ಲಕ್ಷ್ಮೀ ಬಾಳಲ್ಲಿ ಮತ್ತೊಬ್ಬ ಎಂಟ್ರಿ! -ವೈಷ್ಣವ್‌ 2ನೇ ಮದುವೆಗೂ ಮುಹೂರ್ತ ಫಿಕ್ಸ್!

ಲಕ್ಷ್ಮೀ ಬಾಳಲ್ಲಿ ಮತ್ತೊಬ್ಬ ಎಂಟ್ರಿ! -ವೈಷ್ಣವ್‌ 2ನೇ ಮದುವೆಗೂ ಮುಹೂರ್ತ ಫಿಕ್ಸ್!

ವೈಷ್ಣವ್‌ ಯಾವತ್ತಿದ್ರೂ ಅಮ್ಮನ ಮಗನೇ.. ಕಾವೇರಿ ಮಾತೇ ಆತನಿಗೆ ವೇದವಾಕ್ಯ.. ಅಮ್ಮ ಹೇಳಿದ್ರೆ ಮುಗಿತು.. ಅದು ತಪ್ಪೋ ಸರಿಯೋ ಅಂತ ಒಂಚೂರು ಯೋಚನೆ ಮಾಡೋ ಬುದ್ದಿನೂ ದೇವ್ರು ಕೊಟ್ಟಿಲ್ವಾ ಅನ್ನೋದು ವೀಕ್ಷಕರ ಪ್ರಶ್ನೆ.. ಕಾವೇರಿ ಹುಚ್ಚಾಟಕ್ಕೆ ಬಲಿಯಾಗ್ತಿರೋದು ಲಕ್ಷ್ಮೀ ಹಾಗೂ ವೈಷ್ಣವ್‌ ಲೈಫ್‌.. ಇದೀಗ ಕಾವೇರಿ ಲಕ್ಷ್ಮೀ ಮೇಲಿನ ಸೇಡು ತೀರಿಸಲು ವೈಷ್ಣವ್‌ ಗೆ ಮತ್ತೊಂದು ಮದುವೆ ಮಾಡಿಸಲು ಮುಂದಾಗಿದ್ದಾಳೆ. ಇದೀಗ ಮದುವೆಗೆ ಮುಹೂರ್ತ ಕೂಡ ಫಿಕ್ಸ್‌ ಆಗಿದೆ.. ಮತ್ತೊಂದ್ಕಡೆ, ಲಕ್ಷ್ಮೀಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಆಕೆಯ ಬಾಳಿಗೆ ಮತ್ತೊಂದು ವಿಲನ್‌ ಎಂಟ್ರಿಯಾಗಿದೆ.

ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಜಿಗಿದ SpaceX ನೌಕೆ – ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬರೋದು ಯಾವಾಗ?

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಕತೆ ರೋಚಕ ತಿರುವು ಪಡೆದುಕೊಂಡಿದೆ. ಈ ಸೀರಿಯಲ್‌ ನಲ್ಲಿ ಎಲ್ಲಾ ಪಾತ್ರಗಳಿಗಿಂತ ಕಾವೇರಿ ಪಾತ್ರವೇ ಹೆಚ್ಚು ಹೈಲೈಟ್..‌ ಆಕೆ ಹೇಳಿದ್ದೇ ನಡೆಯೋದು.. ಅಮ್ಮನ ಮಾತು ಕೇಳ್ಕೊಂಡು ಬೆಳದ ವೈಷ್ಣವ್ ಗೆ ಸ್ವಂತವಾಗಿ ಯೋಚನೆ ಮಾಡುವ ಶಕ್ತಿಯೇ ಇಲ್ಲ. ಅಮ್ಮನ ಮಾತೇ ವೇದವಾಕ್ಯ ಅಂತಾ ಆಕೆ ಹೇಳಿದ್ದನ್ನೆಲ್ಲಾ ನಂಬಿಕೊಂಡು ಅದನ್ನೇ ನಿಜ ಎಂದು ಕೊಂಡಿದ್ದಾನೆ. ಹೀಗಾಗೇ ಲಕ್ಷ್ಮೀಯನ್ನ ಮನೆಯಿಂದ ಆಚೆ ಹಾಕುವಾಗಲೂ ಸುಮ್ನೆ ನೋಡ್ಕೊಂಡು ಇದ್ದ.. ಈಗ ಕಾವೇರಿ ಲಕ್ಷ್ಮೀಯ ನೆನಪುಗಳನ್ನು ದೂರ ಮಾಡು ಎಂದಿದ್ದಕ್ಕೆ, ಆಕೆಯ ಫೋಟೊಗಳನ್ನೆಲ್ಲಾ ಮನೆಯಿಂದ ತೆಗೆದುಕೊಂಡು ಹೋಗಿದ್ದಾನೆ. ಇದೀಗ ಕತ್ತಲ ಕೋಣೆಯಲ್ಲಿ ಲಕ್ಷ್ಮೀನಾ.. ಕಾವೇರಿನಾ.. ಯಾರನ್ನ ನಂಬೋದು? ಯಾರು ತನಗೆ ಇಂಪಾರ್ಟೆಂಟ್‌ ಅಂತಾ ಯೋಚಿಸುತ್ತಿದ್ದಾನೆ.

