ಕಾವೇರಿ ಬಣ್ಣ ಬಯಲು.. ಒಂದಾದ ಲಕ್ಷ್ಮೀ ವೈಷ್ಣವ್! – ಕೀರ್ತಿ ಪ್ಲ್ಯಾನ್‌ ವರ್ಕ್ ಆಯ್ತಾ?

ಕಾವೇರಿ ಬಣ್ಣ ಬಯಲು.. ಒಂದಾದ ಲಕ್ಷ್ಮೀ ವೈಷ್ಣವ್! – ಕೀರ್ತಿ ಪ್ಲ್ಯಾನ್‌ ವರ್ಕ್ ಆಯ್ತಾ?

ಅಮ್ಮನ ಮಾತಿಗೆ ಕಟ್ಟುಬಿದ್ದ ವೈಷ್ಣವ್‌ ಲಕ್ಷ್ಮೀಯಿಂದ ದೂರ ಇದ್ದ.. ಅಮ್ಮ ಹೇಳಿದ್ದೇ ಸರಿ ಅಂತಾ ಇಷ್ಟು ದಿನ.. ಕಾವೇರಿ ಅಜ್ಞೆಯನ್ನೇ ಪಾಲಿಸ್ತಿದ್ದ.. ಆದ್ರೀಗ ವೈಷ್ಣವ್‌ ಮೊದಲ ಸಲ, ತನ್ನ ಮನಸಿನ ಮಾತನ್ನ ಕೇಳೋದಿಕ್ಕೆ ಶುರುಮಾಡಿದ್ದಾನೆ.. ಲಕ್ಷ್ಮೀಯನ್ನ ಕಟುಕನಿಂದ ಕಾಪಾಡಿ, ಮಹಾಲಕ್ಷ್ಮೀ ಯಾವತ್ತಿದ್ರೂ ನನ್ನವರೇ ಅಂತಾ ಹೇಳಿದ್ದಾನೆ. ಹಾಗಾದ್ರೆ ಲಕ್ಷ್ಮೀ ಒಳ್ಳೆಯವಳು, ಅವ್ಳದ್ದು ಯಾವುದೇ ತಪ್ಪಿಲ್ಲ.. ಕಾವೇರಿಯೇ ಕೆಟ್ಟವಳು ಅಂತಾ ವೈಷ್‌ ಗೆ ಗೊತ್ತಾಯ್ತಾ? ಸತ್ಯ ಗೊತ್ತಾದ ವೈಷ್ಣವ್‌ ಅಮ್ಮನನ್ನ ಸುಮ್ನೆ ಬಿಡ್ತಾನಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:   ಮದುವೆಯಾಗಲು ಹೆಣ್ಣು ಸಿಕ್ಕಿಲ್ಲ ಎಂದು ಹೈಟೆನ್ಷನ್‌ ತಂತಿ ಮುಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವಕ!

