ತವರು ಮನೆ ಸೇರಿದ ಜಾನು! ಅತ್ತೆ ಮನೆಯಲ್ಲೂ ಜಯಂತ್ CCTV!

ಜಾಹ್ನವಿ ಕೈಗೆ ಸಿಕ್ಕಿಬಿದ್ರೂ ಜಯಂತ್ ಗೆ ಹುಚ್ಚಾಟಕ್ಕೆ ಮಾತ್ರ ಬ್ರೇಕ್ ಬೀಳ್ತಿಲ್ಲ.. ಚಿನ್ನುಮರಿಯನ್ನ ಉಳಿಸಿಕೊಳ್ಳುವ ಸಲುವಾಗಿ ಮತ್ತೆ ಮತ್ತೆ ಆತನ ಸೈಕೋತನ ಜಾಗೃತವಾಗ್ತಿದೆ.. ಜಾಹ್ನವಿ ಮೇಲೆ ಒಂದು ಕಣ್ಣಿಡಲು ಜಯಂತ್ ಆತನ ಮನೆತುಂಬಾ ಸಿಸಿಟಿವಿ ಹಾಕಿದ್ದ.. ಇದ್ರಿಂದಾಗೇ ಜಾನು ಕೈಗೂ ಸಿಕ್ಕಿಬಿದ್ದಿದ್ದ. ಆದ್ರೂ ಆತನಿಗೆ ಬುದ್ದಿ ಬಂದಿಲ್ಲ.. ಇದೀಗ ಜಾನು ತವರು ಮನೆಯಲ್ಲೂ ಸಿಸಿಟಿವಿ ಇಟ್ಟಿದ್ದಾನೆ.. ಇದೀಗ ಜಾನು ತವರು ಮನೆಗೆ ಬಂದಿದ್ದು, ಆಕೆಯ ಮುಂದೆ ಸೈಕೋಪತಿ ಕೃತ್ಯ ಬಯಲಾಗಿದೆ? ಹಾಗಾದ್ರೆ ಜಾಹ್ನವಿ ಮುಂದೇನು ಮಾಡ್ತಾಳೆ? ಜಯಂತ್‌ಗೆ ಕಾದಿದ್ಯಾ ಮಾರಿಹಬ್ಬ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮುಂಬೈಗಿಲ್ಲ ಬುಮ್ರಾ.. ಬೆಂಗಳೂರಿಗಿಲ್ಲ ಜೋಶ್ – IPLಗೂ ಕಾಡಿದ ಇಂಜುರಿ ಭೂತ
ಹುಟ್ಟು ಗುಣ ಸುಟ್ರೂ ಹೋಗಲ್ಲ ಅನ್ನೋ ಖಯಾಲಿ ಲಕ್ಷ್ಮೀ ನಿವಾಸದ ಜಯಂತ್‌ನದ್ದು.. ಜಾಹ್ನವಿ ಕೈಗೆ ಸಿಕ್ಕಿಬಿದ್ರೂ ಆತನ ಹುಚ್ಚುತನ ನಿಲ್ಲುವಂತೆ ಕಾಣ್ತಿಲ್ಲ.. ತನ್ನ ರಹಸ್ಯ ಎಲ್ಲಿ ಎಲ್ಲರ ಮುಂದೆ ಬಯಲಾಗುತ್ತೆ ಅನ್ನೋ ಭಯದಲ್ಲೇ ಕಾಲ ಕಳಿತಾ ಇದ್ದಾನೆ ಜಯಂತ್.. ಚಿನ್ನುಮರಿಗೆ ತನ್ನನ್ನ ಬಿಟ್ಟು ಹೋಗ್ಬಾರ್ದು.. ತನ್ನನ್ನ ಬಿಟ್ಟು ಬೇರೆ ಯಾರ ಜೊತೆಗೂ ಕ್ಲೋಸ್ ಆಗ್ಬಾರ್ದು ಅಂತಾ ಆಕೆಯ ಮೇಲೆ ಕಣ್ಣಿಡಲು ಮನೆ ತುಂಬಾ ಸಿಸಿಟಿವಿ ಹಾಕಿಸಿದ್ದ.. ಮನೆಯವರ ಜೊತೆ ಮಾತಾಡ್ಬಾರ್ದು ಅಂತಾ ನೆಟ್‌ವರ್ಕ್ ಕೂಡ ಜಾಮ್ ಮಾಡ್ಸಿದ್ದ. ಅದಾದ್ಮೇಲೆ ಜಾಹ್ನವಿ ಫ್ರೆಂಡ್ಸ್‌ಗೂ ಒಂದು ಗತಿ ತಂದಿದ್ದ.. ಅಲ್ಲಿತನಕ ಜಯಂತ್ ಗ್ರಹಚಾರ ಚೆನ್ನಾಗೇ ಇತ್ತು.. ಯಾವಾಗ ಜಾನು ಅಲ್ಲಿ ಮನೆಗೆ ಬಂದ್ರೋ ಅಲ್ಲಿಂದಲೇ ಆತನ ಲಕ್ ಕೈಕೊಟ್ಟಿದೆ.. ಸೈಕೋಪತಿಯ ಸೈಕೋತನ ಅಜ್ಜಿ ಮುಂದೆ ಬಯಲಾಗಿದೆ. ಅದಕ್ಕಾಗೇ ಅಜ್ಜಿಯ ಚಾಪ್ಟರ್ ಕ್ಲೋಸ್ ಮಾಡಲು ಹೊರಟಿದ್ದ.. ಅದ್ರಿಂದಾಗಿ ಅಜ್ಜಿ ಕೋಮಾಗೆ ಹೋದ್ರು.. ಇದೆಲ್ಲಾ ಈಗ ಜಾಹ್ನವಿಗೆ ಗೊತ್ತಾಗಿದೆ. ಆತನ ಮೇಲೆ ಕೆಂಡರ್ತಿದ್ದಾಳೆ.. ಇಲ್ಲಿದ್ರೆ ಅಜ್ಜಿ ಜೀವಕ್ಕೆ ರಿಸ್ಕ್ ಅಂತಾ ಆಕೆಯನ್ನ ತವರು ಮನೆಗೆ ಕಳುಹಿಸಿದ್ದಾಳೆ.. ಇದೀಗ ಅಜ್ಜಿ ಮನೆಗೆ ವಾಪಾಸ್ ಹೋದ್ರು ಜಯಂತ್ ಆತನಿಗೆ ನೆಮ್ಮದಿ ಇಲ್ಲ.. ಇದೀಗ ಜಾಹ್ಮವಿ ತವರು ಮನೆಯಲ್ಲೂ ಸಿಸಿಟಿವಿ ಹಾಕಿಸಿದ್ದಾನೆ.
ಹೌದು, ಜಾಹ್ನವಿ ಅಜ್ಜಿಯನ್ನ ಶ್ರೀನಿವಾಸ್ ಮನೆಗೆ ವಾಪಾಸ್ ಕರ್ಕೊಂಡು ಹೋಗಿದ್ದಾರೆ. ಇದೀಗ ಜಯಂತ್ ಗೆ ಎಲ್ಲಿ ಅಜ್ಜಿಗೆ ಎಚ್ಚರವಾಗಿ ಬಿಡುತ್ತೆ.. ಮನೆಯವರ ಮುಂದೆ ತನ್ನ ಬಣ್ಣ ಬಯಲಾದ್ರೆ ಅನ್ನೋ ಭಯ ಕಾಡ್ತಿದೆ.. ಹೀಗಾಗೇ ಜಯಂತ್ ಜಾಹ್ನವಿ ತವರು ಮನೆಗೆ ಹೋಗಿದ್ದಾನೆ..ಅಜ್ಜಿನ ನೋಡದೇ ಇರ್ಲಿಕ್ಕೆ ಆಗಲ್ಲ ಅಂತಾ ನೇರ ಅಜ್ಜಿ ರೂಮ್ ಗೆ ಹೋಗಿದ್ದಾನೆ. ಶ್ರೀನಿವಾಸ್ ಬಳಿ ಅಜ್ಜಿಯ ಹೆಲ್ತ್ ರಿಪೋರ್ಟ್ ತನ್ನಿ ಅಂತಾ ಆಚೆ ಕಳ್ಸಿ.. ಆ ರೂಮ್ ನಲ್ಲಿ ಸಿಸಿಟಿವಿ ಫಿಕ್ಸ್ ಮಾಡಿದ್ದಾನೆ.. ನಿಮಗೆ ಪ್ರಜ್ಞೆ ಬರೋವರೆಗೂ ನೀವು ನನ್ನ ಸರಹದ್ದಿನಲ್ಲೇ ಇರ್ತೀರಾ ಅಂತಾ ಹೇಳಿದ್ದಾನೆ.. ಜಯಂತ್ ಮನೆಗೆ ವಾಪಾಸ್ ಹೋಗ್ತಿದ್ದಂತೆ ಜಾಹ್ನವಿ ಮತ್ತೆ ಮನೆ ಬಿಟ್ಟು ಹೋಗಿದ್ದಾಳೆ. ಈ ಬಾರಿ ಎಲ್ಲೂ ಹೋಗದೇ ನೇರವಾಗಿ ತವರು ಮನೆಗೆ ಹೋಗಿದ್ದಾಳೆ. ಇತ್ತ ಮನೆಯಲ್ಲಿ ಜಾನು ಕಾಣದೇ ಜಯಂತ್ ಕಂಗಾಲಾಗಿದ್ದಾನೆ. ಎಲ್ಲಿ ಹೋಗಿರ್ಬೋದು ಅಂತಾ ಚಿಂತೆ ಮಾಡಿದ್ದಾನೆ. ಅಷ್ಟೊತ್ತಿಗೆ ಶ್ರೀನಿವಾಸ್ ಜಯಂತ್ ಗೆ ಫೋನ್ ಮಾಡಿದ್ದಾನೆ. ಇದ್ರಿಂದ ಆತ ಶಾಕ್ ಆಗಿದ್ದಾನೆ. ಇದೀಗ ಜಾನು ಅಜ್ಜಿ ರೂಮ್ ನಲ್ಲಿ ಪತ್ತೆದಾರಿ ಕೆಲ್ಸ ಮಾಡಿದ್ದಾಳೆ. ಆಗ ಆಕೆಗೆ ಸಿಸಿಟಿವಿ ಸಿಕ್ಕಿದೆ. ಇದೀಗ ಜಾನು ಮುಂದೇನು ಮಾಡ್ತಾಳೆ. ಇನ್ನು ಜಯಂತ್ ಮನೆಗೆ ಆಕೆ ಹೋಗಲ್ವಾ ಅನ್ನೋ ಕುತೂಹಲ ಮೂಡಿದೆ.
ಇದೀಗ ಸೀರಿಯಲ್ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡಿದ್ದಾರೆ. ನೀನು ಮಾಡಿರೋ ಕೆಲಸಕ್ಕೆ ಜಾಹ್ನವಿ ಕಂಪ್ಲೀಟ್ ಆಗಿ ಮನೆ ಬಿಟ್ಟು ಹೋಗ್ತಾಳೆ.. ಇದು ಅವಳಿಗೆ ಗೊತ್ತಾಗ್ಲೇಬೇಕು.. ಆತ ಮಾಡಿದ ತಪ್ಪಿಗೆ ಜಾನು ಶಿಕ್ಷೆ ಕೊಡಲೇಬೇಕು.. ಅವನಿಗೆ ಸರಿಯಾಗಿ ಪಾಠ ಕಲಿಸ್ಬೇಕು ಅಂತಾ ಕೆಲವರು ಹೇಳಿದ್ರೆ, ಮತ್ತೆ ಕೆಲವರು, ಈ ಸೀರಿಯಲ್ ನಿಂದ ಸಮಾಜದ ಸ್ವಾಸ್ತ್ಯ ಹಾಳು ಆಗ್ತಿದೆ.. ನೋಡೋ ವೀಕ್ಷಕರಿಗೆ ಯಾವ್ ಯಾವ್ ಕೆಟ್ಟ ಕೆಲಸ ಮಾಡಬೋದು ಅಂತ ಐಡಿಯಾ ಕೊಟ್ಟಂಗಿದೆ ಅಂತಾ ಕಾಮೆಂಟ್ ಮಾಡಿದ್ದಾರೆ.