಅನ್ನೋತರ ಇದ್ದಾನೆ. ಹೀಗಾಗೇ ಆತ ಎರಡನೇ ಮದುವೆಗೆ ಒಪ್ಪಿಕೊಂಡಿದ್ದಾನೆ. ಇದಿಷ್ಟೇ ಅಲ್ಲ.. ಕಾವೇರಿಗೆ ಗೊತ್ತಿಲ್ಲದಂತೆ ಆತ ದೊಡ್ಡ ಪ್ಲ್ಯಾನ್‌ ಮಾಡಿದ್ದಾನೆ. ಇದಕ್ಕೆ ಸಾಗರಿ ಕೂಡ ಕೈ ಜೋಡಿಸಿದ್ದಾಳೆ. ಇದೀಗ ಕೀರ್ತಿಯನ್ನ ಕಾವೇರಿ ಕೊಲ್ಲಲು ಪ್ಲ್ಯಾನ್‌ ಮಾಡಿದ್ದ ಜಾಗದಲ್ಲೇ ವೈಷ್ಣವ್‌ ಎರಡನೇ ಮದುವೆಗೆ ಸಜ್ಜಾಗಿದ್ದಾನೆ. ಅಲ್ಲೇ ಸೀರಿಯಲ್‌ ಕ್ಲೈಮ್ಯಾಕ್ಸ್ ಸನ್ನಿವೇಶದ ಚಿತ್ರೀಕರಣ ನೆರವೇರಿದೆ.

ಕಾವೇರಿ ಕೀರ್ತಿಯನ್ನ ಬೆಟ್ಟದ ಮೇಲಿಂದ ತಳ್ಳಿದ್ದಳು. ಈಗ ಅದೇ ಬೆಟ್ಟದಲ್ಲಿ ವೈಷ್‌ ಎರಡನೇ ಮದುವೆಯ ಸೆಟ್‌ ಹಾಕಿಸಿದ್ದಾನೆ. ಅದೇ ಬೆಟ್ಟದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌  ಕ್ಲೈಮ್ಯಾಕ್ಸ್ ಶೂಟ್‌ ಮಾಡಲಾಗಿದೆ. ಇದ್ರ ಫೋಟೋ ವೈರಲ್‌ ಆಗಿದೆ. ವೈರಲ್ ಫೋಟೋದಲ್ಲಿ ವೈಷ್ಣವ್‌ ಸಾಂಪ್ರದಾಯಿಕ ಉಡುಪು ತೊಟ್ಟಿದ್ದಾನೆ. ಇನ್ನೂ ಲಕ್ಷ್ಮೀ ಹಾಗೂ ಕೀರ್ತಿ.. ಇಬ್ಬರೂ ಒಂದೇ ತರಹ ಸೀರೆಯುಟ್ಟು.. ಒಂದೇ ಮದುವೆ ಹೆಣ್ಣಿನಂತೆ ರೆಡಿಯಾಗಿದ್ದಾರೆ. ಇದೀಗ ವೈಷ್ಣವ್‌ ಒಪ್ಪಿಕೊಂಡಿದ್ದು ಕೀರ್ತಿನಾ? ಲಕ್ಷ್ಮೀನಾ ಅನ್ನೋ ಅನುಮಾನ ಸೀರಿಯಲ್ ಫ್ಯಾನ್ಸ್‌ ನ ಕಾಡ್ತಿದೆ. ಇದೀಗ ಕ್ಲೈಮ್ಯಾಕ್ಸ್‌ನಲ್ಲಿ ಯಾವ ರೀತಿಯ ಟ್ವಿಸ್ಟ್ ಸಿಗುತ್ತದೆ ಎಂಬುದೇ ಸಸ್ಪೆನ್ಸ್.

Shwetha M

Leave a Reply

Your email address will not be published. Required fields are marked *