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಕಾವೇರಿ ಏನೇ ಕುತಂತ್ರ ಮಾಡಿದ್ರೂ ಗೆಲ್ಲೋದು ಮಾತ್ರ ಲಕ್ಷ್ಮೀ ವೈಷ್ಣವ್‌ ಪ್ರೀತಿನೇ.. ಇದು ಮತ್ತೆ ಮತ್ತೆ ಫ್ರೂವ್‌ ಆಗ್ತಾ ಇದೆ. ಲಕ್ಷ್ಮೀ ಹಾಗೂ ವೈಷ್ಣವ್‌ ಮದುವೆ ಆದಾಗಿನಿಂದಲೂ ಮಗ ಎಲ್ಲಿ ತನ್ನಿಂದ ದೂರ ಆಗ್ತಾನೆ ಅನ್ನೋ ಭಯ ಕಾವೇರಿಗೆ.. ಹೀಗಾಗಿ ಅವರಿಬ್ರನ್ನ ದೂರ ಮಾಡ್ಬೇಕು ಅಂತಾ ಪ್ರಯತ್ನಿಸ್ತಿದ್ದಾಳೆ. ಆದ್ರೆ ಲಕ್ಷ್ಮೀ ಕಾವೇರಿಯ ಪ್ಲ್ಯಾನ್‌ ಉಲ್ಪಾ ಮಡ್ತಾ ಬಂದಿದ್ದಾಳೆ.. ಲಕ್ಷ್ಮೀ ಇನ್ನೂ ವೈಷ್ಣವ್‌ ಜೊತೆ ಇದ್ರೆ ತನ್ನ ದಾರಿಗೆ ಅಡ್ಡ ಆಗ್ತಾಳೆ ಅಂತಾ ಕಾವೇರಿ ಆಕೆಯನ್ನ ಮನೆಯಿಂದ ಆಚೆ ಹಾಕಿದ್ಲು.. ಅದಾದ್ಮೇಲೆ, ಮನೆಯಲ್ಲಿರುವ ಲಕ್ಷ್ಮೀ ಫೋಟೋಗಳನ್ನ ಕೂಡ ಆಚೆ ಹಾಕಿಸಿದ್ಲು. ಆದ್ರೆ ವೈಷ್ಣವ್‌ ಫೋಟೋಗಳನ್ನ ಎಸೆಯದೆ, ತನ್ನ ಜೀವನದಲ್ಲಿ ಯಾರು ಮುಖ್ಯ? ಯಾರದ್ದು ಸರಿ? ಯಾರದ್ದು ತಪ್ಪು? ಯಾರನ್ನ ನಂಬಬೇಕು ಅಂತಾ ಅವಲೋಕನ ಮಾಡ್ತಿದ್ದಾನೆ. ಈ ಬೆನ್ನಲ್ಲೇ ಕಾವೇರಿ ಚಿಂಗಾರಿಗೆ ಹೇಳಿ ಲಕ್ಷ್ಮೀಗೆ ಕಾಟ ಕೊಡಲು ಹುಡುಗ್ರನ್ನ ಕಳಿಸಿದ್ಲು.. ಅಷ್ಟೊತ್ತಿಗೆ ಅಲ್ಲಿಗೆ ನಿತಿನ್‌ ತನ್ನ ಹುಡುಗ್ರ ಜೊತೆ ಎಂಟ್ರಿ ಕೊಟ್ಟಿದ್ದಾನೆ. ಲಕ್ಷ್ಮೀಯನ್ನ ಬಲವಂತವಾಗಿ ಮದುವೆಯಾಗಲು ಮುಂದಾಗಿದ್ದಾನೆ..

ಹೌದು, ಲಕ್ಷ್ಮೀ, ವೈಷ್ಣವ್‌ ಮದುವೆಗೂ ಮುನ್ನವೇ ಈ ನಿತಿನ್‌ ಲಕ್ಷ್ಮೀಯನ್ನ ಬಲವಂತವಾಗಿ ಮದುವೆ ಆಗಲು ಮುಂದಾಗಿದ್ದ. ಆದ್ರೆ ಆತನಿಂದ ವೈಷ್ಣವ್‌ ಕಾಪಾಡಿದ್ದ.. ಇದೀಗ ಲಕ್ಷ್ಮೀಯನ್ನ ಮನೆಯಿಂದ ಆಚೆ ಹಾಕ್ತಿದ್ದಂತೆ ಮತ್ತೆ ಎಂಟ್ರಿ ಕೊಟ್ಟಿದ್ದಾನೆ.. ತುಂಬಾ ಹತ್ರದಿಂದ ನೋಡಿ ತುಂಬಾ ಟೈಮ್‌ ಆಯ್ತು ಅಂತಾ ಹೇಳಿದ್ದಾನೆ ನಿತಿನ್..‌ ಬೀದಿ ನಾಯಿಗಳ ಕಾಟ ದಿನೆ ದಿನೇ ಜಾಸ್ತಿ ಆಯ್ತು.. ಎಷ್ಟೇ ಹೊಡೆದು ಓಡಿಸ್ರೂ ಮತ್ತೆ ಬರ್ತವೇ ಅಂತಾ ಹೇಳಿದ್ದಾಳೆ.. ನೀನು ಗಂಡ ಬಿಟ್ಟವಳು.. ನಿನ್ಗೆ ನಾನು ಬಾಳು ಕೊಡ್ತೀನಿ.. ಅಂತಾ ಹೇಳಿ ನೇರವಾಗಿ ತಾಳಿ ಕಟ್ಟೋದಿಕ್ಕೆ ಮುಂದಾಗಿದ್ದಾನೆ. ಅಷ್ಟೊತ್ತಿಗೆ ವೈಷ್ಣವ್‌ ಎಂಟ್ರಿಯಾಗಿದೆ. ನಿತಿನ್‌ನ ಸರಿಯಾಗೆ ಬೆಂಡೆತ್ತಿದ್ದಾನೆ.