ಕತ್ತಲ ಕೋಣೆಯೊಂದರಲ್ಲಿ ಕಾವೇರಿ ಹಾಗೂ ಲಕ್ಷ್ಮೀ ಫೋಟೋವನ್ನ ವೈಷ್ಣವ್‌ ಇಟ್ಟಿದ್ದಾನೆ. ಇಬ್ಬರ ಫೋಟೊ ಮುಂದೆ ನಿಂತು ಮಾತನಾಡುವ ವೈಷ್ಣವ್, ನನ್ನ ಮುಂದೆ ನಡೆಯುತ್ತಿರುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ, ಇನ್ನೇನೋ ನಡೆದು ಕೇವಲ ಗೊಂದಲವಷ್ಟೇ ಉಳಿದುಕೊಳ್ಳುತ್ತೆ. ಅದಕ್ಕೆಲ್ಲಾ ಕಾರಣ ಅಮ್ಮ ಮತ್ತು ಲಕ್ಷ್ಮೀ ಎನ್ನುತ್ತಾನೆ ವೈಷ್ಣವ್ . ಅಷ್ಟೇ ಅಲ್ಲ ಮಹಾಲಕ್ಷ್ಮೀ ಹೇಳ್ತಾರೆ, ನಿಮ್ಮ ಅಮ್ಮ ಇರೋದೇ ಬೇರೆ ತೋರಿಸಿಕೊಳ್ಳೋದೆ ಬೇರೆ, ಅವರ ಕಂಟ್ರೋಲ್ ಮೀರಿ ಹೋದೋರನ್ನ ದೂರ ಸರಿಸೋಕೆ ಪ್ರಯತ್ನಿಸ್ತಾರೆ. ಎಲ್ಲರನ್ನೂ ತನ್ನ ಕಂಟ್ರೋಲ್ ನಲ್ಲಿ ಇಡೋದಕ್ಕೆ ಪ್ರಯತ್ನಿಸ್ತಾರೆ ಅಂತ. ಆದರೆ ನಮ್ಮಮ್ಮ ದೇವತೆ, ಒಬ್ಬ ಹತ್ತನೇ ಕ್ಲಾಸ್ ಫೈಲ್ ಆದವನನ್ನು, ದೊಡ್ಡ ಸಿಂಗರ್ ಮಾಡಿ, ವೈಷ್ಣವ್ ಕಾವೇರಿ ಕಷ್ಯಪ್ ಮಾಡಿದ ದೇವತೆ ನಮ್ಮಮ್ಮ ಎನ್ನುತ್ತಾನೆ ವೈಷ್ಣವ್. ಇನ್ನು ಅಮ್ಮ ಹೇಳುವಂತೆ ಲಕ್ಷ್ಮೀ ನಮ್ಮ ಮನೆಯ ನೆಮ್ಮದಿಯನ್ನು ಹಾಳು ಮಾಡೋದಕ್ಕೆ ಬಂದಿರೋದು, ಅವಳಿಂದಲೇ ಈ ಮನೆಯಲ್ಲಿ ಸಮಸ್ಯೆಗಳು ಆಗುತ್ತಿರೋದು ಎನ್ನುತ್ತಾರೆ. ಇದೆಲ್ಲಾ ನಿಜನಾ? ನಾನು ಯಾರನ್ನು ನಂಬಲಿ? ಎಂದು ತನಗೆ ತಾನೇ ಪ್ರಶ್ನೆ ಕೇಳುತ್ತಾನೆ ವೈಷ್ಣವ್. ಇದೀಗ ವೈಷ್ಣವ್‌ ಯಾರ ಪರ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡ್ತಿದೆ.