ಹೌದು.. ನಿತಿನ್‌ ಬರ್ತಿದ್ದಂತೆ ಕೀರ್ತಿ ನೇರವಾಗಿ ವೈಷ್ಣವ್‌ ಬಳಿ ಹೋಗಿದ್ದಾಳೆ.. ಲಕ್ಷ್ಮೀಗೆ ಕಾಟ ಕೊಡ್ತಿದ್ದಾನೆ ಅಂತಾ ವೈಷ್‌ ಬಳಿ ಹೇಳಿದ್ದಾಳೆ.. ಇತ್ತ ಕಾವೇರಿ ನಿತಿನ್‌ ಕಾವೇರಿ ಸಂಭ್ರಮಿಸ್ತಿದ್ದಾಳೆ.. ನಾನೇ ಲಕ್ಷ್ಮೀಯನ್ನ ನನ್ನ ದಾರಿಯಿಂದ ಆಚೆ ಹಾಕ್ಬೇಕು ಅಂದ್ಕೊಳ್ತಿರುವಾಗಲೇ, ಆ ಪೆಕ್ರಾನೇ ಬಂದಿದ್ದಾನೆ.. ಅವಳನ್ನ ಮದ್ವೆ ಆಗ್ತಿದ್ದಾನೆ ಎಂದು ಸಂಭ್ರಮಿಸ್ತಿದ್ದಾಳೆ.. ಇತ್ತ ನಿತಿನ್‌ ಕೂಡ ಇನ್ನೇನು ತಾಳಿ ಕಟ್ಬೇಕು ಅನ್ನುವಷ್ಟರಲ್ಲಿ ವೈಷ್ಣವ್‌ ಕೀರ್ತಿ ಜೊತೆ ಎಂಟ್ರಿ ಕೊಟ್ಟಿದ್ದಾನೆ.. ಬೈಕ್‌ ನಿಂದ ಇಳಿತಿದ್ದಂತೆ ವೈಷ್‌ ಪೈಟಿಂಗ್‌ ಶುರುಮಾಡಿದ್ದಾನೆ.. ನಿತಿನ್‌ ನ ಸರಿಯಾಗಿ ಬೆಂಡೆತ್ತಿ ಲಕ್ಷ್ಮೀ ಕಾಲಿಗೆ ಬೀಳುವಂತೆ ಮಾಡಿದ್ದಾನೆ.. ಬಳಿಕ ನಾವಿಬ್ರೂ ಇವಾಗ್ಲೂ ಗಂಡ ಹೆಂಡ್ತಿನೇ ಅಂತಾ ವೈಷ್ಣವ್‌ ತನ್ನ ಮನಸಿನ ಮಾತನ್ನ ಹೇಳಿದ್ದಾನೆ.. ಇದ್ರಿಂದಾ ಲಕ್ಷ್ಮೀ, ಕೀರ್ತಿ ಫುಲ್‌ ಖುಷಿಯಾದ್ರೆ, ಕಾವೇರಿಗೆ ಶಾಕ್‌ ಆಗಿದೆ.. ಹಾಗಾದ್ರೆ, ವೈಷ್ಣವ್‌ ಗೆ ಕಾವೇರಿ ಕೃತ್ಯ ಗೊತ್ತಾಯ್ತಾ? ವೈಷ್ಣವ್‌ ಮುಂದೇನು ಮಾಡ್ತಾನೆ ಅಂತಾ ಕಾದು ನೋಡ್ಬೇಕು..

ಇದೀಗ ಸೀರಿಯಲ್‌ ನೋಡಿದ ವೀಕ್ಷಕರು, ನಾನಾ ಕಾಮೆಂಟ್‌ ಮಾಡ್ತಿದ್ದಾರೆ.. ಪುಟ್ಟ ಈಗ ದೊಡ್ಡವನಾದ, ಈತನಿಗೆ ಈಗ ಬಾಯಿ ಬಂತು.. ಅಂತಾ ಹೇಳಿದ್ರೆ, ಮತ್ತೆ ಕೆಲವರು, ಎಂತ ಕರ್ಮ ಮರ್ರೆ. ಒಂದು ಸಾರಿ ಬಿಟ್ಟು ಹೋಗೋದು. ಮತ್ತೆ ನನ್ನ ಹೆಂಡತಿ ಅಂತಾ ಒಪ್ಪಿಕೊಳ್ಲೋದು. ಇದೆ ಆಯ್ತು. ಮೊದ್ಲು ಕಾವೇರಿನಾ ಜೈಲಿಗೆ ಹಾಕಿ.. ಅವಾಗ ಎಲ್ಲಾ ಸರಿ ಆಗುತ್ತೆ.. ಆದಷ್ಟು ಬೇಗ ಸೀರಿಯಲ್‌ ಗೆ ಒಂದು ಮುಕ್ತಿ ಕೊಡಿ.. ಅಂತಾ ಕಾಮೆಂಟ್‌ ಮಾಡಿದ್ದಾರೆ.

Shwetha M