ಮತ್ತೊಂದ್ಕಡೆ ಲಕ್ಷ್ಮೀ ಲೈಫ್‌ ಗೆ ಮತ್ತೊಬ್ಬ ವ್ಯಕ್ತಿಯ ಎಂಟ್ರಿಯಾಗಿದೆ.. ಹೌದು, ಲಕ್ಷ್ಮೀ ಹಾಗೂ ವೈಷ್ಣವ್‌ ಮದುವೆ ಆಗೋದಿಕ್ಕೂ ಮುನ್ನ ನಿತಿನ್‌ ಲಕ್ಷ್ಮೀ ಹಿಂದೆ ಬಿದ್ದಿದ್ದ.. ಅವರಿಬ್ರು ಮದುವೆ ಆದ್ಮೇಲೆ ಈ ನಿತಿನ್‌ ನಾಪತ್ತೆ ಆಗಿದ್ದ.. ಇದೀಗ  ಗಂಡ ಹೆಂಡ್ತಿ ದೂರ ಆಗ್ತಿದ್ದಂತೆ ಮತ್ತೆ ನಿತಿನ್‌ ಎಂಟ್ರಿ ಕೊಟ್ಟಿದ್ದಾನೆ. ಮದುಮಗನಂತೆ ವೇಷ ಹಾಕಿಕೊಂಡು ಬಂದ ನಿತಿನ್‌ ಗಿಣಿಮರಿ ಹೇಗಿದ್ದೀಯಾ ಅಂತಾ ಕೇಳಿದ್ದಾನೆ.. ಇದೀಗ ಈ ನಿತಿನ್‌ ಲಕ್ಷ್ಮೀಗೆ ತೊಂದರೆ ಕೊಡೋದು ಫಿಕ್ಸ್‌ ಆಗಿದೆ. ಲಕ್ಷ್ಮೀಯನ್ನ ಈ ಕಟುಕನಿಂದ ವೈಷ್ಣವ್‌ ಕಾಪಾಡ್ತಾನಾ ಅವರಿಬ್ಬರು ಒಂದಾಗ್ತಾರಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.

ಇದೀಗ ವೀಕ್ಷಕರು ಸೀರಿಯಲ್‌ ವಿರುದ್ದ ಅಸಮಧಾನ ಹೊರಹಾಕಿದ್ದಾರೆ.  ವೈಷ್ಣವ ಸ್ವಲ್ಪ ಸ್ಟ್ರಾಂಗ್ ಕ್ಯಾರೆಕ್ಟರ್ ಕೊಡಿ , ಯಾಕೆ ಡಮ್ಮಿ ಕ್ಯಾರೆಕ್ಟರ್ ಕೊಡ್ತೀರಾ? ಈ ಧಾರಾವಾಹಿಯಲ್ಲಿ ಕಾವೇರಿನೇ ಹೀರೋ, ಕಾವೇರಿನೇ ವಿಲ್ಲನ್, ಕಾವೇರಿನೆ ನಾಯಕಿ, ಎಲ್ಲವೂ ಕಾವೇರಿ ಎಂದಿದ್ದಾರೆ.. ಅಮ್ಮನ ಮಾತು ಕೇಳ್ಕೊಂಡು ವೈಷ್ಣವ್‌  100 ಮದುವೆ ಬೇಕಾದ್ರೂ ಆಗ್ತಾನೆ . ಲಕ್ಷ್ಮಿ ಪಾತ್ರ ಇಲ್ಲಿ ಏನು ಇಲ್ಲ.. ಸೀರಿಯಲ್‌ ಕತೆ ಮುಂದೆ ಹೋಗಲ್ಲ, ಕಾವೇರಿ ಮೋಸದಾಟ ಬಯಲಾಗಲ್ಲ, ಲಕ್ಷ್ಮೀಗೆ ಗೆಲುವು ಸಿಗೋದಿಲ್ಲ, ಅಂಥಾದ್ರಲ್ಲಿ ಸೀರಿಯಲ್ ಗೆ ಲಕ್ಷ್ಮೀ ಬಾರಮ್ಮ ಹೆಸರಾದ್ರೂ ಯಾಕೆ ಬೇಕು? ಲಕ್ಷ್ಮಿ ಬಾರಮ್ಮ ಅಂಥ ಹೆಸ್ರು ಇಡೋಕಿಂತ ಕಾವೇರಿ ಬಾರಮ್ಮಾ ಅಂಥ ಇಡಬೇಕಿತ್ತು ಅಂತಾ ಸೀರಿಯಲ್‌ ಪ್ರೇಮಿಗಳು ಹೇಳಿದ್ದಾರೆ.

Shwetha M